IRE vs IND: ‘ನಾವು ಹಿಂದುಳಿದಿದ್ದು ಅಲ್ಲೇ’, ವೈಟ್‌ವಾಶ್! ಐರ್ಲೆಂಡ್​​ ವಿರುದ್ಧದ ಸೋಲಿಗೆ ಅಚ್ಚರಿ ಕಾರಣ ಕೊಟ್ಟ ಕ್ಯಾಪ್ಟನ್ ಶ್ರೇಯಸ್! | ಕ್ರೀಡಾ ಸುದ್ದಿ | ACTPnews

ಕ್ಯಾಪ್ಟನ್ ಶ್ರೇಯಸ್ ಅಯ್ಯರ್


Last Updated:

ಐರ್ಲೆಂಡ್, ಟೀಂ ಇಂಡಿಯಾ ವಿರುದ್ಧ ಟಿ20 ಸರಣಿಯನ್ನು 2-0ರಿಂದ ಕ್ಲೀನ್ ಸ್ವೀಪ್ ಮಾಡಿದೆ, ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ವೈಫಲ್ಯ ಒಪ್ಪಿಕೊಂಡಿದ್ದಾರೆ, ತಿಲಕ್ ವರ್ಮಾ ಏಕಾಂಗಿ ಹೋರಾಟ ಫಲ ನೀಡಿಲ್ಲ.

ಕ್ಯಾಪ್ಟನ್ ಶ್ರೇಯಸ್ ಅಯ್ಯರ್
ಕ್ಯಾಪ್ಟನ್ ಶ್ರೇಯಸ್ ಅಯ್ಯರ್

ಬ್ಯಾಟಿಂಗ್ ವೈಫಲ್ಯವೇ (Batting) ನಮ್ಮ ಸೋಲಿಗೆ ಕಾರಣವಾಯ್ತು ಎಂದು ಟೀಂ ಇಂಡಿಯಾ (Team India) ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಹೇಳಿದ್ದಾರೆ. ಅಲ್ಲದೇ ಐರ್ಲೆಂಡ್ (Ireland) ತಮಗಿಂತ ಚೆನ್ನಾಗಿ ಆಡ್ತು ಎಂದು ಒಪ್ಪಿಕೊಂಡಿದ್ದಾರೆ.

ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋಲುಂಡಿದ್ದು, ಐರ್ಲೆಂಡ್ ತಂಡ ಸರಣಿಯನ್ನು ಕ್ಲೀನ್ ಸ್ವೀಫ್ ಮಾಡಿದೆ. ಇದರೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಹತ್ವದ ದಾಖಲೆಯನ್ನು ನಿರ್ಮಿಸಿದೆ. ಭಾನುವಾರ ಐರ್ಲೆಂಡ್ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ ಭಾರತ ಒಂದು ರನ್‌ನಿಂದ ಸೋಲುಂಡಿದ್ದು, ಅದ್ಭುತ ಪ್ರದರ್ಶನ ನೀಡಿದ ಐರ್ಲೆಂಡ್ ತಂಡ ಸರಣಿಯನ್ನು 2-0ಯೊಂದಿಗೆ ಕ್ಲೀನ್ ಸ್ವೀಪ್ ಮಾಡಿದೆ.

ಐರ್ಲೆಂಡ್ ಚೆನ್ನಾಗಿ ಆಡಿತು!

ಪಂದ್ಯದ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್, ಐರ್ಲೆಂಡ್ ತಮಗಿಂತ ಉತ್ತಮ ಪ್ರದರ್ಶನ ನೀಡಿದೆ. ನಿಜ ಹೇಳಬೇಕು ಎಂದರೇ ಇದು ನಮಗೆ ಉತ್ತಮ ಸರಣಿ ಅಲ್ಲ. ಆದರೆ ಐರ್ಲೆಂಡ್ ಟೀಂ ಅದ್ಭುತವಾಗಿ ವೃತ್ತಿಪರ ಕೌಶಲ್ಯಗಳನ್ನು ತೋರಿದೆ. ಪಿಚ್ ಹೇಗೆ ವರ್ತಿಸುತ್ತದೆ ಎಂದು ಅರ್ಥ ಮಾಡಿಕೊಂಡಿದ್ದರು. ಅದೇ ರೀತಿ ಫೀಲ್ಡಿಂಗ್ ಕೂಡ ಅತ್ಯುತ್ತಮವಾಗಿ ಮಾಡಿದೆ. ತಂಡದ ಒಟ್ಟು ಪ್ರದರ್ಶನದಿಂದ ಇಂದು ಗೆಲುವು ಸಿಕ್ಕಿದೆ. ಅವರಿಗೆ ನನ್ನ ಅಭಿನಂದನೆಗಳು ಎಂದು ಹೇಳಿದ್ದಾರೆ.

ಈ ವಿಚಾರದಲ್ಲಿಯೇ ಹಿಂದೆ ಬಿದ್ದೆವು!

ಮೊದಲ ಪಂದ್ಯದ ಸೋಲಿನ ಬಳಿಕ ಹಲವು ವಿಚಾರಗಳಲ್ಲಿ ಉತ್ತಮವಾಗಿದ್ದೇವು. ಈ ಪಂದ್ಯದಲ್ಲಿ ಬೌಲರ್​​ಗಳು ನಮ್ಮ ಪ್ಲ್ಯಾನ್‌ನಂತೆ ಬೌಲ್ ಮಾಡಿದ್ದರು. ಆದರೆ ಬ್ಯಾಟಿಂಗ್‌ನಲ್ಲಿ ನಾವು ಹಿಂದೆ ಬಿದ್ದೆವು. ಪಿಚ್ ವರ್ತನೆಯನ್ನು ಗ್ರಹಿಸುವುದರಲ್ಲಿ ವಿಫಲರಾಗಿದ್ದೇವೆ. ಸಿಂಗಲ್ಸ್ ಗಳನ್ನು ಡಬಲ್ ಆಗಿ ಮಾಡಲು ವಿಫಲರಾಗಿದ್ದೇವೆ. ಈ ವಿಭಾಗದಲ್ಲಿ ನಾವು ಖಂಡಿತ ಕೆಲಸ ಮಾಡಲೇಬೇಕು ಎಂದು ಹೇಳಿದ್ದಾರೆ.

ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ ಆಟಗಾರರಾದ ಪ್ರಿನ್ಸ್ ಯಾದವ್, ಸೂರ್ಯಾಂಶ್​​ ಶೇಡ್‌ಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಪ್ರಿನ್ಸ್ ಯಾದವ್ ತಮ್ಮ ಐಪಿಎಲ್ ಅನುಭವವನ್ನು ಇಲ್ಲಿ ಉತ್ತಮವಾಗಿ ಬಳಸಿಕೊಂಡಿದ್ದಾರೆ. ತಮ್ಮ ಸ್ವತಃ ಆಲೋಚನೆ, ಪ್ಲ್ಯಾನ್‌ನೊಂದಿಗೆ ಬೌಲ್ ಮಾಡಿದ್ದಾರೆ. ಸೂರ್ಯಾಂಶ್ ಈ ಪಂದ್ಯದಿಂದ ಬಹಳ ಕಲಿತಿದ್ದಾರೆ ಎಂದು ಶ್ರೇಯಸ್​ ಹೇಳಿದ್ದಾರೆ.

ತಿಲಕ್ ಏಕಾಂಗಿ ಹೋರಾಟ!

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 154 ರನ್ ಗಳಿಸಿತು. ಹ್ಯಾರಿ ಟೆಕ್ಟರ್ (47 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 53) ಅರ್ಧಶತಕ ಗಳಿಸಿದರು, ಆದರೆ ಬೆನ್ ಕಾಲಿಟ್ಜ್ (23 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 37) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಟೀಂ ಇಂಡಿಯಾ ಪರ, ಪ್ರಿನ್ಸ್ ಯಾದವ್ (3/22) ಮೂರು ವಿಕೆಟ್ ಪಡೆದರು, ಅರ್ಶ್ದೀಪ್ ಸಿಂಗ್ (2/35) ಮತ್ತು ಶಿವಂ ದುಬೆ (2/25) ತಲಾ ಎರಡು ವಿಕೆಟ್ ಪಡೆದರು.

ಇದನ್ನೂ ಓದಿ: IRE vs IND: ಅಭಿಷೇಕ್ ಶರ್ಮಾ ಅರ್ಧ ಶತಕ ರದ್ದು, ಕಾರಣವೇನು?

ಆ ಬಳಿಕ ಬ್ಯಾಟಿಂಗ್‌ಗೆ ಇಳಿದ ಭಾರತ ನಿಗದಿತ 20 ಓವರ್​​ಗಳಲ್ಲಿ 9 ವಿಕೆಟ್​​ಗಳಿಗೆ 153 ರನ್ ಅಷ್ಟೇ ಗಳಿಸಿತು. ತಿಲಕ್ ವರ್ಮಾ (46 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 55) ಅಜೇಯರಾಗಿ ಉಳಿದರು. ಐರಿಷ್ ಬೌಲರ್‌ಗಳಲ್ಲಿ ಜೈ ಮೂಂದ್ರಾ (3/32) ಮತ್ತು ಮ್ಯಾಟ್ ಹೊಲ್ಲಾರ್ಡ್ (3/26) ತಲಾ ಮೂರು ವಿಕೆಟ್ ಪಡೆದರು, ಮ್ಯಾಥ್ಯೂ ಹಂಫ್ರೀಸ್ ಮತ್ತು ಹ್ಯಾರಿ ಟೆಕ್ಟರ್ ತಲಾ ಒಂದು ವಿಕೆಟ್ ಪಡೆದರು. ಪ್ರಿನ್ಸ್ ಯಾದವ್ ಕೊನೆಯ ಎಸೆತದಲ್ಲಿ 6 ರನ್ ಗಳಿಸಿ ಅಜೇಯರಾಗುಳಿದರು, ಆದರೆ ತಂಡವನ್ನು ಗೆಲ್ಲಿಸಲು ಆಗಲಿಲ್ಲ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

IRE vs IND: ‘ನಾವು ಹಿಂದುಳಿದಿದ್ದು ಅಲ್ಲೇ’, ವೈಟ್‌ವಾಶ್! ಐರ್ಲೆಂಡ್​​ ವಿರುದ್ಧದ ಸೋಲಿಗೆ ಅಚ್ಚರಿ ಕಾರಣ ಕೊಟ್ಟ ಕ್ಯಾಪ್ಟನ್ ಶ್ರೇಯಸ್!



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed