Last Updated:
ಎಸ್ ಜಾನಕಿಯವರು ಯಾಕೆ ಬಿಳಿ ಸೀರೆಯನ್ನೇ ಉಟ್ಟು ಓಡಾಡುತ್ತಿದ್ದರು ಎನ್ನುವ ಕುತೂಹಲ ಬಹಳಷ್ಟು ಜನರಲ್ಲಿರಬಹುದು. ಇದರ ಹಿಂದಿನ ಕಾರಣ ಏನು?
ಎಸ್ ಜಾನಕಿ (S Janaki) ಅವರು ನಿಧನರಾಗಿದ್ದಾರೆ. ಅವರ ಸಾವಿಗೆ ಸಂಗೀತ ಲೋಕವೇ ಕಂಬನಿ ಮಿಡಿಯುತ್ತಿದೆ. ಇದೀಗ ಜಾನಕಿ ಅವರಿಗೆ ಸಂಬಂಧಿಸಿ ಹಲವಾರು ಸಂಗತಿಗಳು ವೈರಲ್ ಆಗುತ್ತಿದೆ. ಜಾನಕಿ ಅವರು ಜು. 11ರಂದು ಮೃತಪಟ್ಟಿದ್ದು ಇಂದು ಅಂತ್ಯಸಂಸ್ಕಾರ ನಡೆಯಲಿದೆ.
ಮೈಸೂರಿನ ಬೋಗಾದಿ ಮನೆಯಲ್ಲಿ ಪಾರ್ಥಿವ ಶರೀರವಿದ್ಧು ಕೆಲವೇ ಕ್ಷಣಗಳಲ್ಲಿ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಪೂಜೆ ಬಳಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಮಹಾರಾಜ ಕಾಲೇಜು ಗ್ರೌಂಡ್‌ನಲ್ಲಿ ಅಂತಿಮ ದರ್ಶನ ಇದ್ದು ಇಂದು ಮೈಸೂರಿನಲ್ಲಿ S. ಜಾನಕಿ ಅಂತ್ಯಸಂಸ್ಕಾರ ನಡೆಯಲಿದ್ದು
ಮೈಸೂರಿನ ತೋಟದ ಮನೆಯಲ್ಲಿ ವಿಧಿ ವಿಧಾನ ನಡೆಯಲಿದೆ.
ಈ ನಡುವೆ ಎಸ್ ಜಾನಕಿಯವರು ಯಾಕೆ ಬಿಳಿ ಸೀರೆಯನ್ನೇ ಉಟ್ಟು ಓಡಾಡುತ್ತಿದ್ದರು ಎನ್ನುವ ಕುತೂಹಲ ಬಹಳಷ್ಟು ಜನರಲ್ಲಿರಬಹುದು. ಅವರ ಕಳೆದ ಕೆಲವು ವರ್ಷಗಳ ಫೋಟೋ, ವಿಡಿಯೋ ಏನೇ ನೋಡಿದರೂ ಅವರು ಬಿಳಿ ಸೀರೆ ಉಟ್ಟಿರೋದನ್ನು ಕಾಣಬಹುದು. ಅಷ್ಟೇ ಏಕೆ ಯಾವುದೇ ಆಭರಣ ಕೂಡಾ ಧರಿಸುತ್ತಿರಲಿಲ್ಲ. ಕನಿಷ್ಠ ಇಯರಿಂಗ್ಸ್ ಕೂಡಾ ಧರಿಸುತ್ತಿರಲಿಲ್ಲ.
ಯಾಕೆ? ಇದರ ಹಿಂದಿನ ಕಾರಣ ಏನು? ಎಸ್ ಜಾನಕಿ ಅವರು ಕೋಟಿಗಳ ಒಡತಿಯಾಗಿದ್ದರೂ ಇಷ್ಟು ಸರಳವಾಗಿದ್ದಿದ್ದು ಯಾಕೆ? ಅದರ ಹಿಂದಿನ ಉದ್ದೇಶ ಏನು?
ಎಸ್ ಜಾನಕಿಯವರು ಪ್ರತಿಭಾನ್ವಿತ ಕುಟುಂಬದಿಂದ ಬಂದ ವಿ. ರಾಮಪ್ರಸಾದ್ ಅವರನ್ನು ವಿವಾಹವಾದರು. ಅವರು ಹೆಚ್ಚಿನ ರೆಕಾರ್ಡಿಂಗ್ಗಳಲ್ಲಿ ಅವರ ಜೊತೆಗಿದ್ದರು. ತುಂಬಾ ಸಪೋರ್ಟಿವ್ ಸಂಗಾತಿಯಾಗಿದ್ದರು ಎಂದು ಜಾನಕಿಯವರೇ ಹೇಳಿದ್ದಾರೆ.
ದುರದೃಷ್ಟವಶಾತ್, ರಾಮಪ್ರಸಾದ್ 1997 ರಲ್ಲಿ ನಿಧನರಾದರು. ಜಾನಕಿ ನಂತರ ಬಣ್ಣದ ಸೀರೆಗಳು ಅಥವಾ ಚಿನ್ನದ ಅಂಚುಗಳನ್ನು ಹೊಂದಿರುವ ಸೀರೆಗಳನ್ನು ಉಡುವುದನ್ನು ನಿಲ್ಲಿಸಿದರು. ಇದು ಅವರ ಸ್ವಂತ ಇಚ್ಛೆಯಾಗಿತ್ತು.
ಪ್ರಪಂಚದಾದ್ಯಂತದ ಅಭಿಮಾನಿಗಳು ಅವರ ಸಿಗ್ನೇಚರ್ ಬಿಳಿ ಸೀರೆ ಮತ್ತು ಪ್ರಕಾಶಮಾನವಾದ ನಗುವನ್ನು ಪ್ರೀತಿಯಿಂದ ಕಂಡರು. ಅವರ ಸ್ಟೇಜ್ ಕಾರ್ಯಕ್ರಮಗಳಲ್ಲಿ ಅದು ಅವರ ಟ್ರೇಡ್‌ಮಾರ್ಕ್ ಲುಕ್ ಆಯಿತು.
Bangalore,Karnataka
Jul 12, 2026 12:19 PM IST














