Last Updated:
S Janaki: ಎಸ್ ಜಾನಕಿ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದು ಸಂತಾಪ ಸೂಚಿಸಿದ್ದಾರೆ. ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದೇನು?
ಎಸ್. ಜಾನಕಿ ಅಮ್ಮ ಅವರ ನಿಧನ ದಕ್ಷಿಣ ಭಾರತದ ಚಲನಚಿತ್ರೋದ್ಯಮವನ್ನು ಆಘಾತಕ್ಕೀಡು ಮಾಡಿದೆ. ನಟ ವಿಶಾಲ್ (Vishal) ಸೇರಿದಂತೆ ಹಲವಾರು ಕಲಾವಿದರು ಅವರ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ. ಇದಲ್ಲದೆ, ಪ್ರಧಾನಿ ನರೇಂದ್ರ ಮೋದಿ (Narendra Modi) ಕೂಡ ಖ್ಯಾತ ಗಾಯಕಿ ಎಸ್. ಜಾನಕಿ ಅಮ್ಮ (Janaki Amma) ಅವರ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ.
ಅವರ ನಿಧನವು ಸಂಗೀತ ಮತ್ತು ಸಂಸ್ಕೃತಿ ಜಗತ್ತಿಗೆ ತುಂಬಲಾಗದ ನಷ್ಟ ಎಂದು ಅವರು ಬರೆದಿದ್ದಾರೆ. ಪ್ರಧಾನಿ ಮೋದಿ ಭಾನುವಾರ ಬೆಳಿಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿ, “ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅಮ್ಮ ಅವರ ನಿಧನವು ಸಂಗೀತ ಮತ್ತು ಸಂಸ್ಕೃತಿ ಜಗತ್ತಿಗೆ ತುಂಬಲಾಗದ ನಷ್ಟ ಎಂದಿದ್ದಾರೆ.
“ವಿವಿಧ ಭಾಷೆಗಳಲ್ಲಿ ಅವರ ಹಾಡುಗಳು ತಲೆಮಾರುಗಳಿಂದ ಜನಪ್ರಿಯವಾಗಿವೆ. ಅವರು ಪ್ರತಿಯೊಂದು ಭಾವನೆಗೂ ಸಾಟಿಯಿಲ್ಲದ ಸೌಂದರ್ಯ ಮತ್ತು ವೈವಿಧ್ಯತೆಯೊಂದಿಗೆ ಧ್ವನಿ ನೀಡಿದರು. ಅವರ ಮಧುರವಾದ ಧ್ವನಿಯು ಮುಂಬರುವ ವರ್ಷಗಳಲ್ಲಿ ಕೇಳುಗರನ್ನು ಮೋಡಿ ಮಾಡುತ್ತಲೇ ಇರುತ್ತದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ, ಅಸಂಖ್ಯಾತ ಅಭಿಮಾನಿಗಳು ಮತ್ತು ಇಡೀ ಸಂಗೀತ ಉದ್ಯಮಕ್ಕೆ ನನ್ನ ಆಳವಾದ ಸಂತಾಪಗಳು. ಓಂ ಶಾಂತಿ” ಎಂದು ಪ್ರಧಾನಿ ಮೋದಿ ಬರೆದಿದ್ದಾರೆ.
ನಟ ವಿಶಾಲ್ ಜಾನಕಿ ಅಮ್ಮನ ರೇಖಾಚಿತ್ರವನ್ನು ಹಂಚಿಕೊಂಡು, “ನಮ್ಮ ಕ್ಷೇತ್ರದ ಮತ್ತೊಬ್ಬ ಲೆಜೆಂಡ್ ಈಗ ನಮ್ಮೊಂದಿಗಿಲ್ಲ. ಇದು ಸಂಗೀತ ಕ್ಷೇತ್ರಕ್ಕೆ ದೊಡ್ಡ ನಷ್ಟ. ಕೆಲವು ಧ್ವನಿಗಳಿಗೆ ಎಂದಿಗೂ ವಯಸ್ಸಾಗುವುದಿಲ್ಲ ಮತ್ತು ಶಾಶ್ವತವಾಗಿ ನಮ್ಮೊಂದಿಗೆ ಉಳಿಯುತ್ತವೆ” ಎಂದು ಬರೆದಿದ್ದಾರೆ.
“ಜಾನಕಿ ಅಮ್ಮನ ಹಾಡುಗಳು ಕೇವಲ ಮಧುರವಾಗಿರಲಿಲ್ಲ, ಅವು ಜೀವನದ ಪ್ರತಿಯೊಂದು ಹಂತದಲ್ಲೂ ನಮ್ಮೊಂದಿಗೆ ಉಳಿದುಕೊಂಡ ನೆನಪುಗಳಾದವು. ಇಂದು ನಾವು ಆ ಧ್ವನಿಗೆ ವಿದಾಯ ಹೇಳುತ್ತೇವೆ, ಆದರೆ ಅವರು ನಮಗೆ ಲಕ್ಷಾಂತರ ಜನರಿಗೆ ನೀಡಿದ ಭಾವನೆಗೆ ಎಂದಿಗೂ ವಿದಾಯ ಹೇಳುವುದಿಲ್ಲ. ಜಾನಕಿ ಅಮ್ಮ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಸಂಗೀತವು ಮುಂದಿನ ಪೀಳಿಗೆಗೂ ಜೀವಂತವಾಗಿರುತ್ತದೆ” ಎಂದು ವಿಶಾಲ್ ಬರೆದಿದ್ದಾರೆ.
ಅನೇಕ ಹಾಡುಗಳ ಹಿಂದೆ ಜಾನಕಮ್ಮ ಮಧುರ ಧ್ವನಿಯಿದೆ. ಅವರ ಹಾಡುಗಳು ಕೇಳಿದಾಗೆಲ್ಲಾ ಆ ದಿನಗಳು ನೆನಪಾಗುತ್ತೆ. ಅವರು ಹಾಡಿದ ಪ್ರತಿಯೊಂದು ಹಾಡೂ ಒಂದು ನೆನಪು ಒಂದು ಭಾವನೆ.. ಜೀವನಪೂರ್ತಿ ಉಳಿಯುವ ಬಂಧ, ಸಂಗೀತ ಲೋಕದ ಶಿಖರವನ್ನ ಕಳೆದುಕೊಂಡಿದ್ದೇವೆ ಎಂದಿದ್ದಾರೆ.
ತಮ್ಮ ಮಧುರ ಕಂಠಸಿರಿಯಿಂದ ಜನರನ್ನ ರಂಜಿಸಿದರು. ಜಾನಕಮ್ಮನವರ ಅಗಲಿಕೆ ತೀವ್ರ ದುಃಖ ತಂದಿದೆ. ಜಾನಕಮ್ಮನವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಜಾನಕಮ್ಮರನ್ನ ರಜನೀಕಾಂತ್ ನೆನಪಿಸಿಕೊಂಡಿದ್ದಾರೆ.
ಅಪ್ರತಿಮ ಗಾಯಕಿ ಎಸ್ ಜಾನಕಿ ಅಗಲಿದ್ದಾರೆ. ಜಾನಕಿ ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ. ಅವರ ಧ್ವನಿಯಲ್ಲಿನ ಮಾಧುರ್ಯ ಮರೆಯಲಾಗಲ್ಲ. ಸಂಗೀತ ಪ್ರೇಮಿಗಳ ಹೃದಯದಲ್ಲಿ ಅವರು ಚಿರಸ್ಥಾಯಿ ಎಂದಿದ್ದಾರೆ.
ಎಸ್ ಜಾನಕಿ ಅಮ್ಮ ನಮ್ಮ ಮನಸ್ಸಿನಲ್ಲಿ ಚಿರಸ್ಥಾಯಿ. ಅವರ ನಿಧನದಿಂದ ಸಂಗೀತ ಲೋಕ ಬಡವಾಗಿದೆ. ಅವರ ಅದ್ಭುತ ಗಾಯನ ನಮಗೆ ಪ್ರೇರಣೆ. ಜಾನಕಿ ಅಮ್ಮನವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದಿದ್ದಾರೆ.
Bangalore,Karnataka














