Viral Story: ಅಂತ್ಯಸಂಸ್ಕಾರ ಆದ ಮೇಲೆ ಎದ್ದು ಬಂದ ಮೃತ ವ್ಯಕ್ತಿ! 1 ವಾರದ ಬಳಿಕ ಮನೆಯವರ ಎದುರು ನಿಂತ! ಇದು ಹೇಗೆ ಸಾಧ್ಯ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

AI Generated Image


Last Updated:

ಇಲ್ಲೊಬ್ಬ ವ್ಯಕ್ತಿ ಸತ್ತಿದ್ದಾನೆ ಎಂದು ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದರು. ಆದ್ರೆ, ಒಂದು ವಾರದ ಬಳಿಕ ಸತ್ತ ವ್ಯಕ್ತಿ ಮರಳಿ ಬಂದಿರೋ ಅಚ್ಚರಿಯ ಘಟನೆ ನಡೆದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

AI Generated Image
AI Generated Image

ರಾಂಚಿ (ಜಾರ್ಖಂಡ್​): ಹುಟ್ಟು ಉಚಿತ ಸಾವು ಖಚಿತ ಅನ್ನೋ ಮಾತಿದೆ. ಒಮ್ಮೆ ಸತ್ತ ವ್ಯಕ್ತಿ ಮತ್ತೆಂದು ವಾಪಸ್​ ಬರುವುದಿಲ್ಲ ಅನ್ನೋದು ಪ್ರತಿಯೊಬ್ಬರಿಗೂ ತಿಳಿದಿರೋ ಸತ್ಯ. ಉಸಿರು ಚೆಲ್ಲಿದವನು ಮತ್ತೆ ಉಸಿರಾಡೋದು ಅಂದ್ರೆ ಎಲ್ಲರಿಗೂ ಆಶ್ಚರ್ಯವಾಗುತ್ತೆ. ಇವರನ್ನ ಯಮನನ್ನೇ ಗೆದ್ದು ಬಂದವರು ಅಂತಾನೆ ಕರೀತಾರೆ. ಕೆಲವು ಸಂದರ್ಭಗಳಲ್ಲಿ ವ್ಯಕ್ತಿ ಸತ್ತಿದ್ದಾನೆ ಎಂದು ವೈದ್ಯರೇ (Doctor) ಹೇಳಿದ ಬಳಿಕ, ಅಂತ್ಯ ಸಂಸ್ಕಾರದ ವೇಳೆ ಬದುಕಿರುವ ಪವಾಡಗಳು ನಡೆದಿವೆ. ಆದರೆ ಇಲ್ಲೊಬ್ಬ ವ್ಯಕ್ತಿ ಸತ್ತಿದ್ದಾನೆ ಎಂದು ಕುಟುಂಬಸ್ಥರು ಅಂತ್ಯಸಂಸ್ಕಾರ ಕೂಡ ನೆರವೇರಿಸಿದ್ದರು. ಆದ್ರೆ, ಒಂದು ವಾರದ ಬಳಿಕ ಸತ್ತ ವ್ಯಕ್ತಿ ಮರಳಿ ಬಂದಿರೋ ಅಚ್ಚರಿಯ ಘಟನೆ ನಡೆದಿದೆ.

ಮರಳಿ ಬಂದ ಸತ್ತ ವ್ಯಕ್ತಿ

ಅಂದ್ಹಾಗೇ ಈ ಘಟನೆ ನಡೆದಿರೋದು ಜಾರ್ಖಂಡ್​ನ ರಾಂಚಿಯಲ್ಲಿ. ಕಳೆದ ಮೇ 10 ರಂದು ವಿಶ್ರಾಮ್​ ಮುಂಡಾ ಎಂಬ ವ್ಯಕ್ತಿ ಸಂಬಂಧಿಕರ ಮದುವೆಗೆ ಹೋಗಿದ್ದನು.  ಆದ್ರೆ, ಏಕಾಏಕಿ ನಾಪತ್ತೆಯಾಗಿದ್ದನು. ಆತನಿಗಾಗಿ ಕುಟುಂಬಸ್ಥರು ಎಲ್ಲೆಡೆ ಹುಡುಕಾಡಿದ್ದರು. ಆದ್ರೆ, ವಿಶ್ರಾಮ್​ ಮಾತ್ರ ಎಲ್ಲೂ ಪತ್ತೆಯಾಗಿರೋದಿಲ್ಲ.
ಚರಂಡಿಯಲ್ಲಿ ಶವ ಪತ್ತೆ

ಮದುವೆ ಮನೆಯಿಂದ ಕಾಣೆಯಾಗಿದ್ದ ವಿಶ್ರಾಮ್​ಗಾಗಿ ಹುಡುಕಿ ಹುಡುಕಿ ಸುಸ್ತಾಗಿ ಹೋಗಿದ್ದ ಕುಟುಂಬಸ್ಥರು.  ಆತನ ಪತ್ತೆಗಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಸ್ಟೇಷನ್​ನಲ್ಲಿ ವಿಶ್ರಾಮ್​ ಕಾಣೆಯಾಗಿದ್ದಾನೆ ಹುಡುಕಿಕೊಡಿ ಎಂದು ಮಿಸ್ಸಿಂಗ್​ ಕಂಪ್ಲೇಂಟ್​​ ದಾಖಲಿಸಿದ್ದರು. ಇನ್ನು ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆತನ ಪತ್ತೆಗಾಗಿ ಕಾರ್ಯಚರಣೆ ನಡೆಸಿದ್ದಾರೆ. ಬಳಿಕ ಚರಂಡಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗುತ್ತದೆ.

ಅಪರಿಚಿತ ಶವ ಪತ್ತೆಯಾದ ಬಗ್ಗೆ ಪೊಲೀಸರು ನಾಪತ್ತೆಯಾಗಿದ್ದ ವಿಶ್ರಾಮ್​ ಕುಟುಂಬವನ್ನು ಸಂಪರ್ಕಿಸಿದ್ದಾರೆ. ಶವದ ಗುರುತು ಪತ್ತೆಹಚ್ಚಲು ಬನ್ನಿ ಎಂದು ಕರೆದಿದ್ದಾರೆ. ಶವ ಪತ್ತೆಯಾದ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದ ಕುಟುಂಬಸ್ಥರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಬಳಿಕ ಅಪರಿಚಿತ ಶವವನ್ನು ಪರಿಶೀಲನೆ ಮಾಡಿ, ಬಳಿಕ ಇದು ವಿಶ್ರಾಮ್​ ಮೃತದೇಹ ಎಂದು ಪೊಲೀಸರಿಗೆ ಮಾಹಿತಿ ನೀಡಿ ಶವವನ್ನು ಮನೆಗೆ ತೆಗೆದುಕೊಂಡು ಹೋಗಿ ಶಾಸ್ತ್ರೋಕ್ತವಾಗಿ ಶವಸಂಸ್ಕಾರ ನೆರವೇರಿಸಿದ್ದಾರೆ.

ಒಂದು ವಾರದ ಬಳಿಕ ಮನೆಗೆ ಬಂದ ವಿಶ್ರಾಮ್​

ವಿಶ್ರಾಮ್​ನ ಅಂತ್ಯಸಂಸ್ಕಾರ ಮುಗಿಸಿದ್ದ ಕುಟುಂಬಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದರು. ಆತನ ಬಗ್ಗೆ ನೆನೆದು ಕಣ್ಣೀರು ಹಾಕುತ್ತಿದ್ದರು. ಆದ್ರೆ, ವಾರದ ಬಳಿಕ ಕುಟುಂಬಸ್ಥರಿಗೆ ಒಂದು ಅಚ್ಚರಿ ಕಾದಿತ್ತು. ಸತ್ತಿದ್ದಾನೆ ಎಂದು ಶವಸಂಸ್ಕಾರ ಮಾಡಿದ್ದ ವ್ಯಕ್ತಿ ಮನೆಯ ಬಾಗಿಲ ಮುಂದೆ ಬಂದು ನಿಂತಿದ್ದನು. ವಿಶ್ರಾಮ್​​ನ ಕಂಡ ಕುಟುಂಬಸ್ಥರು ಅಕ್ಷರಶಃ ಬೆಚ್ಚಿಬಿದ್ದಿದ್ದರು. ಬಳಿಕ ಆತ ಯಾರಿಗೂ ತಿಳಿಸದೆ ತಾನು ರಾಮಗಢಕ್ಕೆ ಹೋಗಿದ್ದೆ ಅಂತಾ ತಿಳಿಸಿದ್ದಾನೆ.

ಸತ್ತ ವ್ಯಕ್ತಿ ಮರಳಿ ಬಂದಿದ್ದು, ಒಂದು ಕಡೆ ಆದ್ರೆ ಅತ್ತ, ವಿಶ್ರಾಮ್​​ನ ಕುಟುಂಬಸ್ಥರು ಮಾಡಿದ್ದ ಯಡವಟ್ಟಿನ ಬಗ್ಗೆ ಎಲ್ಲರಿಗೂ ಅರಿವಾಗಿದೆ. ಯಾಕಂದ್ರೆ, ಚರಂಡಿಯಲ್ಲಿ ಸಿಕ್ಕ ಶವವನ್ನು ವಿಶ್ರಾಮ್​ನ ಶವ ಎಂದು ಆತನ ಕುಟುಂಬಸ್ಥರು ತಪ್ಪಾಗಿ ಗುರುತು ಮಾಡಿ ಅಪರಿಚಿತ ಶವದ ಕಾರ್ಯ ನೆರವೇರಿಸಿದ್ದರು. ಈ ವಿಷಯ ತಿಳಿದ ಪೊಲೀಸರು ಸದ್ಯ, ಅಪರಿಚಿತ ಶವ ಗುರುತನ್ನು ಪತ್ತೆಹಚ್ಚಲು ಡಿಎನ್‌ಎ ಪರೀಕ್ಷೆ ನಡೆಸಲು ಮುಂದಾಗಿದ್ದು, ಸಮಾಧಿ ಅಗೆದು ದೇಹವನ್ನು ಹೊರತೆಗೆಯುವ ಕಾರ್ಯವನ್ನು ಪ್ರಾರಂಭಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed