Last Updated:
ಸೋನಂ ವಾಂಗ್ಚುಕ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದ ಕೈ ಬರಹದ ನೋಟ್ ಹಂಚಿಕೊಂಡಿದ್ದು, ನಾನು ಉಪವಾಸವನ್ನು ಮುಂದುವರಿಸುತ್ತೇನೆ. ವಿದ್ಯಾರ್ಥಿ ನಾಯಕರಿಗೆ ಸಂಸತ್ ಭವನದಲ್ಲಿ ಸಂಸತ್ ಸದಸ್ಯರನ್ನು ಭೇಟಿ ಮಾಡಲು ಅನುಮತಿ ನೀಡುವವರೆಗೆ ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಶೈಕ್ಷಣಿಕ ವ್ಯವಸ್ಥೆಯಲ್ಲಿನ ಅವ್ಯವಸ್ಥೆ (NEET) ವಿರೋಧಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಲಡಾಖ್ನ ಶಿಕ್ಷಣ ಸುಧಾರಕ ಹಾಗೂ ಪರಿಸರವಾದಿ ಸೋನಂ ವಾಂಗ್ಚುಕ್ (Sonam Wangchuk) ಅವರು 23ನೇ ದಿನವೂ ತಮ್ಮ ಉಪವಾಸವನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ. ಕೇಂದ್ರ ಸಚಿವ ಜೆಪಿ ನಡ್ಡಾ ಅವರು ಪ್ರತಿಭಟನಾಕಾರರ ಪ್ರತಿನಿಧಿಗಳನ್ನು ಭೇಟಿ ಮಾಡಿದ ಕೆಲವು ಗಂಟೆಗಳ ನಂತರ ಸಾಮಾಜಿಕ ಜಾಲತಾಣದ ಮೂಲಕ ಈ ಘೋಷಣೆ ಮಾಡಿದ್ದಾರೆ.
ಸೋನಂ ವಾಂಗ್ಚುಕ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದ ಕೈ ಬರಹದ ನೋಟ್ ಹಂಚಿಕೊಂಡಿದ್ದು, “ನಾನು ಉಪವಾಸವನ್ನು ಮುಂದುವರಿಸುತ್ತೇನೆ. ವಿದ್ಯಾರ್ಥಿ ನಾಯಕರಿಗೆ ಸಂಸತ್ ಭವನದಲ್ಲಿ ಸಂಸತ್ ಸದಸ್ಯರನ್ನು ಭೇಟಿ ಮಾಡಲು ಅನುಮತಿ ನೀಡುವವರೆಗೆ ಅಥವಾ ಆಸ್ಪತ್ರೆಯಲ್ಲಿ ತಮ್ಮನ್ನ ಭೇಟಿ ಮಾಡಲು ಅನುಮತಿ ನೀಡುವವರೆಗೆ ನನ್ನ ಉಪವಾಸ ಮುಂದುವರಿಯುತ್ತದೆ.ಸಂಸತ್ತಿನ ಮುಂದೆ ವಿದ್ಯಾರ್ಥಿಗಳು ತಮ್ಮ ಕುಂದುಕೊರತೆಗಳನ್ನು ಮಂಡಿಸಲು ಅವಕಾಶ ನೀಡುವ ಮೂಲಕ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆಯು ಈ ಪರಿಸ್ಥಿತಿಯನ್ನು ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಚೋದನೆಯ ಹೊರತಾಗಿಯೂ ವಿದ್ಯಾರ್ಥಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವುದು ನನ್ನ ಹೃದಯವನ್ನ ಸ್ಪರ್ಶಿಸಿದೆ. ಸರ್ಕಾರ ಮತ್ತು ಪೊಲೀಸ್ ಇಲಾಖೆಯವರು ವಿದ್ಯಾರ್ಥಿಗಳು ತಮ್ಮ ಆಗ್ರಹಗಳನ್ನು ಸಂಸತ್ನ ಮುಂದೆ ಇಡಲು ಅನುಮತಿಸಬೇಕು. ಈ ಮೂಲಕ ಈ ಸಮಸ್ಯೆಯನ್ನು ಬಗೆಹರಿಸುವಂತೆ ಅವರು ಸರ್ಕಾರ ಮತ್ತು ಪೊಲೀಸ್ ಎರಡಕ್ಕೂ ಮನವಿ ಮಾಡಿದರು.
ವಾಂಗ್ಚುಕ್ ಅವರು ಪ್ರತಿಭಟನಾಕಾರರ ಶಾಂತಿ ಮತ್ತು ಸಹನೆಯನ್ನು ಪ್ರಶಂಸಿಸಿದ್ದಾರೆ. “ನಾಳೆಯೂ ವಿದ್ಯಾರ್ಥಿಗಳು ಇಂದಿನಂತೆಯೇ ಶಾಂತಿ ಕಾಯ್ದುಕೊಳ್ಳುತ್ತಾರೆ ಎಂದು ನಂಬುತ್ತೇನೆ” ಎಂದು ಬರೆದಿದ್ದಾರೆ.
ಕೇಂದ್ರ ಸರ್ಕಾರ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಮುಖಂಡರ ಜೊತೆ ಮಾತುಕತೆ ನಡೆಸಿದೆ. ದೆಹಲಿಯಲ್ಲಿ ನಡೆದ ‘ಚಲೋ ಸಂಸದ್’ ಮೆರವಣಿಗೆಯ ಸಂದರ್ಭದಲ್ಲಿ ಕೇಂದ್ರ ಸಚಿವ ಜೆಪಿ ನಡ್ಡಾ ಅವರು ಸಿಜೆಪಿ ವಕ್ತಾರರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನ ಭೇಟಿಯಾಗಿದ್ದಾರೆ. ಈ ವೇಳೆ ಸುಮಾರು 10 ನಿಮಿಷಗಳ ಕಾಲ ಮಾತನಾಡಿ ತಮ್ಮ ಬೇಡಿಕೆಗಳನ್ನ ಸರ್ಕಾರದ ಮುಂದಿಟ್ಟಿದ್ದಾರೆ.
ಉಪವಾಸ ನಿರತ ಸೊನಮ್ ವಾಂಗ್ಚುಕ್ ಅವರ ತಕ್ಷಣದ ಬಿಡುಗಡೆ ಮಾಡಬೇಕು, ನೀಟ್ ಪೇಪರ್ ಲೀಕ್ ಹೊಣೆಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕೊಡಬೇಕು. ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎನ್ನಲಾದ ಎಲ್ಲಾ ನೀಟ್ ಆಕಾಂಕ್ಷಿಗಳ ಕುಟುಂಬಗಳಿಗೆ ತಲಾ ₹ 1 ಕೋಟಿ ರೂಪಾಯಿ ಪರಿಹಾರ ಸೇರಿದಂತೆ 3 ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದೆ ಇಟ್ಟಿದ್ದಾರೆ.
Jul 20, 2026 10:15 PM IST














