Akriti Agarwal-Prithvi Shaw: ಪೃಥ್ವಿ ಶಾ ಜೊತೆಗೆ ನಿಶ್ಚಿತಾರ್ಥ ಮುರಿದುಬಿದ್ದ ವದಂತಿ! ಮತ್ತೊಂದು ಪೋಸ್ಟ್ ಮಾಡಿ ಸ್ಪಷ್ಟನೆ ಕೊಟ್ಟ ಆಕೃತಿ | ಕ್ರೀಡಾ ಸುದ್ದಿ | ACTPnews

ಪೃಥ್ವಿ ಶಾ- ಆಕೃತಿ ಅಗರ್ವಾಲ್


Last Updated:

ಎರಡು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಆಕೃತಿ ಅಗರ್ವಾಲ್ ಹಂಚಿಕೊಂಡ ಪೋಸ್ಟ್‌ಗಳು ತೀವ್ರ ಚರ್ಚೆಗೆ ನಾಂದಿ ಹಾಡಿದ್ದವು. ನಾನು ಹಲವು ಬಾರಿ ಮೋಸ ಹೋಗಿದ್ದೇನೆ, ಆದರೂ ನಾನು ಒಂದು ಮಾತನ್ನೂ ಹೇಳಿರಲಿಲ್ಲ. ಅವರೊಂದಿಗೆ ಜೀವನದಲ್ಲಿ ಮುಂದುವರಿಯಲು ನಿರ್ಧರಿಸಿದ ನಂತರ, ಇದನ್ನೆಲ್ಲ ನಂಬಲು ನನಗೆ ಕಷ್ಟವಾಗುತ್ತಿದೆ ಎಂದು ಬರೆದುಕೊಂಡಿದ್ದರು.

ಪೃಥ್ವಿ ಶಾ- ಆಕೃತಿ ಅಗರ್ವಾಲ್
ಪೃಥ್ವಿ ಶಾ- ಆಕೃತಿ ಅಗರ್ವಾಲ್

ಟೀಮ್ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಅವರ ಭಾವಿ ಪತ್ನಿ ಆಕೃತಿ ಅಗರ್ವಾಲ್ ( Akriti Agarwal-Prithvi Shaw), ತಮ್ಮ ಮದುವೆ ರದ್ದಾಗಿದೆ ಎಂಬ ವರದಿಗಳನ್ನು ತಳ್ಳಿಹಾಕಿದ್ದಾರೆ. ಪೃಥ್ವಿ ಶಾ ಅವರನ್ನು ಅದ್ಭುತ ವ್ಯಕ್ತಿ ಎಂದು ಬಣ್ಣಿಸಿರುವ ಅವರು, ತಮ್ಮ ಮದುವೆಯ ಕುರಿತಾದ ವದಂತಿಗಳನ್ನು ಕೇವಲ ಊಹಾಪೋಹಗಳೆಂದು ತಳ್ಳಿಹಾಕಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ, ತಮ್ಮ ನಡುವೆ ಯಾವುದೇ ಬಿರುಕುಗಳಿಲ್ಲ. ನಾವು ಪ್ರೀತಿಯಿಂದ ಒಟ್ಟಿಗೆ ಸಂತೋಷವಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಪೃಥ್ವಿ ಶಾ ಮತ್ತು ನಟಿ ಅಕೃತಿ ಅಗರ್ವಾಲ್ ಕಳೆದ ಮಾರ್ಚ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ನಾನು ಮೋಸ ಹೋದೆ ಎಂದಿದ್ದ ಆಕೃತಿ

ಎರಡು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಆಕೃತಿ ಅಗರ್ವಾಲ್ ಹಂಚಿಕೊಂಡ ಪೋಸ್ಟ್‌ಗಳು ತೀವ್ರ ಚರ್ಚೆಗೆ ನಾಂದಿ ಹಾಡಿದ್ದವು. ಅವರು “ನಾನು ಹಲವು ಬಾರಿ ಮೋಸ ಹೋಗಿದ್ದೇನೆ, ಆದರೂ ನಾನು ಒಂದು ಮಾತನ್ನೂ ಹೇಳಿರಲಿಲ್ಲ. ಅವರೊಂದಿಗೆ ಜೀವನದಲ್ಲಿ ಮುಂದುವರಿಯಲು ನಿರ್ಧರಿಸಿದ ನಂತರ, ಇದನ್ನೆಲ್ಲ ನಂಬಲು ನನಗೆ ಕಷ್ಟವಾಗುತ್ತದೆ. ಅವರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕೇಳಿಬರುತ್ತಿರುವ ಎಲ್ಲವೂ ನಿಜ; ಎಲ್ಲಾ ವದಂತಿಗಳು ವಾಸ್ತವವೇ” ಎಂದು ಬರೆದುಕೊಂಡಿದ್ದರು.

ಪೃಥ್ವಿ ಶಾ ಹೆಸರೇಳದೆ ಪೋಸ್ಟ್

ಆದರೆ ಆಕೃತಿ ಈ ಪೋಸ್ಟ್‌ಗಳಲ್ಲಿ ಎಲ್ಲೂ ಪೃಥ್ವಿ ಶಾ ಅವರ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಿರಲಿಲ್ಲ. ಆಕೃತಿ ಪೃಥ್ವಿ ಶಾ ಅವರನ್ನು ಅನ್​ಫಾಲೋ ಕೂಡ ಮಾಡಿರಲಿಲ್ಲ. ಅಲ್ಲದೆ ಅವರೊಂದಿಗಿನ ಫೋಟೋಗಳನ್ನು ಡಿಲೀಟ್ ಮಾಡಿಲ್ಲ. ಆದರೆ ನೆಟಿಜನ್ಸ್ ಆ ಪೋಸ್ಟ್‌ಗಳು ಪೃಥ್ವಿ ಶಾ ಅವರನ್ನೇ ಗುರಿಯಾಗಿರಿಸಿಕೊಂಡಿ ಮಾಡಲಾಗಿದೆ ಎಂದು ಊಹಿಸಿ ವೈರಲ್ ಮಾಡಿದ್ದರು. ಇದು ಅವರ ಮದುವೆಯನ್ನು ರದ್ದುಗೊಳಿಸಲಾಗಿದೆ ಎಂಬ ವದಂತಿಗಳಿಗೆ ಕಾರಣವಾಗಿತ್ತು. ಇದೀಗ ಈ ವರದಿಗಳಿಗೆ ಆಕೃತಿ ಫುಲ್​ಸ್ಟಾಪ್ ಇಟ್ಟಿದ್ದಾರೆ.

ಪೃಥ್ವಿ ಶಾ ಬಗ್ಗೆ ಅಲ್ಲ ಎಂದ ಆಕೃತಿ

ನನ್ನ ಪೋಸ್ಟ್​ ಅನ್ನ ತಪ್ಪು ತಿಳಿಯಲಾಗಿದೆ ಎಂದು ಹೇಳುವ ಮತ್ತೊಂದು ಪೋಸ್ಟ್ ಅನ್ನು ಆಕೃತಿ ಹಂಚಿಕೊಂಡಿದ್ದಾರೆ. ಆದರೆ, ಈ ವರದಿಗಳು ಮುಂದುವರೆದು ಪೃಥ್ವಿ ಶಾ ಅವರ ಖ್ಯಾತಿಗೆ ಕಳಂಕ ತರುವ ಬೆದರಿಕೆ ಹಾಕುತ್ತಿರುವಂತಿದೆ. ಹಾಗಾಗಿ ನಾನು ಒಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ನಾನು ನನ್ನ ಭಾವಿ ಪತಿಯ ಹೆಸರನ್ನು ಎಲ್ಲಿಯೂ ಉಲ್ಲೇಖಿಸಿಲ್ಲ. ನಮ್ಮ ನಿಶ್ಚಿತಾರ್ಥ ರದ್ದಾಯಿತು ಅಥವಾ ನಾವು ಬೇರ್ಪಟ್ಟಿದ್ದೇವೆ ಎಂದು ನಾನು ಎಲ್ಲೂ ಹೇಳಿಲ್ಲ. ಆ ಪೋಸ್ಟ್ ಪೃಥ್ವಿ ಶಾ ಬಗ್ಗೆ ಎಂದು ಅನೇಕ ಜನರು ಭಾವಿಸಿರುವುದು ದುರದೃಷ್ಟಕರ.

ನಾವು ಒಟ್ಟಿಗೆ ಸಂತೋಷವಾಗಿದ್ದೇವೆ ಮತ್ತು ನಮ್ಮ ಸಂಬಂಧವು ಬಲವಾಗಿ ಸಾಗುತ್ತಿದೆ. ಈ ಘಟನೆಯು ಕೇವಲ ಊಹಾಪೋಹದ ಆಧಾರದ ಮೇಲೆ ವ್ಯಕ್ತಿಯ ಖ್ಯಾತಿ ಮತ್ತು ಘನತೆಯನ್ನು ಎಷ್ಟು ಸುಲಭವಾಗಿ ಹಾನಿಗೊಳಿಸಬಹುದು ಎಂಬುದನ್ನು ನನಗೆ ಅರಿತುಕೊಂಡೆ. ಆ ಸ್ಟೋರಿ ನನ್ನ ಆಪ್ತ ಸ್ನೇಹಿತರನ್ನ ಮಾತ್ರ ಉದ್ದೇಶಿಸಲಾಗಿತ್ತು. ನನ್ನ ಕಡೆಯಿಂದ ಒಂದು ಸಣ್ಣ ತಪ್ಪು ನಾನು ಹೆಚ್ಚು ಪ್ರೀತಿಸುವ ವ್ಯಕ್ತಿಯ ಖ್ಯಾತಿಯನ್ನು ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕಿಸಿತು.

ಸಹವಾಸ ಮಾಡಿ ಕೆಟ್ಟ ಪೃಥ್ವಿ ಶಾ

ಅಂಡರ್-19 ವಿಶ್ವಕಪ್ ಗೆಲುವಿನ ನಂತರ ಪೃಥ್ವಿ ಶಾ ಶೂಟಿಂಗ್ ತಾರೆಯಂತೆ ಭಾರತೀಯ ಕ್ರಿಕೆಟ್​ಗೆ ಬೇಗ ಸೇರಿಕೊಂಡಿದರು. ಆದರೆ ಅಷ್ಟೇ ಬೇಗನೆ ತಂಡದಿಂದ ದೂರ ಸರಿದರು. ಗಾಯಗಳು, ಫಿಟ್ನೆಸ್ ಸಮಸ್ಯೆಗಳು ಮತ್ತು ಕೆಟ್ಟ ಸಹವಾಸ ಅವರ ವೃತ್ತಿಜೀವನವನ್ನು ಹಾಳುಮಾಡಿತು. ಪರಿಣಾಮವಾಗಿ, ಒಮ್ಮೆ ಭಾರತೀಯ ಕ್ರಿಕೆಟ್‌ನ ಮುಖವಾಗುವ ನಿರೀಕ್ಷೆಯಿದ್ದ ಶಾ, ಐಪಿಎಲ್ ತಂಡದಲ್ಲಿಯೂ ಸ್ಥಾನ ಪಡೆಯಲು ವಿಫಲವಾದ ದಯನೀಯ ಸ್ಥಿತಿಗೆ ತಲುಪಿದರು. ಅವರು ಈಗ ಕೇವಲ ದೇಶೀಯ ಕ್ರಿಕೆಟ್ ತಾರೆಯಾಗಿ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸುವತ್ತ ಸಾಗುತ್ತಿರುವಂತೆ ಕಾಣುತ್ತಿದೆ.

ಅಲ್ಲದೆ ಕೇವಲ 24 ವರ್ಷ ವಯಸ್ಸಿನಲ್ಲಿ ವಿಪರೀತ ದಪ್ಪವಾಗಿದ್ದಾರೆ ಮತ್ತು ಕೂದಲು ಉದುರಿದೆ. ಕ್ರಿಕೆಟ್​ಗೆ ಲಾಯಕ್ಕಲ್ಲ ಎನ್ನುವಂತೆ ಕಾಣುತ್ತಿದ್ದಾರೆ. ಆದರೆ ಇತ್ತೀಚೆಗೆ ಶಾ ತಮ್ಮ ತಪ್ಪುಗಳನ್ನು ಅರಿತುಕೊಂಡಿದ್ದಾರೆ ಮತ್ತು ಟೀಮ್ ಇಂಡಿಯಾಕ್ಕೆ ಮರಳಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ಐಪಿಎಲ್ 2026 ರ ಮಿನಿ-ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪೃಥ್ವಿ ಶಾ ಅವರನ್ನು ₹75 ಲಕ್ಷ ಮೂಲ ಬೆಲೆಗೆ ಖರೀದಿಸಿದ್ದರೂ, ಅವರಿಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ. ಆದರೂ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾಕ್ಕೆ ಮರಳಲು ಅವರು ಶ್ರಮಿಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed