Last Updated:
ಐರ್ಲೆಂಡ್ ಪ್ರವಾಸದಲ್ಲಿರುವ ವೈಭವ್ ಸೂರ್ಯವಂಶಿ ಜೆರ್ಸಿ ನಂಬರ್ ಎಲ್ಲರ ಗಮನ ಸೆಳೆದಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಟೀಮ್ ಇಂಡಿಯಾ(Team India)ದ ಯಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Sooryavanshi) ಅಂತಾರಾಷ್ಟ್ರೀಯ ಕ್ರಿಕೆಟ್(Cricket)ಗೆ ಪಾದಾರ್ಪಣೆ (Debut) ಮಾಡಲು ಸಜ್ಜಾಗಿದ್ದಾರೆ. ಶುಕ್ರವಾರದಿಂದ ಆರಂಭವಾಗುವ ಐರ್ಲೆಂಡ್ (Ireland) ವಿರುದ್ಧದ ಎರಡು ಪಂದ್ಯಗಳ ಟಿ20ಐ ಸರಣಿಯೊಂದಿಗೆ ವೈಭವ್ ಸೂರ್ಯವಂಶಿ ಯುಗ ಆರಂಭವಾಗಲಿದೆ. ಐರ್ಲೆಂಡ್ ಪ್ರವಾಸದಲ್ಲಿರುವ ವೈಭವ್ ಸೂರ್ಯವಂಶಿ ಜೆರ್ಸಿ (Jersey) ನಂಬರ್ ಎಲ್ಲರ ಗಮನ ಸೆಳೆದಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಐರ್ಲೆಂಡ್ ಪ್ರವಾಸಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ಬಿಸಿಸಿಐ ಟೀಮ್ ಇಂಡಿಯಾ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿತ್ತು. ಟೀಮ್ ಇಂಡಿಯಾ ಜೆರ್ಸಿಯನ್ನು ಸ್ವೀಕರಿಸಿದ ನಂತರ ವೈಭವ್ ಸೂರ್ಯವಂಶಿ ಭಾವುಕರಾದರು. ಥ್ರೋಡೌನ್ ಸ್ಪೆಷಲಿಸ್ಟ್ ರಘು ಅವರು ಟೀಮ್ ಇಂಡಿಯಾ ಕಿಟ್ ಅನ್ನು ಸೂರ್ಯವಂಶಿಗೆ ವೈಯಕ್ತಿಕವಾಗಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವೈಭವ್ ಸೂರ್ಯವಂಶಿ ಜೆರ್ಸಿಯಲ್ಲಿ 03 ನಂಬರ್ ಕಾಣಿಸಿಕೊಂಡಿತ್ತು. ಜೆರ್ಸಿ ನಂಬರ್ 03 ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿತ್ತು.
ವೈಭವ್ ಸೂರ್ಯವಂಶಿ ತಮ್ಮ ವೃತ್ತಿಪರ ಕ್ರಿಕೆಟ್ ಪ್ರಾರಂಭಿಸಿದಾಗ, ಅವರ ಜೆರ್ಸಿ ನಂಬರ್ 12 ಆಗಿತ್ತು. ಈಗ ಸೂರ್ಯವಂಶಿ ಜೆರ್ಸಿ ನಂಬರ್ 03 ಆಗಿರುವುದು ಏಕೆ? ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ಹಿಂದೆ ಒಂದು ಭಾವನಾತ್ಮಕ ಕಥೆಯಿದೆ. ಹೌದು, ಎನ್ಡಿ ಟಿವಿ ವರದಿ ಪ್ರಕಾರ, ವೈಭವ್ ಅವರಿಗೆ 3ನೇ ನಂಬರ್ ಜೆರ್ಸಿಯನ್ನು ಧರಿಸಲು ಸಲಹೆ ನೀಡಿದ್ದು ಅವರ ತಾಯಿ. ಅವರ ತಾಯಿ 12 (1 + 2) ರ ಸಂಖ್ಯೆಗಳನ್ನು ಸೇರಿಸಿದರೆ 3 ಕ್ಕೆ ಸಮ ಎಂದು ಸೂಚಿಸಿದರು. ಆದ್ದರಿಂದ, ಅವರು ವೈಭವ್ಗೆ 3ನೇ ನಂಬರ್ ಜೆರ್ಸಿಯನ್ನು ಧರಿಸಲು ಸಲಹೆ ನೀಡಿದರು.
2025 ರಲ್ಲಿ ವೈಭವ್ ಸೂರ್ಯವಂಶಿ ಭಾರತ ಅಂಡರ್-19 ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದರು. ಹೋವ್ನ ಕೌಂಟಿ ಮೈದಾನದಲ್ಲಿ ನಡೆದ ಯೂತ್ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಅಂಡರ್-19 ವಿರುದ್ಧ ವೈಭವ್ ಸೂರ್ಯವಂಶಿ ಪಾದಾರ್ಪಣೆ ಮಾಡಿದರು. ಈ ವೇಳೆ ಸೂರ್ಯವಂಶಿ ಜೆರ್ಸಿ ನಂಬರ್ 18 ಧರಿಸಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಯಿತು.
ಅಂಡರ್-19 ಸಮಯದಲ್ಲಿ ಕೊಹ್ಲಿ ಕೂಡ 18 ನಂಬರ್ ಜೆರ್ಸಿ ಧರಿಸಿದ್ದರು. ಅದಕ್ಕಾಗಿಯೇ ವೈಭವ್ ಕೂಡ 18 ನಂಬರ್ ಜೆರ್ಸಿ ಧರಿಸಿದ್ದಾರೆ ಎಂಬ ಚರ್ಚೆ ವೇಗ ಪಡೆದುಕೊಂಡಿತು. ಈಗ ಸೋಶಿಯಲ್ ಮೀಡಿಯಾದಲ್ಲಿ ವೈಭವ್ 03 ಜೆರ್ಸಿಯನ್ನು ಧರಿಸಿರುವುದ್ದೇಕೆ ಟೀಮ್ ಇಂಡಿಯಾ ಮಾಜಿ ಸ್ಟಾರ್ ಆಲ್ರೌಂಡರ್ ಸುರೇಶ್ ರೈನಾ ಅವರೊಂದಿಗೆ ಹೋಲಿಕೆ ಮಾಡಲಾಗುತ್ತಿದೆ.













