Marwari Horse Donation: ತಿರುಮಲ ಶ್ರೀವಾರಿಗೆ ಭಕ್ತನಿಂದ ವಿಶೇಷ ಕಾಣಿಕೆ; ಅಪರೂಪದ ಶ್ವೇತ ವರ್ಣದ ಮಾರ್ವಾರಿ ಕುದುರೆ ದೇಣಿಗೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಅಪರೂಪದ ಶ್ವೇತಾಶ್ವ ದೇಣಿಗೆ


Last Updated:

ಮದುರೈನ ಭಕ್ತ ವಡಿವೇಲು ಮುಗಂಧನ್ ತಿರುಮಲ ಟಿಟಿಡಿ ಎಸ್​ವಿ ಗೋಶಾಲೆಗೆ 9 ವರ್ಷದ ಮಾರ್ವಾರಿ ಕುದುರೆಯನ್ನು ದೇಣಿಗೆ ನೀಡಿದ್ದಾರೆ. ಇದನ್ನು ಬ್ರಹ್ಮೋತ್ಸವ ಸೇವೆಗೆ ಬಳಸಲಾಗುವುದು.

ಅಪರೂಪದ ಶ್ವೇತಾಶ್ವ ದೇಣಿಗೆ
ಅಪರೂಪದ ಶ್ವೇತಾಶ್ವ ದೇಣಿಗೆ

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ (Tirumala, Sri Venkateswara Swamy Temple) ಭಕ್ತರು ಕಾಣಿಕೆಗಳನ್ನು ಅರ್ಪಿಸುತ್ತಾರೆ. ಹಲವು ಭಕ್ತರು (Devotees) ಅನ್ನಪ್ರಸಾದ, ವೈದ್ಯಕೀಯ ಸೇವೆ ಸೇರಿದಂತೆ ವಿವಿಧ ಟಿಟಿಡಿ ಟ್ರಸ್ಟ್‌ಗಳಿಗೆ (TTD Trust) ದೇಣಿಗೆ ನೀಡಿದರೆ, ಇಲ್ಲಿ ಓರ್ವ ಭಕ್ತ ವಿಶೇಷ ಕಾಣಿಕೆ (Horse Donation) ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ತಿರುಮಲ ಶ್ರೀವಾರಿಗೆ ಭಕ್ತರು ಹಲವು ರೂಪದಲ್ಲಿ ಕಾಣಿಕೆ ನೀಡುತ್ತಾರೆ. ಕಷ್ಟಗಳಿಂದ ದೂರ ಮಾಡುವ, ಭಕ್ತರ ಬೇಡಿಕೆಗಳನ್ನು ಈಡೇರಿಸುವ ಶ್ರೀವಾರಿಗೆ ಭಕ್ತರು, ಟಿಟಿಡಿ ಟ್ರಸ್ಟ್‌ಗೆ ಪ್ರತಿದಿನ ಲಕ್ಷ ಲಕ್ಷ ರೂಪಾಯಿ ದೇಣಿಗೆ ನೀಡುತ್ತಾರೆ. ಪ್ರತಿದಿನ ಶ್ರೀ ವೆಂಕಟೇಶ್ವರನ ಆದಾಯ ಹೆಚ್ಚಾಗುತ್ತಿದೆ. ಆದರೆ ಕೆಲವು ಭಕ್ತರು ಅನ್ನದಾನಕ್ಕೆ ಸಹಾಯವಾಗುವಂತೆ ತಾವು ಬೆಳೆದ ತರಕಾರಿ ಹಾಗೂ ದೇವರ ಪೂಜೆಗೆ ಹೂವುಗಳನ್ನು ನೀಡುತ್ತಾರೆ. ಇದರ ಭಾಗವಾಗಿಯೇ ಟಿಟಿಡಿ ಎಸ್​ವಿ ಗೋಶಾಲೆಗೆ ಭಕ್ತರೊಬ್ಬರು, ಕುದುರೆಯನ್ನು ದೇಣಿಗೆಯಾಗಿ ನೀಡಿದ್ದಾರೆ.

ತಿರುಮಲ ಶ್ರೀವಾರಿಗೆ ಭಕ್ತ ಅಪರೂಪದ ಜಾತಿಗೆ ಸೇರಿದ 09 ವರ್ಷದ ಶ್ವೇತ ವರ್ಣದ ಮಾರ್ವಾರಿ ಕುದುರೆಯನ್ನು ಟಿಟಿಡಿ ಎಸ್​ವಿ ಗೋಶಾಲೆಗೆ ದೇಣಿಗೆಯಾಗಿ ನೀಡಿದ್ದಾರೆ. ಈ ಕುದುರೆಗೆ ಅಗತ್ಯ ತರಬೇತಿ ನೀಡಿ, ಶ್ರೀವಾರಿ ಬ್ರಹ್ಮೋತ್ಸವ ಸೇವೆ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಲು ಟಿಟಿಡಿ ಅಧಿಕಾರಿಗಳು ಮುಂದಾಗಿದ್ದಾರೆ.

ಮದುರೈ ಮೂಲದ ವಡಿವೇಲು ಮುಗಂಧನ್ ಅವರು ಟಿಟಿಡಿ ಎಸ್​ವಿ ಗೋಶಾಲೆಗೆ ಅಪರೂಪದ ಕುದುರೆಯನ್ನು ದೇಣಿಗೆಯಾಗಿ ನೀಡಿದ್ದಾರೆ. ತಮಿಳುನಾಡು ಮದುರೈ ಮೀನಾಕ್ಷಿ ಆಲಯಕ್ಕೆ ಇವರು ಕುದುರೆಗಳನ್ನು ದೇಣಿಗೆ ನೀಡಿದ್ದಾರೆ. ಈ ಬಾರಿ ಶ್ರೀವಾರಿಗೆ ಕುದುರೆಯನ್ನು ದೇಣಿಗೆಯಾಗಿ ನೀಡಿದ್ದಾರೆ. ಶ್ರೀವಾರಿ ಬ್ರಹ್ಮೋತ್ಸವದ ಸಂದರ್ಭದಲ್ಲಿ ಈ ಕುದುರೆಯನ್ನು ನೋಡಬೇಕು ಎಂಬ ಆಸೆಯಿಂದ ಮುಗಂಧನ್ ಈ ಕುದುರೆಯನ್ನು ದೇಣಿಗೆ ನೀಡಿದ್ದಾರೆ ಎಂದು ಟಿವಿ9 ತೆಲುಗು ವರದಿ ಮಾಡಿದ್ದಾರೆ.

ಅಪರೂಪದ ಶ್ವೇತಾಶ್ವ ದೇಣಿಗೆ

ಸದ್ಯ ಕುದುರೆಗೆ ಅಗತ್ಯವಿರುವ ತರಬೇತಿಯನ್ನು ಪೂರ್ಣಗೊಳಿಸಿದ ಬಳಿಕಷ್ಟೇ ಶ್ರೀವಾರಿ ಬ್ರಹ್ಮೋತ್ಸವ ಸಂದರ್ಭದಲ್ಲಿ ಸ್ವಾಮಿವಾರಿ ಸೇವೆಗೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಸೋಮವಾರ ಬೆಳಗ್ಗೆ ಭಕ್ತ ಈ ಕುದುರೆಯನ್ನು ಟಿಟಿಡಿ ಎಸ್​ವಿ ಗೋಶಾಲೆ ಡೈರೆಕ್ಟರ್ ಡಾ. ಎವಿಎನ್​ ಶಿವಕುಮಾರ್ ಅವರಿಗೆ ಹಸ್ತಾಂತರಿಸಿದ್ದಾರೆ. ಎಸ್​ಪಿ ಗೋಶಾಲೆಗೆ ಕುದುರೆಯನ್ನು ದೇಣಿಗೆಯಾಗಿ ನೀಡುವುದರೊಂದಿಗೆ ಗೋಶಾಲೆಯಲ್ಲಿದ್ದ ಕುದುರೆಗಳ ಸಂಖ್ಯೆ ಐದಕ್ಕೆ ಹೆಚ್ಚಾಗಿದೆ ಎಂದು ಗೋಶಾಲೆ ಡೈರೆಕ್ಟರ್ ಡಾ ಎವಿಎಸ್ ಶಿವಕುಮಾರ್ ತಿಳಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed