ಸೈನಕ-2 ಚಿತ್ರ ಈ ಭಾನುವಾರ ಜುಲೈ-5 ರಂದು ಸೆಟ್ಟೇರುತ್ತಿದೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟೆಂಡ್ ಅಲ್ಲಿಯೇ ಈ ಚಿತ್ರಕ್ಕೆ ಮುಹೂರ್ತ ಆಗುತ್ತಿದೆ.
ಧ್ಯಾನ್ ಯೋಗೀಶ್ವರ್
(ಚಿತ್ರ ಕೃಪೆ: ಸಿ.ಪಿ.ಯೋಗೀಶ್ವರ್ ಇನ್‌ಸ್ಟಾಗ್ರಾಮ್)
ಸೈನಿಕ-2 ಚಿತ್ರವನ್ನ ಈ ಪುನೀತ್ ರುದ್ರನಾಗ್ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಹಿಂದಿನ ಸೈನಕ ಚಿತ್ರವನ್ನ ಮಹೇಶ್ ಸುಖಧರೆ ಡೈರೆಕ್ಷನ್ ಮಾಡಿದ್ದರು.
ಸಿ.ಪಿ.ಯೋಗೀಶ್ವರ್ ಒಂದೇ ದಿನ ಎರಡು ಚಿತ್ರ ಶುರು ಮಾಡುತ್ತಿದ್ದಾರೆ. ಕರ್ಣಾಟಬಲಂ ಅಜೇಯಂ ಅನ್ನುವ ಹೆಸರನ್ನ ಈ ಚಿತ್ರಕ್ಕೆ ಇಟ್ಟಿದ್ದಾರೆ.
ಕನ್ನಡದ ಹಿರಿಯ ನಿರ್ದೇಶಕ ನಾಗಣ್ಣ ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲೂ ಧ್ಯಾನ್ ಯೋಗೀಶ್ವರ್ ನಾಯಕರಾಗುತ್ತಿದ್ದಾರೆ. ಸಿ.ಪಿ.ಯೋಗೀಶ್ವರ್ ಈ ಚಿತ್ರದಲ್ಲೂ ಇದ್ದಾರೆ. ಈ ಮೂಲಕ 25 ವರ್ಷಗಳ ಬಳಿಕ ಬಣ್ಣ ಹಚ್ಚುತ್ತಿದ್ದಾರೆ.
ಸಿ.ಪಿ.ಯೋಗೀಶ್ವರ್ ಅವರ ಸೈನಿಕ ಒಳ್ಳೆ ಚಿತ್ರವೆ ಆಗಿತ್ತು. ಉತ್ತಮ ಹಾಡುಗಳು ಈ ಚಿತ್ರದಲ್ಲಿದ್ದವು. ಕತೆ ಕೂಡ ಚೆನ್ನಾಗಿತ್ತು. ಮಹೇಶ್ ಸುಖಧರೆ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದರು.
ಸೈನಿಕ-2 ಸಿನಿಮಾ
(ಚಿತ್ರ ಕೃಪೆ: ಸಿ.ಪಿ.ಯೋಗೀಶ್ವರ್ ಇನ್‌ಸ್ಟಾಗ್ರಾಮ್)
ಕತೆಯ ವಿಚಾರಕ್ಕೆ ಬಂದ್ರೆ, ವೀರ ಯೋಧನ ಕತೆ ಇದರಲ್ಲಿತ್ತು. ಸುಬೇದಾರ ಸೂರ್ಯ ಅನ್ನುವ ಪಾತ್ರವನ್ನ ಸಿ.ಪಿ.ಯೋಗೀಶ್ವರ್ ಇದರಲ್ಲಿ ಮಾಡಿದ್ದರು. ಕಾಶ್ಮೀರ್ ಗಡಿಯಲ್ಲಿ ಉಗ್ರರನ್ನ ಮಟ್ಟಹಾಕಿ ಸುಬೇದಾರ ಸೂರ್ಯ ತನ್ನ ಊರಿಗೆ ಬರ್ತಾರೆ. ಬಾಲ್ಯದ ಗೆಳೆತಿ ಗೌರಿ ಜೊತೆಗೆ ನಿಶ್ಚಿತಾರ್ಥವೂ ಆಗುತ್ತದೆ.
ಆದರೆ, ಸೈನಿಕನ ಜೀವನದಲ್ಲಿ ಅಪಾಯವೇ ಜಾಸ್ತಿ ಅನ್ನೋದು ಗೌರಿ ತಂದೆಗೆ ತಿಳಿಯುತ್ತದೆ. ಆಗ ಈ ನಿಶ್ಚಿತಾರ್ಥವನ್ನ ಗೌರಿ ತಂದೆ ವಿರೋಧಿಸುತ್ತಾರೆ.
ಈ ಚಿತ್ರಕ್ಕೆ ದೇವ ಮ್ಯೂಸಿಕ್ ಮಾಡಿದ್ದರು. ಇವರ ಸಂಗೀತದಲ್ಲಿ ಮಳೆ ಬಿಲ್ಲೆ, ಓ ಚಿನ್ನ ಚಿನ್ನ, ಸೋಲ್ಜರ್ ಸೋಲ್ಜರ್, ಜೈ ಹಿಂದ್ ಜೈಹಿಂದ್ ಹಾಡುಗಳು ಮೂಡಿ ಬಂದಿದ್ದವು.
ಈ ಚಿತ್ರದಲ್ಲಿ ಆಶಿಶ್ ವಿದ್ಯಾರ್ಥಿ, ದೊಡ್ಡಣ್ಣ, ಟೆನ್ನಿಸ್ ಕೃಷ್ಣ ಅಭಿನಯಿಸಿದ್ದರು. ಸುಬೇದಾರ್ ಸೂರ್ಯ ತಾಯಿಯ ಪಾತ್ರದಲ್ಲಿ ಶ್ರೀವಿದ್ಯಾ ನಟಿಸಿದ್ದರು. ಈ ಚಿತ್ರದ ಮುಂದುವರೆದ ಭಾಗ ಸೈನಿಕ-2 ಚಿತ್ರ ಇದೀಗ ಸೆಟ್ಟೇರುತ್ತಿದೆ ಅಂತ ಹೇಳಬಹುದು.












