Last Updated:
ತಿಲಕರತ್ನೆ ದಿಲ್ಶಾನ್ ತಿರುಮಲ ಶ್ರೀವಾರಿ ದರ್ಶನ ಪಡೆದಿದ್ದು ನೆಟ್ಟಿಗರ ಗಮನ ಸೆಳೆದಿದೆ, 2014ರಲ್ಲಿ ಅಹ್ಮದ್ ಶಹಜಾದ್ ಮಾಡಿದ ಮತಾಂತರ ವಿವಾದದ ಹಳೆಯ ವಿಡಿಯೋ ಮತ್ತೆ ವೈರಲ್ ಆಗಿದೆ.
ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ (Srilanka Cricket), ದಿಗ್ಗಜ ಕ್ರಿಕೆಟ್ ಆಟಗಾರ ತಿಲಕರತ್ನೆ ದಿಲ್ಶಾನ್ (Tillakaratne Dilshan) ಭಾನುವಾರ ತಿರುಮಲ ಶ್ರೀವಾರಿ ದರ್ಶನ (Tirumala) ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಟಿಟಿಡಿ ಅಧಿಕಾರಿಗಳು ಅವರಿಗೆ ಪ್ರಸಾದ ನೀಡಿ ಗೌರವಿಸಿದ್ದಾರೆ. ಸದ್ಯ ತೆಲಂಗಾಣದಲ್ಲಿ ಟಿಜಿ ಟಿ20 ಕ್ರಿಕೆಟ್ ಲೀಗ್ (Telangana TG T20 League) ನಡೆಯುತ್ತಿದ್ದು, ಈ ಲೀಗ್ ಭಾಗವಾಗಿ ಭಾರತಕ್ಕೆ ಆಗಮಿಸಿರುವ ದಿಲ್ಶಾನ್ ಅವರು ಖಮ್ಮಂ ಏಸಸ್ ತಂಡಕ್ಕೆ ಮೆಂಟರ್ ಹಾಗೂ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಲೀಗ್ ವೇಳಾಪಟ್ಟಿಯ ನಡುವೆ ವಿರಾಮ ಸಿಕ್ಕ ಸಂದರ್ಭದಲ್ಲಿ ನೇರ ತಿರುಮಲಕ್ಕೆ ಆಗಮಿಸಿ ಕುಟುಂಬ ಸದಸ್ಯರೊಂದಿಗೆ (Family) ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ.
ಏಕೆಂದರೆ, 2014ರಲ್ಲಿ ದಂಬುಲ್ಲಾದಲ್ಲಿ ಏರ್ಪಡಿಸಲಾಗಿದ್ದ ಶ್ರೀಲಂಕಾ, ಪಾಕಿಸ್ತಾನ ನಡುವಿನ ಏಕದಿನ ಪಂದ್ಯದಲ್ಲಿ ವಿಶೇಷ ಘಟನೆಯೊಂದು ಎಲ್ಲರ ಗಮನ ಸೆಳೆದಿತ್ತು. ಅಂದು ಪಂದ್ಯ ಮುಕ್ತಾಯವಾದ ಬಳಿಕ ಪೆವಿಲಿಯನ್ಗೆ ಮರಳುತ್ತಿದ್ದ ದಿಲ್ಶಾನ್ ಅವರೊಂದಿಗೆ ಮಾತನಾಡುತ್ತಾ ಬಂದ ಪಾಕ್ ಆಟಗಾರ ಶಹಜಾದ್, ‘ನೀನು ಇಸ್ಲಾಂ ಧರ್ಮಕ್ಕೆ ಮತಾಂತರ ಆದರೆ ನಿನ್ನ ಜೀವನದಲ್ಲಿ ಎಂತಹ ಕೆಲಸ ಮಾಡಿದರೂ ನೀನು ನೇರ ಸ್ವರ್ಗಕ್ಕೆ ಹೋಗ್ತಿಯಾ’ ಎಂದು ಸಲಹೆ ನೀಡಿದ್ದ. ಆದರೆ ಇದಕ್ಕೆ ದಿಲ್ಶಾನ್ ಏನು ಉತ್ತರ ಕೊಟ್ಟರೆ ವಿಡಿಯೋದಲ್ಲಿ ಕೇಳಿಸೋದಿಲ್ಲ. ಆದರೆ ದಿಲ್ಶಾನ್ ಉತ್ತರ ಕೇಳಿದ ಶಹಜಾದ್, ‘ಹಾಗಾದರೆ ನೀನು ನರಕಕ್ಕೆ ಹೋಗಲು ಸಿದ್ಧ ಆಗು’ ಅಂತ ಹೇಳಿದ್ದ. ಆದರೆ ಆ ಸಂದರ್ಭದಲ್ಲಿ ಶ್ರೀಲಂಕಾ ಆಟಗಾರರು ಯಾವುದೇ ದೂರು ನೀಡದ ಕಾರಣ ಐಸಿಸಿ ಯಾವುದೇ ಕ್ರಮಕೈಗೊಂಡಿರಲಿಲ್ಲ.
Throwback to the day when Ahmad Shahzad of Pakistan tried to convert Sri Lanka’s Tillakaratne Dilshan on the cricket field.
Dilshan was born as Tuwan Mohammad Dilshan to a Muslim father and a Buddhist mother. He was raised by his mother and later converted to Buddhism. https://t.co/oOB8u3xe1j pic.twitter.com/sUeWTNhX1C
— Wren (@wrendom) June 28, 2026
ವಿಶೇಷ ಸಂಗತಿ ಏನಪ್ಪಾ ಅಂದರೆ, ದಿಲ್ಶಾನ್ ತಂದೆ ಮಲೇಷ್ಯಾ ಮೂಲಕ ಮುಸ್ಲಿಂ, ತಾಯಿ ಶ್ರೀಲಂಕಾದ ಬೌದ್ಧ ಧರ್ಮಕ್ಕೆ ಸೇರಿದ್ದಾರೆ. ದಿಲ್ಶಾನ್ ನಿಜವಾದ ಹೆಸರು, ತುವಾನ್ ಮೊಹಮ್ಮದ್ ದಿಲ್ಶಾನ್ ಅಂತ ಇತ್ತು. ಆದರೆ ತಂದೆ-ತಾಯಿ ಇಬ್ಬರು ಬೇರೆಯಾದ ಬಳಿಕ ತಮ್ಮ 16ನೇ ವಯಸ್ಸಿನಲ್ಲಿ, ದಿಲ್ಶಾನ್ ಬೌದ್ಧ ಧರ್ಮಕ್ಕೆ ಮತಾಂತರ ಆಗಿದ್ದರು. ಮುಸ್ಲಿಂ ಹೆಸರು ಇದ್ದರೂ ಕೂಡ ಚಿಕ್ಕ ವಯಸ್ಸಿನಿಂದಲೇ ಬೌದ್ಧ ಧರ್ಮವನ್ನು ಪಾಲನೆ ಮಾಡಿದ್ದರು ಎಂದು ದಿಲ್ಶಾನ್ ಬಾಲ್ಯದ ಕೋಚ್ ರಂಜನ್ ಪರಣವಿತನ ಸಂದರ್ಶನವೊಂದರಲ್ಲಿ ಹೇಳಿದ್ದರು.
ಆದರೆ, ಈಗ ದಿಲ್ಶಾನ್ ಅವರು ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದುಕೊಂಡ ಕಾರಣ, ನೆಟ್ಟಿಗರು 12 ವರ್ಷಗಳ ಹಿಂದೆ ಪಾಕಿಸ್ತಾನ ಕ್ರಿಕೆಟಿಗ ಮಾಡಿದ ಕಾಮೆಂಟ್ ನೆನಪು ಮಾಡಿಕೊಂಡು ಶಹಜಾದ್ನನ್ನು ಟ್ರೋಲ್ ಮಾಡ್ತಿದ್ದಾರೆ. ದಿಲ್ಶಾನ್ ಅವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನಿಸಿದ ಅಹ್ಮದ್ ಶಹಜಾದ್ ಅವರಿಗೆ ಇದು ಕಪಾಳಮೋಕ್ಷ ಇದ್ದರಂತೆ ಎಂದು ಹಳೆ ವಿಡಿಯೋವನ್ನು ಟ್ರೋಲ್ ಮಾಡಿ ಕಾಮೆಂಟ್ ಮಾಡುತ್ತಿದ್ದಾರೆ.
Tirumala,Chittoor,Andhra Pradesh













