Last Updated:
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಐಪಿಎಲ್ 2026 ರಲ್ಲಿ ಪ್ಲೇಆಫ್ ತಲುಪುವ ರೇಸ್ನಲ್ಲಿ ಇನ್ನೂ ಇದೆ. ಮೇ 24 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೆಕೆಆರ್ ನಿರ್ಣಾಯಕ ಪಂದ್ಯವನ್ನು ಆಡಬೇಕಾಗಿದೆ. ಆದರೆ ಅದಕ್ಕೂ ಮೊದಲು ಕೆಕೆಆರ್ ತಂಡಕ್ಕೆ ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ.
ಐಪಿಎಲ್ 2026 ರ ಪ್ಲೇಆಫ್ಗೆ ಮೂರು ತಂಡಗಳು ಈಗಾಗಲೇ ಅರ್ಹತೆ ಪಡೆದಿವೆ. ಆದರೆ ನಾಲ್ಕು ತಂಡಗಳು ಇನ್ನೂ ಒಂದು ಸ್ಥಾನಕ್ಕಾಗಿ ರೇಸ್ನಲ್ಲಿವೆ. ಕೋಲ್ಕತ್ತಾ ನೈಟ್ ರೈಡರ್ಸ್ ಅವುಗಳಲ್ಲಿ ಒಂದು. ಐಪಿಎಲ್ 2026 ರಲ್ಲಿ ಬಹಳ ಏರಿಳಿತದ ಪ್ರದರ್ಶನ ನೀಡುತ್ತಿರುವ ಕೆಕೆಆರ್, ಇದುವರೆಗೆ 13 ಪಂದ್ಯಗಳಲ್ಲಿ ಒಟ್ಟು 13 ಅಂಕಗಳನ್ನು ಹೊಂದಿದೆ. ಕೆಕೆಆರ್ ತಂಡವು ಮೇ 24 ರಂದು ತಮ್ಮ ತವರು ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲೀಗ್ ಹಂತದ ತನ್ನ ಕೊನೆಯ ಪಂದ್ಯವನ್ನು ಆಡಲಿದೆ. ಈ ಪಂದ್ಯಕ್ಕೂ ಮೊದಲು, ಕೆಕೆಆರ್ಗೆ ದೊಡ್ಡ ಹೊಡೆತ ಬಿದ್ದಿದ್ದು, ಬ್ಯಾಟಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಂಗ್ಕ್ರಿಶ್ ರಘುವಂಶಿ ಈಗ ಸಂಪೂರ್ಣ ಆವೃತ್ತಿಯಿಂದ ಹೊರಗುಳಿದಿದ್ದಾರೆ.
ಮೇ 20 ರಂದು ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ ಆಡಿತ್ತು. ಫೀಲ್ಡಿಂಗ್ ಮಾಡುತ್ತಿದ್ದಾಗ, ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ಅಂಗ್ಕ್ರಿಶ್ ರಘುವಂಶಿ ವರುಣ್ ಚಕ್ರವರ್ತಿಗೆ ಡಿಕ್ಕಿ ಹೊಡೆದರು. ತೇಜಸ್ವಿ ದಹಿಯಾ ಅವರನ್ನು ಪಂದ್ಯದ ಮಧ್ಯದಲ್ಲಿ ಕನ್ಕ್ಯುಶನ್ ಬದಲಿ ಆಟಗಾರನಾಗಿ ಸೇರಿಸಲಾಯಿತು.
ವರುಣ್ ಚಕ್ರವರ್ತಿಗೆ ಡಿಕ್ಕಿ ಹೊಡೆದಾಗ ರಘುವಂಶಿ ಅವರ ಎಡಗೈ ಬೆರಳಿಗೆ ಗಾಯವಾಗಿತ್ತು. ಈ ಗಾಯದಿಂದಾಗಿ ಅವರು ಐಪಿಎಲ್ 2026 ರ ಆವೃತ್ತಿಯಿಂದ ಹೊರ ಬಿದ್ದಿದ್ದಾರೆ. ಈ ಬಗ್ಗೆ ಕೆಕೆಆರ್ ಫ್ರಾಂಚೈಸಿ ಮೇ 22 ರಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಧಿಕೃತವಾಗಿ ಘೋಷಿಸಿದೆ.













