MLC 2026: ಮೇಜರ್ ಕ್ರಿಕೆಟ್ ಲೀಗ್ ಫೈನಲ್​​ನಲ್ಲಿ​ ಕೊನೆ ಓವರ್‌ ಹೈ ಡ್ರಾಮಾ! 1 ರನ್​​ನಿಂದ ಗೆದ್ದು ಚಾಂಪಿಯನ್ ಆದ ನೈಟ್ ರೈಡರ್ಸ್ | ಕ್ರೀಡಾ ಸುದ್ದಿ | ACTPnews

ಎಂಸಿಎಲ್ 2026 ಗೆದ್ದ ಲಾಸ್ ಏಂಜಲೀಸ್ ನೈಟ್ ರೈಡರ್ಸ್


Last Updated:

ಹಿಂದಿನ ಮೂರು ಋತುಗಳನ್ನ ಸೇರಿ ಕೇವಲ ಐದು ಗೆಲುವುಗಳನ್ನು ಮಾತ್ರ ಗಳಿಸಿದ್ದ ನೈಟ್ ರೈಡರ್ಸ್ ತಂಡ ಈ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ತೋರಿ ಚಾಂಪಿಯನ್ ಪಟ್ಟಕ್ಕೇರಿತು. ಈ ಋತುವಿನ ಎಂಟನೇ ಜಯದೊಂದಿಗೆ ಪ್ರತಿಷ್ಠಿತ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ಎಂಸಿಎಲ್ 2026 ಗೆದ್ದ ಲಾಸ್ ಏಂಜಲೀಸ್ ನೈಟ್ ರೈಡರ್ಸ್
ಎಂಸಿಎಲ್ 2026 ಗೆದ್ದ ಲಾಸ್ ಏಂಜಲೀಸ್ ನೈಟ್ ರೈಡರ್ಸ್

ಮೇಜರ್ ಲೀಗ್ ಕ್ರಿಕೆಟ್ 2026ರ ಸೀಸನ್ ರೋಮಾಂಚಕ ಫೈನಲ್​ ಪಂದ್ಯದೊಂದಿಗೆ ಮುಕ್ತಾಯಗೊಂಡಿದೆ. ಓಕ್ಲ್ಯಾಂಡ್ ಕೊಲಿಸಿಯಂ ಕ್ರೀಡಾಂಗಣದಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ, ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡ ವಾಷಿಂಗ್ಟನ್ ಫ್ರೀಡಂ ಅನ್ನು ಕೇವಲ ಒಂದು ರನ್ ಅಂತರದಿಂದ ಸೋಲಿಸಿ, ತಮ್ಮ ಇತಿಹಾಸದಲ್ಲಿ ಮೊದಲ ಬಾರಿಗೆ ಮೇಜರ್ ಲೀಗ್ ಕ್ರಿಕೆಟ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಹಿಂದಿನ ಮೂರು ಋತುಗಳನ್ನ ಸೇರಿ ಕೇವಲ ಐದು ಗೆಲುವುಗಳನ್ನು ಮಾತ್ರ ಗಳಿಸಿದ್ದ ನೈಟ್ ರೈಡರ್ಸ್ ತಂಡ ಈ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ತೋರಿ ಚಾಂಪಿಯನ್ ಪಟ್ಟಕ್ಕೇರಿತು. ಈ ಋತುವಿನ ಎಂಟನೇ ಜಯದೊಂದಿಗೆ ಪ್ರತಿಷ್ಠಿತ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ಮ್ಯಾಚ್ ವಿನ್ನರ್ ಆದ ಶಾಡ್ಲಿ ವ್ಯಾನ್ ಶಾಲ್ಕ್‌ವೈಕ್

165 ರನ್‌ಗಳ ಗುರಿಯನ್ನು ಬೆನ್ನಟ್ಟಿದ ವಾಷಿಂಗ್ಟನ್ ಫ್ರೀಡಂ ತಂಡಕ್ಕೆ ಅಂತಿಮ ಓವರ್‌ನಲ್ಲಿ ಗೆಲ್ಲಲು 14 ರನ್‌ಗಳ ಅಗತ್ಯವಿತ್ತು. ನೈಟ್ ರೈಡರ್ಸ್‌ನ ಶಾಡ್ಲಿ ವ್ಯಾನ್ ಶಾಲ್ಕ್‌ವೈಕ್ ಎಸೆದ ಮೊದಲ ಎಸೆತದಲ್ಲಿ ಭವ್ಯವಾದ ಸಿಕ್ಸ್ ಬಾರಿಸುವ ಮೂಲಕ ಓಬಸ್ ಪಿಯೆನಾರ್ ತಂಡಕ್ಕೆ ಗೆಲುವಿನ ಆಸೆಯನ್ನ ಮತ್ತಷ್ಟು ಹೆಚ್ಚಿಸಿದರು. ಆದರೆ ಶಾಲ್ಕ್‌ವೈಕ್ ಅದ್ಭುತ ಬೌಲಿಂಗ್ ಮಾಡಿ ಪಿಯೆನಾರ್ ಅವರನ್ನು ಯಾರ್ಕರ್ ಮೂಲಕ ಔಟ್ ಮಾಡಿದರು. ಮುಂದಿನ ಎಸೆತದಲ್ಲೇ ಅವರು ಇಯಾನ್ ಹಾಲೆಂಡ್ ಅವರ ವಿಕೆಟ್ ಪಡೆದರು. ಕೊನೆಯ 3 ಎಸೆತಗಳಲ್ಲಿ 8 ರನ್​​ಗಳ ಅಗತ್ಯವಿತ್ತು. ಲಾಕಿ ಫರ್ಗುಸನ್ ಬೌಂಡರಿ ಹೊಡೆದು, 5ನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡರು. ಕೊನೆಯ ಎಸೆತದಲ್ಲಿ 3 ರನ್​ಗಳ ಅಗತ್ಯವಿತ್ತು.

ಆದರೆ ವ್ಯಾನ್ ಶಾಲ್ಕ್‌ವೈಕ್ ಕೊನೆಯ ಎಸೆತದಲ್ಲಿ ಕೇವಲ 1 ರನ್​​ ಮಾತ್ರ ನೀಡಿ ನೈಟ್​ ರೈಡರ್ಸ್ಗೆ 1 ರನ್​​ ರೋಚಕ ಜಯ ತಂದುಕೊಟ್ಟರು. ಕೊನೆಯ ಎಸೆತದಲ್ಲಿ ಎರಡು ರನ್‌ಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುವಾಗ ಲಹಿರು ಮಿಲಂತ ರನೌಟ್ ಆದರು. ಪರಿಣಾಮವಾಗಿ, ವಾಷಿಂಗ್ಟನ್ ಫ್ರೀಡಂ ಸೂಪರ್ ಓವರ್‌ ಚಾನ್ಸ್​​ಅನ್ನು ಕೂಡ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿತು. ಆದರೆ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಮಿಂಚಿದ ಕೆರಿಬಿಯನ್ ಸ್ಟಾರ್ಸ್

ಟಾಸ್ ಸೋತ ನಂತರ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಅತ್ಯುತ್ತಮ ಆರಂಭವನ್ನು ನೀಡಿತು. ಪವರ್‌ಪ್ಲೇ ಸಮಯದಲ್ಲಿ ಆಂಡ್ರೆ ಫ್ಲೆಚರ್ ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆಗೈದರು. ಬೆನ್ ದ್ವಾರ್ಶುಯಿಸ್ ಮತ್ತು ಲಾಕಿ ಫರ್ಗುಸನ್ ಅವರ ವೇಗವನ್ನು ಬಳಸಿಕೊಂಡು, ಫ್ಲೆಚರ್ ಪವರ್‌ಪ್ಲೇ ಅಂತ್ಯದ ವೇಳೆಗೆ ತಂಡದ 54 ರನ್‌ಗಳಲ್ಲಿ ಏಕಾಂಗಿಯಾಗಿ 38 ರನ್‌ ಸಿಡಿಸಿದರು. ನೈಟ್ ರೈಡರ್ಸ್‌ನ ಮಧ್ಯಮ ಕ್ರಮಾಂಕವು ವಾಷಿಂಗ್ಟನ್ ಫ್ರೀಡಂ ಸ್ಪಿನ್ನರ್‌ಗಳ ವಿರುದ್ಧ ಎರಡವಿತು. ನಿಖಿಲ್ ಚೌಧರಿ ಒಂದೇ ಓವರ್​​ನಲ್ಲಿ ಫ್ಲೆಚರ್ (27 ಎಸೆತಗಳಲ್ಲಿ 47) ಮತ್ತು ಆಂಡ್ರೆ ರಸೆಲ್(0) ವಿಕೆಟ್ ಪಡೆದರು.

ನಂತರ ರಚಿನ್ ರವೀಂದ್ರ ಕಾಲಿನ್ ಮುನ್ರೊ (40) ಮತ್ತು ಸುನಿಲ್ ನರೈನ್ (0) ವಿಕೆಟ್ ಮಾಡಿದರು. ನೈಟ್ ರೈಡರ್ಸ್ ಒಂದು ಹಂತದಲ್ಲಿ 4 ವಿಕೆಟ್‌ಗೆ 111 ರನ್ ಗಳಿಸಿತ್ತು. ಆದರೆ ಮ್ಯಾಥ್ಯೂ ಟ್ರಂಪ್ 21 ಎಸೆತಗಳಲ್ಲಿ ತಲಾ 3 ಬೌಂಡರಿ, ಸಿಕ್ಸರ್ ಸಹಿತ 39 ರನ್​ಗಳಿಸಿ ತಂಡದ ಮೊತ್ತವನ್ನ 164ಕ್ಕೇರಿಸಿದರು.

ಮಿಂಚಿದ ಸುನಿಲ್ ನರೈನ್ ಮತ್ತು ಜೇಸನ್ ಹೋಲ್ಡರ್

ಸಾಧಾರಣ ಮೊತ್ತದ ಹೊರತಾಗಿಯೂ, ನೈಟ್ ರೈಡರ್ಸ್‌ನ ಕೆರಿಬಿಯನ್ ಬೌಲರ್‌ಗಳು ತಮ್ಮ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಪವರ್‌ಪ್ಲೇನಲ್ಲಿ ಸುನಿಲ್ ನರೈನ್ ಮಾರಕ ಬೌಲಿಂಗ್ ಮಾಡಿ ಮೂರು ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸಿದರು. ನಾಯಕ ಜೇಸನ್ ಹೋಲ್ಡರ್ ಮಧ್ಯಮ ಕ್ರಮಾಂಕದ 3 ವಿಕೆಟ್‌ಗಳನ್ನು ಪಡೆದು ವಾಷಿಂಗ್ಟನ್ ಫ್ರೀಡಂ ತಂಡವನ್ನ ಧೂಳೀಪಟ ಮಾಡಿದರು. ಆದರೆ ಓಬಸ್​ ಪಿಯೆನಾರ್ 24 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್​​ ಸಹಿತ 53 ರನ್​ಗಳಿಸಿ ಕೊನೆಯ ಓವರ್​​ತನಕ ಕೊಂಡೊಯ್ದರು. ಆದರೆ ವ್ಯಾನ್ ಶಾಲ್ಕ್‌ವಿಕ್ ಕೊನೆಯ ಓವರ್​​ ಅದ್ಭುತ ಬೌಲಿಂಗ್ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed