Apple Phone: ‘ಜೈ ಶ್ರೀರಾಮ್ ಅಂತ ಹೇಳಲ್ಲ’! ಐಫೋನ್ ಸಿರಿ ವಿರುದ್ಧ ಹಿಂದೂ ಮುಖಂಡ ಕಿಡಿಕಿಡಿ | Apple Iphone siri not saying Jai Sri Ram Jai Mahakal what hindu lead | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಹಿಂದೂ ಮುಖಂಡ


Last Updated:

Apple Phone: ಜೈ ಶ್ರೀರಾಮ್ ಎಂದರೆ Apple ಫೋನ್ ರಿಯಾಕ್ಟ್ ಮಾಡಲ್ವಾ? ಸಿರಿ ಏನಂತ ಉತ್ತರ ಕೊಡ್ತಾಳೆ? ಹಿಂದೂ ಮುಖಂಡ ಗರಂ ಆಗಿದ್ದೇಕೆ?

ಹಿಂದೂ ಮುಖಂಡ
ಹಿಂದೂ ಮುಖಂಡ

ಮಧ್ಯಪ್ರದೇಶದ (Madhya Pradesh) ಉಜ್ಜಯಿನಿಯಲ್ಲಿ ಬಲಪಂಥೀಯ (Right Wing) ಕಾರ್ಯಕರ್ತರೊಬ್ಬರು ಆಪಲ್ ಕಂಪನಿಯನ್ನು (Apple Company) “ಹಿಂದೂ ವಿರೋಧಿ” (Anti Hindu) ಎಂದು ಆರೋಪಿಸಿದ್ದಾರೆ. ಅದರ ವರ್ಚುವಲ್ ಅಸಿಸ್ಟೆಂಟ್ ಸಿರಿ “ಅಸ್ಸಲಾಮುಅಲೈಕುಮ್” ಎಂದರೆ ಪ್ರತಿಕ್ರಿಯಿಸುತ್ತದೆ. ಆದರೆ ಬಳಕೆದಾರರು “ಜೈ ಶ್ರೀ ರಾಮ್” ಎಂದು ಹೇಳಿದಾಗ ಮೌನವಾಗಿರುತ್ತದೆ ಎಂದು ಆರೋಪಿಸಿದ್ದಾರೆ.

ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಆ ವ್ಯಕ್ತಿ, ಆಪಲ್‌ನ ಧ್ವನಿ ಸಿರಿ ಹಿಂದೂ ನಂಬಿಕೆಗಳನ್ನು ಅಗೌರವಿಸುತ್ತಿದೆ. ಲಕ್ಷಾಂತರ ಭಕ್ತರ ಭಾವನೆಗಳಿಗೆ ನೋವುಂಟು ಮಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ.

“ಐಫೋನ್ ಭಾರತದ ಸಂಸ್ಕೃತಿಗೆ ವಿರುದ್ಧವಾಗಿದೆ. ಹಿಂದೂ ಭಾವನೆಗಳಿಗೆ ನೋವುಂಟು ಮಾಡುತ್ತದೆ. ಏಕೆಂದರೆ ಸಿರಿ ‘ಅಸ್ಸಲಾಮುಅಲೈಕುಂ’ ಗೆ ಪ್ರತಿಕ್ರಿಯೆ ನೀಡುತ್ತದೆ. ಆದರೆ ‘ಜೈ ಶ್ರೀರಾಮ್’ ಬಗ್ಗೆ ಮೌನವಾಗಿರುತ್ತದೆ ಎಂದಿದ್ದಾರೆ.

ಉಜ್ಜಯಿನಿ ಮತ್ತು ಭಾರತದಾದ್ಯಂತ ಕೋಟ್ಯಂತರ ಹಿಂದೂಗಳು ಐಫೋನ್‌ಗಳನ್ನು ಬಳಸುತ್ತಾರೆ. ಆದರೆ ಇದು ನಮಗೆ ಆಗಿರುವ ಮೋಸ. ನಮ್ಮ ಡೇಟಾ ಆಪಲ್‌ನಲ್ಲಿದೆ. ಇದು ನಮ್ಮ ವಿರುದ್ಧದ ಪಿತೂರಿಯಾಗಿದೆ” ಎಂದು ಅವರು ಆರೋಪಿಸಿದ್ದಾರೆ.

ತನ್ನ ಹೇಳಿಕೆಯನ್ನು ಬೆಂಬಲಿಸಲು, ಅವರು ಸಿರಿಗೆ “ಜೈ ಶ್ರೀ ಮಹಾಕಾಲ್” ಮತ್ತು “ಜೈ ಶ್ರೀ ರಾಮ್” ಎಂಬ ಹೇಳುತ್ತಾರೆ. ಆದರೆ ಸಿರಿ ಇದಕ್ಕೆ ಪ್ರತಿಕಯಾಗಿ ಜೈ ಶ್ರೀರಾಮ್ ಹೇಳುವುದಿಲ್ಲ.

ಹಿಂದೂಗಳ ವಿರುದ್ಧ ಐಫೋನ್ ಪಿತೂರಿ

ಭಾರತದಲ್ಲಿ ಐಫೋನ್‌ಗಳು ಒಂದು ಪ್ರತಿಷ್ಠೆಯ ಸಂಕೇತವಾಗಿ ಮಾರ್ಪಟ್ಟಿವೆ. ಬೆಲೆ ಹೆಚ್ಚಿದ್ದರೂ ಅನೇಕ ಜನರು ಅವುಗಳನ್ನು ಕ್ರೆಡಿಟ್‌ನಲ್ಲಿ ಖರೀದಿಸುತ್ತಾರೆ ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾನೆ.

“ಜನರು ಸಾಲದ ಮೇಲೂ ಐಫೋನ್‌ಗಳನ್ನು ಖರೀದಿಸುತ್ತಾರೆ. ಏಕೆಂದರೆ ಅವುಗಳು ಸ್ಥಾನಮಾನದ ಸಂಕೇತವಾಗಿವೆ. ಆದರೂ ಕಂಪನಿಯು ನಮ್ಮ ಸಂಸ್ಕೃತಿಯನ್ನು ಗೌರವಿಸುತ್ತಿಲ್ಲ” ಎಂದು ಅವರು ಆರೋಪಿಸಿದರು.

ಆಪಲ್ ಆರೋಪಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಿರಿಯ ಪ್ರತಿಕ್ರಿಯೆಗಳಿಗೆ ಸಂಬಂಧಿಸಿದಂತೆ ವ್ಯಕ್ತಿಯು ಮಾಡಿದ ಆರೋಪಗಳು ನಿಜವೇ ಎನ್ನುವುದು ದೃಢಪಟ್ಟಿಲ್ಲ ಎಂದು ಎಬಿಪಿ ಲೈವ್ ವರದಿ ಮಾಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed