Pramod Panju: ಟಾಲಿವುಡ್​ನಲ್ಲಿ ಪ್ರಮೋದ್ ಪಂಜು ವೈಬ್ರೇಷನ್; ವಸಂತನಾಗಿ ಮಿಂಚ್ತಿರೋ ಆ್ಯಂಟಿ ಹೀರೋ! | | ACTPnews

ಟಾಲಿವುಡ್ ಅಲ್ಲಿ ಪ್ರಮೋದ್ ಪಂಜು ವೈಬ್ರೇಷನ್; ವಸಂತನಾಗಿ ಮಿಂಚ್ತಿರೋ ಆ್ಯಂಟಿ ಹೀರೋ!


Last Updated:

ಹಲ್ಕಾ ಡಾನ್ ಚಿತ್ರದ ನಾಯಕ ನಟ ಪ್ರಮೋದ್ ಪಂಜು ಟಾಲಿವುಡ್ ಅಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಲೆನಿನ್ ಚಿತ್ರದ ಇವರ ವಸಂತ್ ಪಾತ್ರ ಕಂಡು ಸ್ವತಃ ನಾಗಾರ್ಜುನ್ ಸಕ್ಸಸ್ ಮೀಟ್ ಅಲ್ಲಿ ಕೊಂಡಾಡಿದ್ದಾರೆ. ಇವರ ಈ ಪಾತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಟಾಲಿವುಡ್ ಅಲ್ಲಿ ಪ್ರಮೋದ್ ಪಂಜು ವೈಬ್ರೇಷನ್; ವಸಂತನಾಗಿ ಮಿಂಚ್ತಿರೋ ಆ್ಯಂಟಿ ಹೀರೋ!
ಟಾಲಿವುಡ್ ಅಲ್ಲಿ ಪ್ರಮೋದ್ ಪಂಜು ವೈಬ್ರೇಷನ್; ವಸಂತನಾಗಿ ಮಿಂಚ್ತಿರೋ ಆ್ಯಂಟಿ ಹೀರೋ!

ಕನ್ನಡದ ನಾಯಕ ನಟ ಪ್ರಮೋದ್ ಪಂಜು (Pramod Panju) ಪಕ್ಕದ ಟಾಲಿವುಡ್ (Tollywood) ಅಲ್ಲಿ ಸಖತ್ ಸೌಂಡ್ ಮಾಡ್ತಿದ್ದಾರೆ. ಅಕ್ಕಿನೇನಿ ನಾಗಾರ್ಜುನ್ ಅವರೇ ಈ ನಟನ ಅಭಿನಯವನ್ನ ಕೊಂಡಾಡಿದ್ದಾರೆ. ಲೆನಿನ್ ಚಿತ್ರದ ಸಕ್ಸಸ್ ಮೀಟ್ ಅಲ್ಲೂ ಇದನ್ನು ಹೇಳಿಕೊಂಡಿದ್ದಾರೆ. ವಸಂತ್ (Vasanth) ಅನ್ನುವ ರೋಲ್ ಅಲ್ಲಿ ಪ್ರಮೋದ್ ಪಂಜು ನಟಿಸಿದ್ದಾರೆ. ಈ ಒಂದು ಪಾತ್ರ ವಿಲನ್ ಅಲ್ಲ, ಆ್ಯಂಟಿ ಹೀರೋ ಅಂತಲೆ ಸಿನಿಮಾ ತಂಡ ಈ ರೋಲ್ ಅನ್ನ ಪ್ರಮೋಟ್ ಮಾಡಿದೆ. ಈ ಲೇಡಿ ಪಾತ್ರದ ಕೆಲವು ಫೋಟೋಗಳನ್ನ ಸ್ವತಃ ಪ್ರಮೋದ್ ಪಂಜು (Pramod Panju) ಹಂಚಿಕೊಂಡಿದ್ದಾರೆ. ಅದರೊಟ್ಟಿಗೆ ತಮ್ಮ ಪಾತ್ರ ಮೆಚ್ಚಿದ ಪ್ರತಿಯೊಬ್ಬರಿಗೂ ಥ್ಯಾಂಕ್ಸ್ ಕೂಡ ಹೇಳಿದ್ದಾರೆ. ಈ ಪಾತ್ರದ ಸುತ್ತ ಇರೋ ಇನ್ನಷ್ಟು ವಿವರ ಇಲ್ಲಿದೆ ಓದಿ.

ಲೆನಿನ್ ಚಿತ್ರದಲ್ಲಿ ಪ್ರಮೋದ್ ಅಬ್ಬರ

ಪ್ರಮೋದ್ ಪಂಜು ಈ ಚಿತ್ರದಲ್ಲಿ ವಸಂತ್ ಅನ್ನುವ ರೋಲ್ ಮಾಡಿದ್ದಾರೆ. ಇದು ವಿಲನ್ ಅಲ್ಲ, ಆ್ಯಂಟಿ ಹೀರೋ ಅನ್ನೋದನ್ನ ಚಿತ್ರ ತಂಡವೇ ಹೇಳಿಕೊಂಡಿದೆ.
pramod panju lenin movie vasanth role creates new buzz in tollywood r

ನನಗೆ ನನ್ನ ವಸಂತ್ ಸಿಕ್ಕಿ ಬಿಟ್ಟ..

(ಚಿತ್ರ ಕೃಪೆ: ಪ್ರಮೋದ್ ಪಂಜು ಇನ್‌ಸ್ಟಾಗ್ರಾಮ್)

ಅಂದ್ರೆ, ಪ್ರಮೋದ್ ಪಂಜು ಈ ಚಿತ್ರದಲ್ಲಿ ಸಂಪೂರ್ಣ ವಿಲನ್ ಅಲ್ವೇ ಅಲ್ಲ. ಆದರೆ, ಪೂರ್ತಿ ಹೀರೋನೂ ಅಲ್ಲ. ಅದಕ್ಕೇನೆ ಈ ಪಾತ್ರವನ್ನ ಆ್ಯಂಟಿ ಹೀರೋ ಅಂತಲೇ ಹೇಳಿದ್ದಾರೆ.

ಲೇಡಿ ಗೆಟಪ್‌ ಅಲ್ಲಿ ಪ್ರಮೋದ್ ಪಂಜು

ಪ್ರಮೋದ್ ಪಂಜು ಈ ಚಿತ್ರದಲ್ಲಿ ಲೇಡಿ ಗೆಟಪ್ ಹಾಕಿದ್ದಾರೆ. ಹಾಗಾಗಿಯೇ ಸಡನ್ ಆಗಿಯೇ ಗುರುತು ಹಿಡಿದು ಕಷ್ಟವೇ ಆಗುತ್ತದೆ. ಆದರೆ, ಗಮನವಿಟ್ಟು ನೋಡಿದಾಗ ಇದು ಪ್ರಮೋದ್ ಪಂಜು ಅಂತ ಗೊತ್ತಾಗುತ್ತದೆ.

ನಾನು ವಿಲನ್ ರೋಲ್ ಮಾಡಿಲ್ಲ ಸರ್

ಈ ಚಿತ್ರದ ಡೈರೆಕ್ಟರ್ ಮುರಳಿ ಕಿಶೋರ್ ಅಬ್ಬೂರು ಅವರಿಗೆ ಈ ಒಂದು ಮಾತನ್ನ ಪ್ರಮೋದ್ ಹೇಳಿಯೇ ಬಿಟ್ಟರು. ಸರ್, ನಾನು ವಿಲನ್ ರೋಲ್ ಮಾಡಿಲ್ಲ. ಹೇಗೆ ಮಾಡೋದು ಅನ್ನುವ ಅರ್ಥದಲ್ಲಿಯೆ ಪ್ರಮೋದ್ ಪಂಜು ಡೈರೆಕ್ಟರ್ ಮುರಳಿ ಅವರಿಗೆ ಕೇಳಿದರು.

ಆದರೆ, ಡೈರೆಕ್ಟರ್ ಮುರಳಿ ಕಿಶೋರ್ ಅಬ್ಬೂರು ಅವರು ಒಂದು ಮಾತು ಹೇಳಿದರು. ನೀವು ನನ್ನ ಚಿತ್ರದ ವಿಲನ್ ಅಲ್ವೇ ಅಲ್ಲ. ನೀವು ಈ ಚಿತ್ರದ ಆ್ಯಂಟಿ ಹೀರೋ ಅಂತಲೇ ಹೇಳಿದರು.

pramod panju lenin movie vasanth role creates new buzz in tollywood r

ವಸಂತ್ ಪಾತ್ರದ ಫೋಟೋ ಶೇರ್

(ಚಿತ್ರ ಕೃಪೆ: ಪ್ರಮೋದ್ ಪಂಜು ಇನ್‌ಸ್ಟಾಗ್ರಾಮ್)

ನನಗೆ ನನ್ನ ವಸಂತ್ ಸಿಕ್ಕಿ ಬಿಟ್ಟ..

ಡೈರೆಕ್ಟರ್ ಮುರಳಿ ಕಿಶೋರ್ ಅಬ್ಬೂರು ಅವರು ಬ್ರೋ ನೀವು ಈ ಚಿತ್ರದ ವಿಲನ್ ಅಲ್ಲ. ನೀವು ಆ್ಯಂಟಿ ಹೀರೋ ಅಂತ ಹೇಳಿ ನಕ್ಕರು. ಅವರ ಮಾತುಗಳನ್ನ ಕೇಳಿ ನಾನು ನಕ್ಕು ಬಿಟ್ಟ ನೋಡಿ.

ವಸಂತ್ ಪಾತ್ರದ ಫೋಟೋ ಶೇರ್

ಈ ಒಂದು ಲೆನಿನ್ ಚಿತ್ರದಲ್ಲಿ ಅಖಿಲ್ ಅಕ್ಕಿನೇನೆ ಹೀರೋ ಆಗಿದ್ದಾರೆ. ಇವರು ಇಲ್ಲಿ ಲೆನಿನ್ ರೋಲ್ ಮಾಡಿದ್ದಾರೆ. ನಾಯಕ ನಟಿ ಭಾಗ್ಯಶ್ರೀ ಬೋರ್ಸೆ ಈ ಚಿತ್ರದಲ್ಲಿ ಭಾರತಿ ಅನ್ನುವ ರೋಲ್ ಮಾಡಿದ್ದಾರೆ.

ಪ್ರಮೋದ್ ಪಂಜು ಈ ಸಿನಿಮಾದ ಆ್ಯಂಟಿ ಹೀರೋ ವಸಂತ್ ಅನ್ನುವ ರೋಲ್ ಮಾಡಿದ್ದಾರೆ. ಇದು ಚಿತ್ರದ ದ್ವಿತೀಯಾರ್ಧದಲ್ಲಿಯೇ ಬರುತ್ತದೆ.

ಜುಲೈ-10 ರಂದು ಈ ಚಿತ್ರ ರಿಲೀಸ್ ಆಗಿದೆ. ಅಷ್ಟೆ ಯಶಸ್ವಿಯಾಗಿಯೇ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಪ್ರಮುಖ ಪಾತ್ರವನ್ನ ಮಾಡಿರೋ ನಟ ನಾಗಾರ್ಜುನ್ ಕೂಡ ಪ್ರಮೋದ್ ಪಂಜು ಕೆಲಸವನ್ನ ಸಕ್ಸಸ್ ಮೀಟ್ ಅಲ್ಲಿ ಕೊಂಡಾಡಿದ್ದಾರೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed