Last Updated:
Ketan Agarwal: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪುಣೆಯ ಕೇತನ್ ಅಗರ್ವಾಲ್ ಹತ್ಯೆ ಕೇಸ್‌ನ ತನಿಖೆ ಎಲ್ಲಿಗೆ ಬಂತು? ಕೇತನ್ ಹಂತಕರಿಗೆ ಗಲ್ಲು ಶಿಕ್ಷೆಯಾಗಬೇಕು ಅಂತ ಅವರ ಕುಟುಂಬಸ್ಥರು ಮಾತ್ರವಲ್ಲ, ಇಡೀ ದೇಶದ ಜನ ಆಗ್ರಹಿಸುತ್ತಿದ್ದಾರೆ. ಇದರ ನಡುವೆ ಕೇತನ್ ಅಗರ್ವಾಲ್ ತಾಯಿ ರಾಖಿ ಅಗರ್ವಾಲ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದಿದ್ದಾರೆ.
ಪುಣೆ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪುಣೆಯ (Pune) ಕೇತನ್ ಅಗರ್ವಾಲ್ (Ketan Agarwal) ಹತ್ಯೆ ಕೇಸ್‌ನ ತನಿಖೆ ಎಲ್ಲಿಗೆ ಬಂತು? ಈಗಾಗಲೇ ಆರೋಪಿ ಸಿಯಾ ಗೋಯಲ್ (Siya Goyal) ಹಾಗೂ ಚೇತನ್ ಚೌಧರಿ (Chetan Chaudhary) ಬಂಧನವಾಗಿದ್ದು, ತನಿಖೆ ವೇಳೆ ಹಲವು ಸ್ಫೋಟಕ ವಿಚಾರಗಳು ಲಭ್ಯವಾಗಿವೆ. ಕೇತನ್ ಹಂತಕರಿಗೆ ಗಲ್ಲು ಶಿಕ್ಷೆಯಾಗಬೇಕು (death penalty) ಅಂತ ಅವರ ಕುಟುಂಬಸ್ಥರು ಮಾತ್ರವಲ್ಲ, ಇಡೀ ದೇಶದ ಜನ ಆಗ್ರಹಿಸುತ್ತಿದ್ದಾರೆ. ಇದರ ನಡುವೆ ಕೇತನ್ ಅಗರ್ವಾಲ್ ತಾಯಿ (Ketan Agarwal’s mother) ರಾಖಿ ಅಗರ್ವಾಲ್ (Rakhi Agarwal) ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ (PM Narendra Modi) ಪತ್ರವೊಂದನ್ನು ಬರೆದಿದ್ದಾರೆ.
ಪುಣೆಯಲ್ಲಿ ಹತ್ಯೆಗೀಡಾದ ಕೇತನ್ ಅಗರ್ವಾಲ್ ಅವರ ತಾಯಿ ರಾಖಿ ಅಗರ್ವಾಲ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರವೊಂದನ್ನು ಬರೆದಿದ್ದು, ಅದನ್ನು ಪ್ರಧಾನಿಗೆ ಇಮೇಲ್ ಮಾಡಿದ್ದಾರೆ. ತನ್ನ ಮಗನ ಸಾವಿಗೆ ನ್ಯಾಯಕ್ಕಾಗಿ ಮನವಿ ಸಲ್ಲಿಸುತ್ತಾ ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾವನಾತ್ಮಕ ಪತ್ರ ಬರೆದಿದ್ದು, ತಮ್ಮ ಮಗ ಇನ್ನೊಂದು ಪ್ರಕರಣದ ದಾಖಲೆ ಆಗಲು ಬಿಡಬೇಡಿ ಎಂದು ಕೇಳಿಕೊಂಡಿದ್ದಾರೆ.
ಪ್ರತಿಯೊಬ್ಬ ತಾಯಿಯಂತೆ, ಕೇತನ್ ನಮ್ಮೊಂದಿಗೆ ಸುಂದರವಾದ ಜೀವನವನ್ನು ಕಟ್ಟಿಕೊಳ್ಳುವುದನ್ನು, ಮದುವೆಯಾಗುವುದನ್ನು ಮತ್ತು ವಯಸ್ಸಾಗುವುದನ್ನು ನೋಡಬೇಕೆಂದು ನಾನು ಕನಸು ಕಂಡಿದ್ದೆ. ಬದಲಾಗಿ, ನನ್ನ ಮಗುವಿನ ಅಂತ್ಯಕ್ರಿಯೆಯನ್ನು ನಾನು ಮಾಡಬೇಕಾಯಿತು ಅಂತ ಕೇತನ್ ತಾಯಿ ನೋವು ತೋಡಿಕೊಂಡಿದ್ದಾರೆ. ಏಕ್ ಮಾ ಕೆ ಲಿಯೇ ಇಸ್ಸೇ ಬಡಾ ದರ್ದ್ ಔರ್ ಕೋಯಿ ನಹಿ ಹೋತಾ ಅಂದರೆ ಒಬ್ಬ ತಾಯಿಗೆ, ಇದಕ್ಕಿಂತ ದೊಡ್ಡ ನೋವು ಇನ್ನೊಂದಿಲ್ಲ ಅಂತ ರಾಖಿ ಅಗರ್ವಾಲ್ ನೋವಿನಿಂದ ಬರೆದಿದ್ದಾರೆ.
ತಮ್ಮ ಮಗ ಕೇತನ್ ಅಗರ್ವಾಲ್ ಸಾವಿನೊಂದಿಗೆ ನಾನು ಈ ಪ್ರಪಂಚದಲ್ಲಿ ಎಲ್ಲವನ್ನೂ ಕಳೆದುಕೊಂಡೆ ಅಂತ ರಾಖಿ ಅಗರ್ವಾಲ್ ವಿವರಿಸಿದ್ದಾರೆ. ನಮ್ಮ ಮನೆಯ ಪ್ರತಿಯೊಂದು ಮೂಲೆಯೂ ನನಗೆ ಅವನನ್ನು ನೆನಪಿಸುತ್ತದೆ. ಅವನ ಕೋಣೆ, ಅವನ ಬಟ್ಟೆಗಳು, ಅವನ ಛಾಯಾಚಿತ್ರಗಳು ಮತ್ತು ಅವನ ನಗುವನ್ನು ಬದಲಿಸಿದ ಮೌನವು ಅವನು ಎಂದಿಗೂ ಹಿಂತಿರುಗುವುದಿಲ್ಲ ಎಂದು ಪ್ರತಿದಿನ ನನಗೆ ನೆನಪಿಸುತ್ತದೆ ಅಂತ ದುಃಖ ತೋಡಿಕೊಂಡಿದ್ದಾರೆ.
ಅಗರ್ವಾಲ್ ಕುಟುಂಬವು ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಎರಡು ದುಃಖಗಳನ್ನು ಅನುಭವಿಸಿತು. ಮೊಮ್ಮಗನ ಮರಣದ ನಂತರ ಅಸ್ವಸ್ಥರಾಗಿದ್ದ ಕೇತನ್ ಅವರ ಅಜ್ಜ ದೇವಿಚಂದ್ ಅಗರ್ವಾಲ್, ಪುಣೆ ಕೋಟೆಯ ಭೀಕರ ಹತ್ಯೆಯ 20 ದಿನಗಳ ನಂತರ ಹೃದಯಾಘಾತದಿಂದ ನಿಧನರಾದರು ಅಂತ ಅವರು ವಿವರಿಸಿದ್ದಾರೆ. ಅವರು ಕೇತನ್‌ನನ್ನು ತುಂಬಾ ಪ್ರೀತಿಸುತ್ತಿದ್ದರು ಮತ್ತು ಮೊಮ್ಮಗನನ್ನು ಕಳೆದುಕೊಂಡ ದುಃಖವನ್ನು ಸಹಿಸಲಾಗಲಿಲ್ಲ. ಕೆಲವೇ ದಿನಗಳಲ್ಲಿ, ನಮ್ಮ ಕುಟುಂಬವು ಎರಡು ತಲೆಮಾರುಗಳನ್ನು ಕಳೆದುಕೊಂಡಿತು ಅಂತ ಪ್ರಧಾನಿಗೆ ಬರೆದ ಪತ್ರದಲ್ಲಿ ರಾಖಿ ಅಗರ್ವಾಲ್ ವಿವರಿಸಿದ್ದಾರೆ.
ನಾನು ಕೇವಲ ಒಬ್ಬ ತಾಯಿ, ನಾನು ನನ್ನ ಮಗನ ಸಾವಿಗೆ ನ್ಯಾಯವನ್ನು ಕೇಳುತ್ತಿದ್ದಾರೆ, ಸಹಾನುಭೂತಿ ಅಥವಾ ಯಾವುದೇ ವಿಶೇಷ ಉಪಕಾರವನ್ನು ಅಲ್ಲ ಎಂದು ಹೇಳಿದ್ದಾರೆ. ನ್ಯಾಯವಿಲ್ಲದೆ ಪ್ರತಿದಿನ ಕುಟುಂಬದ ನೋವು ಹೆಚ್ಚಾಗುತ್ತದೆ. ಹೀಗಾಗಿ ಅನಗತ್ಯ ವಿಳಂಬವಿಲ್ಲದೆ ತಮ್ಮ ಮಗನ ಜೀವವನ್ನು ತೆಗೆದುಕೊಂಡವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ ಅಂತ ಎನ್‌ಡಿಟಿವಿ ವರದಿ ಮಾಡಿದೆ.
Pune,Maharashtra














