Krishi Thapanda: ವೈಶಾಖ್ ಉಪಾಧ್ಯಾಯ ಲಾಸ್ಟ್ ಮಸೇಜ್! ಕೃಷಿ ತಾಪಂಡಗೆ ಕಳಿಸಿದ ಸಂದೇಶವೇನು? | Vaishakh last messege to actress krishi thapanda what he said | | ACTPnews

ವೈಶಾಖ್-ಕೃಷಿ ತಾಪಂಡ


Last Updated:

Krishi Thapanda: ಆತ್ಮಹತ್ಯೆ ಮಾಡಿಕೊಳ್ಳೋ ಮೊದಲು ಕೃಷಿ ತಾಪಂಡಗೆ ವೈಶಾಖ್ ಕಳಿಸಿದ ಮೆಸೇಜ್​ನಲ್ಲಿ ಏನಿತ್ತು? ಏನಂತ ಬರೆದಿದ್ದರು?

ವೈಶಾಖ್-ಕೃಷಿ ತಾಪಂಡ
ವೈಶಾಖ್-ಕೃಷಿ ತಾಪಂಡ

ನಟಿ ಕೃಷಿ ತಾಪಂಡ (Krishi Thapanda) ಮನೆಯಲ್ಲಿ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಈಗ ಎಲ್ಲರಿಗೂ ಶಾಕ್ ಕೊಟ್ಟಿದೆ. ವೈಶಾಖ್ ಉಪಾಧ್ಯಾಯ (Vaishakh Upadhyaya) ಎನ್ನುವವರು ಕೃಷಿ ತಾಪಂಡ ಅವರು ಮನೆಯಲ್ಲಿ ಇರದೇ ಇದ್ದಾಗ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಈ ಘಟನೆ ಸಂಬಂಧ ಆರ್​ಆರ್ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆತ್ಮಹತ್ಯೆಗೂ ಮುನ್ನ ಕೃಷಿ ತಪಂಡಾಗೆ ವೈಶಾಖ್ ಮೆಸೆಜ್ ಮಾಡಿದ್ದರು ಎನ್ನಲಾಗಿದೆ. ಕಾಲ್ ಕೂಡಾ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು ಎನ್ನಲಾಗಿದ್ದು ನಟಿ ಆರ್​ಆರ್ ನಗರ ಪೊಲೀಸ್​​ ಠಾಣೆಗೂ ಕಾಲ್ ಮಾಡಿದ್ದರು ಎನ್ನಲಾಗಿದೆ.

ಆದರೆ ಅಷ್ಟು ವೇಳೆಗೆ ವೈಶಾಖ್ ನೇಣಿಗೆ ಶರಣಾಗಿದ್ದರು. ಇನ್ನು ವೈಶಾಖ್ ಅವರು ಕೃಷಿ ತಾಪಂಡಗೆ ಕಳಿಸಿದ ಲಾಸ್ಟ್ ಮೆಸೇಜ್ ಬಗ್ಗೆಯೂ ಈಗ ಎಕ್ಸ್​ಕ್ಲೂಸಿವ್ ಮಾಹಿತಿ ನ್ಯೂಸ್​18 ಕನ್ನಡಕ್ಕೆ ಲಭ್ಯವಾಗಿದೆ.

ನನಗೆ ಜೀವನವೇ ಸಾಕಾಗಿದೆ. ನಂಗೆ ಬದುಕೋಕೆ ಇಷ್ಟ ಇಲ್ಲ ಎಂದು ಮೆಸೇಜ್ ಮಾಡಿದ್ದರು ಎನ್ನಲಾಗಿದೆ. ಈ ವೇಳೆ ಯಲಹಂಕದಲ್ಲಿದ್ದ ಕೃಷಿ ತಪಂಡ ಅವರು ಮನೆಯಲ್ಲಿರಲಿಲ್ಲ. ಅವರು ಯಲಹಂಕದಲ್ಲಿದ್ದಾಗ ನಿನ್ನೆ ಸಂಜೆ ಮೆಸೇಜ್ ಮಾಡಿ  ವೈಶಾಖ್ ನೋವು ಹೇಳಿಕೊಂಡಿದ್ದರು.

ಆ ರೀತಿ ಮಾಡ್ಕೋಬೇಡ ಎಂದು ಧೈರ್ಯ ಹೇಳಿದ್ದ ನಟಿ ಬರುತ್ತೇನೆ. ಬರೋವರೆಗೂ ಇರು ಎಂದಿದ್ದರು. ಇಬ್ಬರೂ ಕುಕ್ಕೇ ಸುಬ್ರಮಣ್ಯ ಹೋಗೋಣ. ದೇವಸ್ಥಾನಕ್ಕೆ ಹೋಗಿ ಬರೋಣ ಮನಸ್ಸು ಹಗುರ ಮಾಡಿಕೋ ಎಂದಿದ್ದರು ಎನ್ನಲಾಗಿದೆ. ಅದಕ್ಕೆ ವೈಶಾಖ್ ಓಕೆ ಎಂದು ಹೇಳಿದ್ದರು. ಆದರೆ ಕೃಷಿ ತಪಂಡ ಮನೆಗೆ ಬರುವಷ್ಟರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

11 ಗಂಟೆಗೆ ಪೊಲೀಸ್ ಠಾಣೆಗೆ ಕಾಲ್

11ಗಂಟೆಗೆ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿರುವ ಕೃಷಿ ತಪಂಡ ಅವರು ವೈಶಾಖ್ ಆತ್ಮಹತ್ಯೆ ಸಂಬಂಧ ಸುದ್ದಿ ಕೊಟ್ಟಿದ್ದರು. ಒಂದು ತಿಂಗಳಿನಿಂದ ವೈಶಾಖ್ ಪತ್ನಿ ಜೊತೆ ಮಾತು ಬಿಟ್ಟಿದ್ದರು. ಎವಿಆರ್ ಗ್ರೂಪ್ ಮಾಲೀಕ ಕೇಸ್ ನಂತರ ವೈಶಾಖ್  ಹಾಗೂ ಅವರ ಪತ್ನಿ ಜಗಳ ಜಾಸ್ತಿಯಾಗಿತ್ತು.

ಕೃಷಿ ತಪಂಡ ಮನೆಯಲ್ಲೇ ವೈಶಾಖ್ ಅರೆಸ್ಟ್ ಮಾಡಿದ್ದ ಹೆಚ್ ಎಎಲ್ ಪೊಲೀಸ್ರು ನಂತರ ಅರೆಸ್ಟ್ ಆಗಿ ರಿಲೀಸ್ ಆಗಿದ್ದರು. ನಂತರ ವೈಶಾಖ್ ಹಾಗೂ ಪತ್ನಿ ಮಧ್ಯೆ ಜಗಳಗಳು ಆಗುತ್ತಿದ್ದವು ಎನ್ನಲಾಗಿದೆ. ವೈಶಾಖ್ ಒಂದು ತಿಂಗಳಿಂದ ಪತ್ನಿ ಜೊತೆ ಅಂತರ ಕಾಯ್ದುಕೊಂಡಿದ್ದರು ಎನ್ನಲಾಗಿದ್ದು ಡಿಪ್ರೆಶನ್ ನಿಂದ ಬಳಲುತ್ತಿದ್ದರು ಎನ್ನಲಾಗಿದೆ.

ವರದಿ: ಮಾದೇಶ ಸಿ.ಎನ್ ನ್ಯೂಸ್​18 ಕನ್ನಡ ಪ್ರತಿನಿಧಿ ಬೆಂಗಳೂರು



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports