Toxic Heroines: ‘ಲೇಡಿಸ್ & ಲೇಡಿಸ್, ಒಬ್ಬೊಬ್ರೇ ಬರ್ತೀರಾ? ಒಟ್ಟಿಗೆ ಬರ್ತೀರಾ’ ಟಾಕ್ಸಿಕ್ ಸುಂದರಿಯರ ಟೀಸರ್ ಔಟ್, ಯಶ್ ಸಖತ್ ಡೈಲಾಗ್ | | ACTPnews

ಟಾಕ್ಸಿಕ್ ನಟಿಯರು


Last Updated:

Toxic Movie: ಟಾಕ್ಸಿಕ್ ಸಿನಿಮಾದ ಹೀರೋಯಿನ್ಸ್ ಬಗ್ಗೆ ಈಗಾಗಲೇ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಆಗಿದೆ. ಈಗ ಡೈರೆಕ್ಟರ್ ಗೀತು ಮೋಹನ್​​ದಾಸ್ ಟಾಕ್ಸಿಕ್ ಪ್ರಪಂಚದ ಪಂಚ ಸುಂದರಿಯರ ಸಖತ್ ಟೀಸರ್ ರಿಲೀಸ್ ಮಾಡಿದ್ದಾರೆ.

ಟಾಕ್ಸಿಕ್ ನಟಿಯರು
ಟಾಕ್ಸಿಕ್ ನಟಿಯರು

ಟಾಕ್ಸಿಕ್ ಸಿನಿಮಾ (Toxic Cinema) ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ. ರಾಯ (Raya) ಸಖತ್ ಆಗಿ ಬೆಳ್ಳೆ ತೆರೆಯಲ್ಲಿ ಅಬ್ಬರಿಸೋಕೆ ಸಜ್ಜಾಗಿದ್ದಾರೆ. ಹೀಗಿರುವಾಗಲೇ ಸಿನಿಮಾದಲ್ಲಿ ನಟಿಸುತ್ತಿರುವ ಸುಂದರಿಯರ ಇಂಟ್ರೊಡಕ್ಷನ್​ಗಾಗಿ ನಿರ್ದೇಶಕಿ (Director) ಗೀತು ಮೋಹನ್​ದಾಸ್ (Geethu Mohandas) ಅವರು ಸುಂದರವಾದ ಒಂದು ಟೀಸರ್ ಬಿಟ್ಟಿದ್ದಾರೆ.

ರಾಯನ ಲೋಕದ ಸುಂದರಿಯರು ಯಾರ್ಯಾರು ಅಂತ ಒಂದೇ ಒಂದು ಟೀಸರ್ ಮೂಲಕ ಸಖತ್ ಆಗಿ ಇಂಟ್ರೊಡಕ್ಷನ್ ಕೊಟ್ಟಿದ್ದಾರೆ ನಿರ್ದೇಶಕಿ. ನಯನತಾರಾ, ಕಿಯಾರಾ ಅಡ್ವಾನಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ರುಕ್ಮಣಿ ವಸಂತ್ ಮೆಲ್ಲಿಸಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಾರಾ ಸುತಾರಿಯಾ ಅವರು ರೆಬೆಕ್ಕಾ ಪಾತ್ರದಲ್ಲಿ ಮಿಂಚಲಿದ್ದಾರೆ. ಇದರಲ್ಲಿ ತಾರಾ ಅವರು ಗನ್ ಹಿಡಿದು ಗುರಿ ಮಾಡಿರುವುದನ್ನು ಕಾಣಬಹುದು. ನಟಿ ನಯನತಾರಾ ಅವರು ಗಂಗಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿಯ ಕೈನಲ್ಲಿಯೂ ವೆಪನ್ ಕಾಣಬಹುದು. ಹುಮಾ ಖುರೇಶಿ ಅವರು ಎಲಿಜಬೆತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಲೇಡಿ ಬಾಸ್​ನಂತೆ ಕಾಣಿಸಿದ್ದಾರೆ. ಕಿಯಾರಾ ಅವರು ನಾಡಿಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಫೇರಿಟೇಲ್ ಬೆಡಗಿಯಾಗಿ ಕಾಣಿಸಿದ್ದಾರೆ.

ಮಕ್ಕಳು ದೂರ ಇರಿ, ಪೋಷಕರೇ ನಿಮ್ಮ ಮಕ್ಕಳು ದೂರ ಇರುವಂತೆ ನೋಡಿಕೊಳ್ಳಿ. ಅಜ್ಜಿ ತಾತಂದಿರೇ ಮಕ್ಕಳು ದೂರ ಇರಲಿ. ಮುತ್ತಾತಂದಿರು ನಿಮ್ಮದೇ ರಿಸ್ಕ್​​ನಲ್ಲಿ ನೋಡಿ ಎಂದು ಆರಂಭದಲ್ಲಿ ವಾರ್ನಿಂಗ್ ಕಾಣಿಸುತ್ತದೆ. ನಂತರ ಒಂದೊಂದೇ ಪಾತ್ರಗಳನ್ನು ತೋರಿಸುತ್ತಾ ಹೋಗಲಾಗುತ್ತದೆ.

ಲೇಡಿಸ್ & ಲೇಡಿಸ್, ಒಬ್ಬೊಬ್ಬರೇ ಬರ್ತೀರಾ ಅಲ್ಲ ಒಟ್ಟಿಗೆ ಬರ್ತೀರಾ ಅಂತ ಯಶ್ ಸ್ಟೈಲಾಗಿ ಡೈಲಾಗ್ ಹೊಡೆಯುತ್ತಾರೆ. ನಯನತಾರಾ ಬುಲೆಟ್ ರೈಡ್ ಮಾಡಿಕೊಂಡು ಬಂದರೆ ತಾರಾ ಸುತಾರಿಯಾ ಸಿಗರೇಟ್ ಸೇದುತ್ತಾರೆ. ರುಕ್ಮಿಣಿ ವಸಂತ್ ಗನ್ ಗುರಿ ಮಾಡಿದೆ ಕಿಯಾರಾ ಗ್ಲಾಮರಸ್ ಆಗಿ ಕಾಣಿಸ್ತಾರೆ. ಹುಮಾ ಖುರೇಶಿ ಕೂಡಾ ಕೈನಲ್ಲಿ ಸಿಗರೇಟ್ ಹಿಡಿದು ಕಾಣಿಸಿಕೊಳ್ಳುತ್ತಾರೆ.

ಪ್ರೀತಿ ಒಬ್ಬ ಹೆಣ್ಣನ್ನು ಒಂದು ಮಾನ್ಸ್ಟರ್ ಆಗಿ ಮಾಡಬಲ್ಲದು. ಅದೊಂದು ಸುಂದರವಾದ ಭ್ರಮೆ. ಅದರೊಳಗಿನ ಮಾನಿಪುಲೇಷನ್, ಸುಳ್ಳು, ಭ್ರಮೆ ಅರ್ಥವಾಗುತ್ತದೆ. ಇಲ್ಲಿ ನಾವಿದ್ದೇವೆ. ಅವನ ಅಳಿದುಳಿದ ಪ್ರೀತಿಗಾಗಿ ಹೋರಾಡುತ್ತಿದ್ದೇವೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ ಎಂದು ಟೀಸರ್​​ನಲ್ಲಿ ಹೇಳಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed