Last Updated:
ನಮ್ಮ ಈ ಚಿತ್ರದಲ್ಲಿ ನಾನು ಚಾರುಕೇಶ ಪಿನಾಕರಾಜನಾಗಿಯೇ ಅಭಿನಯಿಸಿದ್ದೇನೆ. ಈ ಒಂದು ಚಿತ್ರದ ಕ್ಲೈಮ್ಯಾಕ್ಸ್ ನಿಜಕ್ಕೂ ಅದ್ಭುತವಾಗಿಯೇ ಬಂದಿದೆ.12 ನಿಮಿಷದ ಕ್ಲೈಮ್ಯಾಕ್ಸ್ ಅನ್ನ 22 ದಿನ ಶೂಟ್ ಮಾಡಿದ್ದೇವೆ ಅಂತಲೂ ಗಣೇಶ್ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅಭಿನಯದ ಪಿನಾಕ ಚಿತ್ರದ (Pinaka Movie) ಒಂದಷ್ಟು ವಿಷಯ ಹೊರ ಬಂದಿದೆ. ಇದನ್ನ ಸ್ವತಃ ಗಣೇಶ್ (Ganesh) ಹಂಚಿಕೊಂಡಿದ್ದಾರೆ. ಪಿನಾಕ ಚಿತ್ರದ ಟೀಸರ್ ಇವೆಂಟ್ ಅಲ್ಲಿಯೇ ಚಿತ್ರದ ಇಂಟ್ರಸ್ಟಿಂಗ್ ಮ್ಯಾಟರ್ ಶೇರ್ ಮಾಡಿಕೊಂಡಿದ್ದಾರೆ. ಚಿತ್ರದ ಶೂಟಿಂಗ್ (Climax Shooting) ಟೈಮ್ ಅಲ್ಲಿ ಗಣೇಶ್ ಅವರು ದೇವರನ್ನ ಯಾಕೆ ಸ್ಮರಿಸುತ್ತಿದ್ದರು? ನಾನ್ ಸ್ಟಾಪ್ ಹೊಡೆದಿರೋ ಡೈಲಾಗ್ ಅದೆಷ್ಟು ನಿಮಿಷ ಇದೆ. ಪಿನಾಕ ಚಿತ್ರದ ರಾಜನ ಪೂರ್ಣ ಹೆಸರೇನು? ಈ ರೀತಿಯ ಎಲ್ಲ ವಿಷಯಗಳನ್ನ ಗಣೇಶ್ ಇಲ್ಲಿ ಹೇಳಿಕೊಂಡಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಮೊದಲು ಕನ್ನಡ ಮಾತ್ರ
ಪಾಸ್ಟ್ ಮತ್ತು ಪ್ರೆಸೆಂಟ್ ಹೀಗೆ ಎರಡೂ ಈ ಚಿತ್ರದಲ್ಲಿ ಇರುತ್ತದೆ. ಈ ಚಿತ್ರದ ಕ್ಲೈಮ್ಯಾಕ್ಸ್ ತುಂಬಾನೆ ಚೆನ್ನಾಗಿ ಬಂದಿದೆ. ಇದನ್ನ ಹೇಗೆ ಶೂಟ್ ಮಾಡ್ತಾರೆ ಅನ್ನುವ ಕುತೂಹಲ ಇತ್ತು. ಚಿತ್ರದಲ್ಲಿ ಬರುವ ಈ ಕ್ಲೈಮ್ಯಾಕ್ಸ್ ಅನ್ನ 22 ದಿನ ಚಿತ್ರೀಕರಿಸಿದ್ದೇವೆ ಅಂತಲೇ ಗಣೇಶ್ ಹೇಳಿಕೊಂಡಿದ್ದಾರೆ.
ಪಿನಾಕ ಚಿತ್ರದ ಕ್ಲೈಮ್ಯಾಕ್ಸ್ 12 ನಿಮಿಷ ಬರುತ್ತದೆ. ಆದರೆ, ಈ ಒಂದು ಕ್ಲೈಮ್ಯಾಕ್ಸ್ ಅನ್ನ 22 ದಿನ ಶೂಟಿಂಗ್ ಮಾಡಿದ್ದೇವೆ ಅಂತಲೂ ಗಣೇಶ್ ಹೇಳಿಕೊಂಡಿದ್ದಾರೆ.
ಈ ಚಿತ್ರಕ್ಕಾಗಿಯೇ ನೆಲಮಂಗದಲ್ಲಿ ಸೆಟ್ ಆಗಿದ್ದೇವು. ಪ್ರತಿ ದಿನ ದೇವರಲ್ಲಿ ನಾನು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದೆ. ಕಾರಣ, ಅತಿ ದೊಡ್ಡ ಸೆಟ್ ಹಾಕಲಾಗಿತ್ತು. ಸಾವಿರಾರು ಜನ ಕೆಲಸ ಮಾಡ್ತಾ ಇದ್ದರು. ಕುದುರೆಗಳ ಕೂಡ ಇರ್ತಾ ಇದ್ದವು.
ಏನಾದರು ಆದರೆ ಆಯಿತು. “ಗೋಲ್ಡನ್ ಸ್ಟಾರ್ ಗಣೇಶ್ ಅವರ ಪಿನಾಕ ಸೆಟ್” ಅಂತಲೇ ಸುದ್ದಿ ಬರುತ್ತದೆ. ಅದಕ್ಕೇನೆ ದೇವರಲ್ಲಿ ಸದಾ ಕೇಳಿಕೊಳ್ಳುತ್ತಲೇ ಇದ್ದೆ. ಏನೂ ಆಗದಿರಲಿ ಅಂತಲೇ ಬೇಡಿಕೊಳ್ಳುತ್ತಿದ್ದೆ ಅನ್ನೋದನ್ನ ಗಣೇಶ್ ನೆನಪಿಸಿಕೊಂಡಿದ್ದಾರೆ.
ನಮ್ಮ ಮನೆ ದೇವರು ಈಶ್ವರನೇ ಆಗಿದ್ದಾನೆ. ನಾನು ಈಶ್ವರನನ್ನ ನಂಬುತ್ತೇನೆ. ಒಂದು ಶಕ್ತಿ ನಮ್ಮನ್ನ ಕಪಾಡುತ್ತದೆ ಅನ್ನುವ ನಂಬಿಕೆನೂ ಇದೆ.
12 ನಿಮಿಷದ ಕ್ಲೈಮ್ಯಾಕ್ಸ್
ಹಾಗೆ ಈ ಚಿತ್ರದಲ್ಲಿ ಗಣೇಶ್ ಅವರು ಚಾರುಕೇಶ ಪಿನಾಕರಾಜನ ಪಾತ್ರ ಮಾಡಿದ್ದಾರೆ. ಪಿನಾಕ ಅಂದರೆ ಅದು ಈಶ್ವರನ ಕೈಯಲ್ಲಿರುವ ಆಯುಧಕ್ಕೆ ಪಿನಾಕ ಅಂತಾರೆ. ಚಾರುಕೇಶ ಪಿನಾಕರಾಜ ಆ ಆಯುಧವನ್ನ ಹೊಂದಿರುತ್ತಾನೆ ಅಂತಲೂ ಹೇಳಬಹುದು.
ಪಿನಾಕ ಚಿತ್ರದಲ್ಲಿ ಗಣೇಶ್ ನಾನ್ ಸ್ಟಾಪ್ ಡೈಲಾಗ್ ಹೇಳಿದ್ದಾರೆ. ಇದು 7 ರಿಂದ 8 ನಿಮಿಷ ಬರುತ್ತದೆ. ಈ ತರದ ಡೈಲಾಗ್‌ಗಳನ್ನ ಗಣೇಶ್ ಅವರೇ ಹೊಡೆಯೋಕೆ ಸಾಧ್ಯ ಬಿಡಿ ಅಂತ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರೋ ರಂಗಾಯಣ ರಘು ಕೂಡ ಹೇಳಿದ್ದಾರೆ. ಸಾಧು ಕೋಕಿಲ ಕೂಡ ಈ ಪಿನಾಕ ಚಿತ್ರದಲ್ಲಿದ್ದಾರೆ.
ಇವರೆಲ್ಲ ಈ ಒಂದು ಚಿತ್ರದ ಟೀಸರ್ ರಿಲೀಸ್ ಆಗಿದೆ. ಇನ್ನೂ ಒಂದು ಟ್ರೈಲರ್ ಕೂಡ ಹೊರಗೆ ಬರುತ್ತದೆ. ಅದಾದ್ಮೇಲೆ ಅಕ್ಟೋಬರ್-2 ರಂದು ಈ ಚಿತ್ರ ರಿಲೀಸ್ ಆಗುತ್ತಿದೆ.
‘ಪಿನಾಕ’ ಕೊನೆ ದೃಶ್ಯ ಅದ್ಭುತ ಎಂದ ಗಣೇಶ್
ಪಿನಾಕ ಚಿತ್ರವನ್ನ ಮೊದಲು ಕನ್ನಡದಲ್ಲಿಯೆ ರಿಲೀಸ್ ಮಾಡುತ್ತೇವೆ. ಇಲ್ಲಿ ಚೆನ್ನಾಗಿ ಆದರೆ, ಇದೇ ಚಿತ್ರ ಬೇರೆ ಭಾಷೆಗೂ ಹೋಗುತ್ತದೆ ಅಂತಲೂ ಗಣೇಶ್ ಹೇಳಿಕೊಂಡಿದ್ದಾರೆ. ಟೀಸರ್ ರಿಲೀಸ್ ಇವೆಂಟ್‌ನ ಕೊನೆಯಲ್ಲಿ ಚಿತ್ರದ ಡೈರೆಕ್ಟರ್ ಧನಂಜಯ್ ಒಂದು ವಿಷಯ ರಿವೀಲ್ ಮಾಡಿದ್ದಾರೆ. “ಗಣೇಶ್ ಅವರ ಮಗ ವಿಹಾನ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಮಕ್ಕಳ ನಾಯಕ ಆಗಿದ್ದಾರೆ” ಅಂತಲೇ ಹೇಳಿದ್ದಾರೆ.
ರೋಬೋ ಗಣೇಶ್ ಈ ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡಿದ್ದಾರೆ. ಈ ಒಂದು ಪಾತ್ರಧಾರಿ ರೋಬೋ ಗಣೇಶ್ ಅವರ ಕೆಲಸವನ್ನ ಗೋಲ್ಡನ್ ಸ್ಟಾರ್ ಗಣೇಶ್ ತುಂಬಾನೆ ಮೆಚ್ಚಿಕೊಂಡಿದ್ದಾರೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka













