Eng vs Ind: ನಮ್ಮ ಸೋಲಿಗೆ ಇದೇ ಕಾರಣ, ಇಂಗ್ಲೆಂಡ್ ಕ್ಯಾಪ್ಟನ್ ಹ್ಯಾರಿ ಬ್ರೂಕ್ ಅಚ್ಚರಿಯ ಹೇಳಿಕೆ! | ಕ್ರೀಡಾ ಸುದ್ದಿ | ACTPnews

ಇಂಗ್ಲೆಂಡ್ ಕ್ಯಾಪ್ಟನ್ ಹ್ಯಾರಿ ಬ್ರೂಕ್


Last Updated:

ಟಾಪ್ ಅರ್ಡರ್ ಬ್ಯಾಟಿಂಗ್ ವೈಫಲ್ಯವೇ ತಮ್ಮ ಸೋಲಿಗೆ ಕಾರಣವಾಯ್ತು ಎಂದು ಕ್ಯಾಪ್ಟನ್ ಹ್ಯಾರಿ ಬ್ರೂಕ್ ಹೇಳಿದ್ದಾರೆ. ಮಿಡಲ್ ಓವರ್‌ಗಳಲ್ಲಿ 20 ರನ್ ಗಳ ಅಂತರದಲ್ಲಿ ಐದು ವಿಕೆಟ್ ಕಳೆದುಕೊಂಡಿದ್ದು, ಇಲ್ಲಿಯೇ ನಮ್ಮ ಸೋಲು ಖಚಿತವಾಗಿತ್ತು ಎಂದಿದ್ದಾರೆ.

ಇಂಗ್ಲೆಂಡ್ ಕ್ಯಾಪ್ಟನ್ ಹ್ಯಾರಿ ಬ್ರೂಕ್
ಇಂಗ್ಲೆಂಡ್ ಕ್ಯಾಪ್ಟನ್ ಹ್ಯಾರಿ ಬ್ರೂಕ್

ಇಂಗ್ಲೆಂಡ್ ಮತ್ತು ಭಾರತ (England Vs India) ನಡುವಿನ ಮೂರು ಏಕದಿನ ಪಂದ್ಯಗಳ ಸರಣಿಯ (ODI Series) ಮೊದಲ ಪಂದ್ಯ ಮಂಗಳವಾರ ನಡೆಯಿತು. ಈ ಪಂದ್ಯದಲ್ಲಿ ಎಲ್ಲಾ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ತೋರಿದ ಭಾರತ 6 ವಿಕೆಟ್ ಗಳ ಗೆಲುವು (Team India Win) ಪಡೆದುಕೊಂಡಿದೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಶುಭಾರಂಭ ಮಾಡಿ, 1-0 ಯೊಂದಿಗೆ ಮುನ್ನಡೆ ಪಡೆದುಕೊಂಡಿದೆ.

ಪಂದ್ಯದ ಬಳಿಕ ಮಾತನಾಡಿದ ಹ್ಯಾರಿ ಬ್ರೂಕ್, ಬ್ಯಾಟಿಂಗ್ ವೈಫಲ್ಯವೇ ನಮ್ಮ ಸೋಲಿಗೆ ಕಾರಣವಾಯ್ತು. ಅದರಲ್ಲೂ ಇನ್ನಿಂಗ್ಸ್‌ನ ಮಿಡಲ್ ಓವರ್ಸ್‌ನಲ್ಲಿ ಕೇವಲ 20 ರನ್ ಗಳ ಅಂತರದಲ್ಲಿ ಐದು ವಿಕೆಟ್ ಕಳೆದುಕೊಂಡ ವೇಳೆಯೇ ನಮ್ಮ ಸೋಲು ಖಚಿತವಾಗಿತ್ತು. ಆ ಬಳಿಕ ನಮ್ಮ ಆಟ ಯಾವುದೇ ಹಂತದಲ್ಲಿಯೂ ಮೆರುಗು ಕಾಣಲಿಲ್ಲ. ಇದು ನಾವು ಬಯಸಿದ ಫಲಿತಾಂಶ ಅಲ್ಲ. ನಮ್ಮ ಸೋಲಿಗೆ ಇದೇ ಕಾರಣ. ಆದರೆ ಆ ಬಳಿಕ ಬ್ಯಾಟರ್‌ಗಳು ತೋರಿದ ಪ್ರತಿರೋಧ ನಮ್ಮ ಆಟದ ಪ್ಲಸ್ ಪಾಯಿಂಟ್ ಆಗಿತ್ತು ಎಂದು ಹೇಳಿದ್ದಾರೆ.

ನಮ್ಮ ಬ್ಯಾಟಿಂಗ್ ಲೈನ್ ಅಪ್ ಉತ್ತಮ ಪ್ರದರ್ಶನ ನೀಡಬೇಕು. 20 ರನ್ ಗಳ ಅಂತರದಲ್ಲಿ ಐದು ವಿಕೆಟ್ ಕಳೆದುಕೊಂಡು ಉತ್ತಮ ನಡೆ ಅಲ್ಲ. ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಬೇಕಿತ್ತು. ಆದರೆ ವಿಫಲರಾಗಿದ್ದೇವೆ. ಜೋ ರೂಟ್, ಡಾಸನ್ ಅವರ ಆಟ ನಮಗೆ ಸ್ಪೂರ್ತಿ ನೀಡಿದೆ ಎಂದು ಬ್ರೂಕ್ ತಿಳಿಸಿದರು.

ಪಿಚ್‌ನಲ್ಲಿ ಉಂಟಾದ ಬದಲಾವಣೆ ಕೂಡ ನಮ್ಮ ಸೋಲಿಗೆ ಕಾರಣವಾಯಿತು. ಒಂದೊಮ್ಮೆ ಪಿಚ್ ಮೊದಲ ಇನ್ನಿಂಗ್ಸ್ ರೀತಿಯೇ ಇದಿದ್ದರೆ ಫಲಿತಾಂಶ ಬೇರೆ ಬರುತ್ತಿತ್ತು. ಪಿಚ್ ಸ್ಲೋ ಆದ ಕಾರಣ ರನ್ ಗಳಿಸಿದ್ದಾರೆ. ಅದರಲ್ಲೂ ಓವರ್‌ಗೆ 5-6 ರನ್ ಅಷ್ಟೇ ಅಗತ್ಯವಾಗಿದ್ದ ಕಾರಣ ಸುಲಭವಾಗಿ ಬ್ಯಾಟ್ ಮಾಡಿದ್ದರು. ನಾವು ಕೂಡ ಪಿಚ್ ಯಾವ ರೀತಿ ಇರುತ್ತೆ ಅನ್ನೋದರ ಮೇಲೆ ಕಾಂಬಿನೇಷನ್ ಬದಲಾವಣೆ ಮಾಡ್ತೀವಿ. ನಾವು ಸ್ಕೋರ್ ಇನ್ನು ಸ್ವಲ್ಪ ಜಾಸ್ತಿ ಮಾಡಿದ್ದರೆ ನಮ್ಮ ಸ್ಪಿನ್ ಬೌಲಿಂಗ್ ದಾಳಿ ಭಾರತದ ಪತನಕ್ಕೆ ಕಾರಣವಾಗುತ್ತಿತ್ತು. 300 ಪ್ಲಸ್ ರನ್ ಮಾಡಿದ್ದರೆ ನಮ್ಮ ಸ್ಪಿನ್ ಬೌಲರ್‌ಗಳು ಗೆಲುವಿ ಕಾಣಿಕೆ ನೀಡುತ್ತಿದ್ದರು ಎಂದು ಬ್ರೂಕ್ ಹೇಳಿದ್ದಾರೆ.

ಮುಂದಿನ ಏಕದಿನ ಪಂದ್ಯದ ಕ್ರೀಡಾಂಗಣಕ್ಕೆ ತೆರಳಿದ ಬಳಿಕ ಪ್ಲೇಯಿಂಗ್ ಇಲೆವೆನ್ ಬಗ್ಗೆ ಅಂತಿಮ ನಿರ್ಧಾರ ಮಾಡ್ತೀವಿ. ಈ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡುವ ಅವಕಾಶ ಇತ್ತು ಎಂದು ಬ್ರೂಕ್ ಹೇಳಿದರೆ. ಇತ್ತ ಶುಭ್ ಮನ್ ಗಿಲ್ ಮಾತನಾಡಿ, ‘ನಮ್ಮ ಮಿಡಲ್ ಅರ್ಡರ್, ಲೋವರ್ ಅರ್ಡರ್ ಬ್ಯಾಟರ್‌ಗಳು ಅದ್ಭುತ ಪ್ರದರ್ಶನದೊಂದಿಗೆ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇದು ಟಾಪ್ ಅರ್ಡರ್ ಬ್ಯಾಟರ್ ಆಗಿ ನನಗೆ ಆತ್ಮವಿಶ್ವಾಸವನ್ನು ನೀಡಿದೆ. ನಮ್ಮ ಬೌಲಿಂಗ್ ಲೈನ್ ಅಪ್‌ನಲ್ಲಿ ಯುವ ಆಟಗಾರರು ಇದ್ದರೆ. ಆದರೆ ನಮ್ಮ ಬ್ಯಾಟಿಂಗ್ ಲೈನ್ ಅಪ್‌ನಲ್ಲಿ ಅನುಭವಿಗಳಿದ್ದಾರೆ. ಆದ್ದರಿಂದ ಇಂಗ್ಲೆಂಡ್ 300 ಪ್ಲಸ್ ರನ್ ಮಾಡಿದ್ದರು, ನಾವು ಈ ಗುರಿಯನ್ನು ಚೇಸ್ ಮಾಡುತ್ತಿದ್ದೇವು. ಆದ್ದರಿಂದ ಈ ಪಂದ್ಯದಲ್ಲಿ ಮೊದಲು ಬೌಲ್ ಮಾಡಲು ಯೋಚನೆ ಮಾಡಿದ್ದೇವು’ ಎಂದು ಹೇಳಿದ್ದಾರೆ.

ಅಕ್ಷರ್ ಪಟೇಲ್ ಭರ್ಜರಿ ಪ್ರದರ್ಶನ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 47.5 ಓವರ್‌ಗಳಲ್ಲಿ 258 ರನ್‌ಗಳಿಗೆ ಆಲೌಟ್ ಆಯ್ತು. ಜೋ ರೂಟ್ 76 ಎಸೆತಗಳಲ್ಲಿ 6 ಬೌಂಡರಿ, ಸಿಕ್ಸರ್‌ನೊಂದಿಗೆ 76 ರನ್ ಗಳಿಸಿದರು. ಲಿಯಾಮ್ ಡಾಸನ್ 83 ಎಸೆತಗಳಲ್ಲಿ 6 ಬೌಂಡರಿ, ಸಿಕ್ಸರ್‌ನೊಂದಿಗೆ 68 ರನ್ ಗಳಿಸಿ ಮಿಂಚಿದ್ದರು. ಉಳಿದಂತೆ ಡಕೇಟ್ 45 ಎಸೆತಗಳಲ್ಲಿ 6 ಬೌಂಡರಿ 2 ಸಿಕ್ಸರ್ ಗಳೊಂದಿಗೆ 43 ರನ್ ಗಳಿಸಿ ಇಂಗ್ಲೆಂಡ್ ಸ್ಕೋರ್ 200 ಗಡಿದಾಡಲು ಕಾಣಿಕೆ ನೀಡಿದ್ದರು. ಟೀಂ ಇಂಡಿಯಾ ಪರ ಅಕ್ಷರ್ ಪಟೇಲ್ ನಾಲ್ಕು ವಿಕೆಟ್ ಪಡೆದುಕೊಂಡರೆ, ಪ್ರಸಿದ್ಧ ಕೃಷ್ಣ, ಗುರ್ನೂರ್ ಬ್ರಾರ್ ತಲಾ ಎರಡು ವಿಕೆಟ್ ಪಡೆದುಕೊಂಡರು. ಬುಮ್ರಾ, ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದುಕೊಂಡರು.

ಇದನ್ನೂ ಓದಿ: Axar Patel: ಯುವರಾಜ್ ಸಿಂಗ್ ದಾಖಲೆ ಮುರಿದು ಹೊಸ ಇತಿಹಾಸ ಸೃಷ್ಟಿಸಿದ ಅಕ್ಷರ್ ಪಟೇಲ್!

ಆ ಬಳಿಕ ಬ್ಯಾಟಿಂಗ್ ಮಾಡಿದ ಭಾರತ ತಂಡದ 45.2 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 262 ರನ್ ಗಳಿಸಿ 28 ಎಸೆತ ಬಾಕಿ ಇರುವಂತೆ ಗೆಲುವು ಪಡೆದುಕೊಂಡರು. ನಾಯಕ ಗಿಲ್, ಅಕ್ಷರ್ ಪಟೇಲ್ 52 ಎಸೆತಗಳಲ್ಲಿ ಐದು ಬೌಂಡರಿ, ಸಿಕ್ಸರ್‌ನೊಂದಿಗೆ ಅಜೇಯರಾಗಿ 57 ರನ್ ಗಳಿಸಿದರು. ಶ್ರೇಯಸ್ 35 ರನ್ ಗಳಿಸಿದರೆ, ಸುಂದರ್ 63 ಎಸೆತಗಳಲ್ಲಿ 52 ರನ್ ಗಳಿಸಿ ಅಜೇಯರಾಗಿ ಉಳಿದರು. ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್, ಜೋಶ್ ಟಾಂಗ್ ಮತ್ತು ಸ್ಯಾಮ್ ಕರನ್ ತಲಾ ಒಂದು ವಿಕೆಟ್ ಪಡೆದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed