ಈ ಸಾಲುಗಳನ್ನ ಪ್ರಮೋದ್ ಮರವಂತೆ ಬರೆದಿದ್ದಾರೆ. ಕಾಂತಾರ ಚಿತ್ರದಲ್ಲಿ ಸಿಂಗಾರ ಸಿರಿಯೇ ಅಂತ ಬರೆದಿದ್ದರು. ಅದು ಸೂಪರ್ ಡ್ಯೂಪರ್ ಹಿಟ್ ಆಯಿತು.
ಜುಲೈ-24 ರಂದು ಚಿತ್ರ ರಿಲೀಸ್
ಬೇರೆ ಸಿನಿಮಾಗಳಿಗೂ ಒಳ್ಳೆ ಒಳ್ಳೆ ಹಾಡುಗಳನ್ನೆ ಬರೆದಿದ್ದಾರೆ. ಕರಾವಳಿಯ ಚಿತ್ರಕ್ಕೆ ಈ ಗೀತೆ ಬರೆದಿದ್ದಾರೆ. ಈ ಹಾಡಿನ ಪಲ್ಲವಿ ಈ ರೀತಿ ಇದೆ ಓದಿ.
ಕಡಲಿಂದ ನಾಡು
ಕಡಲಿಂದ ಕಾಡು
ಕಡಲಿಂದ ತಾನೇ ಒಡಲ ಗೂಡು
ಕಲೆಯೆಂಬ ದೈವ ನೆಲೆ ನಿಂತ ಊರು
ಕೈ ಮುಗಿದು ನೀನು ಒಳಗೆ ಸೇರು
ಜನರ ಜೀವನವೇ ಓಟ
ಗೆಲುವು ಸೋಲುಗಳ ಪಾಠ
ಮನುಷತ್ವ ಎಂಬ ಭಾವ ಮನದಿ ತುಂಬಿ
ನಡೆಯುತೀವಿ ಮುಂದೆ ದೈವತ್ವವ ನಂಬಿ
ಈ ಗಾಳಿ ನೀರು ಆಡೋ ಮಾತು ಒಂದೇನೇ
ಈ ಮೇಲು ಕೀಳು ಯಾಕೆ ಎಲ್ಲಾ ಒಂದೇನೇ
ಬಾ ಕರಾವಳಿಗೆ ಈ ಕರಾವಳಿಗೆ
ಈ ಹಾಡಿನ ವಿಡಿಯೋ ಕೂಡ ಗಮನ ಸೆಳೆಯುತ್ತದೆ. ಇಡೀ ಹಾಡಿನಲ್ಲಿ ಕಂಬಳದ ಸಂಭ್ರಮ ಇದೆ. ಕೋಣದ ಶೃಂಗಾರ ಮತ್ತು ಕೋಣದ ಓಟದ ಚಿತ್ರಣ ಇದೆ.
ಕಡಲಿಂದ ನಾಡು…ಕಡಲಿಂದ ಕಾಡು
ಕರಾವಳಿ ಚಿತ್ರಕ್ಕೆ ಸಚಿನ್ ಬಸ್ರೂರ್ ಸಂಗೀತ ಇದೆ. ಚಿತ್ರದ ಈ ಶೀರ್ಷಿಕೆ ಗೀತೆಯನ್ನ ಪ್ರಮೋದ್ ಮರವಂತೆ ಬರೆದ್ದಾರೆ. ಚಿತ್ರದಲ್ಲಿ ಪ್ರಜ್ವಲ್ ದೇವರಾಜ್, ಸಂಪದ, ರಾಜ್ ಬಿ ಶೆಟ್ಟಿ, ರಮೇಶ್ ಇಂದಿರಾ, ಮಿತ್ರ, ಶ್ರೀಧರ್ ಸೇರಿದಂತೆ ಇನ್ನು ಅನೇಕರಿದ್ದಾರೆ.
ಸು ಫ್ರಮ್ ಸೋ ಕಳೆದ ವರ್ಷ ಜುಲೈ-25 ರಂದು ರಿಲೀಸ್ ಆಗಿತ್ತು. ಸಮಾರು 5 ರಿಂದ 6 ಕೋಟಿ ಬಜೆಟ್ನ ಈ ಚಿತ್ರ ಬಾಕ್ಸ್ ಆಫೀಸ್ ಅಲ್ಲಿ 100 ಕೋಟಿ ಕೊಳ್ಳೆ ಹೊಡೆದಿದೆ.
ನಮ್ಮ ಚಿತ್ರದಲ್ಲೂ ವಿಷಯ ಇದೆ ಅಂತಲೇ ಚಿತ್ರ ತಂಡ ಹೇಳಿಕೊಂಡಿದೆ. ಸು ಫ್ರಮ್ ಸೋ ರಿಲೀಸ್ ಆದ ದಿನವೇ ನಮ್ಮ ಚಿತ್ರ ಬರ್ತಿದೆ ಅಂತಲೇ ಸಿನಿಮಾ ತಂಡ ಹೇಳಿಕೊಂಡಿದೆ ಅಂತ ಹೇಳಬಹುದು.












