Theft: ಶೂಟಿಂಗ್​ಗೆ ಬಂದು ದೇವರ ಮನೆಯ ಚಿನ್ನ ಎಗರಿಸಿದ, ನಟನ ಮನೆಯಲ್ಲಿ ಕಳ್ಳತನ | | ACTPnews

ಆರೊಪಿ ಅಭಿಷೇಕ್- ನಟ ಲಿಖಿತ್


Last Updated:

Actors: ನಟನ ಮನೆಯಲ್ಲಿ ಕಳ್ಳತನ ಮಾಡಿದ ಘಟನೆ ನಡೆದಿದೆ. ಶೂಟಿಂಗ್​ಗೆ ಅಂತ ಬಂದು ದೇವರ ಮನೆಯಲ್ಲಿದ್ದ ಚಿನ್ನದ ಸರ ಕಳ್ಳತನ ಮಾಡಲಾಗಿದೆ.

ಆರೊಪಿ ಅಭಿಷೇಕ್- ನಟ ಲಿಖಿತ್
ಆರೊಪಿ ಅಭಿಷೇಕ್- ನಟ ಲಿಖಿತ್

ಶಾರ್ಟ್ ಮೂವಿಯಲ್ಲಿ (Short Movie) ಆಕ್ಟ್ ಮಾಡ್ತೀನಿ ಅಂತ ಬಂದು ಕಳ್ಳತನ (Theft) ಮಾಡಿರುವ ಘಟನೆ ನಡೆದಿದೆ. ಸಿನಿಮಾ ನಟನ ಮನೆಯಲ್ಲಿ ಕಳ್ಳತನ ನಡೆದಿದ್ದು ನಟ ಲಿಖಿತ್ ರಾಜ್ ಮನೆಯಲ್ಲಿ ಕಳ್ಳತನವಾಗಿದೆ. ಲಿಖಿತ್ ರಾಜ್ ಫ್ಲಾಟ್ F01 ಹೆಸರಿನ ಶಾರ್ಟ್ ಮೂವಿ ನಿರ್ದೇಶನ ಮಾಡುತ್ತಿದ್ದರು.

ಗರುಡಪುರಾಣ, ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾ ಸೇರಿ ಹಲವು ಶಾರ್ಟ್ ಮೂವಿಗಳಲ್ಲಿ ಅಭಿನಯಿಸಿದ ನಟ ಲಿಖಿತ್ ರಾಜ್ ಅವರ ಬಳಿ ಅಭಿಷೇಕ್ ಎಂಬಾತ ಅವಕಾಶ ಕೇಳಿ ಬಂದಿದ್ದ ಎನ್ನಲಾಗಿದೆ.

ಅಭಿಷೇಕ್ ಫ್ಲಾಟ್ F01 ಶಾರ್ಟ್ ಮೂವೀಲಿ ಅವಕಾಶ ಪಡೆದಿದ್ದ. ಜೂನ್ 28 ರಿಂದ ಸಹಕಾರನಗರದ‌ ಲಿಖಿತ್ ರಾಜ್ ಫ್ಲಾಟ್ ನಲ್ಲಿ ಶೂಟಿಂಗ್ ನಡೆದಿತ್ತು. ಈ ವೇಳೆ ದೇವರ ಮನೆಯಲ್ಲಿದ್ದ ಚಿನ್ನದ ಸರ ಕಳವಾಗಿದೆ.

ನಟನ ತಾಯಿ ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶೂಟಿಂಗ್ ಗೆಂದು ಬಂದು ಚಿನ್ನದ ಸರ ಕದ್ದಿದ್ದ ಅಭಿಷೇಕ್ ಬಂಧನವಾಗಿದೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಅಭಿಷೇಕ್ ನಿಂದ ಒಂದೂವರೆ ಲಕ್ಷ ಮೌಲ್ಯದ ಚಿನ್ನದ ಸರ ವಶಕ್ಕೆ ಪಡೆಯಲಾಗಿದೆ.

ವರದಿ: ಮುನಿರಾಜು. ಕೆಜಿ ನ್ಯೂಸ್​18 ಕನ್ನಡ ಪ್ರತಿನಿಧಿ ಬೆಂಗಳೂರು



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed