Krishi Thapanda: ವೈಶಾಕ್ ಆತ್ಮಹತ್ಯೆ ವೇಳೆ ಮನೆಯಲ್ಲಿ ಯಾರಿದ್ರು? ಸೀರೆ ಕಟ್ ಮಾಡಿ ಮೃತದೇಹ ಇಳಿಸಿದ್ದು ಕೃಷಿ ತಾಪಂಡನಾ? ಸ್ಪೋಟಕ ಮಾಹಿತಿ ರಿವೀಲ್​​ | | ACTPnews

News18


Last Updated:

ಉದ್ಯಮಿ ವೈಶಾಕ್​ ಆತ್ಮಹತ್ಯೆಗೆ ಶರಣಾದ ರಾತ್ರಿಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ರು. ಈ ವೇಳೆ ಮನೆಯಲ್ಲೇ ಇದ್ದ ನಟಿ ಕೃಷಿ ತಾಪಂಡ ಅವ್ರು, ಪೊಲೀಸರಿಗೆ ಕೆಲ ಮಾಹಿತಿ ನೀಡಿದ್ದಾರೆ.

News18
News18

ಬೆಂಗಳೂರು (ಜೂ.26): ನಟಿ ಕೃಷಿ ತಾಪಂಡ (Krishi Thapanda) ಸ್ನೇಹಿತ ವೈಶಾಕ್​ ಆತ್ಮಹತ್ಯೆಗೆ ಕೇಸ್​​ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆತ್ಮಹತ್ಯೆ (Suicide) ನಡೆದ ದಿನ ರಾತ್ರಿಯೇ ನಟಿ ಕೃಷಿ ತಾಪಂಡ ಅವರಿಂದ ಪೊಲೀಸರು (Police) ಹೇಳಿಕೆ ಪಡೆದಿದ್ದಾರೆ. ವೈಶಾಕ್ ಅವ್ರನ್ನ ನೇಣು ಬಿಗಿದ ಸ್ಥಿತಿಯಲ್ಲಿ ಮೊದಲು ನೋಡಿದ್ದೆ ಕೃಷಿ ತಾಪಂಡ ಎಂದು ತಿಳಿದು ಬಂದಿದ್ದು, ಪೊಲೀಸರ ಎದುರು ನಟಿ ಕೃಷಿ ಹೇಳಿದ್ದೇನು? ಇಲ್ಲಿದೆ ಸ್ಪೋಟಕ ಮಾಹಿತಿ.

ಮನೆಯಲ್ಲೇ ಇದ್ರಾ ನಟಿ ಕೃಷಿ ತಾಪಂಡ?

ಉದ್ಯಮಿ ವೈಶಾಕ್​ ಆತ್ಮಹತ್ಯೆಗೆ ಶರಣಾದ ರಾತ್ರಿಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ರು. ಈ ವೇಳೆ ಮನೆಯಲ್ಲೇ ಇದ್ದ ನಟಿ ಕೃಷಿ ತಾಪಂಡ ಅವ್ರು, ಪೊಲೀಸರಿಗೆ ಕೆಲ ಮಾಹಿತಿ ನೀಡಿದ್ದಾರೆ. ನಾನು ಮೂರು ದಿನ ಮನೆಯಲ್ಲಿ ಇರಲಿಲ್ಲ, ಕ್ಷೇಮ ವನಕ್ಕೆ ಹೋಗಿದ್ದೆ ಎಂದಿದ್ದಾರೆ. ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಪ್ಲಾಟ್ ಗೆ ಬಂದೆ ಎಂದಿದ್ದಾರೆ.

ಸೀರೆ ಕಟ್​ ಮಾಡಿ ಮೃತದೇಹ ಕೆಳಗೆ ಇಳಿಸಿದ್ದೆ

ನಾನು ಮನೆಗೆ ಬಂದಾಗ ಮನೆ ಡೋರ್ ಲಾಕ್ ಆಗಿತ್ತು. ಇನ್ನೊಂದು ಕೀ ನಿಂದ ಡೋರ್ ಓಪನ್ ಮಾಡಿದ್ದೆ. ಪ್ಲಾಟ್ ಗೆ ಎರಡು ಕೀ ಇತ್ತು, ಒಂದು ನನ್ನ ಬಳಿಯಿತ್ತು, ಇನ್ನೊಂದು ವೈಶಾಕ್​ ಬಳಿಯಿತ್ತು ಎಂದು ಕೃಷಿ ಹೇಳಿದ್ದಾರೆ. ವೈಶಾಕ್ ಆತ್ಮಹತ್ಯೆ ಮಾಡಿಕೊಂಡಿರೋದನ್ನ ಕಂಡು ನಾನೇ ಸೀರೆ ಕಟ್ ಮಾಡಿ ಮೃತದೇಹ ಕೆಳಗೆ ಇಳಿಸಿದ್ದೆ ಎಂದು ಕೃಷಿ ತಾಪಂಡ ಹೇಳಿಕೆ ನೀಡಿದ್ದಾರೆ.

ಮೊದಲು ನಟಿಯ ಫೋನ್ ಚೆಕ್ ಮಾಡಿದ ಪೊಲೀಸರು

ನಂತರ ನಾನೇ ಪೊಲೀಸರು ಹಾಗೂ ಅವರ ಮನೆಯವರಿಗೆ ಮಾಹಿತಿ ನೀಡಿದೆ ಎಂದು ಕೃಷಿ ತಾಪಂಡ ಹೇಳಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಬಂದಿದ್ದು, ಬಳಿಕ ನಟಿ ಕೃಷಿ ತಾಪಂಡ ಮೊಬೈಲ್ ಫೋನ್ ಪರಿಶೀಲನೆ ಮಾಡಿದ್ದಾರೆ. ಮೆಸೇಜ್​​ಗಳು ಹಾಗೂ ಕಾಲ್ ಲಿಸ್ಟ್ ಪರಿಶೀಲನೆ ನಡೆಸಿದ ಪೊಲೀಸರು  ವಾಟ್ಸಾಪ್ ಚಾಟ್ ಕೂಡ ಪರಿಶೀಲಿಸಿದ್ರು. ಯಾವುದೇ ಅನುಮಾನಸ್ಪದ ಸಂದೇಶ ಕಾಣದ ಹಿನ್ನಲೆ. ಹೇಳಿಕೆ ಪಡೆದು ಮೊಬೈಲ್ ವಾಪಾಸ್ ನೀಡಿದ್ದಾರೆ.

ಅತ್ಮಹತ್ಯೆಯಲ್ಲಿ ಯಾವುದೇ ಅನುಮಾನ ಇಲ್ಲ

ವೈಶಾಖ್ ಕುಟುಂಬಸ್ಥರಿಂದಲೂ ಪ್ರಾಥಮಿಕ ಹೇಳಿಕೆ ಪಡೆದ ಪೊಲೀಸರು, ನಮಗೆ ಅತ್ಮಹತ್ಯೆಯಲ್ಲಿ ಯಾವುದೇ ಅನುಮಾನ ಇಲ್ಲ ಎಂದಿದ್ದಾರೆ. ಈ ಮೊದಲು ಕೂಡ ನಾವು ಮನೆಗೆ ವಾಪಸ್ಸು ಬರೋದಕ್ಕೆ ಹೇಳಿದ್ವಿ. ನಮ್ಮದೇನು ತಕಾರರು ಇರಲಿಲ್ಲ, ಅದ್ರೆ ವೈಶಾಕ್ ಬರ್ತಿರಲಿಲ್ಲ. ನಾವು ಕೂಡ ಈ ವಿಚಾರದಲ್ಲಿ ಒತ್ತಾಯ ಮಾಡ್ತಿರಲಿಲ್ಲ. ಈಗ ನಮಗೆ ತುಂಬಾ ದುಃಖವಾಗಿದೆ ಎಂದು  ಕುಟುಂಬಸ್ಥರು ಯಾರ ಮೇಲೂ ಅರೋಪ ಮಾಡಿಲ್ಲ. ವೈಶಾಕ್ ಕುಟುಂಬ ಪೊಲೀಸರ ಮುಂದೆ ಪ್ರಾಥಮಿಕ ಮಾಹಿತಿ ನೀಡಿದೆ. ಆರ್ ಆರ್ ನಗರ ಪೊಲೀಸರು ಯುಡಿಆರ್ ದಾಖಲಿಸಿದ್ದಾರೆ.

(ವರದಿ: ಮುನಿರಾಜು, ನ್ಯೂಸ್​18 ಕನ್ನಡ, ಬೆಂಗಳೂರು)

ಕನ್ನಡ ಸುದ್ದಿ/ ನ್ಯೂಸ್/ಮನರಂಜನೆ/

Krishi Thapanda: ವೈಶಾಕ್ ಆತ್ಮಹತ್ಯೆ ವೇಳೆ ಮನೆಯಲ್ಲಿ ಯಾರಿದ್ರು? ಸೀರೆ ಕಟ್ ಮಾಡಿ ಮೃತದೇಹ ಇಳಿಸಿದ್ದು ಕೃಷಿ ತಾಪಂಡನಾ? ಸ್ಪೋಟಕ ಮಾಹಿತಿ ರಿವೀಲ್​​



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed