Karnataka Dams: ತುಂಬುತ್ತಿದೆ ಡ್ಯಾಮ್‍ಗಳ ಒಡಲು, ಈ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಗೊತ್ತಾ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಕರ್ನಾಟಕ ಅಣೆಕಟ್ಟು ನೀರಿನ ಮಟ್ಟ


Last Updated:

ಕೆ.ಆರ್.ಎಸ್ ಡ್ಯಾಂನಲ್ಲಿ ನೀರಿನ ಮಟ್ಟ 91.20 ಅಡಿ ತಲುಪಿದೆ. ನವಿಲು ತೀರ್ಥ, ತುಂಗಭದ್ರಾ, ಕಬಿನಿ, ಆಲಮಟ್ಟಿ ಜಲಾಶಯಗಳಲ್ಲೂ ನೀರಿನ ಮಟ್ಟ ಏರಿಕೆ. ರೈತರಲ್ಲಿ ಹರ್ಷ.

 ಕರ್ನಾಟಕ ಅಣೆಕಟ್ಟು ನೀರಿನ ಮಟ್ಟ
ಕರ್ನಾಟಕ ಅಣೆಕಟ್ಟು ನೀರಿನ ಮಟ್ಟ

ಬೆಂಗಳೂರು: ರಾಜ್ಯದಲ್ಲಿ ಮಳೆಯ (Rain) ಪರಿಣಾಮ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಮಂಡ್ಯದ (Mandya) ರೈತರ ಪಾಲಿನ ಆಶಾಕಿರಣ ಕೆ.ಆರ್.ಎಸ್ (KRS) ಅಣೆಕಟ್ಟು ನಿಧಾನವಾಗಿ ತನ್ನ ಒಡಲನ್ನು ತುಂಬಿಕೊಳ್ಳುತ್ತಿದೆ. ಪ್ರಸ್ತುತ ಕೆ.ಆರ್.ಎಸ್ ಡ್ಯಾಮ್‍ನಲ್ಲಿ (Dam) ನೀರಿನ ಮಟ್ಟ 91.20 ಅಡಿಗಳಿಗೆ ತಲುಪಿದೆ. ಸದ್ಯ ಜಲಾಶಯಕ್ಕೆ 12,503 ಕ್ಯೂಸೆಕ್ ನೀರು ಒಳಹರಿವು ಬರುತ್ತಿದ್ದು, ರೈತರಲ್ಲಿ (Farmers) ಹರ್ಷ ಮೂಡಿದೆ. ಸದ್ಯಕ್ಕೆ 807 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದಲ್ಲಿ ಒಟ್ಟು 16.665 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ಕೆಲವು ದಿನಗಳಿಂದ ಬರುತ್ತಿರುವ ಉತ್ತಮ ಮಳೆಯಿಂದಾಗಿ ನೀರಿನ ಒಳಹರಿವು ಸ್ಥಿರವಾಗಿ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ನವಿಲು ತೀರ್ಥ ಜಲಾಶಯ

ಇನ್ನು ಮತ್ತೊಂದೆಡೆ ನವಿಲು ತೀರ್ಥ ಜಲಾಶಯದ ಕಥೆ ಏನು? ಈ ಜಲಾಶಯದ ಒಟ್ಟು ಸಾಮಥ್ರ್ಯ 37.7 ಟಿಎಂಸಿ ಆಗಿದೆ. ಇಂದಿನ ಮಾಹಿತಿಯ ಪ್ರಕಾರ, ಜಲಾಶಯದಲ್ಲಿ 12.100 ಟಿಎಂಸಿ ನೀರು ಸಂಗ್ರಹವಿದೆ. ಪ್ರಸ್ತುತ ಜಲಾಶಯಕ್ಕೆ 2,393 ಕ್ಯೂಸೆಕ್ ನೀರು ಬಂದು ಸೇರುತ್ತಿದ್ದರೆ, ಹೊರಹರಿವು ಕೇವಲ 194 ಕ್ಯೂಸೆಕ್ ಇದೆ. ಒಳಹರಿವು ಹೆಚ್ಚುತ್ತಿರುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಮಂಡ್ಯ

ಕೆ.ಆರ್.ಸಾಗರ

ಒಳಹರಿವು : 12,503 ಕ್ಯೂಸೆಕ್

ಹೊರಹರಿವು : 807 ಕ್ಯೂಸೆಕ್

ಸಂಗ್ರಹ. : 16.665 ಟಿಎಂಸಿ

ನವೀಲು ತೀರ್ಥ ಜಲಾಶಯ

ಡ್ಯಾಂ ಒಟ್ಟು ಸಾಮರ್ಥ್ಯ- 37.7tmc

ಇಂದಿನ ನೀರಿನ ಮಟ್ಟ- 12.100 tmc

ಒಳ ಹರಿವು- 2393 ಕ್ಯೂಸೆಕ್

ಹೊರ ಹರಿವು- 194 cusecs

ಕೊಪ್ಪಳ

ತುಂಗಭದ್ರಾ ಜಲಾಶಯದ ನೀರಿನ ಮಟ್ಟ

ಡ್ಯಾಂನ ಸಾಮಾರ್ಥ್ಯ-105.788 ಟಿಎಂಸಿ

ಸದ್ಯದ ಸಾಮರ್ಥ್ಯ- 22.948 ಟಿಎಂಸಿ

ನೀರಿನ ಮಟ್ಟ-1633 ಅಡಿ

ಸದ್ಯದ ನೀರಿನ ಮಟ್ಟ- 1601.08 ಅಡಿ

ಡ್ಯಾಂ ಒಳಹರಿವು- 19642 ಕ್ಯೂಸೆಕ್

ಹೊರಹರಿವು- 381 ಕ್ಯೂಸೆಕ್

ಕಬಿನಿ

ಇಲ್ಲಿ ಒಳಹರಿವು 14,574 ಕ್ಯೂಸೆಕ್ ಇದ್ದು, 9153 ಕ್ಯೂಸೆಕ್ ನೀರು ಸಂಗ್ರಹವಾಗಿದೆ.

ಆಲಮಟ್ಟಿ ಅಣೆಕಟ್ಟು: 1.30 ಲಕ್ಷ ಕ್ಯೂಸೆಕ್‍ಗಿಂತಲೂ ಹೆಚ್ಚಿನ ಪ್ರಮಾಣದ ಭಾರಿ ಒಳಹರಿವಿನಿಂದಾಗಿ, ನೀರಿನ ಮಟ್ಟವು 512.59 ಮೀಟರ್‍ಗೆ (ಒಟ್ಟು ಸಾಮಥ್ರ್ಯ 44.70 ಟಿಎಂಸಿ ಟಿಎಂಸಿ) ತಲುಪಿದೆ.

ರೈತರಿಗೆ ಏನು ಸಂದೇಶ?

ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗುತ್ತಿರುವುದು ಮುಂಗಾರು ಬೆಳೆಗಳಿಗೆ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲು ಆಶಾದಾಯಕ ಲಕ್ಷಣವಾಗಿದೆ. ಆದಾಗ್ಯೂ, ಮಳೆಗಾಲದ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ. ನದಿ ಪಾತ್ರದ ಜನರು ಮತ್ತು ರೈತರು ನೀರಿನ ಹರಿವಿನ ಮೇಲೆ ನಿಗಾ ಇಡಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed