Last Updated:
ಕೋಮಲ್ ಕುಮಾರ್ ಅವರಿಗೆ ಜುಲೈ-4 ತುಂಬಾನೆ ವಿಶೇಷ ದಿನವಾಗಿದೆ. ಈ ದಿನವೆ ಇವರ ಎರಡು ಚಿತ್ರದ ಹೊಸ ಮಾಹಿತಿ ಹೊರ ಬಂದಿದೆ. ಅದರ ವಿವರ ಇಲ್ಲಿದೆ ಓದಿ.
ಕೋಮಲ್ (Komal) ಎಷ್ಟು ಯಂಗ್ ಆಗಿದ್ದಾರೆ ನೋಡಿ. ಇವರಿಗೆ 52 ಮುಗಿದು 53 ವರ್ಷ ಆಗಿದೆ. ಜುಲೈ-4 ರಂದು ಇವರು ತಮ್ಮ 53 ನೇ ಜನ್ಮ ದಿನ ಆಚರಿಸಿಕೊಂಡಿದ್ದಾರೆ. ಇವರಿಗೆ ಈ ವರ್ಷದ ಜನ್ಮ ದಿನಕ್ಕೆ (Birthday) ಎರಡು ಚಿತ್ರ ತಂಡ ವಿಶೇಷ ವಾಗಿಯೇ ವಿಶ್ ಮಾಡಿವೆ. ಒಂದು ಚಿತ್ರದ ಸ್ಪೆಷಲ್ ಪೋಸ್ಟರ್ (Special Poster) ಬಂದಿದೆ. ಮತ್ತೊಂದು ಚಿತ್ರದ ನಿರ್ದೇಶಕ (Director) ಮೀಟ್ ಆಗಿ ವಿಶ್ ಮಾಡಿದ್ದಾರೆ. ಈ ಎರಡೂ ಚಿತ್ರಗಳು ಯಾವವು? ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ.
ರೋಲೆಕ್ಸ್ ಚಿತ್ರ ಪೋಸ್ಟರ್ ರಿಲೀಸ್ ಆಗಿದೆ. ಹಾಸ್ಯಭರತಿ ಈ ಚಿತ್ರದಲ್ಲಿ ಕೋಮಲ್ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ. ಕೌಟುಂಬಿಕ ಕತೆಯನ್ನು ಈ ಚಿತ್ರ ಹೊಂದಿದೆ.
ಕೋಮಲ್ ಚಿತ್ರಗಳು
ಶ್ರೀನಿವಾಸ್ ಮಂಡ್ಯ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಇವರು ಕೋಮಲ್ ಬರ್ತ್ ಡೇಗೆ ಒಂದು ಐಡಿಯಾ ಮಾಡಿದ್ದಾರೆ. ಸಿನಿಮಾದ ಒಂದು ಪೋಸ್ಟರ್ ಮಾಡಿದ್ದಾರೆ. ಇದರೊಟ್ಟಿಗೆ ಗ್ಲಿಂಪ್ಸ್ ಮಾಡಿಸಿದ್ದಾರೆ. ಇದನ್ನ ಜುಲೈ-4 ರಂದು ರಿಲೀಸ್ ಮಾಡಿದ್ದಾರೆ.
ರೋಲೆಕ್ಸ್ ಚಿತ್ರ ಆದಷ್ಟು ಬೇಗ ರಿಲೀಸ್ ಆಗುತ್ತಿದೆ. ಎಲ್ಲ ತಯಾರಿನೂ ನಡೀತಿದೆ. ಸಿನಿಮಾದಲ್ಲಿ ಹಾಸ್ಯಕ್ಕೆ ಏನು ಕೊರತೆ ಇರೋದಿಲ್ಲ. ಇದು ಕಂಪ್ಲೀಟ್ ಕಾಮಿಡಿ ಸಿನಿಮಾನೇ ಆಗಿದೆ.
ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ಕೊಟ್ಟಿದ್ದಾರೆ. ರಾಕೇಶ್ ತಿಲಕ್ ಕ್ಯಾಮರಾವರ್ಕ್ ಮಾಡಿದ್ದಾರೆ. ಈ ಚಿತ್ರ ತನ್ನ ಟೈಟಲ್ ನಿಂದಲೇ ಹೆಚ್ಚು ಗಮನ ಸೆಳೆದಿದೆ. ಕೋಮಲ್ ಚಿತ್ರ ಅಂದ್ಮೇಲೆ ಅಲ್ಲಿ ಹಾಸ್ಯಕ್ಕೆ ಕೊರತೆ ಇರೋದಿಲ್ಲ ಅಂತ ಹೇಳಬಹುದು. ಇಲ್ಲೂ ಅದನ್ನ ಜಾಸ್ತಿನೇ ನಿರೀಕ್ಷೆ ಕೂಡ ಮಾಡಬಹುದು.
ಕೋಮಲ್ ಕುಮಾರ್ ಅವರು ರೋಲೆಕ್ಸ್ ಅಲ್ಲದೆ ಇನ್ನೂ ಒಂದು ಚಿತ್ರ ಒಪ್ಪಿದ್ದಾರೆ. ಈ ಚಿತ್ರಕ್ಕೆ ತೆಲಾನಿ ಡಿಎ ಎಲ್ಎಲ್ಬಿ ಅಂತಲೇ ಹೆಸರಿಟ್ಟಿದ್ದಾರೆ.
ಇದರಲ್ಲಿ ಲಾಯರ್ ಪಾತ್ರವನ್ನೆ ಕೋಮಲ್ ಮಾಡಿದ್ದಾರೆ. ಇದರಲ್ಲೂ ಹಾಸ್ಯಕ್ಕೆ ಕೊರತೆ ಇರೋದಿಲ್ಲ. ಆ ರೀತಿನೇ ಕೋಮಲ್ ಅವರ ಕ್ಯಾರೆಕ್ಟರ್ ಡಿಸೈನ್ ಆಗಿದೆ.
ರೋಲೆಕ್ಸ್ ಪೋಸ್ಟರ್ ರಿಲೀಸ್
ತೆಲಾನಿ ಚಿತ್ರದ ಡೈರೆಕ್ಟರ್ ಸಿದ್ವಿನ್ ದ್ರುವ್ ಜುಲೈ-4 ರಂದು ಕೋಮಲ್ ಅವರ ಮನೆಗೆ ಹೋಗಿದ್ದಾರೆ. ಹೂ ಗುಚ್ಚ ಕೊಟ್ಟಿದ್ದಾರೆ. ಬರ್ತ್ ಡೇ ವಿಶ್ ಮಾಡಿದ್ದಾರೆ.
ಇಷ್ಟೆಲ್ಲ ಆದ್ಮೇಲೆ ಕೋಮಲ್ ಅವರ ಜನ್ಮ ದಿನಕ್ಕೇನೆ ಒಂದು ಕೇಕ್ ಕಟ್ ಮಾಡಿದ್ದಾರೆ. ಚಿಕ್ಕದಾಗಿಯೇ ಮನೆಯಲ್ಲಿ ಸೆಲೆಬ್ರೇಷನ್ ಕೂಡ ಮಾಡಿದ್ದಾರೆ. ಈ ಮೂಲಕ ತೆನಾಲಿ ತಂಡ ಕೋಮಲ್ ಅವರ ಹುಟ್ಟಹುಬ್ಬವನ್ನ ಆಚರಣೆ ಮಾಡಿದೆ.
ಕೋಮಲ್ ಕುಮಾರ್ ಅವರು 2025 ರಿಂದ 2026 ವರೆಗಿನ ಲೆಕ್ಕದಲ್ಲಿ ನಾಲ್ಕೈದು ಚಿತ್ರ ಒಪ್ಪಿದ್ದಾರೆ. ಇದರಲ್ಲಿ ಕೋಣ ಸಿನಿಮಾ ಬಂದು ಹೋಗಿದೆ. ತಮಿಳಿನ ರಾಜಪುತಿರನ್ ಚಿತ್ರ ರಿಲೀಸ್ ಆಗಿದೆ.
ರೋಲೆಕ್ಸ್ ಅಂತು ರಿಲೀಸ್ ಹಂತಕ್ಕೆ ಬಂದಿದೆ. ಆದಷ್ಟು ಬೇಗ ರಿಲೀಸ್ ಆಗುತ್ತದೆ ಅಂತ ಚಿತ್ರ ತಂಡವೇ ಹೇಳಿಕೊಂಡಿದೆ. ತೆನಾಲಿ ಡಿಎ ಎಲ್ಎಲ್ಬಿ ಚಿತ್ರದ ಒಂದು ಹಂತದ ಚಿತ್ರೀಕರಣ ಆಗಿದೆ. ಎರಡನೇ ಹಂತದ ಕೆಲಸ ಇನ್ನೇನು ಶುರು ಆಗುತ್ತದೆ.
ಕೋಮಲ್ ಅವರ ಸಂಗೀತ ಬಾರ್ ಆ್ಯಂಡ್ ರೆಸ್ಟೋರಂಟ್ ಚಿತ್ರ ಶೂಟಿಂಗ್ ಕಂಪ್ಲೀಟ್ ಆಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೀತಾ ಇದೆ. ಅಶೋಕವನ ಅನ್ನುವ ಚಿತ್ರದ ಶೂಟಿಂಗೇ ಕಂಪ್ಲೀಟ್ ಆಗಿದೆ ಅಂತ ಮಾಹಿತಿ ಸಿಗುತ್ತದೆ.
Bangalore [Bangalore],Bangalore,Karnataka
Jul 04, 2026 11:17 PM IST













