Last Updated:
Honeymoon Suite: ರೈಲಿನಲ್ಲಿ ಹನಿಮೂನ್ ಬೆಡ್ರೂಮ್ ಅಲಂಕರಿಸಿದ ನವದಂಪತಿ ವಿಡಿಯೋ ವೈರಲ್. ಟಿಟಿಇ ಅಮಾನತು, ರೈಲ್ವೆ ಇಲಾಖೆಯಿಂದ ತನಿಖೆ ಮುಂದುವರೆದಿದೆ.
ಹೊಸದಾಗಿ ಮದುವೆಯಾದ ಜೋಡಿ (Newlywed Couple) ತಮ್ಮ ಮೊದಲ ರೈಲು ಪ್ರಯಾಣವನ್ನು (Suhagrat Express) ಒಂದು ಸುಂದರ ನೆನಪು ಸೃಷ್ಟಿ ಮಾಡಿಕೊಳ್ಳಬೇಕು ಎಂದು ಪ್ಲ್ಯಾನ್ ಮಾಡಿದ್ದರು. ಇದರಂತೆ ರೈಲಿನಲ್ಲಿ ತಮ್ಮ ಸೂಟನ್ನು ಹನಿಮೂನ್ ಬೆಡ್ ರೂಮ್ನಂತೆ (Honeymoon on Wheels) ಅಲಂಕರಿಸಿದ್ದರು. ಗುಲಾಬಿಗಳು (Roses), ಬಲೂನ್, ವಿವಿಧ ಹೂ, ಕ್ಯಾಂಡಲ್ಗಳನ್ನು ಅಲಂಕರಿಸಿ, ಐ ಲವ್ ಯೂ ಎಂಬ ಬೋರ್ಡ್ ಕೂಡ ಅಳವಡಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ (Viral Video) ಆಗಿತ್ತು. ಈ ಬಗ್ಗೆ ಹಲವರು ಪ್ರತಿಕ್ರಿಯೆ ನೀಡಿ ಟೀಕೆ ಟಿಪ್ಪಣಿಗಳನ್ನು ಮಾಡಿದ್ದರು.
ಜುಲೈ 06 ರಂದು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್-ಬಲ್ಲಾರ್ಷಾ ನಡುವೆ ಸಂಚರಿಸುವ ನಂದಿಗ್ರಾಮ ಎಕ್ಸ್ ಪ್ರೆಸ್ ರೈಲು ಜಲ್ನಾ ಸ್ಟೇಷನ್ಗೆ ತಲುಪಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಖಾಸಗಿ ಡೆಕೋರೇಷನ್ ಸಿಬ್ಬಂದಿಗೆ ರೈಲಿನ ಒಳಗೆ ತೆರಳಲು ಅನುಮತಿ ನೀಡಿ, ಪ್ರಯಾಣಿಕರ ಕೂಪೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಈ ದೃಶ್ಯಗಳು ಕೆಲವೇ ಸೆಕೆಂಡ್ಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಇದು ಟಿಕೆಟ್ ಬುಕ್ ಮಾಡಿದ ದಂಪತಿಗಳ ತಪ್ಪು ಅಲ್ಲ, ಭದ್ರತೆಯ ನಿಯಮಗಳನ್ನು ಮೀರಿ ಬೇರೆ ವ್ಯಕ್ತಿಗಳಿಗೆ ರೈಲು ಪ್ರವೇಶಿಸಲು ಅನುಮತಿ ನೀಡಿರುವುದು ಅಧಿಕಾರಿಗಳ ತಪ್ಪು ಎಂದು ರೈಲ್ವೆ ಇಲಾಖೆ ಹೇಳಿದೆ. ಇದರೊಂದಿಗೆ ಕರ್ತವ್ಯದಲ್ಲಿದ್ದ ಟ್ರಾವೆಲಿಂಗ್ ಟಿಕೆಟ್ ಎಗ್ಜಾಮಿನರ್ (ಟಿಟಿಇ) ಅವರನ್ನು ಸಸ್ಪೆಂಡ್ ಮಾಡಿದೆ. ಅನುಮತಿ ನೀಡಿದ್ದು ಹೇಗೆ? ಭದ್ರತೆಯ ಪರಿಶೀಲನೆ ವಿಫಲವಾಗಿದ್ದು ಹೇಗೆ? ಎಂಬ ಅಂಶಗಳ ಬಗ್ಗೆ ತನಿಖೆ ಮುಂದುವರಿದಿದೆ.
Honeymoon coach on Indian Railways. Ticket checker suspended.
South Central ZoneA couple travelling in Train No. 11002 Nandigram express on 6/7/26 had privately engaged a decorator online to decorate their 1st AC coupe.
The decorator’s entry into the coach was… pic.twitter.com/1ati4A13G4
— Rajendra B. Aklekar (@rajtoday) July 8, 2026
ಟಿಕೆಟ್ ಬುಕ್ ಮಾಡಿದ ದಂಪತಿಗಳ ಮೇಲೆ ಯಾವುದೇ ಕ್ರಮ ಇರೋದಿಲ್ಲ. ಭದ್ರತೆಯ ದೃಷ್ಟಿಯಿಂದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವುದಾಗಿ ಉನ್ನತ ಅಧಿಕಾರಿಗಳು ಹೇಳಿದ್ದಾರೆ. ಇನ್ನು, ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ‘ಇಂತಹ ಸರ್ಪೈಸ್ ಜೀವನದಲ್ಲಿ ಒಮ್ಮೆ ಮಾತ್ರ ಬರುತ್ತೆ’ ಎಂದು ದಂಪತಿಯ ನಡೆಯ ಬಗ್ಗೆ ಪಾಸಿಟಿವ್ ಕಾಮೆಂಟ್ ಮಾಡಿದ್ದಾರೆ, ಆದರೆ ಕೆಲವರು ಈ ಬಗ್ಗೆ ಬೇಸರ ಹೊರಹಾಕಿದ್ದು, ‘ಸಾರ್ವಜನಿಕರ ಸಾರಿಗೆಯಲ್ಲಿ ಇದಕ್ಕೆ ಅನುಮತಿ ಹೇಗೆ ನೀಡುತ್ತೀರಿ’ ಎಂದು ಪ್ರಶ್ನಿಸಿದ್ದಾರೆ.













