Sandalwood: 6 ತಿಂಗಳು, 120 ಸಿನಿಮಾ! ಸ್ಯಾಂಡಲ್​ವುಡ್ ಪಾಲಿಗೆ ಮೊದಲ 6 ತಿಂಗಳು ಹೇಗಿತ್ತು? | 120 kannada movies released in first 6 months of 2026 how many got | | ACTPnews

duniya vijay acted landlord movie ott streaming latest updates


ಸ್ಯಾಂಡಲ್ ವುಡ್​ನಲ್ಲಿ ಕೆಜಿಎಫ್2, ಕಾಂತಾರದಂತಹ ಸಿನಿಮಾಗಳು ಬಂದು, ನಮ್ಮ ಚಿತ್ರರಂಗವನ್ನ ಇನ್ನಷ್ಟು ಎತ್ತರಕ್ಕೆ ಏರಿಸಿದವು. ಕನ್ನಡ ಸಿನಿಮಾಗಳಿಗೆ ಸಾಗರದಾಚೆಯೂ ಮಾರುಕಟ್ಟೆ ವಿಸ್ತಾರವಾಗುವಂತೆ ನೋಡಿಕೊಂಡವು. ಕರ್ನಾಟಕದಲ್ಲೇ ಕನ್ನಡ ಸಿನಿಮಾಗಳನ್ನ ನೋಡಲ್ಲ ಎನ್ನುವಾಗ ಪರಭಾಷಿಗರು ಸಹ ಕನ್ನಡ ಸಿನಿಮಾ ಮುಗಿಬಿದ್ದು ನೋಡುವಂತೆ ಮಾಡಿದ್ದು ಕೆಜಿಎಫ್-2 ಹಾಗೂ ಕಾಂತಾರ.

ಕಾಂತಾರ, ಕೆಜಿಎಫ್​ಗೆ ಸಿಕ್ಕ ಮನ್ನಣೆ ಸರಿಯಾಗಿ ಬಳಸಿಕೊಂಡಿಲ್ವಾ ಸಿನಿಮಾಗಳು?

ಆದರೆ ಏನು ಮಾಡುವುದು? ಕನ್ನಡ ಸಿನಿಮಾಗಳಿಗೆ ಸಿಕ್ಕ ಈ ಮನ್ನಣೆಯನ್ನ ಬೇರೆಯವರು ಅಷ್ಟಾಗಿ ಬಳಸಿಕೊಳ್ಳಲಿಲ್ಲ ಅಂತಲೇ ಹೇಳಬಹುದು. ಹೀಗಾಗಿಯೇ ಕಾಂತಾರ, ಕೆಜಿಎಫ್ ಬಿಟ್ಟರೆ ಮತ್ತೊಂದು ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಅಬ್ಬರಿಸಿ ಬೊಬ್ಬಿರಿಯಲೇ ಇಲ್ಲ. ಕರ್ನಾಟಕ ಹೊರತು ಪಡಿಸಿ ಬೇರೆ ರಾಜ್ಯಗಳಲ್ಲಿ 10 ಕೋಟಿ ಕಲೆಕ್ಷನ್ ಮಾಡಿದ ಉದಾಹರಣೆಯೂ ಸಿಗುತ್ತಿಲ್ಲ.

ಕನ್ನಡ ಸಿನಿಮಾವನ್ನೇ ನೋಡೋರಿಲ್ವಾ?

ಬೇರೆ ರಾಜ್ಯಗಳು ಇರಲಿ, ಕರ್ನಾಟಕದಲ್ಲೇ ಕನ್ನಡ ಸಿನಿಮಾಗಳನ್ನ ನೋಡೋರಿಲ್ಲ ಅನ್ನೋ ಮಾತು ಮತ್ತೆ ಚಾಲ್ತಿಗೆ ಬರುವ ಹಾಗಾಗಿದೆ ಈಗಿನ ವಾತವಾರಣ. ಹೌದು, ಈ ವರ್ಷ ಶುರುವಾಗಿ 6 ತಿಂಗಳು ಕಳೆದು ಹೋಗಿದೆ. ಇಷ್ಟು ದಿನಗಳಲ್ಲಿ 120ಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ಬಿಡುಗಡೆಯಾಗಿವೆ. ಆದರೆ ಅದರಲ್ಲಿ ಗೆದ್ದ ಸಿನಿಮಾಗಳು ಎಷ್ಟು? ಫಸ್ಟ್ ಹಾಫ್ ರಿಸಲ್ಟ್ ಏನು? ಅಂತ ನೋಡುವುದಾದರೆ ಯಾವ ಸಿನಿಮಾ ಸಹ ದೊಡ್ಡ ಮಟ್ಟದಲ್ಲಿ ಗೆದ್ದ ಉದಾಹರಣೆ ಇಲ್ಲ.

ಮೊದಲ ಆರು ತಿಂಗಳ ರಿಸಲ್ಟ್ ಹೇಗಿದೆ?

ಈ ವರ್ಷದ ಮೊದಲ ಆರು ತಿಂಗಳ ರಿಸಲ್ಟ್ ಅಷ್ಟೇನು ವ್ಹಾವ್ ಎನ್ನುವಂತಿಲ್ಲ. ಕಳೆದ ವರ್ಷ ಸಹ ಇದೇ ರೀತಿಯಾಗಿತ್ತು. ಮೊದಲ ಆರು ತಿಂಗಳು ಕನ್ನಡ ಚಿತ್ರರಂಗ ಗರಬಡಿದಂತಿತ್ತು. ಸು ಫ್ರಮ್ ಸೋ ನಂತಹ ಕಾಮಿಡಿ ಸಿನಿಮಾ ಬಂದು ಜನರನ್ನ ಥಿಯೇಟರ್ ಗೆ ಕರೆಸಿತ್ತು. ನೂರು ಕೋಟಿ ಹಣಗಳಿಸಿ ಕನ್ನಡ ಸಿನಿಮಾಗಳನ್ನ ನೋಡುವ ಜನರಿದ್ದಾರೆ, ಅವರಿಗೆಗೆ ಒಳ್ಳೆಯ ಸಿನಿಮಾ ಕೊಡಬೇಕು ಅಷ್ಟೇ ಎಂಬ ಸಂದೇಶವನ್ನ ಸಾರಿತ್ತು.

ಇನ್ನು ಕಾಂತಾರ1 ಬಗ್ಗೆ ಹೇಳಲೇಬೇಕಿಲ್ಲ. ಬಾಕ್ಸ್​ ಆಫೀಸ್​ನಲ್ಲಿ 900 ಕೋಟಿ ಹಣ ಗಳಿಸಿ ಕೆಜಿಎಫ್2 ನಂತರ ಅತಿಹೆಚ್ಚು ಹಣ ಗಳಿಸಿದ ಕನ್ನಡ ಸಿನಿಮಾ ಎಂಬ ಹಣೆಪಟ್ಟಿಯನ್ನ ತನ್ನದಾಗಿಸಿಕೊಂಡಿತು. ಈಗ ಈ ವರ್ಷ ಕಾಂತಾರ, ಸು ಫ್ರಮ್ ಸೋ ತರದ ಸಿನಿಮಾಗಳು ಬರಬೇಕಿದೆ. ಬಾಕ್ಸಾಫೀಸ್​ನಲ್ಲಿ ಕ್ರಾಂತಿ ಎಬ್ಬಿಸಬೇಕಿದೆ.

ಕಲ್ಟ್, ಲ್ಯಾಂಡ್​ಲಾರ್ಡ್ ನಿರೀಕ್ಷೆ ಠುಸ್

ಈ ವರ್ಷದ ಆರಂಭದಲ್ಲಿ ಕಲ್ಟ್, ಲ್ಯಾಂಡ್ ಲಾರ್ಡ್ ಸಿನಿಮಾಗಳು ತೆರೆಗೆ ಬಂದವು. ಈ ಸಿನಿಮಾಗಳ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇತ್ತು. ಆದರೆ ಎರಡು ಸಿನಿಮಾಗಳು ಸಹ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ಇನ್ನು ಫೆಬ್ರವರಿಯಲ್ಲಿ ರಕ್ಕಸಪುರದೊಳ್ ಸಿನಿಮಾ ತೆರೆಗೆ ಬಂತು. ಈ ಸಿನಿಮಾವನ್ನ ನೋಡಿದೋರು ಇದಕ್ಕಿಂತ ಅದ್ಭುತ ಸಿನಿಮಾ ಇನ್ನೊಂದು ಬರಲು ಸಾಧ್ಯವೇ ಇಲ್ಲ ಅಂದರು. ಆದರೆ ಪ್ರಚಾರದ ಕೊರತೆಯಿಂದ ಈ ಸಿನಿಮಾ ಅಷ್ಟೇನು ಕಮಾಲ್ ಮಾಡಲಿಲ್ಲ.

ಸಣ್ಣ ಧಣಿಯ ಅಟ್ಟಹಾಸ
ಸಿನಿಮಾ ಚೆನ್ನಾಗಿದ್ರೂ ನೋ ಕಮರ್ಷಿಯಲ್ ಸಕ್ಸಸ್

ಇನ್ನು ವಲವಾರ ಅಂತ ಒಂದು ಸಿನಿಮಾ ಬಂತು. ಈ ಸಿನಿಮಾಗೂ ಸಾಕಷ್ಟು ಜನ ಪ್ರಶಂಸೆಯ ಮಾತುಗಳನ್ನ ಆಡಿದರು. ಆದರೆ ಕಮರ್ಷಿಯಲ್ ಆಗಿ ಈ ಸಿನಿಮಾ ಜಾದು ಮಾಡಲಿಲ್ಲ. ಆದರೆ ಒಟಿಟಿಯಲ್ಲಿ ನೋಡಿದ ಜನ ಮನಸಾರೆ ಮಾತಾಡ್ತಿದ್ದಾರೆ. ಹೃದಯದಿಂದ ಕೊಂಡಾಡ್ತಿದ್ದಾರೆ.

feel good kannada movie valavaara making sound for its simple narration that touch your heart

ವಲವಾರ
ಲವ್ ಮಾಕ್ಟೇಲ್ 3

ಹಾಗೆ ಯುಗಾದಿ ಹಬ್ಬಕ್ಕೆ ಡಾರ್ಲಿಂಗ್ ಕೃಷ್ಣ ನಟಿಸಿ ನಿರ್ದೇಶಿಸಿದ್ದ, ಲವ್ ಮಾಕ್ಟೇಲ್3 ಸಿನಿಮಾ ಬಂತು. ಈ ಸಿನಿಮಾ ಹೇಳಿಕೊಳ್ಳಲು ಪರವಾಗಿಲ್ಲ. ಸುಮಾರು 10 ಕೋಟಿ ತನಕ ಬಾಕ್ಸಾಫೀಸ್ ನಲ್ಲಿ ಕಲೆಕ್ಷನ್ ಮಾಡಿರೋ ಮಾತಿದೆ.

Love Mocktail-3 Movie Public Review Special Video Got Viral

ಲವ್ ಮಾಕ್ಟೇಲ್-3 ಹೇಗಿದೆ; ಆ ಅಜ್ಜ ಕೊಟ್ಟ ರಿವ್ಯೂ ಸೂಪರ್; ವಿಡಿಯೋ ವೈರಲ್ !

ಇನ್ನು ಮಾಸ್ ಆಡಿಯೆನ್ಸ್ ದೊಡ್ಡ ಮಟ್ಟದಲ್ಲಿ ತೆರೆಗೆ ಬರಲು ಕಾರಣವಾಗಿದ್ದು, ಧ್ರುವ ನಟನೆಯ ಕೆಡಿ ಸಿನಿಮಾ. ಪ್ರೇಮ್ ನಿರ್ದೇಶನದ ಈ ಸಿನಿಮಾ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತು. 50 ಕೋಟಿಗೂ ಹೆಚ್ಚು ಹಣವನ್ನ ಗಳಿಸಿದೆ ಅಂತ ಸ್ವತಃ ಚಿತ್ರತಂಡವೇ ಅನೌನ್ಸ್ ಮಾಡಿಕೊಂಡಿದೆ.

dhruva sarja kd movie streaming on zee5 soon

ಸದ್ಯ ವಿನೋದ್ ಪ್ರಭಾಕರ್ ನಟನೆಯ ಬಲರಾಮನ ದಿನಗಳು ಸಿನಿಮಾ ಪ್ರದರ್ಶನ ಕಾಣುತ್ತಿದೆ. ಆ ದಿನಗಳು ಖ್ಯಾತಿಯ ಕೆ.ಎಂ ಚೈತನ್ಯ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ರಿಯಲಿಸ್ಟಿಕ್ ಆಗಿ ಮೂಡಿಬಂದಿದೆ ಎಂಬುದು ಸಿನಿಮಾವನ್ನ ಮೊದಲ ದಿನ ನೋಡಿದವರ ಮಾತಾಗಿದೆ. ಆದರೆ ಕಲೆಕ್ಷನ್ ವಿಚಾರದಲ್ಲಿ ಈ ಸಿನಿಮಾ ಅಂದುಕೊಂಡ ಮಟ್ಟಿಗೆ ಜಾದು ಮಾಡ್ತಾ ಇಲ್ಲ.

Vinod Prabhakar K M Chaitanya Balaramana Dinagalu Movie Trailer Review

“ಹೆಸರಿಗೆ ಅಂಟಿಕೊಂಡ ರಕ್ತ ಉಸಿರು ನಿಂತ ಮೇಲೂ ಇರುತ್ತೆ”; ಬಲರಾಮನ ಆ ದಿನಗಳು!
ಮೋಡ ಕವಿದ ವಾತಾವರಣ

ಅಷ್ಟೇ ಅಲ್ಲದೆ ಸಿಂಪಲ್ ಸುನಿ ನಿರ್ದೇಶನದ ಮೋಡ ಕವಿದ ವಾತಾವರಣ ಸಿನಿಮಾ ಸಹ ಇದೇ ವಾರ ತೆರೆ ಮೇಲೆ ಬಂದಿದೆ. ಈ ಸಿನಿಮಾ ಬಗೆಗೂ ಪಾಸಿಟಿವ್ ಟಾಕ್ ಇದೆ. ಆದರೆ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಜನಕ್ಕೆ ತಲುಪಿಯೇ ಇಲ್ಲ. ಪ್ರಚಾರದ ಕೊರತೆಯ ಕಾರಣ ಈ ಸಿನಿಮಾ ಬಂದಿದೆ ಎಂಬುದೇ ಎಷ್ಟೋ ಜನಕ್ಕೆ ಗೊತ್ತಾಗಿಲ್ಲ.

ಕಳೆದ ವರ್ಷ ಸೆಕೆಂಡ್ ಹಾಫ್​ನಲ್ಲಿ ಚೇತರಿಸಿದ್ದ ಚಂದನವನ, ಈ ವರ್ಷ ಹಾಗೆಯೇ ಆಗುತ್ತಾ?

ಇನ್ನು ಕಳೆದ ವರ್ಷ ಸೆಕೆಂಡಾಫ್ ನಲ್ಲಿ ಸು ಫ್ರಮ್ ಸೋ, ಕಾಂತಾರ ಬಂದು ಚಿತ್ರರಂಗ ಉಸಿರಾಡುವಂತೆ ಮಾಡಿದ್ದವು. ಅದೇ ರೀತಿ ಈ ವರ್ಷವೂ ಆಗುವ ನಿರೀಕ್ಷೆ ಚಿತ್ರರಂಗದಲ್ಲಿದೆ. ಅದರಂತೆ ಡಾಲಿ ಧನಂಜಯ್ ನಿರ್ಮಾಣದ ಮದರ್ ಪ್ರಾಮಿಸ್ ಸಿನಿಮಾ ತನ್ನ ಕಂಟೆಂಟ್​ನಿಂದಲೇ ಸದ್ದು ಸುದ್ದಿ ಮಾಡ್ತಾ ಇದೆ.

ಕರಾವಳಿ, ಟಾಕ್ಸಿಕ್

ಇನ್ನು ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ನಟನೆಯ ಕರಾವಳಿ ಸಿನಿಮಾ ಸು ಫ್ರಮ್ ಸೋ ರಿಲೀಸ್ ಆದ ದಿನವೇ ಬರ್ತಾ ಇದ್ದೀವಿ ಅಂತ ಸೌಂಡ್ ಶುರು ಮಾಡಿದೆ. ಕೆವಿಎನ್ ನಿರ್ಮಾಣ ಮಾಡಿರೋ ಯಶ್ ನಟಿಸಿರೋ ಟಾಕ್ಸಿಕ್ ಆಗಸ್ಟ್ 24ರಂದು ತೆರೆಗೆ ಬರಲಿದೆ.

Karavali movie delaying what is the reason prajwal devraj not received full payment what director said

ಹೊರ ಬಿತ್ತು”ಕರಾವಳಿ” ಚಿತ್ರದ ಹೊಸ ನ್ಯೂಸ್!

ಕೆಜಿಎಫ್2 ನಂತರ ರಾಕಿಂಗ್ ಸ್ಟಾರ್ ಯಶ್ ಸಾಕಷ್ಟು ಸಮಯ ತೆಗೆದುಕೊಂಡು ಮಾಡಿರೋ ಸಿನಿಮಾ ಟಾಕ್ಸಿಕ್. ಟಾಕ್ಸಿಕ್ ಕನ್ನಡ ಸಿನಿಮಾ ಅನ್ನೋದಕ್ಕಿಂತ ಹಾಲಿವುಡ್ ಲೆವೆಲ್ ನಲ್ಲಿ ಮೂಡಿಬಂದಿರೋ ಸಿನಿಮಾ ಅಂತಲೇ ಕರೆಸಿಕೊಳ್ಳುತ್ತಿದೆ. ಈ ಸಿನಿಮಾ ಗ್ಲೋಬಲ್ ಲೆವೆಲ್​ನಲ್ಲಿ ಅಬ್ಬರಿಸಿ ಬೊಬ್ಬಿರಿದರೆ ಮತ್ತೆ ಕನ್ನಡ ಚಿತ್ರಗಳತ್ತ ಪರಭಾಷಿಕರು ಸಹ ಬೆರಗುಗಣ್ಣಿನಿಂದ ನೋಡುವಂತೆ ಆಗಬಹುದು.

ಟಾಕ್ಸಿಕ್

ಟಾಕ್ಸಿಕ್
ಬೃಂದಾ ವಿಹಾರಿ, ಅಯೋಗ್ಯ 2 ಮೇಲೆ ನಿರೀಕ್ಷೆ

ಇನ್ನು ಟಾಕ್ಸಿಕ್ ಬಿಟ್ಟರೆ ಗಣಿ ನಟನೆಯ ಬೃಂದಾ ವಿಹಾರಿ ಸಿನಿಮಾ ಮೇಲೂ ಸಹ ನಿರೀಕ್ಷೆಗಳಿವೆ. ಹಾಗೆ ಆಗಸ್ಟ್ 7ನೇ ತಾರಿಖು ಅಯೋಗ್ಯ2 ಸಿನಿಮಾ ಸಹ ಬರಲು ರೆಡಿಯಾಗುತ್ತಿದೆ. ಈ ಸಿನಿಮಾಗಳು ಬಾಕ್ಸಾಫೀಸ್ ಚಿಂದಿ ಉಡಾಯಿಸಿದ್ದೇ ನಿಜವಾದರೆ ಸ್ಯಾಂಡಲ್​ವುಡ್ ಚೇತರಿಸಿಕೊಳ್ಳಬಹುದು.

ಆನಂದ್ ಸಾಲುಂಡಿ, ಫಿಲಂ ಬ್ಯೂರೋ ಹೆಡ್ ನ್ಯೂಸ್ 18 ಕನ್ನಡ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed