SRH vs RCB: ಆರ್​​ಸಿಬಿ ಇಷ್ಟು ರನ್ ಗಳಿಸಿದರೆ ಮೊದಲ ಸ್ಥಾನ ಸೇಫ್! ಎಸ್​​ಆರ್​​ಹೆಚ್​​ ವಿರುದ್ಧ ಚರಿತ್ರೆ ಸೃಷ್ಟಿಸುತ್ತಾ ಹಾಲಿ ಚಾಂಪಿಯನ್? | ಕ್ರೀಡಾ ಸುದ್ದಿ | ACTPnews

ಎಸ್​​ಆರ್​​ಹೆಚ್​ vs ಆರ್​​ಸಿಬಿ


Last Updated:

ಆರ್‌ಸಿಬಿ ಮತ್ತು ಎಸ್​​ಆರ್​​ಹೆಚ್​​ ತಂಡಗಳು ಲೀಗ್ ಹಂತದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡುತ್ತಿವೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಸ್​​ಆರ್​​ಹೆಚ್ ತಂಡ ಆರ್​​ಸಿಬಿಗೆ​ 256 ರನ್​​ಗಳನ್ನ ಟಾರ್ಗೆಟ್​ ನೀಡಿದೆ. ಇದರ ನಡುವೆ ಆರ್​​ಸಿಬಿ ತನ್ನ ಮೊದಲ ಸ್ಥಾನವನ್ನು ಉಳಿಸಿಕೊಳ್ಳಲು ಎಷ್ಟು ರನ್ ಗಳಿಸಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಎಸ್​​ಆರ್​​ಹೆಚ್​ vs ಆರ್​​ಸಿಬಿ
ಎಸ್​​ಆರ್​​ಹೆಚ್​ vs ಆರ್​​ಸಿಬಿ

ಐಪಿಎಲ್ (IPL) 2026 ರ 67ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಎದುರಿಸುತ್ತಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ (Rajiv Gandhi) ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ರೋಚಕ ಪಂದ್ಯ (Match)  ನಡೆಯುತ್ತಿದೆ. ಸನ್‌ರೈಸರ್ಸ್ ಹೈದರಾಬಾದ್ ಆರ್‌ಸಿಬಿ ಗೆಲುವಿಗೆ 256 ರನ್‌ಗಳ ಗುರಿಯನ್ನು ನೀಡಿದೆ. ಎರಡೂ ತಂಡಗಳು ಪ್ಲೇಆಫ್‌ (Playoff) ಗೆ ಪ್ರವೇಶಿಸಿದ್ದು, ಅಗ್ರ 2 ಸ್ಥಾನಗಳಿಗೆ ಭಾರೀ ಪೈಪೋಟಿ ನಡೆಯುತ್ತಿದೆ. ಪ್ರಸ್ತುತ ಮೂರನೇ ಸ್ಥಾನದಲ್ಲಿರುವ ಹೈದರಾಬಾದ್ ತಂಡಕ್ಕೆ ಕ್ವಾಲಿಫೈಯರ್-1 (Qualifier 1) ಆಡಲು ಕೊನೆಯ ಅವಕಾಶವಿದೆ. ಮತ್ತೊಂದೆಡೆ ಆರ್​​ಸಿಬಿ ತನ್ನ ಮೊದಲ ಸ್ಥಾನವನ್ನು ಉಳಿಸಿಕೊಳ್ಳಲು ಎಷ್ಟು ರನ್ ಗಳಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.

ಎಸ್​​ಆರ್​​ಹೆಚ್​ ಮತ್ತು ಆರ್​​ಸಿಬಿ ತಂಡಗಳು ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಪಡೆದಿವೆ. ಎಸ್​​ಆರ್​​ಹೆಚ್ ತಂಡವು ಆಡಿರುವ 13 ಪಂದ್ಯಗಳಲ್ಲಿ ಎಂಟು ಪಂದ್ಯಗಳನ್ನು ಗೆದ್ದು 16 ಅಂಕಗಳನ್ನು ಹೊಂದಿದೆ. ಆರ್​​ಸಿಬಿ ತಂಡವು ಆಡಿರುವ 13 ಪಂದ್ಯಗಳಲ್ಲಿ ಒಂಬತ್ತು ಪಂದ್ಯಗಳನ್ನು ಗೆದ್ದು 18 ಅಂಕಗಳನ್ನು ಹೊಂದಿದೆ. ನೆಟ್​ ರನ್​​ ರೇಟ್ ವಿಷಯದಲ್ಲಿ ಆರ್​ಸಿಬಿ ಹೈದರಾಬಾದ್​ ತಂಡಕ್ಕಿಂತ ತುಂಬಾ ಮುಂದಿದೆ.​​ ಆರ್​ಸಿಬಿ ರನ್​ ರೇಟ್​ +1.065 ಇದ್ದರೆ, ಹೈದರಾಬಾದ್ +0.350 ಹೊಂದಿದೆ.

ಹೈದರಾಬಾದ್ ತಂಡವು ಅಗ್ರ 2 ಸ್ಥಾನ ಪಡೆಯಲು, ಆರ್‌ಸಿಬಿ ವಿರುದ್ಧದ ಪಂದ್ಯವನ್ನು ದೊಡ್ಡ ಅಂತರದಿಂದ ಗೆಲ್ಲಬೇಕಾಗುತ್ತದೆ. ಆದರೆ ಹೈದರಾಬಾದ್‌ಗೆ ಈ ಲೆಕ್ಕಾಚಾರ ಸುಲಭವಲ್ಲವಾಗಿಲ್ಲ. ಹೌದು, ಪಂದ್ಯದಲ್ಲಿ ಆರ್‌ಸಿಬಿ ತಂಡಕ್ಕೆ 256 ರನ್‌ಗಳ ಗುರಿಯನ್ನು ನೀಡಿದ್ದರೂ, ಎಸ್‌ಆರ್‌ಹೆಚ್ ಕಡಿಮೆ ಅಂತರದಿಂದ ಹಾಲಿ ಚಾಂಪಿಯನ್‌ಗಳನ್ನು ಕಟ್ಟಿಹಾಕುವುದು ಅಸಾಧ್ಯ.

ಆರ್​ಸಿಬಿ ಎಷ್ಟು ರನ್ ಗಳಿಸಬೇಕು?

ಎಸ್​​ಆರ್​ಹೆಚ್​ ನೀಡಿರುವ 256 ರನ್‌ಗಳ ಗುರಿಯನ್ನು ಬೆನ್ನಟ್ಟಿರುವ ಆರ್​ಸಿಬಿ ಉತ್ತಮ ಆರಂಭ ಪಡೆದುಕೊಳ್ಳುತ್ತಿದೆ. ಐಪಿಎಲ್ 2026 ರ ಪಾಯಿಂಟ್ ಪಟ್ಟಿಯಲ್ಲಿ ಆರ್​ಸಿಬಿ ಮೊದಲ ಸ್ಥಾನದಲ್ಲಿದೆ. ಆರ್​ಸಿಬಿ ಮೊದಲ ಸ್ಥಾನದಲ್ಲಿರಲು ಪ್ರಮುಖ ಕಾರಣ  ರನ್​ ರೇಟ್​ +1.065. ಹೀಗಾಗಿ ಈ ಪಂದ್ಯದಲ್ಲಿ ಆರ್‌ಸಿಬಿ ಸೋತರೂ, ಅಗ್ರಸ್ಥಾನದಲ್ಲಿ ಉಳಿಯಲು ಕನಿಷ್ಠ 180 ಪ್ಲಸ್ ರನ್ ಗಳಿಸಬೇಕಾಗಿದೆ.

ಟಾಪ್-2 ರಲ್ಲಿ ಉಳಿಯಲು ಆರ್​ಸಿಬಿ  ಕನಿಷ್ಠ 166 ರನ್ ಗಳಿಸಬೇಕಾಗಿದೆ. ಒಂದು ವೇಳೆ ಆರ್​ಸಿಬಿ 160 ರನ್​ಗಳ ಒಳಗೆ ಆಲೌಟಾದರೆ, ಗುಜರಾತ್ ಟೈಟನ್ಸ್ ಮತ್ತು ಎಸ್​ಆರ್​ಹೆಚ್​ ಟಾಪ್-2 ರಲ್ಲಿ ಸ್ಥಾನ ಪಡೆಯಲಿವೆ. ಈ ಮೂಲಕ ಕ್ವಾಲಿಫೈಯರ್-1 ರ ಪಂದ್ಯವನ್ನು ಜಿಟಿ ಮತ್ತು ಎಸ್​ಆರ್​ಹೆಚ್​ ಆಡಲಿವೆ. ಟೂರ್ನಿಯುದ್ದಕ್ಕೂ ಆರ್​ಸಿಬಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಇಂತಹ ಸಂದರ್ಭದಲ್ಲಿ ಆರ್​ಸಿಬಿ ತಂಡವನ್ನು 160 ರನ್​ಗಳ ಒಳಗೆ ಕಟ್ಟಿಹಾಕುವುದು ಎಸ್​​ಆರ್​​ಹೆಚ್​ ತಂಡಕ್ಕೆ ಸವಾಲಾಗಿದೆ.

ಎಸ್​​ಆರ್​​ಹೆಚ್​​ ವಿರುದ್ಧ ಆರ್​ಸಿಬಿ ಚರಿತ್ರೆ?

ಎಸ್​​ಆರ್​ಹೆಚ್​ ವಿರುದ್ಧ ಆರ್​ಸಿಬಿ ಚರಿತ್ರೆ ಸೃಷ್ಟಿಸುವ ಅವಕಾಶವನ್ನು ಹೊಂದಿದೆ. ಪಂದ್ಯದಲ್ಲಿ ಆರ್‌ಸಿಬಿ 256 ರನ್‌ಗಳ ಗುರಿಯನ್ನು ಬೆನ್ನಟ್ಟಿದರೆ, ಒಂದು ದಾಖಲೆ ಸೃಷ್ಟಿಯಾಗುತ್ತದೆ. ಎಸ್​​ಆರ್​ಹೆಚ್​ ವಿರುದ್ಧ ವಿರುದ್ಧ ಇಲ್ಲಿವರೆಗ ಅತ್ಯಧಿಕ ಮೊತ್ತವನ್ನು ಆರ್​​ಸಿಬಿ ಚೇಸ್ ಮಾಡಿಲ್ಲ.  2024 ರಲ್ಲಿ ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಎಸ್​​ಆರ್​ಹೆಚ್​ 287 ರನ್ ಗಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಬರೆಯಿತು.

ಈ ದಾಖಲೆಯ ಗುರಿಯನ್ನು ಬೆನ್ನಟ್ಟಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿತ್ತು. ಈ ಮೂಲಕ ಆರ್​ಸಿಬಿ 25 ರನ್​ಗಳ ಸೋಲನ್ನು ಎದುರಿಸಿತ್ತು. ಈಗ ಎಸ್​ಆರ್​ಹೆಚ್​ ವಿರುದ್ಧ ಆರ್​ಸಿಬಿ ದಾಖಲೆ ಸೃಷ್ಟಿಸುವ ಅವಕಾಶವನ್ನು ಹೊಂದಿದೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

SRH vs RCB: ಆರ್​​ಸಿಬಿ ಇಷ್ಟು ರನ್ ಗಳಿಸಿದರೆ ಮೊದಲ ಸ್ಥಾನ ಸೇಫ್! ಎಸ್​​ಆರ್​​ಹೆಚ್​​ ವಿರುದ್ಧ ಚರಿತ್ರೆ ಸೃಷ್ಟಿಸುತ್ತಾ ಹಾಲಿ ಚಾಂಪಿಯನ್?



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed