IND A vs SL A: 10 ವಿಕೆಟ್ ಪಡೆದ ಗುರ್ನೂರ್ ಬ್ರಾರ್! ಶ್ರೀಲಂಕಾ-ಎ ವಿರುದ್ಧ ಭಾರತ-ಎ ತಂಡಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ | ಕ್ರೀಡಾ ಸುದ್ದಿ | ACTPnews

ಗುರ್ನೂರ್ ಬ್ರಾರ್


Last Updated:

ಅಫ್ಘಾನ್​ ಹಾಗೂ ಶ್ರೀಲಂಕಾ ತಂಡಗಳ ನಡುವೆ ನಡೆದಿದ್ದ ತ್ರಿಕೋನ ಸರಣಿ ಗೆದ್ದಿದ್ದ ಭಾರತ ಎ ತಂಡ, ಇದೀಗ ಶ್ರೀಲಂಕಾ ಎ ವಿರುದ್ಧದ ಟೆಸ್ಟ್ ಸರಣಿಯನ್ನ 1-0ಯಲ್ಲಿ ವಶಪಡಿಸಿಕೊಂಡಿದೆ.

 ಗುರ್ನೂರ್ ಬ್ರಾರ್
ಗುರ್ನೂರ್ ಬ್ರಾರ್

ಗ್ಯಾಲೆಯಲ್ಲಿ ನಡೆದ ಎರಡನೇ ಅನಧಿಕೃತ ಟೆಸ್ಟ್‌ನಲ್ಲಿ ಶ್ರೀಲಂಕಾ-ಎ (IND A vs SL A) ವಿರುದ್ಧ ಟೀಮ್ ಇಂಡಿಯಾ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ಎರಡು ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿತು. ಮೊದಲ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿತ್ತು. ಅಫ್ಘಾನ್​ ಹಾಗೂ ಶ್ರೀಲಂಕಾ ತಂಡಗಳ ನಡುವೆ ನಡೆದಿದ್ದ ತ್ರಿಕೋನ ಸರಣಿಯಲ್ಲೂ ಟೀಮ್ ಇಂಡಿಯಾ ಜಯ ಸಾಧಿಸಿತ್ತು. ಏಕದಿನ ಸರಣಿಗೆ ತಿಲಕ್ ವರ್ಮಾ, ಟೆಸ್ಟ್ ತಂಡವನ್ನ ಧ್ರುವ್ ಜುರೆಲ್ ಮುನ್ನಡೆಸಿದ್ದರು.

ಶ್ರೀಲಂಕಾ ಮೊದಲ ಇನ್ನಿಂಗ್ಸ್​​​ನಲ್ಲಿ 366 ರನ್‌ಗಳಿಗೆ ಆಲೌಟ್

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ-ಎ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 366 ರನ್‌ಗಳಿಗೆ ಆಲೌಟ್ ಆಗಿತ್ತು. ನಾಯಕ ಸಹನ್ ಅರಚ್ಚಿಗೆ ಶತಕ (127) ಗಳಿಸಿದರೆ, ನುವಾನಿಡು ಫರ್ನಾಂಡೊ (44) ಮತ್ತು ಅಂಜಲಾ ಬಂಡಾರ (42) ಕೂಡ ಉತ್ತಮ ಪ್ರದರ್ಶನ ನೀಡಿದ್ದರು. ಭಾರತೀಯ ಬೌಲರ್‌ಗಳಲ್ಲಿ, ಗುರ್ನೂರ್ ಬ್ರಾರ್ ಮತ್ತು ಸರಾಂಶ್ ಜೈನ್ ತಲಾ ನಾಲ್ಕು ವಿಕೆಟ್‌ಗಳನ್ನು ಪಡೆಯುವ ಮೂಲಕ ಪ್ರಭಾವಿ ಪ್ರದರ್ಶನ ತೋರಿದರೆ, ಯಶ್ ಠಾಕೂರ್ ಎರಡು ವಿಕೆಟ್ಸ್​ ಮಾಡಿದರು.

ಮತ್ತೊಂದು ಶತಕ ಸಿಡಿಸಿದ ಸುದರ್ಶನ್

ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ‘ಎ’ ತಂಡ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿತು. ಆರಂಭಿಕ ಆಟಗಾರ ಸಾಯಿ ಸುದರ್ಶನ್ ಭರ್ಜರಿ 168 (267 ಎಸೆತ, 22 ಬೌಂಡರಿಗಳು) ರನ್ ಚಚ್ಚಿದರೆ, ದೇವದತ್ ಪಡಿಕ್ಕಲ್ 94 ರನ್ ಬಾರಿಸಿ ಶತಕದ ಸನಿಹ ಬಂದು ಔಟಾದರು. ಕೆಳ ಕ್ರಮಾಂಕದಲ್ಲಿ ಸಾರಂಶ್ ಜೈನ್ ಔಟಾಗದೆ 70 ರನ್ ಮತ್ತು ನಾಯಕ ಧ್ರುವ್ ಜುರೆಲ್ 53 ರನ್ ಕಾಣಿಕೆ ನೀಡಿದರು. ಭಾರತ ತನ್ನ ಮೊದಲ ಇನ್ನಿಂಗ್ಸ್ ಅನ್ನು 543/9 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡು, 177 ರನ್‌ಗಳ ಭಾರಿ ಮುನ್ನಡೆ ಪಡೆಯಿತು.

ಶ್ರೀಲಂಕಾ ಪರ, ಬೌಲರ್‌ಗಳಾದ ಕೇಶರ ನುವಂತ ಮತ್ತು ಸುಧೀರ ತಿಲಕರತ್ನೆ ಕ್ರಮವಾಗಿ ನಾಲ್ಕು ಮತ್ತು ಮೂರು ವಿಕೆಟ್‌ಗಳನ್ನು ಪಡೆದರು.

ಗುರ್ನೂರ್ ದಾಳಿಗೆ ತತ್ತರಿಸಿದ ಲಂಕಾ

177 ರನ್‌ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾ ‘ಎ’ ತಂಡ, ಗುರ್ನೂರ್ ಬ್ರಾರ್ ಅವರ ಆಕ್ರಮಣಕಾರಿ ವೇಗದ ದಾಳಿಗೆ ತತ್ತರಿಸಿತು. ಭಾರತದ ದಾಳಿಯ ಮುಂದೆ ಲಂಕಾ ಪರ ಆಶೇನ್ ಬಂಡಾರ (87 ರನ್) ಒಬ್ಬ ಮಾತ್ರ ಪ್ರತಿಹೋರಾಟ ನಡೆಸಿದರು. ಬ್ರಾರ್ 68 ರನ್‌ಗಳಿಗೆ 6 ವಿಕೆಟ್ ಪಡೆದು ಲಂಕಾ ತಂಡವನ್ನು 209 ರನ್‌ಗಳಿಗೆ ಆಲೌಟ್ ಮಾಡಲು ನಿರ್ಣಾಯಕ ಪಾತ್ರವಾದರು.

ಸುಲಭ ಜಯ ಸಾಧಿಸಿದ ಭಾರತ

ಶ್ರೀಲಂಕಾ ನೀಡಿದ ಕೇವಲ 33 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತ ‘ಎ’ ತಂಡ, ಯಾವುದೇ ವಿಕೆಟ್ ಕಳೆದುಕೊಳ್ಳದೆ 6.2 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು. ಸಾಯಿ ಸುದರ್ಶನ್ 25 ರನ್ ಹಾಗೂ ಅಮನ್ ಮೊಖಾಡೆ 11 ರನ್ ಗಳಿಸಿ ಪಂದ್ಯ ಮುಗಿಸಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed