Yogaraj Bhat: ರಾಕಿಂಗ್ ಸ್ಟಾರ್ ಯಶ್‌ರನ್ನ ಉಡಕ್ಕೆ ಹೋಲಿಸಿದ ಯೋಗರಾಜ್ ಭಟ್! ಇದರ ಹಿಂದಿದೆ ಆ ಕಾರಣ! | | ACTPnews

yogaraj bhat share yash toxic movie tabaahi song unknown facts


ಯಶ್ ಕವಿ ಮನಸ್ಸಿನ ನಾಯಕ

ಯಶ್ ಸುಮ್ನೆ ಅಲ್ಲ. ಏನೋ ಬರೆದುಕೊಡ್ತೀನಿ ಅಂತ ಹೋದರೆ ವರ್ಕ್ ಆಗೋದಿಲ್ಲ. ಯಶ್‌ಗೆ ಕನ್ನಡ ಗೊತ್ತಿದೆ. ಬರೆದು ಕೊಡುವ ಸಾಲುಗಳ ಅರ್ಥ ಆಗುತ್ತವೆ.
ಯಶ್ ಕವಿ ಮನಸ್ಸಿನ ನಾಯಕ

(ಚಿತ್ರ ಕೃಪೆ: ಯಶ್ ಇನ್‌ಸ್ಟಾಗ್ರಾಮ್)

ಅಂತಹ ಯಶ್‌ ಚಿತ್ರಕ್ಕೆ ಏನೋ ಬರೆದುಕೊಡ್ತೀನಿ ಅಂತ ಹೋದರೆ ನಡೆಯೋದೇ ಇಲ್ಲ. ಇದರಲ್ಲಿ ಏನಿದೆ ಅಂತಲೇ ಕೇಳುವುದು ಇದೆ. ಆ ರೀತಿಯ ಯಶ್ ಚಿತ್ರಗಳಲ್ಲಿ ಡ್ರಾಮಾ ಕೂಡ ಒಂದಾಗಿದೆ. “ಹೇಳಿ ಬಿಡು ಗೆಳತಿ ನೀ ಕೊಟ್ಟದ್ದು ತಿಳಿ ನೀಲಿ ಕನಸಾ ಬರೀ ಪೊಲೀ ಕನಸಾ” ಅಂತ ಹೇಳಿರೋದು ಬೇರೆ ಯಾರೋ ಅಲ್ಲ. ಅದು ಯಶ್ ಹೇಳಿದ ಸಾಲೇ ಆಗಿದೆ.

ಇದನ್ನು ನಾನು ಹೇಳಿ ಬಿಟ್ಟಿದ್ದೆ

ಈ ಸಾಲುಗಳನ್ನ ನಾನು ಮೊದಲೇ ಹೇಳಿ ಬಿಟ್ಟಿದ್ದೆ. ಆಗಲೇ ಯಶ್‌ಗೆ ಈ ಸಾಲುಗಳನ್ನ ನಾನು ಹೇಳುವ ಬದಲು, ನೀನು ಹೇಳು ಅಂತಲೂ ನಾನು ಹೇಳಿದೆ.

ಆಗ ಯಶ್ ಒಂದು ಮಾತು ಹೇಳಿದರು. ನಾನು ಹೇಳಿದರೆ ಕಟ್ಟು ಹೋಗುತ್ತದೆ. ಬೇಡ ಇದನ್ನ ನಾನು ಹೇಳುವುದಿಲ್ಲ. ನೀವು ಚೆನ್ನಾಗಿಯೇ ಹೇಳಿದಿರಿ ಅಂತಲೇ ಯಶ್ ಆಗ ಈ ಕವಿತೆಯನ್ನ ಹೇಳೋಕೆ ಮುಂದಾಗಲೇ ಇಲ್ಲ ಅಂತಲೂ ಯೋಗರಾಜ್ ಭಟ್ ಆ ಡ್ರಾಮಾ ಚಿತ್ರದ ದಿನಗಳನ್ನ ನೆನಪು ಮಾಡಿಕೊಂಡಿದ್ದಾರೆ.

ಯಶ್ ವಿಷ್ಯೂಲ್ ನೋಡಿಯೇ…

ತಬಾಹಿ ಹಾಡಿನ ವಿಚಾರದಲ್ಲಿ ಭಟ್ರು ಟ್ಯೂನ್ ಕೇಳಿಯೇ ಮನದಲ್ಲಿ ಒಂದು ಸ್ಟ್ರಕ್ಚರ್ ರೆಡಿ ಮಾಡಿಕೊಂಡಿದ್ದರು. ಆದರೆ, ಯಶ್ ಮತ್ತು ಕಿಯಾರ ಅಡ್ವಾಣಿ ಅವರ ವಿಡಿಯೋ ನೋಡಿದಾಗ ಮತ್ತಷ್ಟು ಖುಷಿ ಆಗಿದೆ. ಆಗಲೇ ಈ ಕೆಳಗಿನ ಸಾಲುಗಳನ್ನ ಬರೆದಿದ್ದಾರೆ.

ಎಲ್ಲಾ, ಮಿತಿಮೀರಿ ಹೋಗೋಣ ಬಾ..

ಎಲ್ಲಾ, ಗಡಿದಾಟಿ ನೋಡೋಣ ಬಾ…

ಶೃಂಗಾರದಂಗಾರ ಸಿಡಿದೇಳಲು

-ತಬಾಹಿ… ತಬಾಹಿ

yogaraj bhat share yash toxic movie tabaahi song unknown facts

ಯಶ್ ವಿಷ್ಯೂಲ್ ನೋಡಿಯೇ…

(ಚಿತ್ರ ಕೃಪೆ: ಕನ್ನಡ ಪಿಚ್ಚರ್ ಇನ್‌ಸ್ಟಾಗ್ರಾಮ್)

ಸಾಗರಾ, ಸರಸರಾ, ದಡವನೂ ದಾಟಲು,

ಭಾವದಾ, ರಭಸವೂ, ಎದೆಯನು ಮೀಟಲು,

ವೈಯಾರ ಮೈಮೋಹ ಜೊತೆಸೇರಲು

ತಬಾಹಿ ..! ತಬಾಹಿ

ಸರಸ, ಸದರ, ಬೆರೆತು, ಸಮರ,

ಪ್ರಣಯಭಾರದಲ್ಲಿ ಪ್ರಾಯವು ಹಗುರ..

ಕೊರೆದಾ ಉಗರಾ ಕವಿತೇ ಮಧುರಾ

ತಬಾಹಿ …..! ತಬಾಹಿ

ಆದರೆ, ಈ ಒಂದು ಹಾಡು ಬರೆಯೋವಾಗಲೇ ತಬಾಹಿ ಅನ್ನುವ ಪದದ ಜಾಗದಲ್ಲಿ “ನಗಾರಿ” ಅಂತಲೇ ಬರೆದಿದ್ದರು. ಈ ಒಂದು ನಗಾರಿ ಅನ್ನುವ ಪದವನನ್ನು ಇಟ್ಟುಕೊಂಡು ಭಟ್ರು ಒಂದು ವರ್ಶನ್ ಕೂಡ ಬರೆದಿದ್ದರು.

ಹಾಗಾಗಿಯೇ ಅದೇ ಪದವನ್ನ ಬಳಕೆ ಮಾಡಿದೆ ಅಂತ ಟಿವಿ-9 ಸಂದರ್ಶನದಲ್ಲೂ ಭಟ್ರು ಹೇಳಿಕೊಂಡಿದ್ದಾರೆ. ಹಾಗೆ ಕನ್ನಡ ಪಿಚ್ಚರ್ ಯುಟ್ಯೂಬ್ ಸಂದರ್ಶನದಲ್ಲೂ ಯಶ್ ಬಗೆಗಿನ ವಿಶೇಷ ವಿಚಾರವನ್ನ ಹೇಳಿದ್ದಾರೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports