Last Updated:
ಡಾಲಿ ಧನಂಜಯ್ ಅಭಿನಯದ ಮದರ್ ಪ್ರಾಮಿಸ್ ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರದ ಜೊತೆಗೆ ಕನ್ನಡದ ಇನ್ನು ಮೂರು ಸಿನಿಮಾಗಳು ತೆರೆ ಕಾಣ್ತಿವೆ. ಈ ಎಲ್ಲ ಚಿತ್ರಗಳ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.
ಡಾಲಿ ಧನಂಜಯ್ (Daali Dhananjaya) ಅಭಿನಯದ ಮದರ್ ಪ್ರಾಮಿಸ್ ಚಿತ್ರ (Mother Promise Movie) ಜುಲೈ-10 ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಜೊತೆಗೆ ಕನ್ನಡದ (Kannada) ಇನ್ನೂ ಮೂರು ಹೊಸಬರ ಚಿತ್ರಗಳೂ (Newcomer Movies) ಬರ್ತಿವೆ. ಹಾಗಾಗಿಯೇ ಈ ವಾರ ಒಂದಲ್ಲ, ಎರಡಲ್ಲ, ನಾಲ್ಕು ಚಿತ್ರಗಳು ರಿಲೀಸ್ ಆಗುತ್ತಿದೆ. ಈ ನಾಲ್ಕು ಚಿತ್ರಗಳ ಸಂಕ್ಷಿಪ್ತ ಚಿತ್ರಣ ಇಲ್ಲಿದೆ ಓದಿ.
ಮದರ್ ಪ್ರಾಮಿಸ್
ಡಾಲಿ ಧನಂಜಯ್ ಅಭಿನಯದ ಈ ಚಿತ್ರದಲ್ಲಿ ಗ್ಯಾಂಗ್ಸ್ಟರ್ ಕತೆನೂ ಇದೆ. ಆದರೆ, ಇಲ್ಲಿ ಹಾಸ್ಯಕ್ಕೆ ಹೆಚ್ಚಿಗೆ ಒತ್ತು ಕೊಟ್ಟಿದ್ದಾರೆ. ಮದರ್ ಸೆಂಟಿಮೆಂಟ್ಸ್ ಕೂಡ ಇದೆ. ಅದರ ನಡುವೆ ನಗುವಿನ ಮಜಾ ಇದೆ. ಎಲ್ಲವೂ ಇರೋ ಈ ಚಿತ್ರ ಜುಲೈ-10 ರಂದು ತೆರೆ ಕಾಣುತ್ತಿದೆ.
ಈ ಚಿತ್ರವನ್ನ ಪೂರ್ಣ ಮೈಸೂರು ಡೈರೆಕ್ಷನ್ ಮಾಡಿದ್ದಾರೆ. ಈ ಚಿತ್ರಕ್ಕೆ ನವನೀತ್ ಶ್ಯಾಮ್ ಸಂಗೀತ ಕೊಟ್ಟಿದ್ದಾರೆ. ಗೀತಾ, ವಿನಯ್ ಪ್ರಸಾದ್, ಡಾಲಿ ಧನಂಜಯ್ ಸೇರಿದಂತೆ ಹೊಸಬರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಈ ಚಿತ್ರ ಚೆನ್ನಾಗಿದೆ ಅಂತ ರಾಜ್ ಬಿ ಶೆಟ್ಟಿ ಕೂಡ ಹೇಳಿದ್ದಾರೆ. ಪ್ರೀಮಿಯರ್ ಶೋದಲ್ಲಿ ಚಿತ್ರ ನೋಡಿದವರ ಅಭಿಪ್ರಾಯವು ಚೆನ್ನಾಗಿಯೇ ಬಂದಿವೆ. ಮೊದಲ ದಿನ ಈ ಸಿನಿಮಾವನ್ನ ಜನ ಹೇಗೆ ತೆಗೆದುಕೊಳ್ಳುತ್ತಾರೆ ಅನ್ನುವ ಕುತೂಹಲವು ಈಗ ಹೆಚ್ಚಾಗಿದೆ.
ರಕ್ಕಿ ಸಿನಿಮಾ ರಿಲೀಸ್
ರಕ್ಕಿ ಹೊಸಬರ ಚಿತ್ರವೇ ಆಗಿದೆ. ರಕ್ಕಿ ಅನ್ನುವ ಯುವ ನಟನೇ ಈ ಚಿತ್ರದ ನಾಯಕ ಆಗಿದ್ದಾರೆ. ಡೈರೆಕ್ಟರ್ ವೆಂಕಟ್ ಭಾರದ್ವಾಜ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ.
ಕನ್ನಡದಲ್ಲಿ ಈ ವಾರ ಬರ್ತಿರೋ ಚಿತ್ರಗಳಲ್ಲಿ Boys Never Compromise ಅನ್ನುವ ಚಿತ್ರವೂ ಬರ್ತಿದೆ. ಇದು ಕನ್ನಡ ಚಿತ್ರವೇ ಆಗಿದೆ.
ಇಂಗ್ಲಿಷ್ ಟೈಟಲ್ ಸಿನಿಮಾ
ಆದರೆ, ಇದಕ್ಕೆ ಇಂಗ್ಲಿಷ್ ಟೈಟಲ್ ಇಟ್ಟಿದ್ದಾರೆ. ಇದರಲ್ಲಿ ಹಾರರ್ ಮತ್ತು ಕಾಮಿಡಿ ಕಂಟೆಂಟ್ ಇದೆ. ಹರೀಶ್ ಜಲ್ಗೆರೆ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಪ್ರಮೋದ್ ಭಾರತೀಯ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ.
ಶ್ರೀಕೃಷ್ಣ ಹೆಸರಿನ ಕನ್ನಡ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಇದು ಕೂಡ ಹೊಸಬರ ಚಿತ್ರವೇ ಆಗಿದೆ. ಶಂಕರರಾಜ ವರ್ಮಾ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಶಂಕರರಾಜ ವರ್ಮ, ಚೈತ್ರಾ ತೋಟದ್, ಪ್ರದೀಪ್ ಪೂಜಾರಿ ಸೇರಿದಂತೆ ಇನ್ನು ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಈ ಎಲ್ಲ ಸಿನಿಮಾಗಳಲ್ಲಿ ಮದರ್ ಪ್ರಾಮಿಸ್ ಚಿತ್ರದ ಪ್ರಚಾರ ಜೋರಾಗಿಯೇ ಆಗಿದೆ. ಇತರ ಚಿತ್ರಗಳು ಒಂದು ಹಂತಕ್ಕೆ ಪ್ರಚಾರದ ಪ್ರಯತ್ನ ಮಾಡಿವೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka













