Last Updated:
ಘೋಸ್ಟ್ ಡೈರೆಕ್ಟರ್ ಸ್ಪೆಷಲ್ ಪ್ಲಾನ್ ಮಾಡಿದ್ದಾರೆ. ಶಿವಣ್ಣನ ಜನ್ಮ ದಿನಕ್ಕೆ ಎ ಫಾರ್ ಆನಂದ್ ಚಿತ್ರದ ವಿಶೇಷ ಪ್ರೋಮೋ ಬಿಡ್ತಿದ್ದಾರೆ. ಈ ವಿಷಯವನ್ನ ಸ್ವತಃ ಶ್ರೀನಿ ಹೇಳಿಕೊಂಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕನ್ನಡದ ಘೋಸ್ಟ್ ಚಿತ್ರದ (Ghost Movie) ಡೈರೆಕ್ಟರ್ ಶ್ರೀನಿ (Director Srini) ಹೊಸ ನ್ಯೂಸ್ ಕೊಟ್ಟಿದ್ದಾರೆ. ಜುಲೈ-12 ರಂದು ಸ್ಪೆಷಲ್ ಪ್ರೋಮೋ (Special Promo) ರಿಲೀಸ್ ಮಾಡ್ತಿದ್ದಾರೆ. ಎ ಫಾರ್ ಆನಂದ್ ಚಿತ್ರದ ಪ್ರೋಮೋವನ್ನೆ ಶ್ರೀನಿ ರಿಲೀಸ್ ಮಾಡ್ತಿದ್ದಾರೆ ಅಂತ ಹೇಳಬಹುದು. ಯಾಕೆಂದ್ರೆ, ಘೋಸ್ಟ್ ಸಿನಿಮಾ ಆದ್ಮೇಲೆ ಶಿವಣ್ಣ (Shivanna) ಹಾಗೂ ಶ್ರೀನಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಜುಲೈ-12 ರಂದು ಶಿವಣ್ಣನ 64 ನೇ ಜನ್ಮ ದಿನ ಇದೆ. ಈ ಹಿನ್ನೆಲೆಯಲ್ಲಿ ಪ್ರೋಮೋ ರಿಲೀಸ್ ಮಾಡ್ತಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಜುಲೈ 12 ರಂದು ಸ್ಪೆಷಲ್ ಪ್ರೋಮೋ
(ಚಿತ್ರ ಕೃಪೆ: ಡೈರೆಕ್ಟರ್ ಶ್ರೀನಿ ಇನ್ಸ್ಟಾಗ್ರಾಮ್)
ಘೋಸ್ಟ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಶಿವಣ್ಣ ಮತ್ತು ಶ್ರೀನಿ ಈ ಚಿತ್ರದಲ್ಲಿ ಒಂದಾಗಿದ್ದಾರೆ. ಗೀತಾ ಪಿಕ್ಚರ್ಸ್ ಮೂಲಕವೇ ಶಿವಣ್ಣ ಈ ಚಿತ್ರ ನಿರ್ಮಿಸುತ್ತಿದ್ದಾರೆ.
ಶಿವರಾಜ್ ಕುಮಾರ್ ಅವರ ಜನ್ಮ ದಿನಕ್ಕೇನೆ ಈ ಒಂದು ಪ್ರೋಮೋ ರಿಲೀಸ್ ಆಗುತ್ತಿದೆ. ಈ ವಿಶೇಷ ಪ್ರೋಮೋದ ವಿಷಯವನ್ನ ಸ್ವತಃ ಶ್ರೀನಿ ಹೇಳಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ನ ತಮ್ಮ ಪೇಜ್ ಅಲ್ಲಿಯೇ ಈ ಮ್ಯಾಟರ್ ಬರೆದುಕೊಂಡಿದ್ದಾರೆ. ಶಿವರಾಜ್ ಕುಮಾರ್ ಜೊತೆಗಿನ ಒಂದೆರಡು ಫೋಟೋ ಕೂಡ ಶೇರ್ ಮಾಡಿಕೊಂಡಿದ್ದಾರೆ.
ಈ ಒಂದು ಪೋಸ್ಟ್ ಅಲ್ಲಿ ಹಂಚಿಕೊಂಡ ಫೋಟೋದಲ್ಲಿ ಶ್ರೀನಿ ಕೂಡ ಇದ್ದಾರೆ. ಶಿವಣ್ಣನ ಜೊತೆಗೆ ಏನೋ ಚರ್ಚೆ ಮಾಡುತ್ತಿದ್ದಾರೆ. ಆದರೆ, ಇಲ್ಲಿ ಶ್ರೀನಿ ಹೊಸ ರೀತಿಯ ಹೇರ್ ಸ್ಟೈಲ್ ಅಲ್ಲಿಯೇ ಕಾಣಿಸಿಕೊಂಡಿದ್ದಾರೆ.
ಕಾಂಪ್ಲಿಮೆಂಟ್ ಏನು
(ಚಿತ್ರ ಕೃಪೆ: ಡೈರೆಕ್ಟರ್ ಶ್ರೀನಿ ಇನ್ಸ್ಟಾಗ್ರಾಮ್)
ಇದನ್ನ ನೋಡಿದವರು ಜಕಾಸ್ ಹೇರ್ ಸ್ಟೈಲ್ ಮಚಾ ಅಂತಲೇ ಬರೆದಿದ್ದಾರೆ. ದಳವಾಯಿ ಚಿತ್ರ ಯಾವಾಗ ಅಂತಲೂ ಕೇಳಿದ್ದಾರೆ. ನಿಮ್ಮಿಬ್ಬರ ಜೋಡಿಯ ಚಿತ್ರವನ್ನ ನೋಡಲು ಕಾಯುತ್ತಿದ್ದೇವೆ ಅಂತಲೂ ಮತ್ಯಾರೋ ಬರೆದಿದ್ದಾರೆ. ಹೀಗೆ ಶ್ರೀನಿ ಹಾಕಿರೋ ಪೋಸ್ಟ್ ಎಲ್ಲರ ಗಮನ ಸೆಳೆಯತ್ತಿದೆ.
ಶಿವರಾಜ್ ಕುಮಾರ್ ತಮಿಳು ಚಿತ್ರಗಳಲ್ಲಿ ಜೈಲರ್-2 ಮಾಡಿದ್ದಾರೆ. ಅಬಿಶಾನ್ ಜೀವಿಂತ್ ಜೊತೆಗೆ ತಮಿಳು ಸಿನಿಮಾ ಮಾಡಿದ್ದಾರೆ. ಇದರಲ್ಲಿ ನಾಯಕ ಅಬಿಶಾನ್ ಜೀವಿಂತ್ ತಂದೆ ರೋಲ್ ಮಾಡುತ್ತಿದ್ದಾರೆ.
ಕನ್ನಡದಲ್ಲಿ 666 ಆಪರೇಷನ್ ಡ್ರೀಮ್ ಥಿಯೇಟರ್ ಮಾಡಿದ್ದಾರೆ. ಇದರಲ್ಲಿ ಬಾಂಡ್ ಪ್ರಕಾಶ್ ರೋಲ್ ಮಾಡಿದ್ದಾರೆ. ಹೇಮಂತ್ ರಾವ್ ಈ ಸಿನಿಮಾ ಡೈರೆಕ್ಷನ್ ಮಾಡುತ್ತಿದ್ದಾರೆ.
ಈಗಾಗಲೇ ಹೇಳಿದಂತೆ ಎ ಫಾರ್ ಆನಂದ್ ಒಪ್ಪಿದ್ದಾರೆ. ಪವನ್ ಒಡೆಯರ್ ಅವರ ಬೇಲ್ ಚಿತ್ರ ಮಾಡಿದ್ದಾರೆ. ಡ್ಯಾಡ್ ಚಿತ್ರ ಇತ್ತೀಚಿಗೆ ಮುಗಿಸಿದ್ದಾರೆ. ತೆಲುಗು ಗುಮ್ಮಡಿ ನರಸಯ್ಯ ಚಿತ್ರವನ್ನು ಮಾಡುತ್ತಿದ್ದಾರೆ. ಒಟ್ಟಾರೆ ಶಿವಣ್ಣ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡ್ತಾನೇ ಇದ್ದಾರೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka
Jul 03, 2026 11:24 PM IST













