ಜೂನ್ ಅಂತ್ಯದಲ್ಲಿ ಸುಮಾರು ಶೇಕಡಾ 40 ರಷ್ಟು ಕೊರತೆಯಾಗಿತ್ತು. ಆದರೆ ಕಳೆದೊಂದು ವಾರದಲ್ಲಿ ಬಿದ್ದ ವ್ಯಾಪಕ ಮಳೆಯಿಂದಾಗಿ ಬರಪೀಡಿತ ಪ್ರದೇಶಗಳ ನೀರಿನ ಭವಣೆಯನ್ನು ಅಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಿದೆ. ‘ಜೂನ್ 1 ರಿಂದ ಜುಲೈ 9 ರವರೆಗೆ, ಭಾರತದಲ್ಲಿ ಸಾಮಾನ್ಯಕ್ಕಿಂತ ಶೇಕಡಾ 14 ರಷ್ಟು ಕಡಿಮೆ ಮಳೆಯಾಗಿದೆ’ ಎಂದು ಐಎಂಡಿ ವಿಜ್ಞಾನಿ ಶಶಿಕಾಂತ್ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ. ಪೂರ್ವ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಂಜಾಬ್, ಮಹಾರಾಷ್ಟ್ರದ ಮರಾಠವಾಡ ಪ್ರದೇಶ, ಕೇರಳ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಇಲ್ಲಿಯವರೆಗೆ ಕಡಿಮೆ ಮಳೆಯ ಪ್ರದೇಶಗಳು ಎಂದು ಅವರು ಹೇಳಿದ್ದಾರೆ.














