Daali Dhananjaya Movie: ‘ಮದರ್ ಪ್ರಾಮಿಸ್’ 20 ನಿಮಿಷ ಕಟ್; ಇಂದಿನಿಂದ ಹೊಸ ವರ್ಷನ್ ಪ್ರದರ್ಶನ! | | ACTPnews

ಡಾಲಿ ಧನಂಜಯ್ 'ಮದರ್ ಪ್ರಾಮಿಸ್' 20 ನಿಮಿಷ ಕಟ್!


Last Updated:

ಮದರ್ ಪ್ರಾಮಿಸ್ ಚಿತ್ರದ ಹೊಸ ವರ್ಷನ್ ಈ ವಾರದಿಂದ ಪ್ರದರ್ಶನ ಆಗುತ್ತಿದೆ. ಚಿತ್ರದ ಒಟ್ಟು ಅವಧಿಯಲ್ಲಿ 20 ನಿಮಿಷದಷ್ಟು ಕಟ್ ಕೂಡ ಮಾಡಲಾಗಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಡಾಲಿ ಧನಂಜಯ್ 'ಮದರ್ ಪ್ರಾಮಿಸ್' 20 ನಿಮಿಷ ಕಟ್!
ಡಾಲಿ ಧನಂಜಯ್ ‘ಮದರ್ ಪ್ರಾಮಿಸ್’ 20 ನಿಮಿಷ ಕಟ್!

ಮದರ್ ಪ್ರಾಮಿಸ್ ಚಿತ್ರ (Mother Promise Movie) ಮೊನ್ನೆ ಜುಲೈ-10 ರಂದು ರಿಲೀಸ್ ಆಗಿದೆ. ಈ ಚಿತ್ರಕ್ಕೆ ಮೊದಲ ದಿನವೂ ಒಳ್ಳೆ ರೆಸ್ಪಾನ್ಸ್ (Good Response) ಬಂದಿವೆ. ಪ್ರೀಮಿಯರ್ ಶೋದಲ್ಲೂ ಈ ಸಿನಿಮಾವನ್ನ (Movie) ನೋಡಿದ ಜನ ಮೆಚ್ಚಿಕೊಂಡಿದ್ದಾರೆ. ಆದರೆ, ಚಿತ್ರ ಯಾಕೋ ಲ್ಯಾಗ್ ಆಯಿತು ಅನ್ನೋ ಮಾತುಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿಯೇ ಮದರ್ ಪ್ರಾಮಿಸ್ ಚಿತ್ರದ (Mother Promise Movie) ಒಟ್ಟು ಅವಧಿಯಲ್ಲಿ 20 ನಿಮಿಷ ಕಟ್ ಮಾಡಿದ್ದಾರೆ. ಈ ವಿಷಯವನ್ನ ಚಿತ್ರ ತಂಡವೇ ಅಧಿಕೃತವಾಗಿಯೇ ಹೇಳಿಕೊಂಡಿದೆ. ಇದರ ಇತರ ವಿವರ ಇಲ್ಲಿದೆ ಓದಿ.

20 ನಿಮಿಷ ಎಗರೋಯ್ತು

ಮದರ್ ಪ್ರಾಮಿಸ್ ಚಿತ್ರ ತಂಡ ಇದನ್ನೆ ಹೇಳಿದೆ. ನಮ್ಮ ಚಿತ್ರದ ಒಟ್ಟು ಅವಧಿಯಲ್ಲಿ 20 ನಿಮಿಷ ಕಟ್ ಮಾಡಲಾಗಿದೆ. ಇದನ್ನ ಚಿತ್ರ ತಂಡ “20 ನಿಮಿಷ ಎಗರೋಯ್ತು” ಅಂತಲೇ ಹೇಳಿಕೊಂಡಿದೆ.
mother promise movie new version with 20 minutes trim releasing this week

ಈ ವಾರದಿಂದ ಹೊಸ ವರ್ಷನ್

ಈ 20 ನಿಮಿಷ ಕತ್ತರಿಸಲು ಕಾರಣವು ಇದೆ. ಈಗಾಗಲೇ ಹೇಳಿದಂತೆ ಈ ಚಿತ್ರದ ಒಟ್ಟು ಸಮಯದಲ್ಲಿ 20 ನಿಮಿಷ ಲ್ಯಾಗ್ ಆಯಿತು ಅನ್ನೋ ಮಾತುಗಳು ಕೇಳಿ ಬಂದಿವೆ. ಈ ಒಂದು ಕಾರಣಕ್ಕೇನೆ ಸಿನಿಮಾ ತಂಡ ಜನಕ್ಕೆ ಯಾವುದು ಜಾಸ್ತಿ ಆಗಿದೆ ಅನಿಸಿದೆಯೋ ಅದನ್ನೆ ಕಟ್ ಮಾಡಿದ್ದಾರೆ.

ಈ ವಾರದಿಂದ ಹೊಸ ವರ್ಷನ್

ಮದರ್ ಪ್ರಾಮಿಸ್ ಚಿತ್ರ ಈ ವಾರದಿಂದ ಹೊಸ ವರ್ಷನ್ ಪ್ರದರ್ಶನ ಆಗುತ್ತಿದೆ. 20 ನಿಮಿಷ ಟ್ರಿಮ್ ಆಗಿರೋ ಚಿತ್ರವೇ ಈ ವಾರದಿಂದ ಪ್ರದರ್ಶನ ಆಗುತ್ತಿದೆ.

ಈ ಚಿತ್ರಕ್ಕೆ ಪ್ರೀಮಿಯರ್ ಶೋದಲ್ಲಿ ಒಳ್ಳೆಯ ಅಭಿಪ್ರಾಯವೂ ಬಂದಿವೆ. ರಿಲೀಸ್ ಆದ ಮೊದಲ ದಿನವೂ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೇನೂ ಬಂದಿವೆ. ಆದರೆ, ಲ್ಯಾಗ್ ಆಯಿತು ಅಂತ ಹೇಳಿದವರೂ ಇದ್ದಾರೆ. ಹಾಗಾಗಿಯೇ 20 ನಿಮಿಷ ಚಿತ್ರ ಕಟ್ ಆಗಿದೆ ನೋಡಿ.

ನೆಗೆಟಿವ್ ಕಾಮೆಂಟ್ ಹೊಡಿಯೋರಿಗೆ

ಡಾಲಿ ಧನಂಜಯ್ ತುಂಬಾನೆ ಬೇಸರದಲ್ಲಿಯೇ ಇದ್ದಾರೆ. ಮದರ್ ಪ್ರಾಮಿಸ್ ಚಿತ್ರ ಒಳ್ಳೆ ಚಿತ್ರವೇ ಆಗಿದೆ. ಆದರೂ ಈ ಚಿತ್ರಕ್ಕೆ ನೆಗೆಟಿವ್ ಮಾಡ್ತಿದ್ದಾರೆ ಅನ್ನೋ ಬೇಸರ ಇದೆ.

mother promise movie new version with 20 minutes trim releasing this week

20 ನಿಮಿಷ ಎಗರೋಯ್ತು

ಈ ಹಿನ್ನೆಲೆಯಲ್ಲಿ ಜುಲೈ-16 ರಂದು ನಡೆದ ಪ್ರೆಸ್ ಮೀಟ್ ಅಲ್ಲಿ ಡಾಲಿ ಧನಂಜಯ್ ಮಾತನಾಡಿದ್ದಾರೆ. ಒಳ್ಳೆ ಸಿನಿಮಾಗಳಿಗೆ ನೆಗೆಟಿವ್ ಮಾಡ್ಬೇಡಿ. ಜನ ಹೋದ್ಮೇಲೂ ವಿಡಿಯೋ ಮಾಡಿ ಖಾಲಿ ಥಿಯೇಟರ್ ತೋರಿಸಬಹುದಲ್ವೇ?

ಕೋಟಿ ಬಾಚಿಕೊಳ್ತಿರೋ ಚಿತ್ರಗಳಿಗೂ ಈ ರೀತಿ ಮಾಡಬಹುದು. ಆದರೆ, ನಮ್ಮ ಚಿತ್ರ ಚೆನ್ನಾಗಿದೆ. ಯಾಕೆ ಹೀಗೆ ಮಾಡ್ತಿದ್ದಾರೋ ಏನೋ ಅಂತಲೂ ಡಾಲಿ ಬೇಸರ ವ್ಯಕ್ತಪಡಿಸಿದ್ದಾರೆ.

ನಾವು ಕೆಟ್ಟ ಸಿನಿಮಾ ಮಾಡಿಲ್ಲ

ನಮ್ಮ ಚಿತ್ರಗಳಲ್ಲಿ ಎಲ್ಲವೂ ಚೆನ್ನಾಗಿವೆ ಅಂತ ಹೇಳೋದಿಲ್ಲ. ಕೆಲವು ಚೆನ್ನಾಗಿಲ್ಲ ಅಂತ ನಮಗೂ ಗೊತ್ತಿದೆ. ಆದರೆ, ಆ ರೀತಿಯ ಚಿತ್ರಗಳು ಚೆನ್ನಾಗಿವೆ ಅಂತ ನಾವು ಎಂದೂ ಬಂದು ಹೇಳಿಕೊಂಡಿಲ್ಲ.

ಆದರೆ, ಮದರ್ ಪ್ರಾಮಿಸ್ ಚಿತ್ರ ನಿಜಕ್ಕೂ ಒಳ್ಳೆ ಚಿತ್ರವೇ ಆಗಿದೆ. ಈ ಚಿತ್ರಕ್ಕೆ ನೆಗೆಟಿವ್ ಮಾಡಿದ್ರೆ ಹೇಗೆ? ಹಾಗೆ ಮಾಡೋರಿಗೆ ಏನು ಹೇಳೋಣ? ವೈಯುಕ್ತಿಕವಾಗಿ ಅವರಿಗೆ ಏನಾದರೂ ಹೇಳೋಕೆ ಆಗುತ್ತಾ? ಅಂತಲೂ ಡಾಲಿ ಧನಂಜಯ್ ತಮ್ಮ ಬೇಸರವನ್ನ ಈ ರೀತಿ ವ್ಯಕ್ತಪಡಿಸಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed