Team India: 2026ರಲ್ಲಿ ಟೀಂ ಇಂಡಿಯಾಗೆ ಕೈಕೊಟ್ಟ ಆರು ಮಂದಿ ಸ್ಟಾರ್ ಪ್ಲೇಯರ್, ಕಾರಣವೇನು? | ಕ್ರೀಡಾ ಸುದ್ದಿ | ACTPnews

ಟೀಂ ಇಂಡಿಯಾ (ಸಂಗ್ರಹ ಚಿತ್ರ)


Last Updated:

Team India, Injury Players List 2026: ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ಗೂ ಮುನ್ನ ಟೀಂ ಇಂಡಿಯಾ ಆಟಗಾರರು ಸತತವಾಗಿ ಇಂಜುರಿಗೆ ಒಳಗಾಗುತ್ತಿದ್ದಾರೆ. ಇದು ಟೀಂ ಇಂಡಿಯಾ ತಂಡದ ತಂತ್ರಕ್ಕೆ ಭಾರೀ ಹೊಡೆತ ನೀಡುತ್ತಿದೆ. ಆಟಗಾರರ ಮೇಲಿನ ಒತ್ತಡ ನಿವಾರಣೆ ಮಾಡಲು ಎಲ್ಲಿ ಲೋಪ ಎದುರಾಗುತ್ತಿದೆ ಎಂದು ತಿಳಿದುಕೊಂಡು ಆಟಗಾರರ ಫಿಟ್ನೆಸ್ ಬಗ್ಗೆ ವಿಶೇಷ ನಿಗಾವಹಿಸುವ ಅಗತ್ಯವಿದೆ.

ಟೀಂ ಇಂಡಿಯಾ (ಸಂಗ್ರಹ ಚಿತ್ರ)
ಟೀಂ ಇಂಡಿಯಾ (ಸಂಗ್ರಹ ಚಿತ್ರ)

ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ (Ireland, England) ಟೀಂ ಇಂಡಿಯಾ (Team India) ಎದುರಿಸಿದ ಹೀನಾಯ ಸೋಲುಗಳಿಗಿಂತ, ಆಟಗಾರರು ಗಾಯದ ಸಮಸ್ಯೆಗಳೇ ಮ್ಯಾನೇಜ್​​ಮೆಂಟ್​​ಗೆ (Management) ತೀವ್ರ ತಲೆನೋವು ತಂದಿದೆ. 2026ರ ಆರಂಭದಿಂದಲೂ ಪ್ರಮುಖ ಆಟಗಾರರು ಸತತವಾಗಿ ಇಂಜುರಿಗೆ ಒಳಗಾಗಿದ್ದು, ತಂಡದ ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲಿ ಕ್ಯಾಪ್ಟನ್ ಶುಭ್ ಮನ್ ಗಿಲ್ (Shubman Gill, Captain India Team) ಅವರಿಗೆ ದೊಡ್ಡ ಸವಾಲಾಗಿದೆ. ಇದರೊಂದಿಗೆ ಆಟಗಾರರ ಫಿಟ್ನೆಸ್ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದು, ಈ ಇಂಜುರಿ ಸಮಸ್ಯೆ ತಂಡದ ಪ್ರದರ್ಶನದ ಮೇಲೆ ಭಾರೀ ಹೊಡೆತ ನೀಡುತ್ತಿದೆ.

ಜಸ್ಪ್ರೀತ್​​ ಬುಮ್ರಾ ನಿಂದ ಹಾರ್ದಿಕ್ ಪಾಂಡ್ಯವರೆಗೂ!

ಈ ವರ್ಷ ಭಾರತ ತಂಡದ ವೈದ್ಯ ತಂಡಕ್ಕೆ ವಿಶ್ರಾಂತಿಯೇ ಸಿಕ್ಕಿಲ್ಲ ಎಂದು ಹೇಳಬಹುದು. ತಂಡದಲ್ಲಿರುವ ಪ್ರತಿಯೊಬ್ಬ ಆಟಗಾರ ಕೂಡ ಯಾವುದೋ ಒಂದು ಸಂದರ್ಭದಲ್ಲಿ ಗಾಯಗೊಂಡು ತಂಡದಿಂದ ದೂರ ಉಳಿದಿದ್ದರು. ವಿಶೇಷ ಎಂದರೆ, ಪ್ರತಿಷ್ಠಿತ ಪಂದ್ಯಗಳ ಸಂದರ್ಭದಲ್ಲಿಯೇ ಸ್ಟಾರ್ ಪ್ಲೇಯರ್ ಗಳು ತಂಡದ ಗೆಲುವಿನ ಅವಕಾಶಗಳನ್ನು ದೂರ ಮಾಡಿತ್ತು. ಅಂತಹ ಗಾಯಗೊಂಡ ಆಟಗಾರರ ವಿವರಗಳು ಇಂತಿದೆ.
1) ಹಾರ್ದಿಕ್ ಪಾಂಡ್ಯ: ತೀವ್ರ ಬೆನ್ನುನೋವು, ತೊಡೆಯ ಸ್ನಾಯು ಗಾಯ.

ಆಲ್​​​ರೌಂಡರ್ ಹಾರ್ದಿಕ್ ಪಾಂಡ್ಯಗೆ ಈ ವರ್ಷ ದುಃಸ್ವಪ್ನ ಎಂದು ಹೇಳಬಹುದು. ಐಪಿಎಲ್ ಸಮಯದಲ್ಲಿ ಬೆನ್ನು ನೋವಿನಿಂದ ನೋವು ಅನುಭವಿಸಿದ ಪಾಂಡ್ಯ, ಆ ಬಳಿಕ ಫಿಟ್ನೆಸ್ ಪರೀಕ್ಷೆಯಲ್ಲಿ ತೊಡೆಯ ಸ್ನಾಯು ಗಾಯಕ್ಕೆ ಒಳಗಾಗಿದ್ದರು. ಇದರೊಂದಿಗೆ ಆಫ್ಘಾನಿಸ್ತಾನ, ಇಂಗ್ಲೆಂಡ್ ಟೂರ್ನಿಗೆ ಸಂಪೂರ್ಣವಾಗಿ ದೂರವಾಗಿದ್ದಾರೆ. ಈ ವರ್ಷ ಬರೋಬ್ಬರಿ 11 ಅಂತರಾಷ್ಟ್ರೀಯ ಪಂದ್ಯಗಳಿಂದ ದೂರವಾಗಿದ್ದಾರೆ.

2) ಜಸ್ಪ್ರೀತ್ ಬುಮ್ರಾ: ಮೊಣಕಾಲಿನ ಗಾಯಗೊಂಡು ಲಾರ್ಡ್ಸ್ ಪಂದ್ಯದಿಂದ ದೂರ.

ಭಾರತ ತಂಡದ ಬೌಲಿಂಗ್ ಬೆನ್ನೆಲುಬು ಎಂದೇ ಕರೆಯಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಾ ತಮ್ಮ ಎಡಕಾಲಿಗೆ ತೀವ್ರವಾಗಿ ಗಾಯ ಮಾಡಿಕೊಂಡಿದ್ದರು. ಮರುದಿನ ಕಾಲಿನ ಊತ ಹೆಚ್ಚಾದ ಕಾರಣ ಸರಣಿಯ ನಿರ್ಣಾಯಕ ಲಾರ್ಡ್ಸ್ ಪಂದ್ಯಕ್ಕೆ ದೂರ ಆಗಿದ್ದರು. ಬುಮ್ರಾ ಇಲ್ಲದೇ ವೀಕ್ ಆಗಿದ್ದ ಬೌಲಿಂಗ್ ಪಡೆಯ ಕಾರಣದಿಂದಲೇ ಇಂಗ್ಲೆಂಡ್ ದಾಖಲೆ ಮೊತ್ತವನ್ನು ಗಳಿಸಿತ್ತು.

3) ವಿರಾಟ್ ಕೊಹ್ಲಿ: ತೊಡೆಯ ಸ್ನಾಯು ಗಾಯ.

ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ಕೊಹ್ಲಿ ಕೂಡ ಐಪಿಎಲ್ ಫೈನಲ್ ಪಂದ್ಯದಲ್ಲಿ ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಇದರೊಂದಿಗೆ ಆಫ್ಘಾನ್ ಏಕದಿನ ಸರಣಿಯಿಂದ ದೂರ ಆಗಿದ್ದರು. ಆದರೆ ಸರಿಯಾದ ಸಮಯದಲ್ಲಿ ಚೇತರಿಕೆ ಕಂಡು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಮ್ ಬ್ಯಾಕ್ ಮಾಡಿದ್ದರು, ಸರಣಿಯಲ್ಲಿ ಎರಡು ಅರ್ಧ ಶತಕ ಸಿಡಿಸಿ ಮಿಂಚಿದ್ದರು.

4) ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

ಇಂಗ್ಲೆಂಡ್ ಟೂರ್ನಿಯಲ್ಲಿ ಸುಂದರ್ ಫೀಲ್ಡಿಂಗ್ ಮಾಡುತ್ತಾ ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿ ಕೊನೆಯ ಏಕದಿನ ಪಂದ್ಯದಿಂದ ದೂರ ಆಗಿದ್ದರು. ಯುವ ವೇಗಿ ರಾಣಾ ಮೊಣಕಾಲು ಗಾಯಕ್ಕೆ ಒಳಗಾಗಿ ಸರಣಿಯಿಂದ ಹೊರಬಿದ್ದಿದ್ದರು. ಮತ್ತೊಂದು ಕಡೆ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ತೀವ್ರ ಸ್ನಾಯು ಸೆಳೆತದಿಂದ ಜಿಂಬಾಬ್ವೆ ಟಿ20 ಸರಣಿಯಿಂದ ಸಂಪೂರ್ಣವಾಗಿ ದೂರ ಆಗಿದ್ದರು.

5) ನಿತೀಶ್ ಕುಮಾರ್ ರೆಡ್ಡಿ, ಕ್ಯಾಪ್ಟನ್ ಶುಭ್ ಮನ್ ಗಿಲ್.

ಯುವ ಆಲ್​​ರೌಂಡರ್ ನಿತೀಶ್ ಕುಮಾರ್ ರೆಡ್ಡಿ ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿ ಇಂಗ್ಲೆಂಡ್ ಸರಣಿಯಿಂದ ದೂರ ಆಗಿದ್ದರು. ಕ್ಯಾಪ್ಟನ್ ಗಿಲ್ ಕೂಡ ಕುತ್ತಿಗೆ ನೋವಿನಿಂದ ಬಳಲುತ್ತಿದ್ದರು ವಿಶ್ರಾಂತಿ ಪಡೆದುಕೊಳ್ಳದೇ ತಂಡವನ್ನು ಮುನ್ನಡೆಸಿದ್ದರು. ಮೊದಲ ಏಕದಿನ ಪಂದ್ಯದಲ್ಲಿ ಕುತ್ತಿಗೆ ನೋವಿನಿಂದ ರಿಟೈರ್ಡ್ ಹರ್ಟ್​ ಆಗಿ ಹಿಂದಿರುಗಿದ್ದರು. ಆ ಬಳಿಕ ನೋವಿನಲ್ಲೂ ಸರಣಿಯಲ್ಲಿ ಆಡಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed