Aamir Khan: ‘ಲವ್‌ ಜಿಹಾದ್‌ನ ಬ್ರಾಂಡ್ ಅಂಬಾಸಿಡರ್‌ ಆಮಿರ್‌ ಖಾನ್‌’! ಬಿಜೆಪಿ ಸಚಿವರ ಹೇಳಿಕೆ ವೈರಲ್‌ | | ACTPnews

ಆಮಿರ್ ಖಾನ್


Last Updated:

ಆಮಿರ್ ಖಾನ್ ಅವರ ವಿವಾಹದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿರುವ ನಡುವೆಯೇ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ನೀಡಿರುವ ಪ್ರತಿಕ್ರಿಯೆ ಎಲ್ಲೆಡೆ ವೈರಲ್ ಆಗಿದೆ.

ಆಮಿರ್ ಖಾನ್
ಆಮಿರ್ ಖಾನ್

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ (Aamir Khan) ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನಕ್ಕಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಸರಳ ಸಮಾರಂಭದಲ್ಲಿ ವಿವಾಹವಾದ ಆಮಿರ್ ಖಾನ್ ಅವರ ಮೂರನೇ ಮದುವೆ ವಿಚಾರ ಇದೀಗ ರಾಜಕೀಯ ವಲಯಕ್ಕೂ ಕಾಲಿಟ್ಟಿದೆ. ಬಿಜೆಪಿ ಶಾಸಕ ಮತ್ತು ಮಹಾರಾಷ್ಟ್ರ ಸಚಿವರಾಗಿರುವ ನಿತೇಶ್ ರಾಣೆ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಚಿತ್ರರಂಗ ಮತ್ತು ರಾಜಕೀಯ ವಲಯದಲ್ಲಿ ಹೊಸ ವಿವಾದಕ್ಕೆ ನಾಂದಿ ಹಾಡಿದೆ.

ಕೆಲವು ದಿನಗಳ ಹಿಂದೆ ಆಮಿರ್ ಖಾನ್ ತಮ್ಮ ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ಸರಳವಾಗಿ ವಿವಾಹವಾದರು. ಈ ಸಮಾರಂಭದಲ್ಲಿ ಕುಟುಂಬದ ಸದಸ್ಯರು ಹಾಗೂ ಕೆಲವೇ ಆಪ್ತ ಸ್ನೇಹಿತರು ಭಾಗವಹಿಸಿದ್ದರು.

61ನೇ ವಯಸ್ಸಿನಲ್ಲಿ ಮೂರನೇ ಬಾರಿ ವಿವಾಹವಾದ ಆಮಿರ್ ಖಾನ್ ಅವರ ಈ ನಿರ್ಧಾರ ಸಾಕಷ್ಟು ಚರ್ಚೆಗೆ ಕಾರಣವಾಯಿತು. ಮದುವೆಯ ಫೋಟೋಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಅಭಿಮಾನಿಗಳ ಗಮನ ಸೆಳೆದವು.

ಆಮಿರ್ ಖಾನ್ ಅವರ ವಿವಾಹದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿರುವ ನಡುವೆಯೇ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ನೀಡಿರುವ ಪ್ರತಿಕ್ರಿಯೆ ಎಲ್ಲೆಡೆ ವೈರಲ್ ಆಗಿದೆ.

‘ಲವ್ ಜಿಹಾದ್’ ಕುರಿತು ನಿತೇಶ್ ರಾಣೆ ಹೇಳಿಕೆ

ಹೌದು ಇತ್ತೀಚೆಗೆ, ನಿತೇಶ್ ರಾಣೆ ಮಾಧ್ಯಮಗಳೊಂದಿಗೆ ಸಂವಾದ ನಡೆಸಿ, ಈ ಬಾರಿ ಆಮಿರ್ ಅವರ ಮೂರನೇ ಮದುವೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾರ ಮದುವೆಗೆ ಯಾರು ಹೋಗಬೇಕು, ಅದು ಅವರ ನಿರ್ಧಾರ. ಆದರೆ, ಆಮಿರ್ ಖಾನ್ ಅವರನ್ನು ತಮ್ಮ ಮಾದರಿ ಎಂದು ಪರಿಗಣಿಸಿರುವ, ಅವರನ್ನು ಸೆಲೆಬ್ರಿಟಿಯನ್ನಾಗಿ ಮಾಡಿದ ಹಿಂದೂ ಯುವಕರು ಈ ಸೆಲೆಬ್ರಿಟಿಗಳಿಂದ ಯಾವ ಸ್ಫೂರ್ತಿ ಪಡೆಯಬಹುದು ಎಂದು ಯೋಚಿಸುವ ಸಮಯ ಇದು.

ಒಬ್ಬ ದೊಡ್ಡ ಸೆಲೆಬ್ರಿಟಿ ತನ್ನ ವೈಯಕ್ತಿಕ ಜೀವನದಲ್ಲಿ ಅಂತಹ ನಿರ್ಧಾರವನ್ನು ತೆಗೆದುಕೊಂಡಾಗ, ಅದು ಸಮಾಜದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಹಿಂದೂ ಸಮಾಜ ಯೋಚಿಸಬೇಕು. ಆಮಿರ್ ಖಾನ್ ಈಗ ನೇರವಾಗಿ ‘ಲವ್ ಜಿಹಾದ್’ ನ ಬ್ರಾಂಡ್ ಅಂಬಾಸಿಡರ್ ಆಗುತ್ತಿದ್ದಾರೆಯೇ, ಅವರನ್ನು ನಂಬುವ ಜನರು ಖಂಡಿತವಾಗಿಯೂ ಇದರ ಬಗ್ಗೆ ಯೋಚಿಸಬೇಕು ಎಂದು ನಿತೇಶ್ ರಾಣೆ ಹೇಳಿದ್ದಾರೆ.

ಆಮಿರ್ ಖಾನ್ ಅವರನ್ನು ಮಾದರಿಯಾಗಿ ನೋಡುವ ಯುವಕರು ಇಂತಹ ನಿರ್ಧಾರಗಳನ್ನು ಹೇಗೆ ಅರ್ಥೈಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ನಿತೇಶ್ ರಾಣೆ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed