Renukaswamy Case: ‘ಬಾಸ್​​ನ ಜೈಲಲ್ಲಿ ನೋಡೋಕಾಗ್ತಿಲ್ಲ’, ಸಾಕ್ಷಿ ಬೆದರಿಕೆ, ಪೊಲೀಸ್ ವಿಚಾರಣೆ ವೇಳೆ ದರ್ಶನ್ ಫ್ಯಾನ್ಸ್ ಹೇಳಿದ್ದೇನು? | | ACTPnews

ದರ್ಶನ್-ರೇಣುಕಾಸ್ವಾಮಿ


Last Updated:

Renukaswamy Case: ಅರೆಸ್ಟ್ ಆಗಿರೋ ದರ್ಶನ್ ಫ್ಯಾನ್ಸ್ ಹೇಳಿದ್ದೇನು? ಅಭಿಮಾನಿಗಳ ಮಾತೇ ಮುಳುವಾಗುತ್ತಾ? ಸಾಕ್ಷಿ ಬೆದರಿಕೆ ಹಾಕೋಕೆ ಹೇಳಿದ್ಯಾರು?

ದರ್ಶನ್-ರೇಣುಕಾಸ್ವಾಮಿ
ದರ್ಶನ್-ರೇಣುಕಾಸ್ವಾಮಿ

ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ ವಿಚಾರಣೆ ತೀವ್ರ ಗತಿಯಲ್ಲಿ ಸಾಗುತ್ತಿದೆ. ಕೊಲೆ ಆರೋಪಿಗಳಾದ ಪವಿತ್ರಾ ಗೌಡ (Pavithra Gowda), ದರ್ಶನ್ (Darshan) ಸೇರಿ ಇತರ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಸಾಕ್ಷಿಗಳಿಗೆ ಬೆದರಿಕೆ ಹಾಕಿರೋ ಪ್ರಕರಣ ಇತ್ತೀಚೆಗೆ ಸುದ್ದಿಯಾಗಿತ್ತು. ಇದೀಗ ಮೂವರು ಆರೋಪಿಗಳ ತೀವ್ರ ವಿಚಾರಣೆ ನಡೆದಿದೆ.

ಕಾಮಾಕ್ಷಿಪಾಳ್ಯ ಪೊಲೀಸರಿಂದ ಆರೋಪಿಗಳ ವಿಚಾರಣೆ ನಡೆದಿದ್ದು ವೇಣು, ಸುಹಾಸ್ ಹಾಗೂ ಪುನೀತ್ ವಿಚಾರಣೆ ನಡೆಸಲಾಗಿದೆ. ಸಾಕ್ಷ್ಯ ಹೇಳದಂತೆ ಸಾಕ್ಷಿ ಪುನೀತ್​ ಅವರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಬೆದರಿಕೆ ಹಿಂದೆ ಯಾರಾದರೂ ಇದ್ದಾರ ಅಂತ ವಿಚಾರಣೆ ನಡೆಸಲಾಗಿದ್ದು ಬೆದರಿಕೆ ಹಾಕುವಂತೆ ಯಾರಾದರೂ ಹೇಳಿದ್ದರಾ ಎಂದು ತನಿಖೆ ಮಾಡಲಾಗುತ್ತಿದೆ. ಹಣದ ಆಮೀಷಕ್ಕೆ ಒಳಗಾಗಿ ಹೀಗೆ ಮಾಡಿದ್ರಾ ಅಂತ ವಿಚಾರಣೆ ನಡೆಸಲಾಗಿದೆ.

ಬಾಸ್ ಜೈಲಲ್ಲಿರೋದು ನೋಡೋಕಾಗ್ತಿಲ್ಲ!

ತಡರಾತ್ರಿವರೆಗೂ ಮೂವರು ಆರೋಪಿಗಳ ವಿಚಾರಣೆ ನಡೆಸಿದ್ದು ವಿಚಾರಣೆ ವೇಳೆ ಬಾಸ್ ಮೇಲಿನ ಅಭಿಮಾನಕ್ಕೆ ಮಾಡಿದೆವು ಎಂದು ಆರೋಪಿಗಳು ಹೇಳಿದ್ದಾರೆ. ಬಾಸ್ ಹೀಗೆ ಜೈಲಲ್ಲಿ ಇರೋದು ನೋಡೋಕೆ ಆಗ್ತಿಲ್ಲ. ಹೀಗಾಗಿ ಕಾಲ್ ಮಾಡಿರೋದಾಗಿ ಆರೋಪಿಗಳು ಹೇಳಿಕೆ ಕೊಟ್ಟಿದ್ದಾರೆ.

ಮೂವರ ಮೊಬೈಲ್ ವಶಕ್ಕೆ

ಮೂವರು ಆರೋಪಿಗಳ ಮೊಬೈಲ್ ಗಳು ವಶಕ್ಕೆ ಪಡೆದ ಪೊಲೀಸರು ಮೂವರು ಡಿ ಕಂಪನಿ ಸದಸ್ಯರು ಅನ್ನೋದು ಬಯಲಾಗಿದೆ. ಸಾಕ್ಷಿಯ ನಂಬರ್ ಬೇರೆ ಯಾವುದಾದರೂ ಗ್ರೂಪ್ ಗೆ ಹಾಕಿದ್ದಾರ..? ಎಂದು ಕೂಡಾ ತನಿಖೆ ಮಾಡಲಾಗಿದೆ.

ಸಾಕ್ಷಿಯ ಬೆದರಿಕೆ ಬಗ್ಗೆ ಯಾವುದಾದರೂ ಗ್ರೂಪಲ್ಲಿ ಚರ್ಚೆ ಮಾಡಿದ್ದಾರಾ..? ಬೆದರಿಕೆ ಹಾಕುವಂತೆ ಯಾರಾದ್ರೂ ಸೂಚಿಸಿದ್ದಾರಾ..? ಹೀಗೆ ಹಲವು ಆಯಾಮದಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಸಾಕ್ಷಿಯ ಬೆದರಿಕೆ ಪ್ರಕರಣವನ್ನು ಸೀರಿಯಸ್ ಆಗಿ ತಗೊಂಡು ತನಿಖೆ ನಡೆಸಲಾಗುತ್ತಿದ್ದು, ಕಾಮಾಕ್ಷಿಪಾಳ್ಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸಾಕ್ಷ್ಯ ಹೇಳದಂತೆ ಬೆದರಿಕೆ

ಬಂಧಿತ ಮೂವರು ಡಿ ಕಂಪನಿ ಎಂಬ ದರ್ಶನ್ ಅಭಿಮಾವಿ ಸಂಘಟನೆಯ ಸದಸ್ಯರಾಗಿದ್ದು, ತುಮಕೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಯವರು ಎನ್ನಲಾಗಿದೆ. ಸದ್ಯ ರೇಣುಕಾಸ್ವಾಮಿ ಕೇಸ್ ತನಿಖೆ ನಡೆಯುತ್ತಿದ್ದು ಈ ಹೊತ್ತಿನಲ್ಲಿಯೇ ಸಾಕ್ಷಿಗಳನ್ನು ಹೆದರಿಸಿರುವ ಆರೋಪ ಕೇಳಿ ಬಂದಿದೆ.

ವರದಿ: ಮಂಜುನಾಥ್ ಎನ್. ನ್ಯೂಸ್​18 ಕನ್ನಡ ಪ್ರತಿನಿಧಿ, ಬೆಂಗಳೂರು



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed