Toxic Movie: ಟಾಕ್ಸಿಕ್ ಸಿನಿಮಾ ಫ್ಯಾಮಿಲಿ ನೋಡೋಕಾಗಲ್ಲ ಅನ್ನೋರಿಗೆ ಯೋಗರಾಜ್ ಭಟ್ ಏನಂದ್ರು? | | ACTPnews

ಟಾಕ್ಸಿಕ್ ಸಿನಿಮಾ ಫ್ಯಾಮಿಲಿ ಕುಳಿತು ನೋಡುವ ಚಿತ್ರವೇ? ಭಟ್ರ ಹೇಳುವುದೇನು?


Last Updated:

ಟಾಕ್ಸಿಕ್ ಚಿತ್ರ ಫ್ಯಾಮಿಲಿ ಆಡಿಯನ್ಸ್ ನೋಡುವ ಚಿತ್ರವೇ? ಈ ಚಿತ್ರವನ್ನ ಮಕ್ಕಳು ನೋಡ್ಬಾರ್ದಾ? ಇದು ದೊಡ್ಡವರಿಗಾಗಿಯೇ ಮಾಡಿರೋ ಚಿತ್ರವೇ? ಈ ಎಲ್ಲದರ ಬಗೆಗಿನ ಒಂದು ಸ್ಟೋರಿ ಇಲ್ಲಿದೆ ಓದಿ.

ಟಾಕ್ಸಿಕ್ ಸಿನಿಮಾ ಫ್ಯಾಮಿಲಿ ಕುಳಿತು ನೋಡುವ ಚಿತ್ರವೇ? ಭಟ್ರ ಹೇಳುವುದೇನು?
ಟಾಕ್ಸಿಕ್ ಸಿನಿಮಾ ಫ್ಯಾಮಿಲಿ ಕುಳಿತು ನೋಡುವ ಚಿತ್ರವೇ? ಭಟ್ರ ಹೇಳುವುದೇನು?

ಟಾಕ್ಸಿಕ್ ಚಿತ್ರದ (Toxic Movie) ಸದ್ಯದ ಕಂಟೆಂಟ್ ನೋಡಿದ್ರೆ ಕುಟುಂಬ ಸಮೇತ (Family Audience) ನೋಡುವ ಚಿತ್ರ ಅಲ್ವೇ ಅಲ್ಲ. ಇದು ಚಿಕ್ಕವರಿಗೂ ಅಲ್ಲ. ದೊಡ್ಡವರ ಚಿತ್ರ ಅಂತಲೂ ಅನಿಸುತ್ತದೆ. ಅದಕ್ಕೆ ಪೂರಕ ಅನ್ನುವ ಹಾಗೆ ಮಕ್ಕಳು ಈ ಚಿತ್ರದಿಂದ ದೂರವೇ ಇರಿ ಅಂತಲೇ ಇತ್ತೀಚಿನ ಟೀಸರ್ ಅಲ್ಲೂ ಹೇಳಿದ್ದಾರೆ. ಆದರೆ, ಈ ಚಿತ್ರಕ್ಕೆ ಮೂರು ಹಾಡು ಬರೆದಿರೋ ಯೋಗರಾಜ್ ಭಟ್ರು (Yogaraj Bhat) ಈ ಬಗ್ಗೆ ಹೇಳುವುದೇ ಬೇರೆ ಇದೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.

ಟಾಕ್ಸಿಕ್ ಫ್ಯಾಮಿಲಿ ನೋಡುವ ಚಿತ್ರವೇ

ಟಾಕ್ಸಿಕ್ ಚಿತ್ರದ ಸದ್ಯದ ಕಂಟೆಂಟ್ ನೋಡಿದರೆ ಇದು ಕುಟುಂಬ ಸಮೇತ ಕುಳಿತು ನೋಡುವ ಚಿತ್ರ ಅನಿಸೋದಿಲ್ಲ. ಆದರೆ, ಭಟ್ರು ಇದನ್ನ ಒಪ್ಪೋದಿಲ್ಲ. ಯಶ್‌ಗೆ ಎಲ್ಲವು ಗೊತ್ತಿದೆ. ಕುಟುಂಬ ಸಮತೇ ಕುಳಿತು ನೋಡುವ ಚಿತ್ರವೇ ಇದಾಗಿದೆ.
yash toxic movie made for family audience what yogaraj bhat said

ಯಶ್‌ಗೆ ತುಂಬಾನೆ ಚೆನ್ನಾಗಿ ಗೊತ್ತಿದೆ

(ಚಿತ್ರ ಕೃಪೆ: ಯೋಗರಾಜ್ ಭಟ್ ಇನ್‌ಸ್ಟಾಗ್ರಾಮ್)

ಅದಕ್ಕೇನೆ ಇದು ದೊಡ್ಡವರಿಗೆ ಮಾತ್ರ ಅಂತಲೇ ಹೇಳಿದ್ದಾರೆ. ಈ ಚಿತ್ರದ ಕತೆಯನ್ನ ಸುಮ್ನೆ ಒಪ್ಪಿಲ್ಲ ಬಿಡಿ. ಇವರು ಹೊಸದೇನೋ ನಿರೀಕ್ಷೆ ಮಾಡುವಾಗ ಗೀತು ಮೋಹನ್‌ದಾಸ್ ಕತೆ ಹೇಳಿದ್ದಾರೆ. ಆಗ ಯಶ್ ಮತ್ತು ಗೀತು ಮೋಹನ್‌ದಾಸ್ ಯೋಚನೆ ಮತ್ತು ಕತೆ ಸಿಂಕ್ ಆಗಿದೆ. ಅದಕ್ಕೇನೆ ಇಷ್ಟು ದೊಡ್ಡ ಚಿತ್ರವಾಗಿದೆ.

ಯಶ್‌ಗೆ ತುಂಬಾನೆ ಚೆನ್ನಾಗಿ ಗೊತ್ತಿದೆ

ಫ್ಯಾಮಿಲಿ ಆಡಿಯನ್ಸ್‌ಗೆ ಏನು ಬೇಕು ಅನ್ನೋದು ಯಶ್‌ಗೆ ಗೊತ್ತಿದೆ. ಅದನ್ನ ತುಂಬಾನೆ ಚೆನ್ನಾಗಿಯೇ ತಿಳಿದುಕೊಂಡಿದ್ದಾರೆ. ಅದನ್ನ ಇಟ್ಟುಕೊಂಡೇ ಈ ಚಿತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಫ್ಯಾಮಿಲಿ ಕುಳಿತು ನೋಡುವ ವಿಷಯ ಇದೆ ಅಂತ ಯೋಗರಾಜ್ ಭಟ್ರು ಹೇಳಿದ್ದಾರೆ.

ಇನ್ನುಳಿದಂತೆ ಈ ಚಿತ್ರದಲ್ಲಿ ಯೋಗರಾಜ್ ಭಟ್ರು ಒಟ್ಟು ಮೂರು ಹಾಡು ಬರೆದಿದ್ದಾರೆ. ಒಂದು ತಬಾಹಿ ಅಂತ ಗೊತ್ತೇ ಇದೆ. ಇನ್ನೆರಡರಲ್ಲಿ ಒಂದು ಶೋಕ ಗೀತೆ ಇದೆ. ಇನ್ನೊಂದು ಫೀಮೇಲ್ ಪ್ರೇಮ ಗೀತೆ ಆಗಿದೆ ಅಂತಲೇ ಭಟ್ರು ಹೇಳಿಕೊಂಡಿದ್ದಾರೆ.

ತಬಾಹಿ ಹಾಡು ಹೇಗಿದೆ ಗೊತ್ತೇ

ಟಾಕ್ಸಿಕ್ ಚಿತ್ರದ ತಬಾಹಿ ಹಾಡಿನಲ್ಲಿ ಪ್ರೀತಿ-ಪ್ರೇಮದ ಕಿಚ್ಚಿದೆ. ಈ ಕಿಚ್ಚನ್ನ ಸಾಲುಗಳಲ್ಲಿ ಭಟ್ರು ತಂದಿದ್ದಾರೆ. ಆದರೆ, ಅದನ್ನ ಯಶ್ ಮತ್ತು ಕಿಯಾರಾ ಅಡ್ವಾಣಿ ಅವರ ಹಾಡಿನ ವಿಷ್ಯೂಲ್ ನೋಡಿಯೇ ಬರೆದಿದ್ದಾರೆ.

yash toxic movie made for family audience what yogaraj bhat said

ಟಾಕ್ಸಿಕ್ ಫ್ಯಾಮಿಲಿ ನೋಡುವ ಚಿತ್ರವೇ

ಮುಂಬೈಗೆ ಹೋಗಿಯೇ ಈ ಹಾಡು ಬರೆದಿದ್ದಾರೆ. ತಬಾಹಿ ಬದಲು ನಗಾರಿ ಅನ್ನುವ ಪದವನ್ನ ಬಳಕೆ ಮಾಡಿ ಒಂದು ವರ್ಶನ್ ಬರೆದಿದ್ದಾರೆ. ಆದರೆ, ಚಿತ್ರ ತಂಡ ನಗಾರಿ ಪದ ಬದಲು ತಬಾಹಿ ಬಳಕೆ ಮಾಡಿ ಅಂತಲೇ ಹೇಳಿದೆ. ಆಗಲೇ ಭಟ್ರು ತಬಾಹಿ ಅನ್ನುವ ಪದ ಬಳಕೆ ಮಾಡಿಯೇ ಇಡೀ ಹಾಡು ಮುಗಿಸಿದ್ದಾರೆ.

ತಬಾಹಿ ಹಲ್‌ಚಲ್‌

ತಬಾಹಿ ಹಾಡು ಹಲ್‌ಚಲ್‌ ಎಬ್ಬಿಸಿದೆ. ಈ ಮೊದಲು ಈ ಹಾಡಿನ ಆಡಿಯೋ ಮಾತ್ರ ರಿಲೀಸ್ ಮಾಡಿದ್ದರು. ಆದರೆ, ಈ ಹಾಡಿನ ವಿಡಿಯೋ ಬಂದ್ಮೇಲೆ ಭಟ್ರ ಬರೆದ ಸಾಲುಗಳು ಮತ್ತಷ್ಟು ರೀಚ್ ಆಗಿವೆ.

ಒಟ್ಟಾರೆ, ಟಾಕ್ಸಿಕ್ ಚಿತ್ರದ ತಬಾಹಿ ಹಾಡು ಹೊಸ ಅಲೆ ಎಬ್ಬಿಸಿದೆ. ಟಾಕ್ಸಿಕ್ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಇದ್ದೇ ಇದೆ. ಅಂದ್ಹಾಗೆ ಟಾಕ್ಸಿಕ್ ಚಿತ್ರ ಆಗಸ್ಟ್-26 ರಂದು ರಿಲೀಸ್ ಆಗುತ್ತಿದೆ. ದೊಡ್ಡಮಟ್ಟದಲ್ಲಿಯೇ ಬಹು ಭಾಷೆಯಲ್ಲಿ ಇದು ತೆರೆಗೆ ಬರ್ತಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports