Last Updated:
ರೋಹಿತ್ ಶರ್ಮಾ ಲಾರ್ಡ್ಸ್ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಸೇನಾ ರಾಷ್ಟ್ರಗಳ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಮೊದಲ ಆಟಗಾರರಾಗಿದ್ದಾರೆ.
ಲಾರ್ಡ್ಸ್ನಲ್ಲಿ (Lord’s Cricket Ground) ನಡೆದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ಈ ಹಿಂದೆ ಕ್ರಿಸ್ ಗೇಲ್ (Chris Gayle) ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದು, ಈ ಸಾಧನೆ ಮಾಡಿದ ಭಾರತದ ಏಕೈಕ ಬ್ಯಾಟರ್ ಎಂಬ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಪುಲ್ ಶಾಟ್ ಗಳಿಗೆ ಬ್ರ್ಯಾಂಡ್ ಅಂಬಾಸಿಡರ್ರಂತೆ ಧೂಳೆಬ್ಬಿಸಿದ ರೋಹಿತ್ ಶರ್ಮಾ, ಒಂದು ಭಾರೀ ಸಿಕ್ಸರ್ ಸಿಡಿಸಿ ವಿಶ್ವ ದಾಖಲೆ ಬ್ರೇಕ್ ಮಾಡಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಸೇನಾ ದೇಶಗಳು (ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ವಿರುದ್ಧ ಅತ್ಯಾಧಿಕ ಸಿಕ್ಸರ್ ಸಿಡಿಸಿದ ದಾಖಲೆಯನ್ನು ಬ್ರೇಕ್ ಮಾಡಿದರು. ವೆಸ್ಟ್ ಇಂಡೀಸ್ ಮಾಜಿ ಆಟಗಾರ, ಯೂನಿವರ್ಸೆಲ್ ಬಾಸ್ ಎಂದು ಖ್ಯಾತಿ ಪಡೆದಿರುವ ಕ್ರಿಸ್ ಗೇಲ್ ಹೆಸರಿನಲ್ಲಿದ್ದ 342 ಸಿಕ್ಸರ್ ಗಳ ದಾಖಲೆಯನ್ನು ರೋಹಿತ್ ಶರ್ಮಾ ಬ್ರೇಕ್ ಮಾಡಿದ್ದಾರೆ.
ಗೇಲ್ ಸೇನಾ ರಾಷ್ಟ್ರಗಳ ವಿರುದ್ಧ ಒಟ್ಟು 342 ಸಿಕ್ಸರ್ ಸಿಡಿಸಿದರೆ, ಈಗ ರೋಹಿತ್ ಶರ್ಮಾ 343 ಸಿಕ್ಸರ್ ಗಳೊಂದಿಗೆ ಈ ದೇಶಗಳ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತ್ಯಾಧಿಕ ಸಿಕ್ಸರ್ ಸಿಡಿಸಿದ ಆಟಗಾರರ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ಸೇನಾ ರಾಷ್ಟ್ರಗಳ ವಿರುದ್ಧ ಇಂತಹ ದಾಖಲೆ ನಿರ್ಮಿಸುವುದು ಅಪರೂಪವೇ ಎಂದು ಹೇಳಬಹುದು. ವಿಶ್ವ ಕ್ರಿಕೆಟ್ ನಲ್ಲಿ ಬಲಿಷ್ಠ ತಂಡಗಳು ಎನಿಸಿಕೊಂಡಿರುವ ಈ ಸೇನಾ ರಾಷ್ಟ್ರಗಳ ವಿರುದ್ಧ ಟೀಂ ಇಂಡಿಯಾ ಆಟಗಾರ ಇಂತಹ ವಿಶೇಷ ದಾಖಲೆ ನಿರ್ಮಿಸಿರೋದು ಹೆಮ್ಮೆಯ ಸಂಗತಿ. ವಿಶೇಷ ಎಂದರೇ, ಟೀಂ ಇಂಡಿಯಾ ಪರ ಈ ಸಾಧನೆ ಮಾಡಿದ ಏಕೈಕ ಬ್ಯಾಟರ್ ಆಗಿಯೂ ಮೊದಲ ಬಾರಿಗೆ ರೋಹಿತ್ ಶರ್ಮಾ ಈ ದಾಖಲೆ ನಿರ್ಮಿಸಿದ್ದಾರೆ.
ಫಲಿತಾಂಶ ವಿಚಾರಕ್ಕೆ ಬಂದರೆ, ಇಂಗ್ಲೆಂಡ್ ಪಂದ್ಯದಲ್ಲಿ 29 ರನ್ ಗಳ ಅಂತರದೊಂದಿಗೆ ಗೆಲುವು ಪಡೆದುಕೊಂಡಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 2-1ರಂತೆ ಕೈವಶ ಮಾಡಿಕೊಂಡಿದೆ. ಲಾರ್ಡ್ಸ್ ಅಂಗಳದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಜಸ್ಟ್ 3 ವಿಕೆಟ್ ನಷ್ಟಕ್ಕೆ 387 ರನ್ ಗಳಿಸಿತ್ತು. 388 ರನ್ ಗಳ ಬೃಹತ್ ಮೊತ್ತವನ್ನ ಬೆನ್ನಟ್ಟಿದ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 360 ರನ್ ಮಾತ್ರ ಗಳಿಸಿತ್ತು. ಟೀಂ ಇಂಡಿಯಾ ಪರ ರೋಹಿತ್ ಶರ್ಮಾ ಅವರು ಸಿಡಿಸಿದ ಶತಕ (111 ಎಸೆತಗಳಲ್ಲಿ 17 ಬೌಂಡರಿ, ಐದು ಸಿಕ್ಸರ್ ಗಳೊಂದಿಗೆ 138 ರನ್) ವ್ಯರ್ಥ ಆಯ್ತು.
Jul 20, 2026 10:55 AM IST














