Kichcha Sudeep: ₹6.5 ಕೋಟಿ ಬೆಲೆಯ ಕ್ಯಾರವನ್ ಖರೀದಿಸಿದ ಕಿಚ್ಚ! ಐಷಾರಾಮಿ ವೆಹಿಕಲ್ ಒಳಗೆ ಏನೇನೆಲ್ಲಾ ಇದೆ ಗೊತ್ತಾ? | | ACTPnews

ನಟ ಕಿಚ್ಚ ಸುದೀಪ್


Last Updated:

ಸುಮಾರು 6.5 ಕೋಟಿ ರೂಪಾಯಿ ಮೌಲ್ಯದ ಈ ಕ್ಯಾರವಾನ್ (Caravan) ಸ್ಯಾಂಡಲ್‌ವುಡ್‌ನಲ್ಲಿ ಅತ್ಯಂತ ದುಬಾರಿ ಕ್ಯಾರವಾನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಅಭಿಮಾನಿಗಳಗಮನ ಸೆಳೆಯುತ್ತಿವೆ.

ನಟ ಕಿಚ್ಚ ಸುದೀಪ್
ನಟ ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Actor Kiccha Sudeep) ತಮ್ಮ ಸಿನಿಮಾಗಳಿಂದಷ್ಟೇ ಅಲ್ಲ, ಐಷಾರಾಮಿ ಜೀವನಶೈಲಿ ಯಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಕಿಚ್ಚನ ವಾಹನಗಳ ಸಂಗ್ರಹಕ್ಕೆ ಮತ್ತೊಂದು ಅತ್ಯಾಧುನಿಕ ಹಾಗೂ ಐಷಾರಾಮಿ ಕ್ಯಾರವಾನ್ ಸೇರ್ಪಡೆಯಾಗಿದ್ದು, ಇದು ಇಡೀ ಭಾರತೀಯ ಚಿತ್ರರಂಗದಲ್ಲೇ ಹೊಸ ಸಂಚಲನ ಸೃಷ್ಟಿಸಿದೆ. ಸುಮಾರು 6.5 ಕೋಟಿ ರೂಪಾಯಿ ಮೌಲ್ಯದ ಈ ಕ್ಯಾರವಾನ್ (Caravan) ಸ್ಯಾಂಡಲ್‌ವುಡ್‌ನಲ್ಲಿ ಅತ್ಯಂತ ದುಬಾರಿ ಕ್ಯಾರವಾನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿವೆ.

ಕಿಚ್ಚ ಸುದೀಪ್ ಅವರಿಗಾಗಿ ವಿಶೇಷವಾಗಿ ನಿರ್ಮಿಸಲಾಗಿರುವ ಈ ಐಷಾರಾಮಿ ಕ್ಯಾರವಾನ್ ಸುಮಾರು 6.5 ಕೋಟಿ ರೂಪಾಯಿ ಮೌಲ್ಯ ಹೊಂದಿದೆ. ಸದ್ಯ ಕನ್ನಡ ಚಿತ್ರರಂಗದಲ್ಲೇ ಇಷ್ಟು ದುಬಾರಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕ್ಯಾರವಾನ್ ಇದೇ ಎಂದು ಹೇಳಲಾಗುತ್ತಿದೆ. ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಆರಾಮದಾಯಕ ವಾತಾವರಣ ಒದಗಿಸುವ ಉದ್ದೇಶದಿಂದ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಖ್ಯಾತ ಆಟೋಮೊಬೈಲ್ ಡಿಸೈನರ್ ದಿಲೀಪ್ ಛಾಬ್ರಿಯಾ ಅವರ ಡಿಸಿ2 ಸಂಸ್ಥೆಯು ಈ ಜಿಮ್ ಮಾಡ್ಯುಲರ್ ಕ್ಯಾರವಾನ್ ಅನ್ನು ನಿರ್ಮಿಸಿದೆ. ಸುದೀಪ್ ಅವರ ವೈಯಕ್ತಿಕ ಅಭಿರುಚಿ, ಅಗತ್ಯಗಳು ಹಾಗೂ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಸಂಪೂರ್ಣವಾಗಿ ಕಸ್ಟಮೈಸ್ ಮಾಡಲಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಈ ಕ್ಯಾರವಾನ್ ನಿರ್ಮಾಣ ಪೂರ್ಣಗೊಂಡಿದ್ದು, ಅದರ ಪ್ರೀಮಿಯಂ ವಿನ್ಯಾಸ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಈ ಹೊಸ ಕ್ಯಾರವಾನ್‌ನ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಅದರ ಮುಂಭಾಗ ಮತ್ತು ಹಿಂಭಾಗದಲ್ಲಿ ಅಳವಡಿಸಿರುವ ‘K’ ಲೋಗೋ. ಇದು ಕಿಚ್ಚ ಸುದೀಪ್ ಅವರ ಹೆಸರಿನ ಮೊದಲ ಅಕ್ಷರವನ್ನು ಪ್ರತಿನಿಧಿಸುವ ಸಿಗ್ನೇಚರ್ ವಿನ್ಯಾಸವಾಗಿದೆ. ಇದೇ ಲೋಗೋವನ್ನು ಅವರು ತಮ್ಮ ವೈಯಕ್ತಿಕ ಕಾರುಗಳ ಮೇಲೂ ಬಳಸುತ್ತಿದ್ದು, ಈಗ ತಮ್ಮ ಹೊಸ ಕ್ಯಾರವಾನ್ ಮೇಲೂ ಅದೇ ಗುರುತನ್ನು ಅಳವಡಿಸಿಕೊಂಡಿದ್ದಾರೆ.

ಇದೀಗ ಮತ್ತೊಂದು ವಿಶೇಷ ಸಂಗತಿಯೆಂದರೆ, ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಬಿಲ್ಲ ರಂಗ ಬಾಷಾ ಚಿತ್ರದ ಎರಡನೇ ಹಂತದ ಚಿತ್ರೀಕರಣ ಜೂನ್ 26ರಿಂದ ಆರಂಭವಾಗಿದೆ. ಸುಮಾರು ಒಂದು ವರ್ಷದ ವಿರಾಮದ ಬಳಿಕ ಚಿತ್ರತಂಡ ಮತ್ತೆ ಶೂಟಿಂಗ್‌ಗೆ ಮರಳಿದೆ. ಕನಕಪುರದ ಸಮೀಪ ನಿರ್ಮಿಸಿರುವ ಬೃಹತ್ ಸೆಟ್‌ನಲ್ಲಿ ಚಿತ್ರದ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed