Mother Promise: ‘ಮದರ್ ಪ್ರಾಮಿಸ್’ ಪ್ರಾಮಿಸಿಂಗ್ ಆಗಿದೆ; ಹೀಗೆ ಹೇಳಿದ್ದು ಡಾಲಿ ಅಲ್ವೆ ಅಲ್ಲ! ಮತ್ಯಾರು ಗೊತ್ತಾ? | | ACTPnews

'ಮದರ್ ಪ್ರಾಮಿಸ್' ಪ್ರಾಮಿಸಿಂಗ್ ಆಗಿದೆ; ಹೀಗೆ ಹೇಳಿದ್ದು ಡಾಲಿ ಅಲ್ವೆ ಅಲ್ಲ!


Last Updated:

ಮದರ್ ಪ್ರಾಮಿಸ್ ಚಿತ್ರ ಪ್ರೀಮಿಯರ್ ಶೋದಲ್ಲಿಯೇ ಸಿಕ್ಕಾಪಟ್ಟೆ ನಗಿಸಿದೆ. ನೋಡಿದವರು ಬಿದ್ದು ಬಿದ್ದು ನಕ್ಕಿದ್ದಾರೆ. ರಾಜ್ ಬಿ ಶೆಟ್ರು ಈ ಸಿನಿಮಾ ಚೆನ್ನಾಗಿದೆ ಅನ್ನೋ ಮಾತನ್ನ ಹೇಳಿದ್ದಾರೆ. ಈ ಎಲ್ಲದರ ಒಂದಷ್ಟು ವಿವರ ಇಲ್ಲಿದೆ ಓದಿ.

'ಮದರ್ ಪ್ರಾಮಿಸ್' ಪ್ರಾಮಿಸಿಂಗ್ ಆಗಿದೆ; ಹೀಗೆ ಹೇಳಿದ್ದು ಡಾಲಿ ಅಲ್ವೆ ಅಲ್ಲ!
‘ಮದರ್ ಪ್ರಾಮಿಸ್’ ಪ್ರಾಮಿಸಿಂಗ್ ಆಗಿದೆ; ಹೀಗೆ ಹೇಳಿದ್ದು ಡಾಲಿ ಅಲ್ವೆ ಅಲ್ಲ!

ಮದರ್ ಪ್ರಾಮಿಸ್ ಚಿತ್ರದ (Mother Promise) ಪ್ರೀಮಿಯರ್ ಶೋ ನಡೆದಿದೆ. ಬೆಂಗಳೂರಿನಲ್ಲಿಯೇ ಜುಲೈ-6 ರಂದು ಈ ಚಿತ್ರವನ್ನ ಜನ ನೋಡಿದ್ದಾರೆ. ಇದನ್ನ ನೋಡಿದವರು ಸಿಕ್ಕಾಪಟ್ಟೆ ನಕ್ಕು ನಲಿದಿದ್ದಾರೆ. ಬಿದ್ದು ಬಿದ್ದು ನಕ್ಕು ಖುಷಿಪಟ್ಟಿದ್ದಾರೆ. ಚಿತ್ರ ನೋಡಿ ಹೊರ ಬಂದ್ಮೇಲೆ ಇವರು ಮನಸಾರೆ ಈ ಚಿತ್ರವನ್ನ (Movie) ಕೊಂಡಾಡಿದ್ದಾರೆ. ಈ ಸಿನಿಮಾದಲ್ಲಿ ನಗುವಿಗೆ ಕೊರತೆ ಇಲ್ಲ ಅಂತಲೂ ಹೇಳಿದ್ದಾರೆ. ಅದೆಷ್ಟು ಕಂಟ್ರೋಲ್ ಮಾಡಿದ್ರೂ ಆಗ್ತಿಲ್ಲ ಅಂತಲೂ ಹೇಳಿದ್ದಾರೆ. ಚಿತ್ರ ರಿಲೀಸ್ (Movie Release) ಆಗುವ ಮುಂಚೇನೆ ಇದನ್ನ ನೋಡಿ ಸಂತೋಷ ಪಟ್ಟಿದ್ದಾರೆ. ಈ ಒಂದು ಚಿತ್ರದ ಬಗ್ಗೆ ರಾಜ್ ಬಿ ಶೆಟ್ಟಿ (Raj B Shetty) ಕೂಡ ಮಾತನಾಡಿದ್ದಾರೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.

ಪ್ರಾಮಿಸಿಂಗ್ ಸಿನಿಮಾ

ಮದರ್ ಪ್ರಾಸಿಂಗ್ ಚಿತ್ರ ಜುಲೈ-10 ರಂದು ರಿಲೀಸ್ ಆಗುತ್ತಿದೆ. ಆದರೆ, ಈ ಚಿತ್ರದ ಪ್ರೀಮಿಯರ್ ಶೋ ಜುಲೈ-6 ರಂದು ಬೆಂಗಳೂರಿನಲ್ಲಿ ನಡೆದಿದೆ.
daali dhananjaya mother promise movie premiere shows public reaction

ನಗಿಸುವ ಸಿನಿಮಾ

(ಚಿತ್ರ ಕೃಪೆ: ಡಾಲಿ ಧನಂಜಯ್ ಇನ್‌ಸ್ಟಾಗ್ರಾಮ್)

ಇಲ್ಲಿ ಚಿತ್ರ ನೋಡಿದವರು ಮೆಚ್ಚಿಕೊಂಡಿದ್ದಾರೆ. ಅಷ್ಟೆ ಬಿದ್ದು ಬಿದ್ದು ನಕ್ಕಿದ್ದಾರೆ. ಆ ರೀತಿನೇ ಈ ಚಿತ್ರ ಜನಕ್ಕೆ ಇಷ್ಟ ಆಗಿದೆ. ನಗು ಕಂಟ್ರೋಲ್ ಆಗಲೇ ಇಲ್ಲ. ಅಷ್ಟು ನಗಿಸುವ ಕೆಲಸವನ್ನ ಇದು ಮಾಡುತ್ತಿದೆ. ಇದು ಪ್ರಾಮಿಸಿಂಗ್ ಆಗಿದೆ ಅಂತಲೇ ಹೆಚ್ಚಿನ ಜನ ಹೇಳಿದ್ದಾರೆ.

ನಗಿಸುವ ಸಿನಿಮಾ

ಮದರ್ ಪ್ರಾಮಿಸ್ ಚಿತ್ರ ಸಿಕ್ಕಾಪಟ್ಟೆ ನಗಿಸುತ್ತದೆ. ಚಿತ್ರ ನೋಡಿದವರೇ ಇದನ್ನ ಹೇಳಿಕೊಂಡಿದ್ದಾರೆ. ಚಿತ್ರ ನೋಡಿದವರ ಅಭಿಪ್ರಾಯವನ್ನ ಚಿತ್ರ ತಂಡವೇ ಸಂಗ್ರಹಿಸಿದೆ. ಇದನ್ನ ಮಾಧ್ಯಮಕ್ಕೂ ಚಿತ್ರ ತಂಡವೇ ಹಂಚಿಕೊಂಡಿದೆ.

ಹಾಗೆ ಇತ್ತೀಚಿಗೆ ಡಾಲಿ ಧನಂಜಯ್ ಒಂದು ಮಾತು ಹೇಳಿದ್ದರು. ನಮ್ಮ ಚಿತ್ರದ ಒಳಗೆ ಬೇರೆ ವಿಷಯವೇ ಇದೆ. ಅಷ್ಟೆ ಮಜಾ ಇದೆ. ನೀವು ಬಂದ್ರೆ ಖುಷಿಪಡ್ತೀರಾ ಅಂತಲೇ ಹೇಳಿದ್ದರು. ಅದು ಜನರ ಈಗೀನ ಅಭಿಪ್ರಾಯಗಳನ್ನ ಗಮನಿಸಿದರೆ ನಿಜ ಅನಿಸುತ್ತದೆ ನೋಡಿ.

ರಾಜ್ ಬಿ ಶೆಟ್ಟಿ ಹೇಳಿದ್ದೇನು

ರಾಜ್ ಬಿ ಶೆಟ್ಟಿ ಅವರು ಈ ಚಿತ್ರಕ್ಕೆ ಬಂದ ಅಭಿಪ್ರಾಯನ್ನ ಸಂಗ್ರಹಿಸಿದ್ದಾರೆ. ಈ ಚಿತ್ರ ಚೆನ್ನಾಗಿದೆ ಅನ್ನುವ ಅಭಿಪ್ರಾಯ ಬರ್ತಿವೆ ಅಂತಲೇ ಹೇಳಿದ್ದಾರೆ.

daali dhananjaya mother promise movie premiere shows public reaction

ಪ್ರಾಮಿಸಿಂಗ್ ಸಿನಿಮಾ

(ಚಿತ್ರ ಕೃಪೆ: ಡಾಲಿ ಧನಂಜಯ್ ಇನ್‌ಸ್ಟಾಗ್ರಾಮ್)

ತಾವು ಅಭಿನಯಿಸಿರೋ ಕರಾವಳಿ ಚಿತ್ರದ ಟ್ರೈಲರ್ ರಿಲೀಸ್ ಇವೆಂಟ್ ಅಲ್ಲಿಯೇ ಇದನ್ನ ಹೇಳಿಕೊಂಡಿದ್ದಾರೆ. ಮದರ್ ಪ್ರಾಮಿಸ್ ಚಿತ್ರದ ಬಗ್ಗೆ ಹೇಳ್ಬೇಕು ಅಂತ ಹೇಳಿರೋದಲ್ಲ. ಸಿನಿಮಾರಂಗದ ಬಗ್ಗೆ ಮಾತನಾಡೋವಾಗ ಈ ವಿಷಯವನ್ನ ಹೇಳಿದ್ದಾರೆ.

ನಮ್ಮದು ರೌಡಿಸಂ ಚಿತ್ರ ಅಲ್ಲ

ನಮ್ಮದು ರೌಡಿಸಂ ಚಿತ್ರ ಅಲ್ಲವೇ ಅಲ್ಲ. ಇದರಲ್ಲಿ ಎಲ್ಲವೂ ಇದೆ. ಅಮ್ಮನ ಸೆಂಟಿಂಮೆಂಟ್ ಇದೆ. ಗ್ಯಾಂಗ್‌ಸ್ಟರ್ ಕಂಟೆಂಟ್ ಕೂಡ ಇದೆ. ಹಾಗಂತ ಇದು ಕೇವಲ ಒಂದು ಗ್ಯಾಂಗ್‌ಸ್ಟರ್ ಚಿತ್ರ ಅನ್ಕೋಬೇಡಿ.

ಇದರಲ್ಲಿ ಬೇರೆ ವಿಷಯ ಇದೆ. ನೋಡಿ ಖುಷಿ ಪಡಿ ಅಂತಲೇ ಡಾಲಿ ಧನಂಜಯ್ ಹೇಳಿದ್ದರು. ಜುಲೈ-10 ರಂದು ನಮ್ಮ ಈ ಸಿನಿಮಾ ಬರ್ತಿದೆ. ನೋಡಲು ಬನ್ನಿ ಅಂತಲೂ ಹೇಳಿದ್ದಾರೆ.

ಪೂರ್ಣ ಮೈಸೂರು ಡೈರೆಕ್ಷನ್

ಮದರ್ ಪ್ರಾಮಿಸ್ ಚಿತ್ರದಲ್ಲಿ ವಿನಯ ಪ್ರಸಾದ್ ಇದ್ದಾರೆ. ಹಿರಿಯ ನಟಿ ಗೀತಾ ಅವರೂ ಅಭಿನಯಿಸಿದ್ದಾರೆ. ಡಾಲಿ ಧನಂಜಯ್ ಇಲ್ಲಿ ವಿಭಿನ್ನವಾದ ಪಾತ್ರ ಮಾಡಿದ್ದಾರೆ.

ಚಿತ್ರದಲ್ಲಿ ಹೊಸಬರ ದಂಡೇ ಇದೆ. ಹೊಸಬರು ಹಾಗೂ ಹಳಬರು ಇಬ್ಬರೂ ಇರೋ ಈ ಚಿತ್ರಕ್ಕೆ ನವನೀತ್ ಶ್ಯಾಮ್ ಸಂಗೀತ ಕೊಟ್ಟಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed