Last Updated:
ರಕ್ಷಿತ್ ಶೆಟ್ಟಿ ಹೊಸ ಚಿತ್ರದ ಕುರಿತು ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಮಾತುಗಳು ಇದೀಗ ಎಲ್ಲೆಡೆ ವೈರಲ್ ಆಗಿದೆ.
ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshith Shetty) ಎಲ್ಲಿ ಹೋದ್ರು ಮರೆ? ಶೆಟ್ರು ಏನ್ ಮಾಡ್ತಿದ್ದಾರೆ? ಎಂಬ ಮಾತುಗಳು ಸಾಕಷ್ಟು ಸಮಯದಿಂದ ಕೇಳಿಬರುತ್ತಿತ್ತು. ಹಾಗೆಯೇ ಸಪ್ತ ಸಾಗರದಾಚೆ ಎಲ್ಲೋ (Sapta Sagaradaache Ello) ಸಿನಿಮಾ ಬಳಿಕ ರಕ್ಷಿತ್ ಶೆಟ್ಟಿ ಬೇರೆ ಎಲ್ಲೂ ಕಾಣಿಸಿಕೊಳ್ಳಲೇ ಇಲ್ಲ. ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದರೋ ಅಥವಾ ಬೇರೆ ಯಾವುದಾದರೂ ದೊಡ್ಡ ಪ್ಲ್ಯಾನ್ ಮುಖಾಂತರವೇ ಪರದೆ ಮುಂದೆ ಕಾಣಿಸಿಕೊಳ್ಳಲಿದ್ದಾರೋ ಎಂಬ ಮಾತುಗಳು ಸಿಕ್ಕಾಪಟ್ಟೆ ಕೇಳಿ ಬರುತಿತ್ತು. ಈ ನಡುವೆ ಇದೀಗ ರಕ್ಷಿತ್ ಶೆಟ್ಟಿ ಹೊಸ ಚಿತ್ರದ ಕುರಿತು ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಮಾತುಗಳು ಇದೀಗ ಎಲ್ಲೆಡೆ ವೈರಲ್ ಆಗಿದೆ.
ರಿಚರ್ಡ್ ಆ್ಯಂಟನಿ ಚಿತ್ರ ಘೋಷಣೆಯಾದಾಗಿನಿಂದಲೇ ಕನ್ನಡ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ದೇಶಿಸಿ, ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾ ಅವರ ವೃತ್ತಿಜೀವನದ ಅತ್ಯಂತ ಮಹತ್ವದ ಪ್ರಾಜೆಕ್ಟ್ಗಳಲ್ಲಿ ಒಂದಾಗಿದೆ.
ಚಿತ್ರ ಘೋಷಣೆಯಾದ ಬಳಿಕ ಹಲವು ತಿಂಗಳುಗಳ ಕಾಲ ಯಾವುದೇ ಅಪ್ಡೇಟ್ ಹೊರಬಂದಿರಲಿಲ್ಲ. ಇದರಿಂದ ಸಿನಿಮಾ ಯಾವಾಗ ಆರಂಭವಾಗಲಿದೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು.
ಚಿತ್ರದ ಬಗ್ಗೆ ಮಾತನಾಡಿದ ಅಜನೀಶ್ ಲೋಕನಾಥ್, ನಾನು ಸಂಪೂರ್ಣ ಸಿದ್ಧನಿದ್ದೇನೆ. ರಕ್ಷಿತ್ ಶೆಟ್ಟಿ ಕೂಡ ಸಜ್ಜಾಗಿದ್ದಾರೆ. ಇಡೀ ಚಿತ್ರತಂಡ ಚಿತ್ರೀಕರಣ ಆರಂಭಿಸಲು ಸಿದ್ಧವಾಗಿದೆ. ಅಭಿಮಾನಿಗಳು ಕಾಯುತ್ತಿರುವ ದಿನಗಳು ಇನ್ನು ಹೆಚ್ಚು ದೂರದಲ್ಲಿಲ್ಲ ಎಂದು ಹೇಳಿದ್ದಾರೆ.
ಚಿತ್ರದ ಕುರಿತು ಅನೇಕ ವಿಚಾರಗಳ ಬಗ್ಗೆ ಮಾತನಾಡಿರುವ ಅಜನೀಶ್ ಲೋಕನಾಥ್, ರಿಚರ್ಡ್ ಆ್ಯಂಟನಿ ಕೇವಲ ಸಿನಿಮಾ ಮಾತ್ರವಾಗಿರುವುದಿಲ್ಲ. ಅದು ನ್ಯೂಕ್ಲಿಯರ್ ಬಾಂಬ್ನಂತೆ ಸದ್ದು ಮಾಡಲಿದೆ ಎಂದು ಹೇಳಿದ್ದಾರೆ. ಈ ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಸಿನಿಮಾ ಮೇಲಿದ್ದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ಕೆಜಿಎಫ್, ಕಾಂತಾರ ಮತ್ತು ಸಲಾರ್ ನಂತಹ ಯಶಸ್ವಿ ಸಿನಿಮಾಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಈ ಚಿತ್ರಕ್ಕೂ ಬೆಂಬಲ ನೀಡುತ್ತಿರುವುದು ಅಭಿಮಾನಿಗಳ ವಿಶ್ವಾಸವನ್ನು ಹೆಚ್ಚಿಸಿದೆ.
ಸದ್ಯ ಚಿತ್ರದ ಅಧಿಕೃತ ಚಿತ್ರೀಕರಣ ಆರಂಭದ ದಿನಾಂಕ ಪ್ರಕಟವಾಗಿಲ್ಲ. ಆದರೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ನೀಡಿರುವ ಇತ್ತೀಚಿನ ಮಾಹಿತಿಯಿಂದ ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ ಎಂಬ ವಿಶ್ವಾಸ ಅಭಿಮಾನಿಗಳಲ್ಲಿ ಮೂಡಿದೆ. ಈಗ ‘ರಿಚರ್ಡ್ ಆ್ಯಂಟನಿ’ ತಂಡದಿಂದ ಅಧಿಕೃತ ಘೋಷಣೆಗಾಗಿ ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.
Bangalore [Bangalore],Bangalore,Karnataka














