Samantha: ಮಾಜಿ ಮೈದುನ ಅಖಿಲ್‌ಗೆ ಶುಭ ಹಾರೈಸಿದ ಸಮಂತಾ! ಭಾವುಕವಾಗಿ ಪ್ರತಿಕ್ರಿಯಿಸಿದ ನಟ | | ACTPnews

ಸಮಂತಾ


Last Updated:

ಮೂರು ವರ್ಷಗಳ ಬಳಿಕ ಬಿಡುಗಡೆಯಾದ ಅಖಿಲ್ ಅಕ್ಕಿನೇನಿ ಅಭಿನಯದ ‘ಲೆನಿನ್’ (Lenin) ಸಿನಿಮಾಗೆ ಮಾಜಿ ಅತ್ತಿಗೆ ಸಮಂತಾ ಶುಭ ಹಾರೈಸಿರುವುದು ಅಭಿಮಾನಿಗಳ ಗಮನ ಸೆಳೆದಿದೆ.

ಸಮಂತಾ
ಸಮಂತಾ

ತೆಲುಗು ಚಿತ್ರರಂಗದಲ್ಲಿ ಅಕ್ಕಿನೇನಿ ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ಸುದ್ದಿ ಬಂದರೂ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡುತ್ತದೆ. ಅದರಲ್ಲೂ ನಟಿ ಸಮಂತಾ (Actress Samantha) ಮತ್ತು ಅಖಿಲ್ ಅಕ್ಕಿನೇನಿ (Akhil Akkineni) ಹೆಸರು ಒಂದೇ ಸುದ್ದಿಯಲ್ಲಿ ಕಾಣಿಸಿಕೊಂಡರೆ ಅದು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗುತ್ತದೆ. ಇದೀಗ ಮೂರು ವರ್ಷಗಳ ಬಳಿಕ ಬಿಡುಗಡೆಯಾದ ಅಖಿಲ್ ಅಕ್ಕಿನೇನಿ ಅಭಿನಯದ ‘ಲೆನಿನ್’ (Lenin) ಸಿನಿಮಾಗೆ ಮಾಜಿ ಅತ್ತಿಗೆ ಸಮಂತಾ ಶುಭ ಹಾರೈಸಿರುವುದು ಅಭಿಮಾನಿಗಳ ಗಮನ ಸೆಳೆದಿದೆ.

ಅಖಿಲ್ ಅಕ್ಕಿನೇನಿ ಅಭಿನಯದ ಬಹುನಿರೀಕ್ಷಿತ ‘ಲೆನಿನ್’ ಸಿನಿಮಾ ಜುಲೈ 10ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಮೂರು ವರ್ಷಗಳ ವಿರಾಮದ ಬಳಿಕ ಅಖಿಲ್ ನಾಯಕನಾಗಿ ಪ್ರೇಕ್ಷಕರ ಮುಂದೆ ಬಂದಿರುವ ಈ ಚಿತ್ರಕ್ಕೆ ಆರಂಭಿಕ ಪ್ರತಿಕ್ರಿಯೆ ಉತ್ತಮವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳು ಹರಿದಾಡುತ್ತಿದ್ದು, ಇದು ಅಖಿಲ್ ವೃತ್ತಿಜೀವನದ ಮಹತ್ವದ ಚಿತ್ರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

‘ಲೆನಿನ್’ ಚಿತ್ರದ ಬಿಡುಗಡೆಯ ದಿನವೇ ನಟಿ ಸಮಂತಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಚಿತ್ರತಂಡಕ್ಕೆ ಶುಭಾಶಯ ಕೋರಿದರು. ‘ಲೆನಿನ್ ಚಿತ್ರತಂಡಕ್ಕೆ ಮತ್ತು ಅಖಿಲ್‌ಗೆ ಆಲ್ ದಿ ವೆರಿ ಬೆಸ್ಟ್. ಈಗಾಗಲೇ ಬಿಗ್ ಬ್ಲಾಕ್‌ಬಸ್ಟರ್ ವೈಬ್ಸ್ ಕಾಣಿಸುತ್ತಿವೆ’ ಎಂದು ಅವರು ಬರೆದುಕೊಂಡಿದ್ದರು. ಜೊತೆಗೆ ಚಿತ್ರದ ಟ್ರೈಲರ್ ಅನ್ನು ಹಂಚಿಕೊಂಡು ಅಖಿಲ್ ಅವರನ್ನು ಟ್ಯಾಗ್ ಮಾಡಿದ್ದರು.

ಸಮಂತಾ ಅವರ ಶುಭಾಶಯಕ್ಕೆ ಅಖಿಲ್ ಕೂಡ ತಕ್ಷಣವೇ ಪ್ರತಿಕ್ರಿಯಿಸಿದರು. ತುಂಬಾ ಧನ್ಯವಾದಗಳು ಸ್ಯಾಮ್. ನನ್ನ ತಂಡ ಮತ್ತು ನಾನು ನಿಮ್ಮ ಶುಭ ಹಾರೈಕೆಗಳನ್ನು ನಿಜವಾಗಿಯೂ ಗೌರವಿಸುತ್ತೇವೆ ಎಂದು ಅವರು ಬರೆದು ಕೈಮುಗಿಯುವ ಎಮೋಜಿಗಳನ್ನು ಹಂಚಿಕೊಂಡರು.

ಸಮಂತಾ ಸಿನಿಮಾವನ್ನು ಹೊಗಳಿದ್ದ ಅಖಿಲ್

ಇತ್ತೀಚೆಗೆ ಸಮಂತಾ ಅಭಿನಯದ ‘ಮಾ ಇಂಟಿ ಬಂಗಾರಂ’ ಚಿತ್ರದ ಕುರಿತು ಅಖಿಲ್ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಚಿತ್ರದ ಟ್ರೈಲರ್ ತಮಗೆ ತುಂಬಾ ಇಷ್ಟವಾಗಿದೆ ಎಂದು ಹೇಳಿದ್ದ ಅವರು, ಇದು ಹೊಸತನದ ಕಥೆಯೊಂದಿಗೆ ಬಂದಿರುವ ವಿಭಿನ್ನ ಸಿನಿಮಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಪರಸ್ಪರ ಗೌರವಕ್ಕೆ ಅಭಿಮಾನಿಗಳ ಮೆಚ್ಚುಗೆ

ಸಮಂತಾ ಮತ್ತು ಅಖಿಲ್ ನಡುವೆ ನಡೆದ ಈ ಶುಭಾಶಯ ವಿನಿಮಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಯಾಗಿದೆ. ವಿಚ್ಛೇದನದ ನಂತರವೂ ಇಬ್ಬರೂ ವೃತ್ತಿಪರ ಸಂಬಂಧವನ್ನು ಗೌರವದಿಂದ ಮುಂದುವರಿಸಿಕೊಂಡಿರುವುದು ಅನೇಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ವೈಯಕ್ತಿಕ ಸಂಬಂಧಗಳು ಬದಲಾಗಿದ್ದರೂ ಕೆಲಸ ಮತ್ತು ಪ್ರತಿಭೆಗೆ ಗೌರವ ನೀಡುವ ಗುಣವನ್ನು ಇಬ್ಬರೂ ಪ್ರದರ್ಶಿಸಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed