S Janaki: ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಎಸ್. ಜಾನಕಿ ಅಂತ್ಯಸಂಸ್ಕಾರ | S Janaki final rituals to be done as per telugu brahmins tradition | | ACTPnews

ಜಾನಕಿ


Last Updated:

ಕಣಿಯನಹುಂಡಿಯ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಲಿದೆ.

ಜಾನಕಿ
ಜಾನಕಿ

ಖ್ಯಾತ ಗಾಯಕಿ ಎಸ್ ಜಾನಕಿ (S Janaki) ನಿಧನರಾಗಿದ್ದಾರೆ. ಆರು ದಶಕಗಳ ಸ್ವರ ಯಾನ ಮುಗಿದಿದ್ದು ಭಾರತೀಯ ಸಂಗೀತ ಲೋಕಕ್ಕೆ ಕತ್ತಲೆ ಆವರಿಸಿದಂತಾಗಿದೆ. ಭಾರತದ ಗಾನ ಕೋಗಿಲೆ ಗಾನ ನಿಲ್ಲಿಸಿದ್ದು ಎಸ್‌. ಜಾನಕಿ ನಿಧನಕ್ಕೆ ಬಹಳಷ್ಟು ಜನರು ಸಂತಾಪ ವ್ಯಕ್ತಪಡಿಸಿದ್ದಾರೆ. ಸಂಗೀತ ಲೋಕದಲ್ಲಿ ಮೌನ ಆವರಿಸಿದೆ.

ಮೈಸೂರಿನ ಬೋಗಾದಿ ಮನೆಯಲ್ಲಿ ಪಾರ್ಥಿವ ಶರೀರವಿದ್ಧು ಕೆಲವೇ ಕ್ಷಣಗಳಲ್ಲಿ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಪೂಜೆ ಬಳಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಮಹಾರಾಜ ಕಾಲೇಜು ಗ್ರೌಂಡ್‌ನಲ್ಲಿ ಅಂತಿಮ ದರ್ಶನ ಇದ್ದು ಇಂದು ಮೈಸೂರಿನಲ್ಲಿ S. ಜಾನಕಿ ಅಂತ್ಯಸಂಸ್ಕಾರ ನಡೆಯಲಿದ್ದು

ಮೈಸೂರಿನ ತೋಟದ ಮನೆಯಲ್ಲಿ ವಿಧಿ ವಿಧಾನ ನಡೆಯಲಿದೆ.

ತೆಲುಗು ಬ್ರಾಹ್ಮಣ ಸಂಪ್ರದಾಯ

ಕಣಿಯನಹುಂಡಿಯ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಲಿದೆ.

ಎಸ್.ಜಾನಕಿ ಮಗನ ಮಗಳು ಅಪ್ಸರರಿಂದ ವಿಧಿ ವಿಧಾನ ನಡೆಯಲಿದೆ ಎನ್ನಲಾಗಿದ್ದು ಕನ್ನಡದ ಮಣ್ಣಲ್ಲೇ ಇಂದು ಗಾಯಕಿ ಎಸ್ ಜಾನಕಿ ಲೀನರಾಗಲಿದ್ದಾರೆ. 20 ಭಾಷೆಗಳಲ್ಲಿ ಹಾಡಿದರೂ ಕನ್ನಡ ಮಣ್ಣಲ್ಲೇ ಚಿರಸ್ಥಾಯಿಯಾಗಿದ್ದು ಇಂದು ಸರ್ಕಾರಿ ಗೌರವಗಳೊಂದಿಗೆ ಜಾನಕಿ ಅಂತ್ಯಕ್ರಿಯೆ ನಡೆಯಲಿದೆ.

ರಾಜ್ಯ ಸರ್ಕಾರದ ಪರವಾಗಿ ಸಚಿವ ಡಾ. ಯತೀಂದ್ರ ಭಾಗಿಯಾಗಲಿದ್ದು ಕೊನೇ ದಿನಗಳನ್ನು ಮೈಸೂರಿನಲ್ಲೇ ಕಳೆದ ಎಸ್ ಜಾನಕಿ ಮೈಸೂರಿನ ಕೇರ್‌ಟೇಕರ್ ಆಶ್ರಮದಲ್ಲಿದ್ದರು.

ಮೈಸೂರಿನಲ್ಲೇ ಎಸ್​ ಜಾನಕಿ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಅಭಿಮಾನಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ತಮ್ಮ ಜೀವನದ ಕೊನೆಯ ದಿನಗಳನ್ನ ಮೈಸೂರಿನಲ್ಲಿ ಕಳೆದ ಎಸ್​ ಜಾನಕಿ ಅವ್ರ ಈ ಒಂದು ಕೊನೆಯ ಆಸೆ ಈಡೇರಲಿಲ್ಲ. ಏನಿತ್ತು ಜಾನಕಮ್ಮ ಅವರ ಆಸೆ?

ಮೈಸೂರಿನಲ್ಲೇ ಕೊನೆ ದಿನ, ಕೊನೆ ಆಸೆ ಏನು?

ಎಸ್​ ಜಾನಕಿ ಕೊನೆಯ ದಿನಗಳು ಹಾಗೂ ಅವರ ಆಸೆ ಬಗ್ಗೆ ಅವರ ಕೇರ್ ಟೇಕರ್ ನವೀನ್ ಮಾತಾಡಿದ್ದು, ಮೈಸೂರಿನಲ್ಲಿ ನಾನು ಕೊನೆ ದಿನಗಳನ್ನು ಕಳೆಯಬೇಕು ಅಂತ ಜಾನಕಮ್ಮ ಹೇಳಿದ್ರು. ಅವರ ಪುತ್ರ ಕೂಡ ಇಲ್ಲಿಯೇ ತನ್ನ ಕೊನೆಯ ದಿನಗಳನ್ನು ಕಳೆದ್ರು. ಮಗನ ವಿಚಾರದಲ್ಲಿ ಜಾನಕಮ್ಮಗೆ ಈ ಒಂದು ಆಸೆ ಇತ್ತು ಎಂದು ನವೀನ್​​ ಹೇಳಿದ್ದಾರೆ.

ಈಡೇರಲಿಲ್ಲ ಜಾನಕಮ್ಮನ ಈ ಆಸೆ

ಮಗನ ಸಾವಿನ ನೋವಿನಲ್ಲೇ ಕುಗ್ಗಿದ್ದ ಎಸ್ ಜಾನಕಿ ಅವ್ರು, ಪುತ್ರನ ನೆನಪಿಗೆ ಡಿಸೆಂಬರ್​ನಲ್ಲಿ ಒಂದು ಕಾರ್ಯಕ್ರಮ ಮಾಡುವ ಯೋಜನೆ ರೂಪಿಸಿದ್ರಂತೆ. ಇದಕ್ಕಾಗಿ ಚಿತ್ರಾ, ಚರಣ್ ಬಾಲಸುಬ್ರಹ್ಮಣ್ಯ, ಸೇರಿ ದೊಡ್ಡ ದೊಡ್ಡ ಗಾಯಕರನ್ನು ಕೂಡ ಡೇಟ್ ಕೇಳಿ ಪಡೆದಿದ್ರು. ಆದ್ರೆ ಈ ಒಂದು ಕೊನೆ ಆಸೆ ಈಡೇರಲಿಲ್ಲ ಎಂದು ಕೇರ್ ಟೇಕರ್ ನವೀನ್ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed