Last Updated:
ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ. ಆಲಮಟ್ಟಿ ಶೇ. 72.74, ವಾಣಿವಿಲಾಸ ಸಾಗರ ಶೇ. 78.8 ಭರ್ತಿ. ಕೆ.ಆರ್.ಎಸ್ ಶೇ. 35.84, ತುಂಗಭದ್ರಾ ಶೇ. 24.69 ರಷ್ಟು ಮಾತ್ರ ಭರ್ತಿ.
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ (Rain) ಚುರುಕುಗೊಂಡಿರುವ ಬೆನ್ನಲ್ಲೇ, ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ (Reservoirs) ನೀರಿನ ಮಟ್ಟ (Water Level) ಏರಿಕೆಯಾಗುತ್ತಿದೆ. ಆದರೆ, ಎಲ್ಲ ಕಡೆಗಳಲ್ಲೂ ಸಮಾನವಾದ ಮಳೆಯಾಗಿಲ್ಲ ಎಂಬುದನ್ನು ಇತ್ತೀಚಿನ ಅಂಕಿ-ಅಂಶಗಳು ತೋರಿಸಿಕೊಟ್ಟಿವೆ. ಪ್ರಮುಖ ಡ್ಯಾಂಗಳಲ್ಲಿನ ನೀರಿನ (Water) ಲಭ್ಯತೆಯ ಕುರಿತು ಇಲ್ಲಿದೆ ಮಾಹಿತಿ.
ಉತ್ತರ ಕರ್ನಾಟಕದ ಆಲಮಟ್ಟಿ ಅಣೆಕಟ್ಟು ಸದ್ಯ ಶೇ. 72.74 ರಷ್ಟು ಭರ್ತಿಯಾಗಿ ರಾಜ್ಯದಲ್ಲೇ ಅತಿ ಹೆಚ್ಚು ನೀರು ಸಂಗ್ರಹವಿರುವ ಜಲಾಶಯವಾಗಿ ಮುಂದುವರಿದಿದೆ. ಇನ್ನು ವಾಣಿವಿಲಾಸ ಸಾಗರ ಅಣೆಕಟ್ಟು ಶೇ. 78.8 ರಷ್ಟು ಭರ್ತಿಯಾಗಿದ್ದು, ಕೃಷಿ ಚಟುವಟಿಕೆಗೆ ಆಶಾದಾಯಕವಾಗಿದೆ.
ತುಂಗಭದ್ರಾ ಅಣೆಕಟ್ಟಿನಲ್ಲಿ ಕೇವಲ ಶೇ. 24.69 ರಷ್ಟು ಮಾತ್ರ ನೀರಿದೆ, ಇದು ರೈತರಲ್ಲಿ ತುಸು ಆತಂಕ ಮೂಡಿಸಿದೆ. ಮಲಪ್ರಭಾ ಮತ್ತು ಭದ್ರಾ ಅಣೆಕಟ್ಟುಗಳಲ್ಲೂ ನೀರಿನ ಸಂಗ್ರಹ ಸುಧಾರಿಸಬೇಕಾಗಿದೆ. ಈ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಬೇಕಿದ್ದು, ಮುಂಗಾರು ಮಳೆಯು ಮುಂದಿನ ದಿನಗಳಲ್ಲಿ ಈ ಡ್ಯಾಂಗಳನ್ನು ತುಂಬುವ ನಿರೀಕ್ಷೆಯಿದೆ.
ಪ್ರಸ್ತುತ ಜಲಾಶಯಗಳಲ್ಲಿನ ನೀರಿನ ಮಟ್ಟದ ಆಧಾರದ ಮೇಲೆ, ರೈತರು ಕೃಷಿ ಚಟುವಟಿಕೆಗಳನ್ನು ಯೋಜಿಸಿಕೊಳ್ಳಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ. ರಾಜ್ಯ ಸರ್ಕಾರ ಮತ್ತು ಜಲಸಂಪನ್ಮೂಲ ಇಲಾಖೆಯು ಪ್ರತಿ ದಿನವೂ ನೀರಿನ ಒಳಹರಿವನ್ನು ಗಮನಿಸುತ್ತಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ.
Mysore,Mysore,Karnataka
Jul 18, 2026 10:42 AM IST














