Bengaluru Toll Hike: ಬೆಂಗಳೂರು ವಾಹನ ಸವಾರರಿಗೆ ಶಾಕ್; ನೈಸ್ ರೋಡ್, ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಟೋಲ್ ದರ ಭಾರೀ ಹೆಚ್ಚಳ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ವಾಹನ ಸವಾರರ ಜೇಬಿಗೆ ಕತ್ತರಿ! (ಸಾಂದರ್ಭಿಕ ಚಿತ್ರ)


Last Updated:

ಬೆಂಗಳೂರು ನೈಸ್ ರೋಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಟೋಲ್ ದರ ಹೆಚ್ಚಳದಿಂದ ಐಟಿ ಉದ್ಯೋಗಿಗಳು, ಲಾಜಿಸ್ಟಿಕ್ಸ್ ಮತ್ತು ಪ್ರಯಾಣಿಕರ ಖರ್ಚು, ತಿಂಗಳ ಪಾಸ್ ದರಗಳು ಏರಿಕೆ, ಪರ್ಯಾಯವಾಗಿ ಮೆಟ್ರೋ, ಕಾರ್ ಪೂಲಿಂಗ್ ಬಳಕೆ ಮಾಡಿಕೊಳ್ಳಬಹುದು.

ವಾಹನ ಸವಾರರ ಜೇಬಿಗೆ ಕತ್ತರಿ! (ಸಾಂದರ್ಭಿಕ ಚಿತ್ರ)
ವಾಹನ ಸವಾರರ ಜೇಬಿಗೆ ಕತ್ತರಿ! (ಸಾಂದರ್ಭಿಕ ಚಿತ್ರ)

ರಾಜಧಾನಿ ಬೆಂಗಳೂರಿನ ಪ್ರಮುಖ ಟೆಕ್ ಕಾರಿಡಾರ್‌ಗಳಲ್ಲಿ (Bengaluru) ಜುಲೈ 01 ಅಂದರೆ ಇಂದಿನಿಂದ ಪ್ರಯಾಣದ ಭಾರ ಹೆಚ್ಚಾಗಿದೆ. ನೈಸ್ ರಸ್ತೆಯೊಂದಿಗೆ (Nice Road) ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್ (Electronic City Flyover) ಮೇಲೆ ಟೋಲ್ ದರ ಹೆಚ್ಚಾಗಿದೆ. ಈ ನಿರ್ಧಾರದಿಂದ ಪ್ರತಿದಿನ ಎಲೆಕ್ಟ್ರಾನಿಕ್ ಸಿಟಿ, ಹೊಸೂರಿಗೆ ಪ್ರಯಾಣ ಮಾಡುವ ಸಾವಿರಾರು ಮಂದಿ ಐಟಿ ಉದ್ಯೋಗಿಗಳಿಗೆ ನೇರ ಪ್ರಭಾವ ಉಂಟಾಗಲಿದೆ. ವಾಹನ ಸವಾರರು ತಮ್ಮ ತಿಂಗಳ ಪಾಸ್, ದಿನದ ಪ್ರಯಾಣ ಖರ್ಚುಗಳಿಗೆ (Toll Hike) ಹೆಚ್ಚುವರಿ ಹಣ ಸಿದ್ಧ ಮಾಡಿಕೊಳ್ಳಬೇಕಿದೆ.

ದರ ಹೆಚ್ಚಳ ಕೇವಲ ಸ್ವತಃ ವಾಹನ ಬಳಕೆದಾರರಿಗೆ ಮಾತ್ರ ಅಲ್ಲ, ಕಮರ್ಷಿಯಲ್ ವಾಹನಗಳಿಗೂ ಅನ್ವಯ ಆಗುತ್ತದೆ. ನಗರದ ಪ್ರಮುಖ ವಾಸಸ್ಥಳ ಕೇಂದ್ರ, ಪ್ರಧಾನ ಐಟಿ ಪಾರ್ಕ್‌ಗಳನ್ನು ಹೊಂದಿರುವ ಈ ಭಾಗದಲ್ಲಿ ಎರಡು ಮಾರ್ಗಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಒನ್ ವೇ, ರಿಟರ್ನ್ ಜರ್ನಿಗಳೊಂದಿಗೆ ತಿಂಗಳ ಪಾಸ್ ದರಗಳು ಕೂಡ ಹೆಚ್ಚಾಗಿದ್ದು, ಈ ಮಾರ್ಗದಲ್ಲಿ ಪ್ರಯಾಣಿಸುವುದರಿಂದ ಸಮಯ ಉಳಿತಾಯ ಆದರೂ, ಹೆಚ್ಚಾದ ದರಗಳ ಕಾರಣದಿಂದ ಸಾಮಾನ್ಯ ಜನರ ಬಜೆಟ್ ಮೇಲೆ ಪ್ರಭಾವ ಉಂಟು ಮಾಡುತ್ತಿದೆ. ಇದರೊಂದಿಗೆ ಅದರಲ್ಲೂ ನಿತ್ಯ ಪ್ರಯಾಣಿಸುವ ಜನರಿಗೆ ಆರ್ಥಿಕ ಹೊರೆ ಹೆಚ್ಚಾಗಲಿದ್ದು, ಖರ್ಚು ಕಡಿಮೆ ಮಾಡುವ ಪರ್ಯಾಯ ಮಾರ್ಗಗಳ ಬಗ್ಗೆ ಯೋಚನೆ ಮಾಡುತ್ತಿದ್ದಾರೆ.

ನೈಸ್ ರೋಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಟೋಲ್ ಹೊಸ ದರಗಳು ಎಲ್ಲಾ ವಾಹನಗಳಿಗೂ ಅನ್ವಯ ಆಗಲಿದೆ. ಕಾರು, ಬೈಕ್, ಭಾರೀ ವಾಹನಗಳ ದರಗಳನ್ನು ಹೆಚ್ಚಿಸುತ್ತಾ ಹೋಗುತ್ತಿದ್ದಾರೆ. ಉದಾಹರಣೆಗೆ ಎಲೆಕ್ಟ್ರಾನಿಕ್ ಸಿಟಿಗೆ ಕಾರಿನಲ್ಲಿ ಹೋಗಲು ಈ ಹಿಂದಿನ ದರಕ್ಕಿಂತ ಹೆಚ್ಚು ಹಣ ಪಾವತಿ ಮಾಡಬೇಕಿದೆ. ರಸ್ತೆಗಳ ನಿರ್ವಹಣೆ ಖರ್ಚುಗಳು ಹೆಚ್ಚಾಗುತ್ತಿರುವ ಕಾರಣ ದರಗಳನ್ನು ಹೆಚ್ಚಳ ಮಾಡಲಾಗುತ್ತಿದೆ ಎಂದು ಸಮರ್ಥನೆ ಕೇಳಿ ಬರುತ್ತಿದೆ.

ವಾಹನಗಳು ನೈಸ್ ರಸ್ತೆಯಲ್ಲಿ ದರ ಹೆಚ್ಚಳ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ರಸ್ತೆಯಲ್ಲಿ ದರ ಹೆಚ್ಚಳ
ಕಾರು ಮತ್ತು ಜೀಪ್ 10 ರಿಂದ 20 ರೂಪಾಯಿ  5 ರೂಪಾಯಿಯಿಂದ 10 ರೂಪಾಯಿ
ದ್ವಿಚಕ್ರ ವಾಹನಗಳು 5 ರಿಂದ 8 ರೂಪಾಯಿ 2 ರಿಂದ 5 ರೂಪಾಯಿ
ಬಸ್ ಮತ್ತೆ ಟ್ರಕ್ 25 ರಿಂದ 50 ರೂಪಾಯಿ 15 ರಿಂದ 25 ರೂಪಾಯಿ
ಪ್ರಯಾಣಿಕರ ಮೇಲೆ ಪ್ರಭಾವ, ಪರ್ಯಾಯ ಮಾರ್ಗಗಳು ಇದೆಯಾ?

ದರ ಹೆಚ್ಚಳದಿಂದ ಸ್ಥಳೀಯ ಲಾಜಿಸ್ಟಿಕ್ಸ್, ಸಾರಿಗೆ ಉದ್ಯಮದ ಮೇಲೆ ಪ್ರಭಾವ ಹೆಚ್ಚಾಗುತ್ತದೆ. ಆಫೀಸ್ ಶಟಲ್ ಸೇವೆಗಳ ದರಗಳನ್ನು ಹೆಚ್ಚು ಮಾಡಲು ಟೆಕ್ ಕಂಪನಿಗಳು ಈಗಾಗಲೇ ಯೋಚನೆ ಮಾಡುತ್ತಿದ್ದು, ಈ ಆರ್ಥಿಕ ಭಾರವನ್ನು ಕಡಿಮೆ ಮಾಡಿಕೊಳ್ಳಲು ಪ್ರಯಾಣಿಕರು ಮೆಟ್ರೋ ಸೇವೆಯನ್ನು ಬಳಕೆ ಮಾಡಬಹುದು. ಕಾರುಗಳಲ್ಲಿ ಪ್ರಯಾಣ ಮಾಡುವವರು ‘ಕಾರ್ ಪೂಲಿಂಗ್’ ಅನ್ನು ಬಳಕೆ ಮಾಡಿಕೊಳ್ಳಬಹುದು. ಇನ್ನು, ಟ್ರಾಫಿಕ್ ಜಾಮ್ ಹೆಚ್ಚಾಗಿರುವ ಸಮಯದಲ್ಲಿ ಪ್ರಯಾಣ ಮಾಡದೆ, ಫ್ಲೆಕ್ಸಿಬಲ್ ಅವರ್ಸ್ ಗಳಲ್ಲಿ ಪ್ರಯಾಣ ಮಾಡುವುದರಿಂದ ಸ್ವಲ್ಪ ನಿರಾಳರಾಗಬಹುದು.

ಇದನ್ನೂ ಓದಿ: Snake Rescuer: ಬೆಂಗಳೂರಿನ ಖ್ಯಾತ ಉರಗ ರಕ್ಷಕ ‘ಸ್ನೇಕ್ ಅನೀಸ್’ ಇನ್ನಿಲ್ಲ

ನೀವು ಬೆಂಗಳೂರು ಟ್ರಾಫಿಕ್ ನಲ್ಲಿ ಪ್ರಯಾಣ ಮಾಡುತ್ತಿದ್ದರೆ ನಿಮಗೆ ಸಂಯಮ ಹೆಚ್ಚಾಗಿರಬೇಕು, ಜೊತೆಗೆ ಈಗ ಖರ್ಚುಗಳ ಪ್ಲ್ಯಾನ್ ಕೂಡ ಮಾಡಿಕೊಳ್ಳಬೇಕು. ಮೂಲಭೂತ ಸೌಲಭ್ಯಗಳ ಪ್ರಮಾಣಗಳು ಹೆಚ್ಚಾಗುವುದರೊಂದಿಗೆ ಖರ್ಚುಗಳು ಕೂಡ ಹೆಚ್ಚಾಗುತ್ತವೆ ಎಂದು ಈ ಬೆಳವಣಿಗೆ ನಮಗೆ ಹೇಳುತ್ತಿದೆ. ಸಮಯ ಉಳಿಸಬೇಕಾ? ಅಥವಾ ಖರ್ಚು ಮಾಡಬೇಕಾ? ಅಂತ ನೀವು ನಿರ್ಧಾರ ತೆಗೆದುಕೊಳ್ಳಬೇಕು. ನಿಮ್ಮ ಪ್ರಯಾಣವನ್ನು ಮೊದಲೇ ಪ್ಲ್ಯಾನ್ ಮಾಡಿಕೊಂಡು ಬಜೆಟ್ ಅನ್ನು ನಿಯಂತ್ರಣ ಮಾಡಿಕೊಳ್ಳಬಹುದು. ಅಲ್ಲದೇ ಇಂತಹ ದರ ಹೆಚ್ಚಳಗಳ ಬಗ್ಗೆ ಅಪ್‌ಡೇಟ್ ಪಡೆದುಕೊಳ್ಳುವುದರಿಂದ ನಿಮ್ಮ ದಿನನಿತ್ಯದ ಪ್ರಯಾಣ ಸುಲಭವಾಗಿ ಪ್ಲ್ಯಾನ್ ಮಾಡಿಕೊಳ್ಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed