ಶಾಲೆ, ಕಾಲೇಜು, ಅಂಗಡಿ, ಮಾಲ್ ಜಲಾವೃತವಾದರೆ ಅಬ್ಬಬ್ಬಾ ಅಂದರೆ ನಷ್ಟಗಳಾಗಬಹುದು. ಆದರೆ ಹಾವು ಸಾಕಣಿಕೆ ಕೇಂದ್ರ ಜಲಾವೃತವಾಗಿದ್ದು ಕೇಳಿದ್ದೀರಾ? ಈ ಸ್ಟೋರಿ ಚಳಿ ಹಿಡಿಸುತ್ತೆ.
ದಕ್ಷಿಣ ಚೀನಾದಲ್ಲಿ ಮೇಸಕ್ ಚಂಡಮಾರುತದಿಂದ ತೀವ್ರ ಪ್ರವಾಹ ಉಂಟಾಗಿದೆ. ಇದರಿಂದಾಗಿ ಗುವಾಂಗ್ಕ್ಸಿಯಲ್ಲಿ ಎಮರ್ಜೆನ್ಸಿ ಸೃಷ್ಟಿಯಾಯ್ತು. ಹೆಂಗ್ಝೌ ನಗರದಲ್ಲಿ ಪ್ರವಾಹದ ನೀರು ಎಲ್ಲಾ ಕಡೆ ನುಗ್ಗಿತು.
ಸಂತಾನೋತ್ಪತ್ತಿ ಕಡಿಮೆಯಾದ, ಅಳಿವಿನಂಚಿನಲ್ಲಿದ್ದು ಅವುಗಳ ಸಂರಕ್ಷಣೆಯಾಗಿ ಸಾಕಣಿಕೆ ಕೇಂದ್ರದಲ್ಲಿಟ್ಟು ನೋಡಿಕೊಳ್ಳುತ್ತಿದ್ದ ಒಂದು ಪ್ರದೇಶಕ್ಕೂ ನೆರೆ ನೀರು ಬಂದಿದೆ. ಪ್ರವಾಹ ನುಗ್ಗಿದ್ದೇ ತಡ ಅಲ್ಲಿದ್ದ ಅಂದಾಜು 800 ರಿಂದ 900 ಹಾವುಗಳು ದಿಕ್ಕಾಪಾಲಾಗಿ ಓಡಿವೆ. ಸ್ಥಳೀಯ ಹಳ್ಳಿಗಳಿಗೆ ಈ ಹಾವುಗಳೆಲ್ಲ ನುಗ್ಗಿದೆ ಎನ್ನಲಾಗಿದೆ.
ಹಾವುಗಳು ಪ್ರವಾಹದ ನೀರಿನ ಮಧ್ಯೆ ತಮ್ಮ ತಲೆಗಳನ್ನು ಎತ್ತಿ ನೋಡುತ್ತಿರುವ ವೀಡಿಯೊಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ. ಇದು ಈಗಾಗಲೇ ಪ್ರವಾಹ ಪೀಡಿತ ಸ್ಥಳದಲ್ಲಿ ಕಾರ್ಯಾಚರಣೆ ಮಾಡುತ್ತಿರುವ, ಅಲ್ಲಿ ಸಿಕ್ಕಿ ಹಾಕಿಕೊಂಡಿರುವ ಜನರಿಗೆ ಸಮಸ್ಯೆ ಉಂಟುಮಾಡುತ್ತಿದೆ.
ಮಿಸ್ ಆದ ಹಾವುಗಳಲ್ಲಿ ಅಂದಾಜು 900 ಹಾವುಗಳಲ್ಲಿ ನಾಗರಹಾವುಗಳಂತಹ ಅತ್ಯಂತ ವಿಷಕಾರಿ ಹಾವುಗಳಿವೆ ಎಂದು ವರದಿಯಾಗಿದೆ ಸೂಚಿಸುತ್ತವೆ. ತಪ್ಪಿಸಿಕೊಂಡ ಹಾವುಗಳು ಮುಖ್ಯವಾಗಿ ಸಾಂಪ್ರದಾಯಿಕ ಔಷಧ ಮತ್ತು ಚರ್ಮದ ಉತ್ಪಾದನೆಗಾಗಿ ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಬೆಳೆಸಲಾಗುವ ಮೂರು ಜಾತಿಗಳನ್ನು ಕೂಡಾ ಒಳಗೊಂಡಿವೆ ಎಂದು ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ.
ಇವುಗಳಲ್ಲಿ ಏಕವರ್ಣದ ನಾಗರಹಾವುಗಳು (ವಿಷಕಾರಿ), ಕಿಂಗ್ ಕೋಬ್ರಾ ಹಾವುಗಳು (ವಿಷಕಾರಿಯಲ್ಲದ), ಮತ್ತು ನೀರಿನ ಹಾವುಗಳು (ವಿಷಕಾರಿಯಲ್ಲದ) ಇವೆ.
ಮೈಸಕ್ ಚಂಡಮಾರುತದಿಂದ ಉಂಟಾದ ಭಾರೀ ಮಳೆಯಿಂದಾಗಿ ಅಲ್ಲಿ ಲಿಯುಲಾನ್ ಮತ್ತು ಯುನ್ಬಿಯಾವೊ ಜಲಾಶಯಗಳು ಉಕ್ಕಿ ಹರಿಯಿತು. ತಗ್ಗು ಪ್ರದೇಶದ ಕೃಷಿ ಸ್ಥಳ ಮತ್ತು ಸಣ್ಣ ಪ್ರಮಾಣದ ಹಾವು ಸಾಕಣೆ ಕೇಂದ್ರಗಳು ನಾಶವಾದ ನಂತರ ಡೆಂಗ್ವೇ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದೆ.
ಡೆಂಗ್ವೇ ಗ್ರಾಮ ಸಮಿತಿಯ ಮುಖ್ಯಸ್ಥರಾದ ವು ಝಿ, ಹೆಚ್ಚಿನ ಹಾವುಗಳು ವಿಷಕಾರಿಯಲ್ಲದ ನೀರಿನ ಹಾವುಗಳಾಗಿದ್ದು, ಅವು ಬೇಗನೆ ಕೊಚ್ಚಿ ಹೋಗುತ್ತವೆ. ಅಥವಾ ತೇಲುತ್ತಿರುವ ಅವಶೇಷಗಳ ಮೇಲೆ ಸಿಕ್ಕಿಹಾಕಿಕೊಳ್ಳುತ್ತವೆ. ಆದರೆ ವಿಷಪೂರಿತ ನಾಗರಹಾವುಗಳು ಇನ್ನೂ ಅಪಾಯಕಾರಿಯಾಗಿವೆ ಎಂದು ಹೇಳಿದ್ದಾರೆ. ಅಲ್ಲಿನ ನಿವಾಸಿಗಳಲ್ಲಿ ಇದು ಆತಂಕ ಸೃಷ್ಟಿಸಿದೆ.

ಒಬ್ಬ ವ್ಯಕ್ತಿ ಹಾವು ಕಡಿತದಿಂದ ಬಳಲುತ್ತಿದ್ದಾರೆ. ಗ್ಲೋಬಲ್ ಟೈಮ್ಸ್ ವರದಿಯ ಪ್ರಕಾರ, ವಿಷಪೂರಿತ ಹಾವು ಕಡಿತದಿಂದ ಒಬ್ಬ ಗ್ರಾಮಸ್ಥರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳೀಯ ತುರ್ತು ನಿರ್ವಹಣಾ ಬ್ಯೂರೋಗಳು, ಸೊಂಟದಷ್ಟು ಪ್ರವಾಹದ ನೀರಿನಿಂದಾಗಿ ಸಿಲುಕಿಕೊಂಡಿರುವ ನಿವಾಸಿಗಳು ತಾತ್ಕಾಲಿಕವಾಗಿ ವೈದ್ಯಕೀಯ ಆರೈಕೆಯನ್ನು ಪಡೆಯಲು ಸಾಧ್ಯವಾಗದ ಕಾರಣ ರಕ್ಷಣಾ ಪ್ರಯತ್ನಗಳು ಸಿಕ್ಕಾಪಟ್ಟೆ ಕಷ್ಟವಾಗಿದೆ ಎಂದು ಎಚ್ಚರಿಸಿದ್ದಾರೆ.
After the collaps of the Liulan Reservoir (六蓝水库) dam in China, a farm dedicated for raising venomous snakes was washed out by the flood. Now poisonous snakes are everywhere. An alligator farm was also washed out pic.twitter.com/2JYrrXbg0S
— Bin Xie (@bxieus) July 8, 2026
ಹಾವುಗಳನ್ನು ಹಿಡಿಯೋಕೆ ವಿಶೇಷ ಹಾವು ಸೆರೆಹಿಡಿಯುವ ತಂಡಗಳು ಬಂದಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಒಂದು ಡಜನ್ಗಿಂತಲೂ ಹೆಚ್ಚು ಸಿಬ್ಬಂದಿಯನ್ನು ಒಳಗೊಂಡ ವಿಶೇಷ ನಾಗರಿಕ ಮತ್ತು ತುರ್ತು ಪ್ರತಿಕ್ರಿಯೆ ತಂಡವನ್ನು ನಿಯೋಜಿಸಲಾಗಿದೆ.