ತಬಾಹಿ ಚಿತ್ರದ ಹಾಡು ಶೃಂಗಾರಮಯವೇ ಆಗಿದೆ. ಪ್ರತಿ ಪದದಲ್ಲೂ ಸೆಳೆತ ಇದೆ. ಪ್ರೇಮದ ಉತ್ತುಂಗ ಇದೆ. ಸರಸ ಸಲ್ಲಾಪದ ಸಾಲುಗಳೂ ಇವೆ. ತಬಾಹಿ ಹಾಡಿನಲ್ಲಿ ಪ್ರೀತಿಯ ಸರ್ವನಾಶದ ಚಿತ್ರಣವೂ ಇದೆ.
ಪ್ರಣಯಭಾರದಲ್ಲಿ ಪ್ರಾಯವು ಹಗುರ (ಚಿತ್ರ ಕೃಪೆ: ಯೋಗರಾಜ್ ಭಟ್ ಇನ್ಸ್ಟಾಗ್ರಾಮ್)
ಎಲ್ಲಾ, ಮಿತಿಮೀರಿ ಹೋಗೋಣ ಬಾ..
ಎಲ್ಲಾ, ಗಡಿದಾಟಿ ನೋಡೋಣ ಬಾ…
ಶೃಂಗಾರದಂಗಾರ ಸಿಡಿದೇಳಲು
-ತಬಾಹಿ… ತಬಾಹಿ
ಸಾಗರಾ, ಸರಸರಾ, ದಡವನೂ ದಾಟಲು,
ಭಾವದಾ, ರಭಸವೂ, ಎದೆಯನು ಮೀಟಲು,
ವೈಯಾರ ಮೈಮೋಹ ಜೊತೆಸೇರಲು
ತಬಾಹಿ ..! ತಬಾಹಿ
ಸರಸ, ಸದರ, ಬೆರೆತು, ಸಮರ,
ಪ್ರಣಯಭಾರದಲ್ಲಿ ಪ್ರಾಯವು ಹಗುರ..
ಕೊರೆದಾ ಉಗರಾ ಕವಿತೇ ಮಧುರಾ
ಈ ಒಂದು ಹಾಡಿನ ಸಾಲುಗಳಲ್ಲಿ ಸರಸವೂ ಇದೆ. ಸಮರಸವೂ ಇದೆ. ಆದರೆ, ಈ ಒಂದು ಹಾಡಿನಲ್ಲಿ ಬರುವ ಒಂದು ಸಾಲು ತುಂಬಾನೆ ಚೆನ್ನಾಗಿದೆ. ‘ಪ್ರಣಯದಭಾರದಲ್ಲಿ ಪ್ರಾಯವು ಹಗುರ’ ಅನ್ನುವ ಈ ಲೈನ್ ವಿಶೇಷ ಅನಿತ್ತದೆ.
ಇದೇ ಹಾಡಿನಲ್ಲಿ ಇನ್ನೂ ಒಂದು ಲೈನ್ ಬರುತ್ತದೆ. ‘ಭಾವದಾ, ರಭಸವೂ, ಎದೆಯನು ಮೀಟಲು ವೈಯಾರ ವ್ಯಾಮೋಹ ಜೊತೆಸೇರಲು’ ಅನ್ನೋದೇ ಈ ಲೈನ್ ಆಗಿದೆ. ಇದು ಕೂಡ ಅಷ್ಟೆ ವಿಶೇಷ ಅನಿಸುತ್ತಿದೆ.
ಮ್ಯೂಸಿಕ್ ಯಾರದು ಗೊತ್ತೆ?
(ಚಿತ್ರ ಕೃಪೆ: ಯೋಗರಾಜ್ ಭಟ್ ಇನ್ಸ್ಟಾಗ್ರಾಮ್)
ಈ ರೀತಿಯ ಸಾಲುಗಳನ್ನ ಬಾಲಿವುಡ್ ಗಾಯಕ ವಿಶಾಲ್ ಮಿಶ್ರಾ ಅಷ್ಟೆ ಆಕರ್ಷಕವಾಗಿಯೇ ಹಾಡಿದ್ದಾರೆ. ವಿಶೇಷ ಸೆಳತ ಇರೋ ತಮ್ಮ ಧ್ವನಿ ಮೂಲಕವೇ ಎಲ್ಲರ ಗಮನ ಕೂಡ ಸೆಳೆದಿದ್ದಾರೆ.
ಇಲ್ಲಿ ಇನ್ನೂ ಒಂದು ವಿಶೇಷ ಇದೆ. ಈ ಹಾಡಿಗೆ ಮಾತ್ರ ಗಾಯಕ ವಿಶಾಲ್ ಮಿಶ್ರಾ ಅವರೇ ಮ್ಯೂಸಿಕ್ ಮಾಡಿದ್ದಾರೆ. ಈ ಮ್ಯೂಸಿಕ್ ನೊಂದಿಗೆ ಈ ಹಾಡು ‘ತಬಾಹಿ’ ಮಾಡುತ್ತಿದೆ.
ಯಶ್ ಹಾಗೂ ಕಿಯಾರಾ ಅಡ್ವಾಣಿ ಈ ಹಾಡಿನಲ್ಲಿ ಪ್ರಣಯದ ಎಲ್ಲ ಎಲ್ಲೆಗಳನ್ನು ದಾಟಿದ್ದಾರೆ. ಚುಂಬನ ಮತ್ತು ಆಲಿಂಗನದ ದೃಶ್ಯಗಳು ಇಲ್ಲಿ ಹೇರಳವಾಗಿಯೇ ಇವೆ. ಇದನ್ನ ನೋಡಿದ ಪಡ್ಡೆಗಳ ದಿಲ್ ಝಲ್ ಅನ್ನುತ್ತದೆ ಬಿಡಿ. ಆ ರೀತಿನೇ ಇಡೀ ಹಾಡು ಇದೆ.
ಭಾವದಾ ರಭಸವೂ…
(ಚಿತ್ರ ಕೃಪೆ: ಯೋಗರಾಜ್ ಭಟ್ ಇನ್ಸ್ಟಾಗ್ರಾಮ್)
ಟಾಕ್ಸಿಕ್ ಚಿತ್ರ ಆಗಸ್ಟ್-26 ರಂದು ರಿಲೀಸ್ ಆಗುತ್ತಿದೆ. ಎಲ್ಲೆಡೆ ಈ ಚಿತ್ರ ರಿಲೀಸ್ ಆಗುತ್ತಿದೆ. ವಿಶ್ವದಾದ್ಯಂತ ಇದು ತೆರೆ ಕಾಣುತ್ತಿದೆ. ಕನ್ನಡ ಮತ್ತು ಇಂಗ್ಲಿಷ್ ಅಲ್ಲಿ ಇದು ತಯಾರಾಗಿದೆ.
ಆದರೆ, ಇದು ಬಹು ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಆಯಾ ಭಾಷೆಯಲ್ಲಿಯೇ ಡಬ್ ಕೂಡ ಆಗುತ್ತಿದೆ. ಗೀತು ಮೋಹನ್ದಾಸ್ ಡೈರೆಕ್ಷನ್ ಮಾಡಿರೋ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಕೊಟ್ಟಿದ್ದಾರೆ. ಗೀತು ಮೋಹನ್ದಾಸ್ ಪತಿ ರಾಜೀವ್ ರವಿ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ ಅಂತ ಹೇಳಬಹುದು.












