Pinaka Teaser: ಗೋಲ್ಡನ್ ಸ್ಟಾರ್ ಅಬ್ಬರ, ಬಾಹುಬಲಿಯಂತೆ ಪಿನಾಕದಲ್ಲಿ ಭರ್ಜರಿ ಆ್ಯಕ್ಷನ್ | | ACTPnews

ಗೋಲ್ಡನ್ ಸ್ಟಾರ್ ಗಣೇಶ್ ಅಬ್ಬರ!


Last Updated:

ಪಿನಾಕ ಚಿತ್ರದಲ್ಲಿ ಗಣೇಶ್ ಭರ್ಜರಿ ಆ್ಯಕ್ಷನ್ ಮಾಡಿದ್ದಾರೆ. ಚಾರುಕೇಶ ಪಿನಾಕರಾಜನಾಗಿಯೇ ಇದರಲ್ಲಿ ಅಬ್ಬರಿಸಿದ್ದಾರೆ. ಚಿತ್ರದ ಈ ಮೊದಲ ಟೀಸರ್‌ನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಗೋಲ್ಡನ್ ಸ್ಟಾರ್ ಗಣೇಶ್ ಅಬ್ಬರ!
ಗೋಲ್ಡನ್ ಸ್ಟಾರ್ ಗಣೇಶ್ ಅಬ್ಬರ!

ಗೋಲ್ಡನ್ ಸ್ಟಾರ್ ಗಣೇಶ್ (Golden star Ganesh) ಅಭಿನಯದ ಪಿನಾಕ ಚಿತ್ರದ (Pinaka Movie) ಫಸ್ಟ್ ಟೀಸರ್ ರಿಲೀಸ್ ಆಗಿದೆ. ಬಹು ಕೋಟಿ ವೆಚ್ಚದ ಈ ಚಿತ್ರದ ಟೀಸರ್ ಕುತೂಹಲ ಮೂಡಿಸುತ್ತಿದೆ. ಚಾರುಕೇಶ ಪಿನಾಕರಾಜನಾಗಿಯೇ ಗಣೇಶ್ ಇಲ್ಲಿ ಅಭಿನಯಿಸಿದ್ದಾರೆ. ಚಾರುಕೇಶ ಪಿನಾಕ ರಾಜನ (Charukesha Pinaka Raja) ವೀರಾವೇಷದ ಚಿತ್ರಣ ಈ ಒಂದು ಟೀಸರ್ ಅಲ್ಲಿ ರಿವೀಲ್ ಆಗಿದೆ. ಗಣೇಶ್ ಇನ್ನೂ ಒಂದು ರೋಲ್ ಝಲಕ್ ಕೂಡ ಇದೆ ಟೀಸರ್ ಅಲ್ಲಿ ತಿಳಿಯುತ್ತದೆ. ಎರಡು ರೀತಿಯ ಪಾತ್ರದಲ್ಲಿಯೇ ಗಣೇಶ್ (Ganesh) ಇಲ್ಲಿ ಕಾಣಿಸಿಕೊಂಡಿದ್ದಾರೆ. ಈ ಟೀಸರ್‌ನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಪಿನಾಕ ಚಿತ್ರದ ಭರ್ಜರಿ ಟೀಸರ್

ಪಿನಾಕ ಚಿತ್ರದಲ್ಲಿ ವಿಷಯ ಇದೆ. ಪಿನಾಕ ರಾಜನ ಕತೆ ಇದರಲ್ಲಿದೆ. ಆದರೆ, ಇದರಲ್ಲಿ ಪ್ರೆಸೆಂಟ್ ವಿಷಯವು ಇದೆ. ಹಾಗಾಗಿಯೇ ಗಣೇಶ್ ಇಲ್ಲಿ ಪಿನಾಕ ರಾಜನಾಗಿ ಒಂದು ಪಾತ್ರದಲ್ಲಿ ಕಾಣಿಸುತ್ತಾರೆ.
Golden Star Ganesh Acted Pinaka Movie First Teaser Review

ಬಾಹುಬಲಿ ತರ ಪಿನಾಕ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್

ಇನ್ನೂ ಒಂದು ಪಾತ್ರದಲ್ಲಿ ಆರ್ಕಿಯಾಲಜಿಸ್ಟ್ ಆಗಿಯೇ ಅಭಿನಯಿಸಿದ್ದಾರೆ. ಆರ್ಕಿಯಾಲಜಿಸ್ಟ್ ಗಣೇಶ್ ಅದ್ಹೇಗೆ ಪಿನಾಕ ರಾಜನಾಗುತ್ತಾನೆ ಅನ್ನೋದು ಟೀಸರ್ ಅಲ್ಲಿ ರಿವೀಲ್ ಆಗಿದೆ. ಆದರೆ, ಇದರ ಝಲಕ್ ಮಾತ್ರ ಇಲ್ಲಿದೆ.

ಪಿನಾಕ ರಾಜನ ಅಬ್ಬರ

ಪಿನಾಕ ಚಿತ್ರದಲ್ಲಿ ಗಣೇಶ್ ಅಬ್ಬರ ಜೋರಾಗಿದೆ. ರಾಜನಾಗಿ ಗಣೇಶ್ ಇಲ್ಲಿ ಚೆನ್ನಾಗಿ ಕಾಣಿಸುತ್ತಾರೆ. ಅಷ್ಟೆ ಚೆನ್ನಾಗಿಯೇ ಯುದ್ಧದ ಸನ್ನಿವೇಶದಲ್ಲೂ ಕಾಣಿಸುತ್ತಾರೆ. ಫೈಟ್ ಮಾಸ್ಟರ್ ವಿಕ್ರಮ್ ಅವರ ಸಾಹಸಗಳನ್ನ ಅಷ್ಟೆ ಚೆನ್ನಾಗಿಯೇ ಗಣೇಶ್ ಇಲ್ಲಿ ಮಾಡಿದ್ದಾರೆ.

ಚಿತ್ರದ ನಾಯಕಿ ನಯನ್ ಸಾರಿಕಾ ಪಾತ್ರದ ಪರಿಚಯ ಕೂಡ ಈ ಟೀಸರ್ ಅಲ್ಲಿದೆ. ಗಣೇಶ್ ಅವರ ಪುತ್ರ ವಿಹಾನ್ ಗಣೇಶ್ ಅವರ ಪಾತ್ರದ ಒಂದು ಸಣ್ಣ ಝಲಕ್ ಕೂಡ ಇಲ್ಲಿ ಬಂದು ಹೋಗುತ್ತದೆ.

ಅಕ್ಟೋಬರ್-2 ರಿಲೀಸ್

ಪಿನಾಕ ಚಿತ್ರವನ್ನ ಡ್ಯಾನ್ಸ್ ಮಾಸ್ಟರ್ ಧನಂಜಯ್ ಡೈರೆಕ್ಷನ್ ಮಾಡಿದ್ದಾರೆ. ಗೌರ ಹರಿ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಕರಮ್ ಚಾವ್ಲಾ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ.

Golden Star Ganesh Acted Pinaka Movie First Teaser Review

ಅಕ್ಟೋಬರ್-2 ರಿಲೀಸ್

ಅಕ್ಟೋಬರ್-2 ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ಟೀಸರ್ ಅಲ್ಲಿ ಬಹು ಭಾಷೆಯ ವಿಚಾರವನ್ನು ತೋರಿಸಲಾಗಿದೆ. ಅಂದ್ರೆ, ಪಿನಾಕ ಅನ್ನೋದನ್ನ ಕನ್ನಡ, ತೆಲುಗು, ತಮಿಳು ಸೇರಿ ಹಲವು ಭಾಷೆಯಲ್ಲೂ ತೋರಿಸುತ್ತಾರೆ.

ಆದರೆ ಗಣಿ ಹೇಳೋದೇನು

ಪಿನಾಕ ಚಿತ್ರದ ನಾಯಕ ಗಣೇಶ್ ಈ ಬಗ್ಗೆ ಬೇರೆ ವಿಚಾರವನ್ನೆ ಹೇಳುತ್ತಾರೆ. ತಮ್ಮ ಈ ಪಿನಾಕ ಸಿನಿಮಾ ಕನ್ನಡದಲ್ಲಿಯೇ ಮೊದಲು ರಿಲೀಸ್ ಆಗುತ್ತದೆ.

ರಂಗಾಯಣ ರಘು-ಸಾಧು ಕೋಕಿಲ

ಪಿನಾಕ ಚಿತ್ರದಲ್ಲಿ ಸಾಧು ಕೋಕಿಲ ಇದ್ದಾರೆ. ರಂಗಾಯಣ ರಘು ಸಹ ಈ ಒಂದು ಚಿತ್ರದಲ್ಲಿ ನಟಿಸಿದ್ದಾರೆ. ಆದರೆ, ಟೀಸರ್ ಅಲ್ಲಿ ಇವರ ಪಾತ್ರದ ಪರಿಚಯ ಆಗಿಲ್ಲ.

ಆದರೆ, ಮುಂಬರೋ ಟ್ರೈಲರ್ ಅಲ್ಲಿ ಇವರ ಪಾತ್ರದ ಪರಿಚಯ ಕೂಡ ಇರುತ್ತದೆ. ಈ ವಿಷಯವನ್ನ ಗೋಲ್ಡನ್ ಸ್ಟಾರ್ ಗಣೇಶ್ ಇದೇ ಟೀಸರ್ ರಿಲೀಸ್ ಇವೆಂಟ್ ಅಲ್ಲಿಯೇ ಹೇಳಿಕೊಂಡಿದ್ದಾರೆ.

1 ನಿಮಿಷ 30 ಸೆಕೆಂಡ್‌ನ ಈ ಒಂದು ಟೀಸರ್ ಎಲ್ಲರ ಗಮನ ಸೆಳೆಯುತ್ತದೆ. ಗೋಲ್ಡನ್ ಸ್ಟಾರ್ ಗಣೇಶ್ ಆ್ಯಕ್ಷನ್‌ಗಳೂ ಅಷ್ಟೆ ಸೂಪರ್ ಫೀಲ್ ಕೊಡುತ್ತವೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed