Celina Jaitly: ಮದುವೆ ವಾರ್ಷಿಕೋತ್ಸವ ದಿನವೇ ಸರ್ಪ್ರೈಸ್ ಅಂತ ವಿಚ್ಛೇದನ ನೋಟಿಸ್​​; ಭಾವುಕರಾದ ಸ್ಟಾರ್ ನಟಿ! | | ACTPnews

ಸೆಲಿನಾ ಜೈಟ್ಲಿ ವಿಚ್ಛೇದನ


Last Updated:

ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರೀತಿ, ಮದುವೆ ಮತ್ತು ವಿಚ್ಛೇದನ ಅನ್ನೋ ಪದಗಳು ರೆಗ್ಯುಲರ್ ಆಗಿ ಕೇಳಿ ಬರುತ್ತವೆ. ಸಿನಿಮಾ ಸೆಲೆಬ್ರಿಟಿಗಳು ಯಾರು? ಯಾವಾಗ? ಬೇರೆ ಆಗ್ತಾರೆ ಅಂತ ಹೇಳೋದು ಕಷ್ಟ. ಸ್ಟಾರ್ ಹೀರೋ, ಹೀರೋಯಿನ್ಸ್ ಕೂಡ ಬ್ರೇಕಪ್, ರಿಲೇಶನ್ಸ್ ಕಾರಣದಿಂದ ನಿತ್ಯ ಸುದ್ದಿಯಲ್ಲಿ ಇರ್ತಾರೆ.

ಸೆಲಿನಾ ಜೈಟ್ಲಿ ವಿಚ್ಛೇದನ
ಸೆಲಿನಾ ಜೈಟ್ಲಿ ವಿಚ್ಛೇದನ

ಸಿನಿಮಾ ರಂಗದಲ್ಲಿ ವಿಚ್ಛೇದನ (Divorce) ಅನ್ನೋ ಪದ ಸಾಮಾನ್ಯವಾಗಿ ಕೇಳಿ ಬರುವ ಪದವಾಗಿ ಬದಲಾವಣೆಯಾಗಿದೆ. ಟಾಲಿವುಡ್ ನಲ್ಲಿ (Bollywood Actress) ಹಲವು ನಟಿಯರು ಸಿನಿಮಾಗಳಿಗಿಂತ ವಿವಾದಗಳಿಂದ ಅಥವಾ ವೈಯಕ್ತಿಕ ವಿಚಾರಗಳಿಂದಲೇ ಸದಾ ಸುದ್ದಿಯಲ್ಲಿ ಇರ್ತಾರೆ. ಕೆಲವರು ಪ್ರೀತಿ, ಪ್ರೇಮ, ಮದುವೆ (Marriage), ವಿಚ್ಛೇದನ ಮೂಲಕವೇ ಸುದ್ದಿಯಾಗುತ್ತಿದ್ದಾರೆ. ಸತತ ಸಿನಿಮಾಗಳನ್ನು ಮಾಡುತ್ತಾ ಸ್ಟಾರ್ ಹೀರೋಯಿನ್ ಆಗಿ ಮುನ್ನುಗುತ್ತಿರುವ ಹಲವು ನಟಿಯರು ಈಗ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಮದುವೆ ಮಾಡಿಕೊಂಡು ಹ್ಯಾಪಿ ಲೈಫ್ ಲೀಡ್ ಮಾಡ್ತಿದ್ದಾರೆ. ಆದರೆ ಎಲ್ಲವೂ ಚೆನ್ನಾಗಿದೆ ಅನ್ನೋ ಸಮಯದಲ್ಲೇ ವಿಚ್ಛೇದನ (Celina Jaitly) ನೀಡಿ ಶಾಕ್ ನೀಡುತ್ತಾರೆ. ಇಂತಹವರ ಸಾಲಿನಲ್ಲಿ ಮೇಲೆ ಕಾಣಿಸುತ್ತಿರುವ ನಟಿಯೂ ಒಬ್ಬರು.

ಸಿನಿಮಾ ಮೂಲಕ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿದ್ದ ನಟಿ, ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿ ಇರುವಾಗಲೇ ಮದುವೆಯಾಗಿದ್ದರು. ಆದರೆ ಆಕೆಯ ಜೀವನದಲ್ಲಿ ಊಹೆಗೂ ಮೀರಿದ್ದ ಶಾಕ್ ಎದುರಾಗಿತ್ತು. ಮದುವೆ ವಾರ್ಷಿಕೋತ್ಸವದ ದಿನವೇ ಪತಿ ವಿಚ್ಛೇದನ ನೋಟಿಸ್ ಕೊಟ್ಟಿದ್ದ, ಈ ನೋಟಿಸ್ಅನ್ನು ಅವರ ಮಕ್ಕಳೇ ಓದಿ ಹೇಳಿದ್ದರಂತೆ. ಸರ್ಪ್ರೈಸ್ ಅಂತ ಪತಿ ವಿಚ್ಛೇದನದ ನೋಟಿಸ್ ಕಳುಹಿಸಿದ್ದು ಕಂಡು ಆಕೆ ಕಣ್ಣೀರಿಟ್ಟಿದ್ದರಂತೆ.

ಬಾಲಿವುಡ್ ಹೆಚ್ಚು ಸಿನಿಮಾಗಳನ್ನು ಮಾಡಿರುವ ನಟಿ ಸೆಲಿನಾ ಜೈಟ್ಲಿ, ಟಾಲಿವುಡ್ ನಲ್ಲಿ ಒಂದು ಸಿನಿಮಾ ಮಾಡಿ ದಕ್ಷಿಣ ಭಾರತದ ಸಿನಿಮಾ ಪ್ರೇಮಿಗಳಿಗೆ ಪರಿಚಯವಾಗಿದ್ದರು. ಆದರೆ ಹೆಚ್ಚು ಹೆಚ್ಚು ಹಿಂದಿ ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ಹೀರೋಯಿನ್ ಪಟ್ಟವನ್ನು ಪಡೆದುಕೊಂಡಿದ್ದರು. 2011ರಲ್ಲಿ ಉದ್ಯಮಿ ಪೀಟರ್ ಹಗ್ ಅವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಈಗ ಈ ಇಬ್ಬರ ವಿಚ್ಛೇದನ ಸುದ್ದಿ ಸಿನಿಮಾ ರಂಗದಲ್ಲಿ ಸಖತ್ ಸೌಂಡ್ ಮಾಡ್ತಿದೆ.

ವಿಚ್ಛೇದನ ಬಗ್ಗೆ ಸ್ಪಷ್ಟನೆ ನೀಡಿ ಮಾತನಾಡಿರುವ ಸೆಲಿನಾ ಜೈಟ್ಲಿ, ನನ್ನ ಪತಿ ನಮ್ಮ 15ನೇ ಮದುವೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸರ್ಪ್ರೈಸ್ ಅಂತ ಹೇಳಿದ್ದರು. ಇದರಂತೆ ನನ್ನನ್ನು ಕಾರಿನಲ್ಲಿ ಪೋಸ್ಟ್ ಆಫೀಸ್​​ಗೆ ಕರೆದುಕೊಂಡು ಹೋಗಿ ಕೆಲವು ಪೇಪರ್ ಗಳನ್ನು ಕೈಗೆ ಇಟ್ಟಿದ್ದರು. ಅದರಲ್ಲಿ ಜರ್ಮನ್ ಭಾಷೆಯಲ್ಲಿ ಬರೆದಿತ್ತು. ಅದರಲ್ಲಿ ಏನಿದೆ ಅಂತ ನನಗೆ ಅರ್ಥ ಆಗಿಲ್ಲ, ಏಕೆಂದರೆ ನನಗೆ ಜರ್ಮನಿ ಭಾಷೆ ಬರುತ್ತಿರಲಿಲ್ಲ. ಇದರಲ್ಲಿ ಏನಿದೆ ಅಂತ ಕೇಳಿದರೆ ಉತ್ತರ ನೀಡದೆ ಆತ ನನ್ನನ್ನು ನಡುರಸ್ತೆಯಲ್ಲಿ ಬಿಟ್ಟು ಹೋಗಿದ್ದ ಎಂದು ಕರಾಳ ಸಮಯವನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: Tirumala: ಕಲಿಯುಗದ ವೈಕುಂಠದಲ್ಲಿ ಅದ್ಭುತ; 116 ವರ್ಷದ ವೃದ್ಧೆಯ ಭಕ್ತಿಗೆ ಕರಗಿದ TTD ಅಧ್ಯಕ್ಷ, ವಿಶೇಷ ದರ್ಶನ ಭಾಗ್ಯ!

ಸಂದರ್ಶನವೊಂದರಲ್ಲಿ ಮಾತನಾಡಿರುವ ಆಕೆ, ಪತಿ ನಡುರಸ್ತೆಯಲ್ಲಿ ಕೈಬಿಟ್ಟು ಹೋಗುತ್ತಿದ್ದಂತೆ ಅಲ್ಲಿಂದ ಮನೆಗೆ ತೆರಳಿ ತಮ್ಮ ಮಕ್ಕಳಿಗೆ ಆ ಪೇಪರ್ ಗಳನ್ನು ನೀಡಿ ಓದಲು ಹೇಳಿದ್ದರಂತೆ. ನನ್ನ ಪತಿ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದನ್ನು ನನ್ನ ಮಕ್ಕಳ ಮೂಲಕವೇ ಕೇಳಬೇಕಾಗಿ ಬಂತು. ಆದರೆ ಮೊದಲು ಇದನ್ನು ಜೋಕ್ ಅಂತ ತಿಳಿದಿದ್ದೆ. ಆದರೆ ಬಳಿಕವೇ ನನಗೆ ಇದು ನಿಜ ಎಂದು ಅರಿವಾಗಿತ್ತು ಎಂದು ನಟಿ ಕಣ್ಣೀರಿಟ್ಟಿದ್ದಾರೆ. ನನ್ನನ್ನು ಮುಂಬೈಗೆ ಕಳುಹಿಸೋದಿಲ್ಲ. ಮಕ್ಕಳು ಬೇಕು ಎಂದರೆ, ಆಸ್ಟ್ರಿಯಾದಲ್ಲೇ ಒಂದು ಉದ್ಯೋಗ ಹುಡುಕಿಕೊಂಡು ಸೇರಲು ಕಂಡಿಷನ್ ಹಾಕಿದ್ದರು. ಇದರೊಂದಿಗೆ ಸೆಲಿನಾ ಜೈಟ್ಲಿ, ತಮ್ಮ ಪತಿಯ ಮನೆಯವರ ವಿರುದ್ಧ ಕೌಟುಂಬಿಕ ಹಿಂಸೆ, ಮಾನಸಿಕ ಕಿರುಕುಳ ಕೇಸ್​ ಹಾಕಿ ಜೀವನಾಂಶಕ್ಕಾಗಿ ಕೇಸ್ ದಾಖಲಿಸಿ ಡಿಮ್ಯಾಂಡ್ ಮಾಡಿದ್ದರು. ಈಗ ಈ ವಿವಾದ ಭುಗಿಲೆದ್ದಿರುವುದರಿಂದ ಸ್ಟಾರ್ ನಾಯಕಿಯ ಬದುಕು ಅಸ್ತವ್ಯಸ್ತವಾಗಿದೆ ಎಂದು ಟೈಮ್​ಸ್ ಆಫ್ ಇಂಡಿಯಾ ವರದಿ ಮಾಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed