Last Updated:
ಪ್ರಿಯಾಂಕಾ ಉಪೇಂದ್ರ ಅವರು ತಮ್ಮ ಒಂದು ಫೋಟೋ ಹಂಚಿಕೊಂಡಿದ್ದಾರೆ. ಇದರಲ್ಲಿ ಪ್ರಿಯಾಂಕಾ ಉಪೇಂದ್ರ ತುಂಬಾನೆ ಯಂಗ್ ಆಗಿಯೇ ಕಾಣಿಸುತ್ತಾರೆ. ಈ ಫೋಟೋ ಈಗ ಶೇರ್ ಮಾಡಿಕೊಂಡಿರೋದು ಅಷ್ಟೆ ಕುತೂಹಲ ಮೂಡಿಸುತ್ತದೆ. ಇದರ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಪ್ರಿಯಾಂಕಾ ಉಪೇಂದ್ರ (Priyanka Upendra) ಆ ದಿನಗಳಿಗೆ ಜಾರಿದ್ದಾರೆ. ತಮ್ಮ ಹಳೆ ದಿನಗಳನ್ನ (Old Days) ಮೆಲುಕು ಹಾಕಿದ್ದಾರೆ. “Retro – inspired always” ಆ ದಿನಗಳು ಸದಾ ಸ್ಪೂರ್ತಿ ನೀಡುತ್ತವೆ ಅಂತ ಬರೆದುಕೊಂಡಿದ್ದಾರೆ. ಇದರ ಜೊತೆಗೆ ತಮ್ಮ ಒಂದು ಯಂಗ್ ಲುಕ್ (Young Look) ಫೋಟೋ ಹಂಚಿಕೊಂಡಿದ್ದಾರೆ. ಇದನ್ನ ಸ್ವತಃ ಇವರೇ ಹಂಚಿಕೊಂಡಿರೋದ್ರಿಂದಲೇ ವಿಶೇಷ ಅನಿಸುತ್ತದೆ. ತಮ್ಮ ಹಳೆ ಫೋಟೋ ನೋಡಿ ತಾವೇ ಖುಷಿಪಟ್ಟಿದ್ದಾರೆ. ವೀಕೆಂಡ್ ಬೇರೆ ಇದೆ. ಅದಕ್ಕೇನೆ ಫ್ರೀ ಟೈಮ್ ಅಲ್ಲಿ ಈ ಫೋಟೋ ಹುಡುಕಿ ಹಾಕಿದಂತೆ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಪ್ರಿಯಾಂಕಾ ಉಪೇಂದ್ರ ಹಳೆ ಫೋಟೋ ವೈರಲ್
(ಚಿತ್ರ ಕೃಪೆ: ಪ್ರಿಯಾಂಕಾ ಉಪೇಂದ್ರ ಇನ್ಸ್ಟಾಗ್ರಾಮ್)
ಬೆಳ್ಳಿ ತೆರೆ ಮೇಲೂ ಇವರು ಅಷ್ಟೆ ಚೆಂದ ಬಿಡಿ. H2O ಚಿತ್ರದಲ್ಲೂ ಹೂವೇ ಹೂವೇ ಹಾಡಿನಲ್ಲಿ ಇವರು ಅದೆಷ್ಟು ಚೆಂದ ಕಾಣ್ತಾರೆ ನೋಡಿ. ಆ ರೀತಿಯ ಪ್ರಿಯಾಂಕಾ ಅವರು ಈಗ ಕೊಂಚ ದಪ್ಪ ಆಗಿದ್ದಾರೆ. ಅದು ಬಿಟ್ಟರೆ, ಆ್ಯಕ್ಟೀವ್ ಆಗಿದ್ದಾರೆ. ವಿಭಿನ್ನ ಕಂಟೆಂಟ್ನ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ.
ಪ್ರಿಯಾಂಕಾ ಉಪೇಂದ್ರ ಅವರು ಈಗ ತಮ್ಮ ಹಳೆ ಫೋಟೋ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನ ತಮ್ಮ ಪೇಜ್ ಅಲ್ಲಿಯೇ ಇದನ್ನ ಹಂಚಿಕೊಂಡಿದ್ದಾರೆ.
ಇದರಲ್ಲಿ ಯಂಗ್ ಪ್ರಿಯಾಂಕಾ ಅವರನ್ನ ನೋಡಬಹುದು. ಈ ಒಂದು ಫೋಟೋವನ್ನ ಈಗ ಯಾಕೆ ಹಂಚಿಕೊಂಡ್ರು ಅನ್ನೋದನ್ನ ಬರೆದುಕೊಂಡಿಲ್ಲ. ಆದರೆ, “Retro – inspired always” ಅನ್ನುವ ಮಾತನ್ನ ಬರೆದುಕೊಡಿದ್ದಾರೆ.
ಈ ಒಂದು ಸಾಲಿನಲ್ಲಿ ಸಾಕಷ್ಟು ಅರ್ಥ ಇದೆ. ರೆಟ್ರೋ ಸದಾ ಸ್ಪೂರ್ತಿ ನೀಡುತ್ತದೆ ಅನ್ನೋದೇ ಈ ಸಾಲಿನ ಅರ್ಥ ಆಗಿದೆ. ಇದನ್ನ ಇನ್ನಷ್ಟು ವಿವರಿಸೋದಾದ್ರೆ, ಹಳೆಯದ್ದು ಯಾವಾಗಲೂ ಸ್ಪೂರ್ತಿ ನೀಡುತ್ತದೆ ಅನ್ನೋದೇ ಆಗಿದೆ.
ಪ್ರಿಯಾಂಕಾ ಉಪೇಂದ್ರ
(ಚಿತ್ರ ಕೃಪೆ: ಪ್ರಿಯಾಂಕಾ ಉಪೇಂದ್ರ ಇನ್ಸ್ಟಾಗ್ರಾಮ್)
ಪ್ರಿಯಾಂಕಾ ಅವರ ಹಳೆ ಫೋಟೋ ನೋಡಿದವರು ಮೆಚ್ಚಿಕೊಂಡಿದ್ದಾರೆ. ಕ್ಯೂಟ್ ಅಂತ ಹೇಳಿರೋದು ಇದೆ. ಈ ಫೋಟೋ ನೋಡಿದರೆ ಸಡನ್ ಆಗಿ ಗೊತ್ತೇ ಆಗೋದಿಲ್ಲ. ಪ್ರಿಯಾಂಕಾ ಅವರು ಆಗ ಹೀಗೆ ಇದ್ದರೇ ಅನ್ನುವ ಪ್ರಶ್ನೆನೂ ಹುಟ್ಟುತ್ತದೆ. ಆ ರೀತಿನೇ ಈ ಫೋಟೋ ಇದೆ.
ಪ್ರಿಯಾಂಕಾ ಅವರು ಸೆಪ್ಟೆಂಬರ್-21 ಚಿತ್ರದಲ್ಲಿ ಡಿಗ್ಲಾಮರ್ ರೋಲ್ ಮಾಡಿದ್ದರು. ಮರುವಿನ ಕಾಯಿಲೆ ಇರೋ ವ್ಯಕ್ತಿಯ ಕೇರ್ ಟೇಕರ್ ಪಾತ್ರ ಮಾಡಿದ್ದರು.
ಈ ಚಿತ್ರ ಕಾನ್ಸ್ ಚಿತ್ರೋತ್ಸವದಲ್ಲೂ ಪ್ರದರ್ಶನ ಕಂಡಿತ್ತು. ಮೆಚ್ಚುಗೆ ಕೂಡ ಪಡೆದುಕೊಂಡಿತ್ತು. ಆ ರೀತಿಯ ಪ್ರಿಯಾಂಕಾ ಉಪೇಂದ್ರ ಅವರ ಅಭಿನಯದ ಕಮರೊ-2 ಚಿತ್ರ ಕೂಡ ಬಂದು ಹೋಗಿದೆ.
ಹಾಗೆ ಪ್ರಿಯಾಂಕಾ ಅವರು ಸೋಷಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಬಗೆಗಿನ ವಿಡಿಯೋ ಹಾಗೂ ಫೋಟೋಗಳನ್ನ ಹಂಚಿಕೊಳ್ತಾನೇ ಇರ್ತಾರೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka













